Breaking News
Home / 2021 / ಆಗಷ್ಟ್ (page 33)

Monthly Archives: ಆಗಷ್ಟ್ 2021

ಇನ್ನೂ ಬಾರದ ಜಾಮೀನು ಆದೇಶ ಪ್ರತಿ: ಇನ್ನೊಂದು ದಿನ ಜೈಲಲ್ಲೇ ವಿನಯ್ ಕುಲಕರ್ಣಿ ವಾಸ್ತವ್ಯ

ಬೆಳಗಾವಿ: ಜಿ.ಪಂ ಸದಸ್ಯನ ಕೊಲೆ‌ ಪ್ರಕರಣದಲ್ಲಿ ಜೈಲಿನಲ್ಲಿರುವ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಶುಕ್ರವಾರವೂ ಬಿಡುಗಡೆ ಭಾಗ್ಯ ಸಿಗಲಿಲ್ಲ. ಜಾಮೀನು ಸಿಕ್ಕರೂ ಆದೇಶ ಪ್ರತಿ ಬಾರದ ಕಾರಣ ಇನ್ನೊಂದು ದಿನ‌ ಜೈಲಿನಲ್ಲಿ ಉಳಿಯಬೇಕಾದ ಅನಿವಾರ್ಯತೆ ಒದಗಿ ಬಂದಿದೆ. ಸುಪ್ರೀಂ ಕೋರ್ಟ್ ಮತ್ತು ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯವು ವಿನಯ ಕುಲಕರ್ಣಿಗೆ ಜಾಮೀನು ಮಂಜೂರು ಮಾಡಿದ್ದರೂ ಇನ್ನೊಂದು ದಿನ ಜೈಲಿನಲ್ಲಿ ಉಳಿಯಬೇಕಾಗಿದೆ.‌ ವರಮಹಾಲಕ್ಷ್ಮೀ ಹಬ್ಬದಂದು ಶುಕ್ರವಾರ ಬಿಡುಗಡೆ ಆಗಲಿಲ್ಲ. ಹಿಂಡಲಗಾ ಜೈಲಿನಿಂದ ಬಿಡುಗಡೆ …

Read More »

ಬೆಂಗಳೂರು: 18 ಕುಖ್ಯಾತ ರೌಡಿಗಳ ಸ್ಥಳಾಂತರ

ಬೆಂಗಳೂರು: ನಗರದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದ 18 ರೌಡಿಗಳನ್ನು ರಾಜ್ಯದ ವಿವಿಧ ಜಿಲ್ಲಾಕೇಂದ್ರಗಳ ಕಾರಾಗೃಹಗಳಿಗೆ ಸ್ಥಳಾಂತರಿಸಲಾಗಿದೆ. ವಿಲ್ಸನ್ ಗಾರ್ಡನ್ ನಾಗರಾಜ್, ಶಿವ, ಜಾರ್ಜ್ ಮೈಕಲ್, ಪ್ರದೀಪ್, ಬಾಂಬೆ ಸಲೀಂ ಸೇರಿ ಒಟ್ಟು18 ಜನ ರೌಡಿಗಳನ್ನು ಸ್ಥಳಾಂತರಿಸಲಾಗಿದೆ. ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿ ನ್ಯಾಯಾಂಗ ಬಂಧನದಲ್ಲಿದ್ದ ರೌಡಿಗಳು, ಜೈಲಿನಲ್ಲಿದ್ದುಕೊಂಡೆ ತಮ್ಮ ಸಹಚರರ ಮೂಲಕ ನಗರದಲ್ಲಿ ರೌಡಿ ಚಟುವಟಿಕೆಗಳನ್ನು ನಡೆಸುವ ಸಂಚು ರೂಪಿಸುವ ಯತ್ನ ಮಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ನಗರ …

Read More »

4 ವರ್ಷಗಳ ಬಳಿಕ ಮಾಜಿ ರೌಡಿ ಶೀಟರ್ಸ್​​ ಅಗ್ನಿ ಶ್ರೀಧರ್​​, ಬಚ್ಚನ್​​ಗೆ ವಾರ್ನಿಂಗ್​​ ಕೊಟ್ಟ ಪೊಲೀಸರು​?

ಬೆಂಗಳೂರು: ​ನಾಲ್ಕು ವರ್ಷಗಳ ಬಳಿಕ ಪತ್ರಕರ್ತ ಮತ್ತು ಮಾಜಿ ರೌಡಿ ಶೀಟರ್ ಅಗ್ನಿ ಶ್ರೀಧರ್​​ ಅವರಿಗೆ ಬೆಂಗಳೂರು ಪೊಲೀಸರು ವಾರ್ನಿಂಗ್​​ ನೀಡಿದ್ದಾರೆ. ಯಾವುದೇ ಕಾರಣಕ್ಕೂ ಯಾವ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಬಾರದು ಎಂದು ಡಿಸಿಪಿ ಹರೀಶ್​​ ಪಾಂಡೆ ಕುಮಾರಸ್ವಾಮಿ ಲೇಔಟ್ ಠಾಣೆಗೆ ಕರೆಸಿ ವಾರ್ನ್​​ ಮಾಡಿದ್ದಾರೆ. ಅಲ್ಲದೇ CRPC 110 ಅಡಿ ಮುಚ್ಚಳಿಕೆ ಬರೆಸಿಕೊಂಡು ಕಳಿಸಿದ್ದಾರೆ. ಅಗ್ನಿ ಶ್ರೀಧರ್​​​, ಬಚ್ಚನ್​​ ಸೇರಿದಂತೆ 100ಕ್ಕೂ ಹೆಚ್ಚು ರೌಡಿ ಶೀಟರ್​​​ಗಳಿಗೆ ವಾರ್ನಿಂಗ್​​ ಕೊಟ್ಟು ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ. …

Read More »

ವರಮಹಾಲಕ್ಷ್ಮೀ ಹಬ್ಬಕ್ಕಿಲ್ಲ ಗೊರವನಹಳ್ಳಿ ಮಹಾಲಕ್ಷ್ಮಿ ದರ್ಶನ

ತುಮಕೂರು: ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಜಿಲ್ಲೆಯ ಕೊರಟಗೆರೆ ತಾಲೂಕಿನ ಗೊರವನಹಳ್ಳಿ ವರಮಹಾಲಕ್ಷ್ಮಿ ದರ್ಶನ ಪಡೆಯಬೇಕು ಎಂದುಕೊಂಡಿದ್ದ ಭಕ್ತರಿಗೆ ಜಿಲ್ಲಾಡಳಿತ ನಿರಾಸೆ ಮೂಡಿಸಿದ್ದು, ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಭಕ್ತರಿಗೆ ಅವಕಾಶ ನೀಡದೆ ದೇವಾಲಯ ಬಂದ್ ಮಾಡಿದೆ. ಇಂದಿನಿಂದ ನಾಲ್ಕು ದಿನಗಳ ಕಾಲ ದೇವಾಲಯ ಪ್ರವೇಶಕ್ಕೆ ಭಕ್ತರಿಗೆ ನಿರ್ಬಂಧ ವಿಧಿಸಲಾಗಿದ್ದು, ಜಿಲ್ಲಾಡಳಿತ ಸೂಚನೆ ಹಿನ್ನೆಲೆಯಲ್ಲಿ ದೇವಾಲಯ ಬಂದ್ ಮಾಡಿ ಆಡಳಿತ ಮಂಡಳಿ ಅಧಿಕೃತ ಆದೇಶ ಹೊರಡಿಸಿದೆ. ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ದೇವಾಲಯದ ಅರ್ಚಕರಿಂದ …

Read More »

ಮಕ್ಕಳ ಮೇಲೆ ಲಸಿಕೆ ಪ್ರಯೋಗಕ್ಕೆ ಜಾನ್ಸ್‌ನ್ ಅಂಡ್ ಜಾನ್ಸ್‌ನ್ ನಿಂದ ಮನವಿ

ನವದೆಹಲಿ,ಆ.20- ಕೊರೊನಾ ವಿರುದ್ಧ ಹೋರಾಟದ ಭ್ರಹ್ಮಾಸ್ತ್ರವಾಗಿರುವ ಲಸಿಕೆ ಅವಿಷ್ಕಾರಗಳು ದಿನೇ ದಿನೇ ಪ್ರಗತಿ ಸ್ವರೂಪದಲ್ಲಿದ್ದು, ಹೊಸದಾಗಿ ಜಾನ್ಸನ್ ಅಂಡ್ ಜಾನ್ಸ್‍ನ್ ಸಂಸ್ಥೆ 12 ರಿಂದ 17 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಅಧ್ಯಯನ ನಡೆಸಲು ಅನುಮತಿ ನೀಡುವಂತೆ ಮನವಿ ಸಲ್ಲಿಸಿದೆ. ಕೇಂದ್ರ ಸರ್ಕಾರದ ಔಷಧಿ ಗುಣಮಟ್ಟ ನಿಯಂತ್ರಣ ಸಂಸ್ಥೆ (ಸಿಡಿಎಸ್‍ಸಿಒ)ಗೆ ಅರ್ಜಿ ಸಲ್ಲಿಸಿದ್ದು, ಪ್ರಾಯೋಗಿಗ ಪರೀಕ್ಷೆಗೆ ಅನುಮತಿ ನೀಡುವಂತೆ ಮನವಿ ಸಲ್ಲಿಸಿದೆ. ಕೇಂದ್ರ ಸರ್ಕಾರ ಅನುಮತಿ ನೀಡಿದ್ದಾದರೆ ಜಾನ್ಸನ್ ಅಂಡ್ ಜಾನ್ಸನ್ ಮಕ್ಕಳಿಗೆ …

Read More »

NASA ಪ್ರಶಸ್ತಿಗೆ ಭಾಜನರಾದ ಕನ್ನಡಿಗ -ಬರೋಬ್ಬರಿ ₹1.41 ಕೋಟಿ ವಿದ್ಯಾರ್ಥಿ ವೇತನ

ಶಿರಸಿ: ಹಂಟ್ಸ್‌ವಿಲ್​​​ನಲ್ಲಿರುವ ಅಲಬಾಮಾ ವಿಶ್ವವಿದ್ಯಾಲಯದ (UAH) ಇಬ್ಬರು ಡಾಕ್ಟರೇಟ್ ವಿದ್ಯಾರ್ಥಿಗಳು ಸಲ್ಲಿಸಿರುವ ಸಂಶೋಧನಾ ಪ್ರಸ್ತಾವನೆಯನ್ನು​ ಬಾಹ್ಯಾಕಾಶ ವಿಜ್ಞಾನ ವಿಭಾಗವು ನಾಸಾ ಅರ್ಥ್ ಮತ್ತು ಸ್ಪೇಸ್ ಸೈನ್ಸ್ ಮತ್ತು ಟೆಕ್ನಾಲಜಿ (FINESST) ಅನುದಾನದಲ್ಲಿ NASA ಫ್ಯೂಚರ್​ ಇನ್​ವೆಸ್ಟಿಗೇಟರ್​ ಪ್ರಶಸ್ತಿಗೆ ಭಾಜನವಾಗಿದೆ. ಕ್ಯಾಥರೀನ್ ಡೇವಿಡ್ಸನ್ ಮತ್ತು ದಿನೇಶ (ದಿನೇಶ್) ವಸಂತ ಹೆಗಡೆ ತಲಾ 1,35,000 ಅಮೆರಿಕನ್​ ಡಾಲರ್ ಅನ್ನು ​ಸ್ಟೈಫಂಡ್, ಟ್ಯೂಷನ್, ಸಂಶೋಧನಾ ಚಟುವಟಿಕೆಗಳು ಮತ್ತು ಪ್ರಯಾಣ ವೆಚ್ಚಗಳನ್ನು ಭರಿಸಲು, ಕಾರ್ಯಾಗಾರಗಳು ಮತ್ತು …

Read More »

ಹಬ್ಬದ ಖರೀದಿಯಲ್ಲಿ ಕೊರೋನಾ ಬಗ್ಗೆ ಮೈಮರೆತ ಜನ : ಕೆಆರ್ ಮಾರುಕಟ್ಟೆಯಲ್ಲಿ ಜನವೋ ಜನ

ಬೆಂಗಳೂರು : ಕೊರೋನಾ ಸೋಂಕಿನ ಮುಂಜಾಗ್ರತಾ ಕ್ರಮಗಳೊಂದಿಗೆ ಹಬ್ಬಗಳನ್ನು ಆಚರಿಸೋದಕ್ಕೆ ಕಠಿಣ ನಿಯಮ ಜಾರಿಗೊಳಿಸಲಾಗಿದೆ. ಅಲ್ಲದೇ ಬಿಬಿಎಂಪಿ ಕೂಡ ಮಾರುಕಟ್ಟೆಯಲ್ಲಿ ಹಬ್ಬಗಳ ಖರೀದಿ ಸಂದರ್ಭದಲ್ಲಿ ಯಾವೆಲ್ಲಾ ಮುಂಜಾಗ್ರತಾ ಕ್ರಮಗಳೊಂದಿಗೆ ಖರೀದಿಸಬೇಕು ಎನ್ನುವ ಬಗ್ಗೆಯೂ ಮಾರ್ಗಸೂಚಿ ರಿಲೀಸ್ ಮಾಡಲಾಗಿದೆ. ಹೀಗಿದ್ದೂ.. ಇಂದು ಹಬ್ಬದ ದಿನದಂದು ಮಾತ್ರ, ಕೊರೋನಾಗೆ ಡೋಂಟ್ ಕೇರ್ ಎಂದಂತ ಜನರು, ಕೆ ಆರ್ ಮಾರುಕಟ್ಟೆ ಸೇರಿದಂತೆ ನಗರ ವಿವಿಧ ಮಾರುಕಟ್ಟೆಗಳಲ್ಲಿ ಖರೀದಿಗಾಗಿ ಜನರು ಮುಗಿ ಬಿದ್ದಿದ್ದಾರೆ.   ಹೌದು.. ಹಬ್ಬದ …

Read More »

ಹೊಟ್ಟೆ ಪಾಡಿಗಾಗಿ ಊರೂರು ಸುತ್ತುವ ಅಲೆಮಾರಿಗಳಿಗೆ ಸಿಕ್ಕಿಲ್ಲ ಕೊವಿಡ್ ಲಸಿಕೆ

ಒಂದು ಕಡೆ ಲಸಿಕೆ ಹಾಕಿಸಿಕೊಂಡರೆ ಜ್ವರ ಬರುತ್ತೆ, ದುಡಿಮೆ ನಿಲ್ಲುತ್ತೆ ಎನ್ನುವ ಭಯದಲ್ಲಿ ಲಸಿಕೆ ಪಡೆಯಲು ಅಲೆಮಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಮತ್ತೊಂದು ಕಡೆ ದಿನಗೂಲಿ ಬಿಟ್ಟು ನೂರಾರು ಜನರ ಮಧ್ಯೆ ನಿಂತು ಲಸಿಕೆ ಹಾಕಿಸಿಕೊಳ್ಳಲಾಗದ ಪರಿಸ್ಥಿತಿ ಇದೆ. ಮಂಡ್ಯ: ಮಹಾಮಾರಿ ಕೊರೊನಾ ವೈರಸ್ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಲಸಿಕಾ ಅಭಿಯಾನ ನಡೆಸುತ್ತಿದೆ. ರಾಜ್ಯಗಳಿಗೆ ಬೇಕಾಗುವ ಅಗತ್ಯ ಲಸಿಕೆ ಪೂರೈಕೆ ಮಾಡಿ ಪ್ರತಿಯೊಬ್ಬರಿಗೂ ಲಸಿಕೆ ಸಿಗುವ ನಿಟ್ಟಿನಲ್ಲಿ ಕಾರ್ಯ ನಡೆಸುತ್ತಿದೆ. ಆದ್ರೆ ಕೊವಿಡ್ …

Read More »

ನಾಡಿನ ಸಮಸ್ತ ಜನತೆ ಹಾಗು ನನ್ನೆಲ್ಲ ಬಂಧುಗಳಿಗೆ ಶ್ರೀವರಮಹಾಲಕ್ಷ್ಮೀ ಹಬ್ಬದ ಹಾರ್ದಿಕ ಶುಭಾಶಯಗಳು.

ಸಕಲ ಅಷ್ಟೈಶ್ವರ್ಯ ನೀಡುವ ||ಶ್ರೀ ಅಷ್ಟಲಕ್ಷ್ಮೀಮಹಾಮಂತ್ರಂ|| ಸಕಲ ಅಷ್ಟೈಶ್ವರ್ಯ ನೀಡುವ ||ಶ್ರೀ ಅಷ್ಟಲಕ್ಷ್ಮೀಮಹಾಮಂತ್ರಂ|| ನಾಡಿನ ಸಮಸ್ತ ಜನತೆ ಹಾಗು ನನ್ನೆಲ್ಲ ಬಂಧುಗಳಿಗೆ ಶ್ರೀವರಮಹಾಲಕ್ಷ್ಮೀ ಹಬ್ಬದ ಹಾರ್ದಿಕ ಶುಭಾಶಯಗಳು. ಜಗನ್ಮಾತೆ ಮಹಾಲಕ್ಷ್ಮಿಯು ನಮ್ಮೆಲ್ಲ ಸಂಕಷ್ಟಗಳನ್ನು ನೀಗಿ ಸುಖದ ದಾರಿ ತೋರಲಿ ಎಂದು ಅಮ್ಮನಲ್ಲಿ ನನ್ನ ಕಳಕಳಿಯ ಪ್ರಾರ್ಥನೆ. ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ …

Read More »

ಬೆಳಗಾವಿ, ಈ ಗ್ರಾಮದಲ್ಲಿ ಒಂದೇ ಒಂದು ಮುಸ್ಲಿಂ ಕುಟುಂಬವಿಲ್ಲ, ಆದರು ಕಳೆದ 11 ವರ್ಷಗಳಿಂದ ಮೊಹರಂ ಹಬ್ಬ ಆಚರಿಸಿಕೊಂಡು ಬರಲಾಗುತ್ತಿದೆ.

ಬೆಳಗಾವಿ, ಆಗಸ್ಟ್ 20: ಈ ಗ್ರಾಮದಲ್ಲಿ ಒಂದೇ ಒಂದು ಮುಸ್ಲಿಂ ಕುಟುಂಬವಿಲ್ಲ, ಆದರು ಕಳೆದ 11 ವರ್ಷಗಳಿಂದ ಮೊಹರಂ ಹಬ್ಬ ಆಚರಿಸಿಕೊಂಡು ಬರಲಾಗುತ್ತಿದೆ. ಇಂತಹ ಧಾರ್ಮಿಕ ಸಾಮರಸ್ಯ ಕಂಡುಬಂದಿದ್ದು, ಬೆಳಗಾವಿ ಜಿಲ್ಲೆ ಸವದತ್ತಿ ತಾಲ್ಲೂಕಿನ ಹರ್ಲಾಪುರ ಗ್ರಾಮದಲ್ಲಿ. ಇಲ್ಲಿ ಧಾರ್ಮಿಕ ಸಾಮರಸ್ಯದ ವಿಶಿಷ್ಟತೆಯನ್ನು ಗುರುತಿಸಬಹುದು. ಇಲ್ಲಿ ಹಿಂದೂ ಕುಟುಂಬಗಳು ನಿಧಿ ಸಂಗ್ರಹಿಸುವ ಮೂಲಕ 11 ವರ್ಷಗಳ ಹಿಂದೆ “ಫಕೀರ್ ಸ್ವಾಮಿ’ ದರ್ಗಾವನ್ನು ನಿರ್ಮಿಸಿದ್ದಾರೆ. ಪ್ರತಿವರ್ಷ ಹರ್ಲಾಪುರ ಗ್ರಾಮಸ್ಥರು ಹೊಸ ಇಸ್ಲಾಮಿಕ್ ವರ್ಷವನ್ನು …

Read More »