Breaking News
Home / ಬಳ್ಳಾರಿ / ‘ವಿಕಲತೆ ಮೆಟ್ಟಿ ನಿಂತು ಅದ್ಭುತ ಸಾಧನೆ ಮಾಡಿರುವ ನಿಮಗೆ ನಾವು ಚಿರಋಣಿ”: ಅಶ್ವಿನಿ ಪುನೀತ್ ರಾಜಕುಮಾರ್

‘ವಿಕಲತೆ ಮೆಟ್ಟಿ ನಿಂತು ಅದ್ಭುತ ಸಾಧನೆ ಮಾಡಿರುವ ನಿಮಗೆ ನಾವು ಚಿರಋಣಿ”: ಅಶ್ವಿನಿ ಪುನೀತ್ ರಾಜಕುಮಾರ್

Spread the love

ಮ್ಮ ಜಮೀನಿನಲ್ಲಿ ಅಪ್ಪು ಭಾವಚಿತ್ರ ಮೂಡಿಸಿದ ರಾಯಚೂರು ರೈತ ಸತ್ಯನಾರಾಯಣ ಅವರಿಗೆ ಅಶ್ವಿನಿ ಪುನೀತ್ ರಾಜಕುಮಾರ್ ಧನ್ಯವಾದ ಅರ್ಪಿಸಿದ್ದಾರೆ.

ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಟ ಪುನೀತ್​ ರಾಜ್​ಕುಮಾರ್​ ಇಹಲೋಕ ತ್ಯಜಿಸಿ ಹಲವು ದಿನಗಳು ಉರುಳುತ್ತಿದ್ದು, ಅವರ ನೆನಪು ಮಾತ್ರ ಸದಾ ಜೀವಂತ.

ಅಪ್ಪು ದೈಹಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ, ಅಭಿಮಾನಿಗಳ ಹೃದಯದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ಚಿತ್ರರಂಗ, ಅಭಿಮಾನಿಗಳು, ಜನಸಾಮಾನ್ಯರು ಒಂದಲ್ಲ ಒಂದು ರೀತಿಯಲ್ಲಿ ಅಪ್ಪು ಸ್ಮರಣೆ ಮಾಡುತ್ತಿದ್ದಾರೆ.

 

 

ಪುನೀತ್​ ಹೆಸರಲ್ಲಿ ಸಮಾಜ ಸೇವೆ: ವರನಟ ರಾಜ್​​ಕುಮಾರ್​ ಕಿರಿಯ ಪುತ್ರ, ಚಂದನವನದ ಅದ್ಭುತ ನಟ, ದಿ. ಪುನೀತ್ ರಾಜ್​​​ಕುಮಾರ್ ಜೀವನ ಹಲವರಿಗೆ ಪ್ರೇರಣೆ. ನಟ ನಡೆಸಿಕೊಂಡು ಬಂದಿದ್ದ ಸಮಾಜ ಸೇವೆ ಅವರು ಇಹಲೋಕ ತ್ಯಜಿಸಿದ ಬಳಿಕ ಹೆಚ್ಚು ಬೆಳಕಿಗೆ ಬಂತು. ಸಿನಿಮಾ ಮಾತ್ರವಲ್ಲದೇ ಸಮಾಜಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಕೊಡುಗೆ ನೀಡಿದ್ದಾರೆ. ಅವರ ನಡೆ ನುಡಿ ಇಂದು ಹಲವರಿಗೆ ಸ್ಫೂರ್ತಿ. ಪ್ರಸ್ತುತ, ಪುನೀತ್​ ಹೆಸರಲ್ಲಿ ಹಲವು ಸಮಾಜ ಸೇವೆ ನಡೆಯುತ್ತಿದೆ. ವಿಭಿನ್ನ ರೀತಿಯಲ್ಲಿ ಅಭಿಮಾನ ವ್ಯಕ್ತಪಡಿಸಲಾಗುತ್ತಿದೆ.

ಅದರಂತೆ ಇತ್ತೀಚೆಗಷ್ಟೇ ರೈತರೊಬ್ಬರು ತಮ್ಮ ಜಮೀನಿನಲ್ಲಿ ಅಪ್ಪು ಭಾವಚಿತ್ರ ಮೂಡಿಸುವ ಮೂಲಕ ಅಭಿಮಾನ ವ್ಯಕ್ತಪಡಿಸಿದ್ದರು. ಭತ್ತದ ಬೆಳೆಯಲ್ಲಿ ಪುನೀತ್​​ ರಾಜ್​ಕುಮಾರ್​ ಭಾವಚಿತ್ರ ಮೂಡಿ ಬಂದಿತ್ತು. ಈ ಸುದ್ದಿ ರಾಜ್ಯಾದ್ಯಂತ ಸಖತ್​ ಸದ್ದು ಮಾಡಿತ್ತು. ವಿಚಾರ ಪುನೀತ್​​ ಪತ್ನಿ ಅಶ್ವಿನಿ ಅವರ ವರೆಗೂ ತಲುಪಿತು. ಇದೀಗ ನಿರ್ಮಾಪಕಿ ಅಶ್ವಿನಿ ಪುನೀತ್​​ ರಾಜ್​ಕುಮಾರ್ ಅವರು ರೈತನಿಗೆ ತುಂಬು ಹೃದಯದಿಂದ ಧನ್ಯವಾದ ಅರ್ಪಿಸಿದ್ದಾರೆ. ಸೋಷಿಯಲ್​ ಮೀಡಿಯಾ ಪ್ಲಾಟ್​ಫಾರ್ಮ್ ಎಕ್ಸ್​​ನಲ್ಲಿ (ಹಿಂದಿನ ಟ್ವಿಟರ್) ವಿಡಿಯೋ ಪೋಸ್ಟ್ ಮಾಡಿ, ರೈತನಿಗೆ ಕೃತಘ್ಞತೆ ಅರ್ಪಿಸಿದ್ದಾರೆ.

ಅಶ್ವಿನಿ ಪುನೀತ್​​ ರಾಜ್​ಕುಮಾರ್ ಟ್ವೀಟ್: ”ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಶ್ರೀನಿವಾಸ ಕ್ಯಾಂಪ್​​ನ ಶ್ರೀ ಕೆ. ಸತ್ಯನಾರಾಯಣ ಅವರು ತಮ್ಮ 2 ಎಕರೆ ಜಮೀನಿನ ಭತ್ತದಲ್ಲಿ ಅಪ್ಪು ಅವರ ವಿಶೇಷ ಚಿತ್ರ ನಿರ್ಮಿಸಿ ತಮ್ಮ ಪ್ರೀತಿಯನ್ನು ತೋರಿದ್ದಾರೆ. ತಮ್ಮ ಅಂಗವಿಕಲತೆಯನ್ನು ಮೆಟ್ಟಿ ನಿಂತು ಈ ಅದ್ಭುತ ಸಾಧನೆಯನ್ನು ಮಾಡಿರುವ ನಿಮಗೆ ನಾವು ಚಿರಋಣಿ. ಆ ದೇವರು ನಿಮಗೆ ಹೆಚ್ಚಿನ ಆಯಸ್ಸು ಹಾಗೂ ಶಕ್ತಿಯನ್ನು ನೀಡಲಿ ಎಂಬುದು ನಮ್ಮೆಲ್ಲರ ಕೋರಿಕೆ” ಎಂದು ಅಶ್ವಿನಿ ಪುನೀತ್​​ ರಾಜ್​ಕುಮಾರ್ ಟ್ವೀಟ್ ಮಾಡಿದ್ದಾರೆ.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ