Breaking News

Daily Archives: ಸೆಪ್ಟೆಂಬರ್ 4, 2021

ಅಚ್ಚರಿ ಬೆಳವಣಿಗೆ -ಸಿದ್ದರಾಮಯ್ಯರ ಭೇಟಿಯಾದ ಶಿಕ್ಷಣ ಸಚಿವ ಬಿಸಿ ನಾಗೇಶ್

ಬೆಂಗಳೂರು: ಮಹತ್ವದ ಬೆಳವಣಿಗೆ ಒಂದರಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯರನ್ನ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಭೇಟಿ ಮಾಡಿದ್ದಾರೆ. ಶಿಕ್ಷಣ ಸಚಿವರ ಈ ಭೇಟಿ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಭೇಟಿ ಮಾಡಿದ ಬಿಸಿ ನಾಗೇಶ್, ಸಿದ್ದರಾಮಯ್ಯರ ಆರೋಗ್ಯ ವಿಚಾರಿಸಿದ್ದಾರೆ. ಬಳಿಕ ಕೆಲವು ಹೊತ್ತುಗಳ ಕಾಲ ಇತ್ತೀಚೆಗಿನ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಭೇಟಿ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಬಿ.ಸಿ.ನಾಗೇಶ್​, ಇದೊಂದು ಸೌಜನ್ಯದ ಭೇಟಿ ಅಂತಾ ತಿಳಿಸಿದ್ದಾರೆ.

Read More »

ರಾಜ್ಯದಲ್ಲಿ ಮಳೆಗೆ 3 ವರ್ಷಕ್ಕೆ 302 ಬಲಿ; 1.78 ಲಕ್ಷ ಮನೆ ಹಾನಿ, 2,934 ಲಕ್ಷ ಹೆಕ್ಟೇರ್ ಬೆಳೆ ನಾಶ; ದೇಶಾದ್ಯಂತ 7,467 ಸಾವು

ಬೆಂಗಳೂರು: ಮೂರು ವರ್ಷಗಳಲ್ಲಿ ಕರ್ನಾಟಕದಲ್ಲಿ ಮಳೆಗೆ 302 ಜನ ಬಲಿಯಾಗಿದ್ದು, ದೇಶದಲ್ಲಿ 2018-19ರಿಂದ 2021-22ರ ಆ.3ರವರೆಗೆ 7,467 ಮಂದಿ ಮೃತಪಟ್ಟಿದ್ದಾರೆ. 35,20,467 ಮನೆಗಳು, ಲಕ್ಷಾಂತರ ಹೆಕ್ಟರ್ ಪ್ರದೇಶಗಳಲ್ಲಿ ಬೆಳೆದಿದ್ದ ಬೆಳೆ ಹಾನಿ ಬಗ್ಗೆ ಕೇಂದ್ರ ಸರ್ಕಾರ ಸಿದ್ಧಪಡಿಸಿರುವ ವಿವಿಧ ರಾಜ್ಯಗಳ ಮಳೆ ಅನಾಹುತದ ವರದಿಯಲ್ಲಿ ಉಲ್ಲೇಖಿಸಲಾಗಿದೆ. 3 ವರ್ಷಗಳಲ್ಲಿ ಕರ್ನಾಟಕದಲ್ಲಿ 1,78,722 ಮನೆಗಳಿಗೆ ಹಾನಿಯಾಗಿದ್ದು, 2,934 ಲಕ್ಷ ಹೆಕ್ಟರ್ ಪ್ರದೇಶಗಳಲ್ಲಿ ಬೆಳೆ ನಾಶವಾಗಿದೆ. ರಾಜ್ಯ ಸರ್ಕಾರ ರಾಜ್ಯ ವಿಪತ್ತು ನಿರ್ವಹಣಾ ನಿಧಿಯಡಿ …

Read More »

ಹಾವು ಕಚ್ಚಿ ತಂದೆ-ಮಗ ಇಬ್ಬರೂ ಸಾವು

ಚಿಕ್ಕೋಡಿ: ಹಾವು ಕಚ್ಚಿ ತಂದೆ-ಮಗ ಇಬ್ಬರೂ ಸಾವನ್ನಪ್ಪಿರುವ ಘಟನೆ ಅಥಣಿ ತಾಲೂಕಿನ ಬಾಡಗಿ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮಲ್ಲಿಕಾರ್ಜುನ್ ಮುತ್ತಪ್ಪ ಕುಂಬಾರ (14) ಹಾಗೂ ಮುತ್ತಪ್ಪ ಬಾಳಪ್ಪ ಕುಂಬಾರ (40) ಮೃತ ದುರ್ದೈವಿಗಳು. ಕಳೆದ ಆಗಸ್ಟ್ 29 ರಂದು ಹಾವು ಕಚ್ಚಿತ್ತು. ಪರಿಣಾಮ ಆಗಸ್ಟ್ 31 ರಂದು ಮಲ್ಲಿಕಾರ್ಜುನ್ ಮುತ್ತಪ್ಪ ಕುಂಬಾರ ಮೃತಪಟ್ಟಿದ್ದಾರೆ. ಸೆಪ್ಟೆಂಬರ್ 2 ರಂದು ಮುತ್ತಪ್ಪ ಬಾಳಪ್ಪ ಕುಂಬಾರ ಮೃತಪಟ್ಟಿದ್ದಾನೆ ಅಂತಾ ವರದಿಯಾಗಿದೆ. ಅಥಣಿ ಖಾಸಗಿ …

Read More »

ದೇಶ ಬಿಡಲು ಕಾಬೂಲ್ ವಿಮಾನ ನಿಲ್ದಾಣದಲ್ಲಿ ಮದುವೆಯಾಗ್ತಿರುವ ಹುಡುಗಿಯರು.!

ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಕ್ಕೆ ಪಡೆದ ನಂತ್ರ ಜನರು ದೇಶ ಬಿಡ್ತಿದ್ದಾರೆ. ಕಾಬೂಲ್ ವಿಮಾನ ನಿಲ್ದಾಣದಲ್ಲಿ ಜನ ಸಂದಣಿಯಿದೆ. ಆದ್ರೆ ಮಹಿಳೆಯರಿಗೆ ದೇಶ ಬಿಡುವುದು ಕಷ್ಟವಾಗಿದೆ. ಕಾಬೂಲ್ ವಿಮಾನ ನಿಲ್ದಾಣದಲ್ಲಿ ಒಂಟಿ ಮಹಿಳೆ ಹಾಗೂ ಹುಡುಗಿಯರಿಗೆ ಪ್ರವೇಶ ಸಿಗ್ತಿಲ್ಲ. ಇದ್ರಿಂದ ತಪ್ಪಿಸಿಕೊಳ್ಳಲು ಕೆಲ ಹುಡುಗಿಯರನ್ನು ಒತ್ತಾಯ ಪೂರ್ವಕವಾಗಿ ಅಲ್ಲಿರುವ ಯಾವುದೋ ವ್ಯಕ್ತಿಗೆ ಮದುವೆ ಮಾಡಲಾಗ್ತಿದೆ. ಕೆಲ ಹುಡುಗಿಯರು, ಅಪರಿಚಿತನ ಪತ್ನಿಯೆಂದು ಸುಳ್ಳು ಹೇಳಿ ವಿಮಾನ ಏರುತ್ತಿದ್ದಾರೆ. ವಿಮಾನ ನಿಲ್ದಾಣಕ್ಕೆ ಬಂದ ಕುಟುಂಬಸ್ಥರು, ಮಗಳನ್ನು …

Read More »

ಜನವರಿ 21 ನ್ನು ”ದಾಸೋಹ ದಿನ” ವಾಗಿ ಆಚರಿಸಲು ರಾಜ್ಯ ಸರ್ಕಾರ ತೀರ್ಮಾನ

ಬೆಂಗಳೂರು: ತ್ರಿವಿದ ದಾಸೋಹಿ ಶಿವಕುಮಾರ ಸ್ವಾಮೀಜಿ ಲಿಂಗೈಕ್ಯರಾದ ದಿನವಾದ ಜನವರಿ 21ನ್ನು ”ದಾಸೋಹ ದಿನ” ವನ್ನಾಗಿ ಆಚರಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಈ ಕುರಿತ ಆದೇಶವನ್ನು ಹೊರಡಿಸಲಾಗಿದೆ. ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಲಿಂಗೈಕ್ಯರಾದ ಶಿವಕುಮಾರ ಸ್ವಾಮೀಜಿ ಅವರ ಅಪೂರ್ವ ಸೇವೆಯನ್ನು ಸ್ಮರಿಸುವ ಸಲುವಾಗಿ ಜನವರಿ 21 ರಂದು ಸರ್ಕಾರದ ವತಿಯಿಂದ ದಾಸೋಹ ದಿನವೆಂದು ಆಚರಿಸಲು ನಿರ್ಧರಿಸಲಾಗಿದೆ. ದಾಸೋಹ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲು ಸಂಬಂಧಪಟ್ಟ ಇಲಾಖೆಗಳು ರೂಪುರೇಷೆ ತಯಾರಿಸಿ …

Read More »

ರಸ್ತೆ ಅಪಘಾತ ಸ್ಥಳದಲ್ಲೇ “ವಿದ್ಯಾಗಿರಿ ಠಾಣೆಯ ಕಾನ್ಸ್ಟೇಬಲ್” ಸಾವು.

ಹುಬ್ಬಳ್ಳಿ : ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಸಿಬ್ಬಂದಿಗಳಿಗೆ ಊಟ ಕೊಡಲು ಹೊರಟಿದ್ದ ಪೊಲೀಸ್ ಪೇದೆಯೊಬ್ಬರು ಅಪಘಾತದಲ್ಲಿ ಮೃತಪಟ್ಟ ದಾರುಣ ಘಟನೆ ನಡೆದಿದೆ. ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನಿಂಗಪ್ಪ ಬುಸಣ್ಣವರ ಎಂಬ ಪೊಲೀಸ್ ಪೇದೆಯೇ ಚುನಾವಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಗಳಿಗೆ ಊಟ ಕೊಡಲು ಹೋದಾಗ ನವಲೂರು ಬಳಿ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಬೈಕ್ ಹಾಗೂ ಲಾರಿಯ ನಡುವೆ ಡಿಕ್ಕಿ ಸಂಭವಿಸಿ ಲಾರಿ …

Read More »

ಈ ಬಾರಿ ಸರಳ ಮೈಸೂರು ದಸರಾ ಆಚರಣೆ

ಮೈಸೂರು ದಸರಾ ಕೇವಲ ಕರ್ನಾಟಕಕ್ಕೆ ಸೀಮಿತವಾಗಿಲ್ಲ, ಇದೊಂದು ಜಗತ್ ಪ್ರಸಿದ್ಧ ಆಚರಣೆಯಾಗಿದ್ದು, ಪ್ರತಿ ವರ್ಷ ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸುತ್ತಾ ಬರುತ್ತಿದ್ದು, ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿ ಕಳೆದ ಬಾರಿಗಿಂತ ವಿಶೇಷವಾಗಿ ಸರಳ ಹಾಗೂ ಸಾಂಪ್ರದಾಯಿಕವಾಗಿ ಮೈಸೂರು ದಸರಾವನ್ನು ಆಚರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಎಸ್ ಬೊಮ್ಮಾಯಿ ಅವರು ಹೇಳಿದರು.   ವಿಧಾನಸೌಧದಲ್ಲಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಾಡ ಹಬ್ಬ ಮೈಸೂರು ದಸರಾ -2021ರ ಆಚರಣೆ ಕುರಿತಂತೆ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ …

Read More »