Breaking News

ಡಾಕ್ಟರ್ ಪತಿಯನ್ನು ಹತ್ಯೆ ಮಾಡಿ ನಾಟಕ: ಪತ್ನಿ ಆ್ಯಂಡ್ ಲವರ್‌ನನ್ನು ಬಂಧಿಸಿದ ಬೆಳಗಾವಿ ಪೊಲೀಸರು

Spread the love

ಬೆಳಗಾವಿ: ಪತಿಯನ್ನು ಹತ್ಯೆ ಮಾಡಿ, ಅಸಹಜ ಸಾವು ಎಂದು ಬಿಂಬಿಸಲು ಸಂಚು ರೂಪಿಸಿದ್ದ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಟಿಳಕವಾಡಿ ಪೊಲೀಸರು ಬಂಧಿಸಿದ್ದಾರೆ.

ಬೆಳಗಾವಿಯ ಅನಗೋಳದ ಬಾಬಲೇ ಗಲ್ಲಿಯ ನಿವಾಸಿಯಾಗಿದ್ದ 40 ವರ್ಷದ ಅವಿನಾಶ ಅಶೋಕ ಸುಪ್ಪನ್ನವರ ಹತ್ಯೆಗೀಡಾದ ವ್ಯಕ್ತಿ. ವೃತ್ತಿಯಲ್ಲಿ ಆಯುರ್ವೇದ ಥೆರಪಿಸ್ಟ್‌ ಆಗಿದ್ದ ಅವಿನಾಶ ಅವರು, ಕಳೆದ ಮಾರ್ಚ್ 5 ರಂದು ತಮ್ಮ’ಅಂಕುಶ ಆಯುರ್ವೇದಿಕ ಕೇರ್ ಸೆಂಟರ್‌ನ ಬೆಡ್ ರೂಮ್‌ನಲ್ಲಿ ಶವವಾಗಿ ಪತ್ತೆಯಾಗಿದ್ದರು. ಅವರ ತಲೆಯ ಹಿಂಭಾಗಕ್ಕೆ ಗಂಭೀರ ಗಾಯಗಳಾಗಿದ್ದವು. ಮೇಲ್ನೋಟಕ್ಕೆ ಇದು ಆಕಸ್ಮಿಕ ಸಾವು ಎಂದು ಕಂಡುಬಂದಿದ್ದರೂ, ಮಗನ ನಿಗೂಢ ಸಾವಿನ ಬಗ್ಗೆ ತಾಯಿ ಕಮಲ ಸುಪ್ಪನ್ನವರ ಅವರಿಗೆ ತೀವ್ರ ಅನುಮಾನವಿತ್ತು. ಈ ಹಿನ್ನೆಲೆಯಲ್ಲಿ ಅವರು ಟಿಳಕವಾಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ದೂರು ದಾಖಲಿಸಿಕೊಂಡ ಟಿಳಕವಾಡಿ ಪೊಲೀಸರು ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದಾಗ, ಇದು ಅಪಘಾತ ಅಥವಾ ಅಸಹಜ ಸಾವಲ್ಲ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಸಾಬೀತಾಯಿತು. ಸಾವಿನ ಹಿಂದೆ ಒಳಸಂಚು ಇರುವುದನ್ನು ಪತ್ತೆಹಚ್ಚಿದ ಪೊಲೀಸರು, ಮೃತನ ಪತ್ನಿ ಲಕ್ಷ್ಮೀ ಅವಿನಾಶ ಸುಪ್ಪನ್ನವರ (29) ಮತ್ತು ಆಕೆಯ ಪರಿಚಯಸ್ಥನಾಗಿದ್ದ ಗಜಾನನ ಮಹಾರಾಜ ನಗರದ ನಿವಾಸಿ ಕೈಲಾಸ ಬಾಲಕೃಷ್ಣ ಅಚ್ಚಿತಾಲ್ (43) ಎಂಬುವವರನ್ನು ವಶಕ್ಕೆ ಪಡೆದರು.

ಬಂಧಿತ ಆರೋಪಿಗಳನ್ನು ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದಾಗ ಇಬ್ಬರೂ ಸೇರಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಅವಿನಾಶ ಅವರನ್ನು ಮಾರ್ಗಮಧ್ಯೆ ಮುಳ್ಳಾಗಿದ್ದರಿಂದಲೇ ಅವರನ್ನು ಮನೆಯಲ್ಲೇ ಹತ್ಯೆ ಮಾಡಿ, ಬಳಿಕ ಯಾರೂ ಸಂಶಯ ಪಡಬಾರದು ಎಂಬ ಕಾರಣಕ್ಕೆ ಅಸಹಜ ಸಾವು ಎಂದು ಬಿಂಬಿಸಲು ಪ್ರಯತ್ನಿಸಿದ್ದರು ಎಂದು ತಿಳಿದುಬಂದಿದೆ. ಸದ್ಯ ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು ಟಿಳಕವಾಡಿ ಪೊಲೀಸರು

ಮುಂದಿನ ಕ್ರಮ ಕೈಗೊಂಡಿದ್ದಾರೆ. ನಿಗೂಢ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾದ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.

ಒಟ್ಟಿನಲ್ಲಿ ಸುಮಾರು ಒಂದು ತಿಂಗಳ ಕಾಲ ನಿಗೂಢವಾಗಿದ್ದ ಸಾವಿನ ಪ್ರಕರಣಕ್ಕೆ ಪೊಲೀಸರು ಅಂತ್ಯ ಹಾಡಿದ್ದಾರೆ.


Spread the love

About Laxminews 24x7

Check Also

RCB vs CSK ಐಪಿಎಲ್ ಟಿಕೆಟ್ ನೀಡುವುದಾಗಿ ವಂಚನೆ – 1.46 ಲಕ್ಷ ಕಳೆದುಕೊಂಡ ಟೆಕ್ಕಿ

Spread the loveಬೆಂಗಳೂರು: ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ ನಡೆಯಲಿರುವ ಆರ್‌ಸಿಬಿ ವರ್ಸಸ್ ಸಿಎಸ್‌ಕೆ  ಪಂದ್ಯದ ಐಪಿಎಲ್ ಟಿಕೆಟ್  ಪಡೆಯಲು ಹೋಗಿ ವಂಚನೆಗೊಳಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ