Breaking News

ಎಂಟು ವರ್ಷ ಪತಿಯೊಂದಿಗೆ ಸಂಸಾರ ನಡೆಸಿ ಪ್ರಿಯಕರನ ಜೊತೆ ಮದುವೆಯಾದ ಖತರ್ನಾಕ್ ಪತ್ನಿ

Spread the love

ಹಾಸನ: ಎಂಟು ವರ್ಷ ಪತಿಯೊಂದಿಗೆ ಸಂಸಾರ ನಡೆಸಿ ಇದೀಗ ಪ್ರಿಯಕರನ ಜೊತೆ ಪತ್ನಿ ಮದುವೆಯಾಗಿರುವ ಘಟನೆ ಹಾಸನ  ತಾಲ್ಲೂಕಿನ ಮುಕುಂದೂರು ಗ್ರಾಮದಲ್ಲಿ ನಡೆದಿದೆ.

ಪತಿಯನ್ನು ಮುಕುಂದೂರು ಗ್ರಾಮದ ಪ್ರಕಾಶ್ ಹಾಗೂ ಪತ್ನಿಯನ್ನು ಅರಕಲಗೂಡು  ತಾಲ್ಲೂಕಿನ ಮುಂಡಗೋಡು ಗ್ರಾಮದ ಹರ್ಷಿತಾ ಎಂದು ಗುರುತಿಸಲಾಗಿದ್ದು, ಪ್ರಿಯಕನ ಜೊತೆ ಮದುವೆಯಾದ ಗೃಹಿಣಿ ಎಂದು ತಿಳಿದುಬಂದಿದೆ.

ಕಳೆದ ಎಂಟು ವರ್ಷಗಳ ಹಿಂದೆ ಅಂದರೆ 2017ರ ಮಾ.30ರಂದು ಪ್ರಕಾಶ್ ಅವರು ಸ್ವಂತ ಅತ್ತೆ ಮಗಳಾದ ಹರ್ಷಿತಾಳನ್ನು ಮದುವೆಯಾಗಿದ್ದರು. ದಂಪತಿಗೆ 7 ವರ್ಷದ ಗಂಡು ಮಗುವಿದೆ. ಕಳೆದ ಮಾ.30ರಂದು ಆಸ್ಪತ್ರೆಗೆ ಹೋಗಿ ಬರುತ್ತೇನೆಂದು ಹೋಗಿದ್ದ ಹರ್ಷಿತಾ ಮತ್ತೆ ಮನೆಗೆ ವಾಪಸ್ಸಾಗಿರಲಿಲ್ಲ. ಹೀಗಾಗಿ ಹರ್ಷಿತಾ ಪೋಷಕರು ಹಾಸನ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆಗ ಪೊಲೀಸರು ಹರ್ಷಿಳಾನ್ನು ಪತ್ತೆ ಹಚ್ಚಿದ್ದರು.

ಠಾಣೆಗೆ ಕರೆಸಿದಾಗ, ನಾನು ಪತಿ ಜೊತೆ ಹೋಗುವುದಿಲ್ಲ. ಪ್ರಿಯಕರ ಸಚಿನ್ ಜೊತೆ ಹೋಗುತ್ತೇನೆ ಹರ್ಷಿತಾ ಹಠ ಹಿಡಿದಿದ್ದಳು. ನಂತರ ಪೊಲೀಸರು ಸಾಂತ್ವಾನ ಕೇಂದ್ರಕ್ಕೆ ಕಳುಹಿಸಿದ್ದರು. ಬಳಿಕ ಹರ್ಷಿತಾ ಅನಾರೋಗ್ಯದ ನಾಟಕವಾಡಿ ಆಸ್ಪತ್ರೆಗೆ ಹೋಗಿ ಬರುತ್ತೇನೆಂದು ಹೇಳಿ ಸಾಂತ್ವಾನ ಕೇಂದ್ರದಿಂದ ಹೊರಬಂದು, ಪ್ರಿಯಕರನ ಜೊತೆ ಕಾರಿನಲ್ಲಿ ವಿವಾಹವಾಗಿದ್ದರು.

ಮದುವೆಯಾದ ಬಳಿಕವೂ ಪತಿ ಪ್ರಕಾಶ್ ಪತ್ನಿಯ ತಪ್ಪನ್ನು ಕ್ಷಮಿಸಿ ಮನೆಗೆ ಕರೆದುಕೊಂಡು ಬಂದಿದ್ದರು. ಒಂದು ದಿನ ಪತಿಗೆ ಜೊತೆಗೆ ಇದ್ದು, ಮಾರನೇ ದಿನ ಪ್ರಿಯಕರನ ಜೊತೆ ಎಸ್ಕೇಪ್ ಆಗಿದ್ದಾಳೆ. ಸದ್ಯ ಪತಿ ಪ್ರಕಾಶ್ ಪತ್ನಿ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾಗಿದ್ದಾರೆ.


Spread the love

About Laxminews 24x7

Check Also

ಮದುವೆಗೆ ನಿರಾಕರಿಸಿದ್ದಕ್ಕೆ ವ್ಯಕ್ತಿಯಿಂದ HIV ಪಾಸಿಟಿವ್‌ ರಕ್ತ ಇಂಜೆಕ್ಟ್‌ – ಆಘಾತಗೊಂಡು ಯುವತಿ ಆತ್ಮಹತ್ಯೆ

Spread the loveಹೈದರಾಬಾದ್:‌ ಮದುವೆಗೆ ನಿರಾಕರಿಸಿದ್ದಕ್ಕೆ ಯುವತಿಗೆ ತಿಂಗಳ ಹಿಂದೆ ವ್ಯಕ್ತಿಯೊಬ್ಬ ಹೆಚ್‌ಐವಿ ಪಾಸಿಟಿವ್‌ ರಕ್ತ  ಇಂಜೆಕ್ಟ್‌ ಮಾಡಿದ್ದ. ಘಟನೆಯಿಂದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ