Breaking News
Home / 2021 / ಆಗಷ್ಟ್ (page 29)

Monthly Archives: ಆಗಷ್ಟ್ 2021

ಅಕ್ಷಯ್​ ಕುಮಾರ್ ಸಿನಿಮಾ ಬ್ಯಾನ್​ ಮಾಡಿದ ಮೂರು ಪ್ರಮುಖ ರಾಷ್ಟ್ರಗಳು; ಬಾಕ್ಸ್​ ಆಫೀಸ್​ ಕಲೆಕ್ಷನ್​ಗೆ ಹೊಡೆತ

ಕರ್ನಾಟಕ ಸೇರಿ ಬಹುತೇಕ ರಾಜ್ಯಗಳಲ್ಲಿ ಶೇ. 50 ಆಸನ ಭರ್ತಿಗೆ ಮಾತ್ರ ಅವಕಾಶ ನೀಡಲಾಗಿದೆ. ಹೀಗಿದ್ದರೂ ಬೆಲ್​ ಬಾಟಮ್​ ನಿರ್ಮಾಪಕರು ದೊಡ್ಡ ರಿಸ್ಕ್​ ತೆಗೆದುಕೊಂಡು ಸಿನಿಮಾ ರಿಲೀಸ್​ ಮಾಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಅಕ್ಷಯ್​ ಕುಮಾರ್ ಸಾಕಷ್ಟು ಬದಲಾಗಿದ್ದಾರೆ. ದೇಶಭಕ್ತಿ ಪ್ರಧಾನ ಸಿನಿಮಾಗಳಿಗೆ ಅಕ್ಷಯ್​ ಹೆಚ್ಚು ಒತ್ತು ನೀಡುತ್ತಿದ್ದಾರೆ. ಈ ಕಾರಣಕ್ಕೆ ಅವರ ಅಭಿಮಾನಿ ಬಳಗ ಮತ್ತೂ ಹಿರಿದಾಗಿದೆ. ಈಗ ಅಕ್ಷಯ್​ ಕುಮಾರ್​ ನಟನೆಯ ಸ್ಪೈ ಥ್ರಿಲ್ಲರ್​ ‘ಬೆಲ್​ ಬಾಟಮ್’​ ರಿಲೀಸ್​ …

Read More »

ಪೂಜೆ ವೇಳೆ ಕಾಲು ಜಾರಿ ಪ್ರಪಾತಕ್ಕೆ ಬಿದ್ದ ಪೂಜಾರಿ ಸಾವು; ನೋಡನೋಡುತ್ತಿದ್ದಂತೆ ನೂರಾರು ಅಡಿ ಆಳಕ್ಕೆ ಉರುಳಿದ ದೇಹ..

ಚಿಕ್ಕಬಳ್ಳಾಪುರ: ಪೂಜೆಯ ವೇಳೆ ಕಾಲು ಜಾರಿ ಪ್ರಪಾತಕ್ಕೆ ಬಿದ್ದು ಪೂಜಾರಿಯೊಬ್ಬರು ಮೃತಪಟ್ಟಿದ್ದು, ನೆರೆದಿದ್ದ ಭಕ್ತರೆಲ್ಲ ನೋಡನೋಡುತ್ತಿದ್ದಂತೆ ಅವರ ದೇಹ ನೂರಾರು ಅಡಿ ಆಳಕ್ಕೆ ಉರುಳಿ ಬಿದ್ದಿದೆ. ಬೆಟ್ಟದ ಮೇಲಿನಿಂದ ಪೂಜಾರಿ ಕೆಳಕ್ಕೆ ಬೀಳುವ ದೃಶ್ಯ ಭಕ್ತರ ಕ್ಯಾಮರಾಗಳಲ್ಲಿ ಸೆರೆಯಾಗಿದ್ದು, ವೈರಲ್ ಆಗಿವೆ. ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಸಿಂಗನಮಲ ಗ್ರಾಮದ ಗಂಪಮಲ್ಲಯ್ಯಸ್ವಾಮಿ ಬೆಟ್ಟದಲ್ಲಿ ಈ ಅವಘಡ ನಡೆದಿದೆ. ಶ್ರಾವಣ ಮಾಸದಲ್ಲಿ ನಡೆಯುವ ವಿಶೇಷ ಪೂಜೆಯ ಸಂದರ್ಭದಲ್ಲಿ ಈ ದುರಂತ ನಡೆದುಹೋಗಿದೆ. ಪೂಜೆಗೆ …

Read More »

ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ನಿಧನ

ಲಖನೌ: ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್​ ಸಿಂಗ್(89)​ ಬಹುಅಂಗಾಂಗ ವೈಫಲ್ಯದಿಂದಾಗಿ ಇಂದು ನಿಧನರಾಗಿದ್ದಾರೆ. ಕಲ್ಯಾಣ್ ಸಿಂಗ್ ಅವರನ್ನ ಜುಲೈ 4 ರಂದು ಲಖನೌನ SGPGI ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಕಲ್ಯಾಣ್ ಸಿಂಗ್ 2 ಬಾರಿ ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರು. 2014-2019ರ ಅವಧಿಯಲ್ಲಿ ರಾಜಸ್ಥಾನ್​ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು. ಇನ್ನು ಕಲ್ಯಾಣ್ ಸಿಂಗ್ ಸಾವಿಗೆ ಪ್ರಧಾನಿ ಮೋದಿ …

Read More »

ಶಾಲೆ ಆರಂಭವಾದ್ರೆ ಏನಿರುತ್ತೆ ಗೈಡ್​ಲೈನ್ಸ್; ಶಾಲೆಗಳ ಆರಂಭಕ್ಕೆ ಹೇಗಿದೆ ತಯಾರಿ?

ಈಗಾಗಲೇ 16,850 ಪ್ರೌಢ ಶಾಲೆಗಳು ಹಾಗೂ 5,492 ಪದವಿ ಪೂರ್ವ ಕಾಲೇಜುಗಳಲ್ಲಿ ಶಾಲೆ ಪುನಾರಂಭಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬೆಳ್ಳಗ್ಗೆ 10 ರಿಂದ 1:30 ರವರೆಗೆ ಮಾತ್ರ ತರಗತಿಗಳು ನಡೆಯಲಿವೆ. ಶಾಲಾರಂಭಕ್ಕೆ ಈಗಾಗಲೇ ಶಿಕ್ಷಣ ಇಲಾಖೆ ಗೈಡ್​ಲೈನ್ಸ್ ಬಿಡುಗಡೆ ಮಾಡಿದೆ. ಬೆಂಗಳೂರು: ಸೋಮವಾರದಿಂದ (ಆಗಸ್ಟ್ 23) ಕರ್ನಾಟಕ ರಾಜ್ಯದಲ್ಲಿ ಶಾಲೆ ಶುರು ಆಗಲಿದೆ. ಕಳೆದ ಒಂದುವರೆ ವರ್ಷದಿಂದ ಬಂದ್ ಆಗಿದ್ದ ಶಾಲೆಗಳು ಪುನಾರಂಭ ಪಡೆಯಲಿವೆ. ಕೊರೊನಾ ಪ್ರಕರಣಗಳು ಇನ್ನೂ ಸಂಪೂರ್ಣ ಇಳಿಕೆಯಾಗಿಲ್ಲ. …

Read More »

ಬದುಕಿರುವ ಯೋಧನ ಮನೆಗೆ ಹೋಗಿ ಕೇಂದ್ರ ಸಚಿವರು ಸಾಂತ್ವನ ಹೇಳಿರುವುದು ಬಿಜೆಪಿ ಸರ್ಕಾರಕ್ಕೆ ಕಣ್ಣು, ಕಿವಿ, ಹೃದಯ ಇಲ್ಲ ಎಂಬುದಕ್ಕೆ ಮತ್ತೊಂದು ಸಾಕ್ಷಿ: ಡಿ.ಕೆ. ಶಿವಕುಮಾರ್‌

ಬೆಂಗಳೂರು: ಬದುಕಿರುವ ಯೋಧನ ಮನೆಗೆ ಹೋಗಿ ಕೇಂದ್ರ ಸಚಿವರು ಸಾಂತ್ವನ ಹೇಳಿರುವುದು ಬಿಜೆಪಿ ಸರ್ಕಾರಕ್ಕೆ ಕಣ್ಣು, ಕಿವಿ, ಹೃದಯ ಇಲ್ಲ ಎಂಬುದಕ್ಕೆ ಮತ್ತೊಂದು ಸಾಕ್ಷಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಟೀಕಿಸಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಅವರು, ಕೇಂದ್ರ ಸಚಿವ ನಾರಾಯಣ ಸ್ವಾಮಿ ಅವರಿಗೆ ಅಧಿಕಾರ ಸಿಕ್ಕಿದೆ, ಆ ಬಗ್ಗೆ ನಮ್ಮ ತಕರಾರಿಲ್ಲ. ಅವರು ಬದುಕಿರುವ ಯೋಧನ ಮನೆಗೆ ಹೋಗಿ ಸಾಂತ್ವನ ಹೇಳಿರುವ ಸುದ್ದಿ ಕೇಳಿದೆ. ಜಿಲ್ಲಾಧಿಕಾರಿಗಳು, ತಹಶೀಲ್ದಾರರು, …

Read More »

ನಾಡಿನ ಸಮಸ್ತ ಜನತೆಗೆ ಸಾಮರಸ್ಯ ಹಾಗೂ ಸಹೋದರತ್ವದ ಪ್ರತೀಕವಾದ ಪವಿತ್ರ ರಕ್ಷಾಬಂಧನದ ಹಾರ್ದಿಕ ಶುಭಾಶಯಗಳು.

ನಾಡಿನ ಸಮಸ್ತ ಜನತೆಗೆ ಸಾಮರಸ್ಯ ಹಾಗೂ ಸಹೋದರತ್ವದ ಪ್ರತೀಕವಾದ ಪವಿತ್ರ ರಕ್ಷಾಬಂಧನದ ಹಾರ್ದಿಕ ಶುಭಾಶಯಗಳು. ಶ್ರೀ ಸಂತೋಷ  ಜಾರಕಿಹೊಳಿ

Read More »

ತಮಿಳುನಾಡಿನಲ್ಲಿ ಸೋಮವಾರದಿಂದ ಥಿಯೇಟರ್‌ ಓಪನ್‌

ನವದೆಹಲಿ: ತಮಿಳುನಾಡು ಸರ್ಕಾರವು ಕೋವಿಡ್‌ ನಿರ್ಬಂಧಗಳಲ್ಲಿ ಕೆಲವನ್ನು ಸಡಿಲಿಕೆ ಮಾಡಿದ್ದು, ಇನ್ನು ಕೆಲವನ್ನು ಸೆ.9ರವರೆಗೆ ವಿಸ್ತರಣೆ ಮಾಡಿದೆ. ಅದರಂತೆ, ಸೋಮವಾರದಿಂದಲೇ ಶೇ.50ರ ಆಸನ ಸಾಮರ್ಥ್ಯದಲ್ಲಿ ಥಿಯೇಟರ್‌ಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಆದರೆ, ಚಿತ್ರ ಮಂದಿರಗಳ ಎಲ್ಲ ಸಿಬ್ಬಂದಿಯೂ ಲಸಿಕೆ ಪಡೆದಿರಬೇಕು ಎಂಬ ಷರತ್ತು ಹಾಕಲಾಗಿದೆ. ಸೆ.1ರಿಂದ ಶಾಲೆಗಳೂ(9-12ನೇ ತರಗತಿ) ಆರಂಭ ವಾಗಲಿವೆ. ಹೋಟೆಲ್‌, ಕ್ಲಬ್‌ಗಳಿಗೂ ಅನುಮತಿ ನೀಡಲಾಗಿದೆ.ಬೀಚ್‌ಗಳಿಗೂ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತ ಅವಕಾಶವಿದೆ. ಅಕ್ಟೋಬರ್‌ನಲ್ಲಿ ಲಸಿಕೆ: ಅಕ್ಟೋಬರ್‌ ತಿಂಗಳ ವೇಳೆಗೆ 12 …

Read More »

ನಾಳೆಯಿಂದ ಶಾಲೆ ಆರಂಭ: ಮಕ್ಕಳೇ ಆತಂಕಕ್ಕೆ ಒಳಗಾಗದೇ ಬನ್ನಿ, ಸಿಎಂ ಬೊಮ್ಮಾಯಿ ಕರೆ

ಪ್ರೀತಿಯ ವಿದ್ಯಾರ್ಥಿಗಳೇ… ಶಾಲಾ ಕಾಲೇಜುಗಳಲ್ಲಿ ಗಂಟೆ ಸದ್ದು ಮತ್ತೆ ಕೇಳಿಸಲಿದೆ. ತರಗತಿ ಕೋಣೆಯ ಕಲರವ ಸೋಮವಾರದಿಂದ ಆರಂಭವಾಗಲಿದೆ. ಪಾಠ, ಸಹಪಾಠಿಗಳ ಭೇಟಿ, ಪಠ್ಯ, ಪಠ್ಯೇತರ ಚಟುವಟಿಕೆಗಳ ಕುರಿತು ಚರ್ಚೆ, ವಿಷಯ ವಿನಿಮಯ, ಶಾಲೆಯಲ್ಲೇ ಗುರುಗಳಿಗೆ ಪ್ರಶ್ನೆ ಕೇಳಿ ಸಂಶಯ ನಿವಾರಿಸಿಕೊಳ್ಳುವ ಮೂಲಕ ಪೂರ್ಣ ಪ್ರಮಾಣದಲ್ಲಿ ಜ್ಞಾನಾರ್ಜನೆಗೆ ಅನುಕೂಲ ವಾಗುವ ಭೌತಿಕ ತರತಿಗಳು ಆರಂಭವಾಗುತ್ತಿವೆ. ನಿಮ್ಮೆಲ್ಲರ ಆರೋಗ್ಯದ ಸುರಕ್ಷೆಯೇ ನಮ್ಮ ಆದ್ಯತೆ. ಹೀಗಾಗಿ ಕ್ಯಾಂಪಸ್‌ ದಿನಗಳು ಮರಳಿ ದರೂ ಹಿಂದಿನಂತಿರುವುದಿಲ್ಲ. ಏಕೆಂದರೆ …

Read More »

ಭಾನುವಾರದ ರಾಶಿಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

ಮೇಷ: ಸರಕಾರೀ ವ್ಯಹಾರಗಳಲ್ಲಿ ಪ್ರಗತಿ. ಹಿರಿಯರಿಗೆ ಸಂತಸ ನೀಡಿದ ತೃಪ್ತಿ. ಸಮಾಜದಲ್ಲಿ ಗೌರವ ಪ್ರಾಪ್ತಿ. ಸ್ವಸಾಮರ್ಥ್ಯದಿಂದ ಧನಾರ್ಜನೆ. ಮಕ್ಕಳ ಸಾಧನೆಯಿಂದ ನೆಮ್ಮದಿ. ಸುದೃಢ ಆರೋಗ್ಯ. ವೃಷಭ: ಸುಪುಷ್ಠವಾದ ದೈಹಿಕ ಮಾನಸಿಕ ಆರೋಗ್ಯ. ಜನರಿಂದ ಮಾನ್ಯತೆ. ಉದ್ಯೋಗ ವ್ಯವಹಾರಗಳಲ್ಲಿ ಅಭಿವೃದ್ಧಿ . ಆಸ್ತಿ ವಿಚಾರಗಳಲ್ಲಿ ಪ್ರಗತಿ. ಬಂಧುಮಿತ್ರರ ಸಹಕಾರ. ದಾಂಪತ್ಯ ಸುಖ ವೃದ್ಧಿ. ಮಿಥುನ: ಗುರುಹಿರಿಯರಿಂದ ಸರ್ವವಿಧದ ಸುಖ ಪ್ರಾಪ್ತಿ. ಧೈರ್ಯ ಪರಾಕ್ರಮದಿಂದ ಕೂಡಿದ ಕಾರ್ಯ ವೈಖರಿ. ದಾನ ಧರ್ಮದಲ್ಲಿ ಆಸಕ್ತಿ. …

Read More »

ಬಸವ ವಸತಿ ಯೋಜನೆಯಡಿ ರಾಜ್ಯದಲ್ಲಿ 04 ಲಕ್ಷ ಮನೆ ಮಂಜೂರು- ವಸತಿ ಸಚಿವ ವಿ. ಸೋಮಣ್ಣ ಘೋಷಣೆ

ದಾವಣಗೆರೆ: ಪ್ರಸಕ್ತ ವರ್ಷ ಬಸವ ವಸತಿ ಯೋಜನೆಯಡಿ ರಾಜ್ಯದಲ್ಲಿ ಒಟ್ಟು 04 ಲಕ್ಷ ಮನೆಗಳ ನಿರ್ಮಾಣಕ್ಕೆ ಮಂಜೂರಾತಿ ನೀಡಲಾಗುತ್ತಿದ್ದು, ಪ್ರತಿ ಗ್ರಾಮ ಪಂಚಾಯತಿಗೆ ಕನಿಷ್ಟ 50 ಮನೆಗಳನ್ನು ಮಂಜೂರು ಮಾಡಲಾಗುವುದು, ಜಾತಿ ಬೇಧವಿಲ್ಲದೆ ಅರ್ಹರಿಗೆ ಮಾತ್ರ ಮನೆ ಮಂಜೂರಾತಿಗೆ ಫಲಾನುಭವಿಗಳನ್ನು ಗುರುತಿಸುವಂತೆ ವಸತಿ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಖಾತೆ ಸಚಿವ ವಿ. ಸೋಮಣ್ಣ ಅವರು ಶಾಸಕರುಗಳಿಗೆ ಮನವಿ ಮಾಡಿದರು. ವಸತಿ ಯೋಜನೆಗಳಿಗೆ ಸಂಬಂಧಿಸಿದಂತೆ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಶನಿವಾರ …

Read More »