Breaking News
Home / 2021 / ಆಗಷ್ಟ್ / 26 (page 3)

Daily Archives: ಆಗಷ್ಟ್ 26, 2021

ಪಾಲಿಕೆ ಚುನಾವಣೆ: ಬದಲಾದ ಮೀಸಲಾತಿ- ವಾರ್ಡ್‌ ಹಿಡಿತ ಬಿಡಲೊಲ್ಲದ ಮಾಜಿ ಸದಸ್ಯರು

ಹುಬ್ಬಳ್ಳಿ: ಮಹಾನಗರ ಪಾಲಿಕೆಯ ಚುನಾವಣೆ ಹಿನ್ನೆಲೆಯಲ್ಲಿ ವಾರ್ಡ್‌ಗಳ ಮೀಸಲಾತಿ ಬದಲಾಗಿದ್ದರಿಂದ, ಮಾಜಿ ಸದಸ್ಯರು ತಮ್ಮ ಪತ್ನಿ ಅಥವಾ ಪತಿಯನ್ನು ಕಣಕ್ಕೆ ಇಳಿಸಿದ್ದಾರೆ. 67 ಇದ್ದ ವಾರ್ಡ್‌ಗಳ ಸಂಖ್ಯೆ ಪುನರ್‌ವಿಂಗಡಣೆ ಬಳಿಕ 82ಕ್ಕೆ ಏರಿಕೆಯಾಗಿದೆ. ಅದರಲ್ಲಿ 40 ವಾರ್ಡ್‌ಗಳು ಮಹಿಳೆಯರಿಗೆ ಮೀಸಲಾಗಿವೆ. ತಮಗೆ ಟಿಕೆಟ್ ಸಿಗದೆ ಬೇರೆಯವರ ಪಾಲಾಗಿ, ವಾರ್ಡ್‌ನಲ್ಲಿ ಹೊಂದಿರುವ ಹಿಡಿತ ಎಲ್ಲಿ ಕೈತಪ್ಪುತ್ತದೆಯೋ ಎಂಬ ಆತಂಕ ಮಾಜಿ ಸದಸ್ಯರನ್ನು ಕಾಡುತ್ತಿದೆ. ಲಿಂಗಾಧಾರಿತ ಮೀಸಲಾತಿಯಿಂದ ತಮಗೆ ಟಿಕೆಟ್ ತಪ್ಪಿದರೂ, ಕುಟುಂಬದ ಸದಸ್ಯರಿಗೆ …

Read More »

ವಿಕ್ರಾಂತ್ ರೋಣ”ನ ನಂತರ ಕಾಲಿವುಡ್ ನಲ್ಲಿ ಕಿಚ್ಚ..!

ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಇತ್ತೀಚೆಗಷ್ಟೇ ತಮ್ಮ ಬಹುನಿರೀಕ್ಷೆಯ ಪ್ಯಾನ್ ಇಂಡಿಯಾ ಸಿನಿಮಾ ವಿಕ್ರಾಂತ್ ರೋಣನ ಡಬ್ಬಿಂಗ್ ಕೆಲಸ ಮುಗಿಸಿದ್ದಾರೆ.. ಈ ನಡುವೆ ಅವರ ಅಭಿನಯದ ಕೋಟಿಗೊಬ್ಬ 3 ಕೂಡ ರಿಲೀಸ್ ಗಾಗಿ ಕಾಯ್ತಿದೆ.. ಆದ್ರೆ ಕಿಚ್ಚನ ಮುಂದಿನ ಸಿನಿಮಾ ಯಾವುದು ಯಾರ ಜೊತೆಗೆ ಅನ್ನೋ ಕ್ಯೂರಿಯಾಸಿಟಿ ಹೆಚ್ಚಾಗಿದೆ.. ಆದ್ರೆ ಮುಂದಿನ ಸಿನಿಮಾ ಕಾಲಿವುಡ್ ನಲ್ಲಾ ಅನ್ನೋ ಗುಸುಗುಸು ಶುರುವಾಗಿದೆ.. ಕಾಲಿವುಡ್ ಖ್ಯಾತ ನಿರ್ದೇಶರಕಾದ ವೆಂಕಟ್ ಪ್ರಭು …

Read More »

ರಾಜ್ಯದಲ್ಲಿ ಹಗರಣಗಳ ಸರ್ಕಾರ: ಡಿಕೆಶಿ ಆರೋಪ

ಬೆಂಗಳೂರು: ರಾಜ್ಯದಲ್ಲಿ ಹಗರಣಗಳ ಸರ್ಕಾರವಿದ್ದು, ಆರೋಗ್ಯ ಕ್ಷೇತ್ರದ ಔಷಧ, ವೆಂಟಿಲೇಟರ್‌, ಆಯಂಬುಲೆನ್ಸ್‌ ವಿಚಾರದಲ್ಲೂ ಹಣ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಆರೋಪಿಸಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಅವರು, ಕರ್ನಾಟಕ ಸರ್ಕಾರ ದೇಶದಲ್ಲೇ ಅತ್ಯಂತ ಭ್ರಷ್ಟ ಸರ್ಕಾರವಾಗಿದೆ. ಕೇಂದ್ರ ಸರ್ಕಾರ 4 ಕೋಟಿ ರೂ.ಗೆ ಖರೀದಿಸಿದ್ದನ್ನು ರಾಜ್ಯ ಸರ್ಕಾರ 22 ಕೋಟಿ ರೂ.ಗೆ ಖರೀದಿ ಮಾಡುವಷ್ಟರ ಮಟ್ಟಿಗೆ ಹಗರಣದಲ್ಲಿ ಮುಳುಗಿದೆ ಎಂದು ಟೀಕಿಸಿದರು. ಕೋವಿಡ್‌ ಸಮಯದಲ್ಲಿ ಮಕ್ಕಳು ಶಾಲೆಗೆ ಹೋಗದ ಸಮಯದಲ್ಲಿ …

Read More »

ರಾಜ್ಯ ಸರ್ಕಾರಿ ನೌಕರರೇ ಗಮನಿಸಿ : ಮುಂಬಡ್ತಿ ಪಡೆಯಲು ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ಕಡ್ಡಾಯ

ಬೆಂಗಳೂರು : ಬಡ್ತಿ ನಿರೀಕ್ಷೆಯಲ್ಲಿರುವ ರಾಜ್ಯ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರವು ಮಹತ್ವದ ಮಾಹಿತಿಯೊಂದನ್ನು ನೀಡಿದ್ದು, ನೇರ ನೇಮಕಾತಿ ಹೊಂದಿರುವ ಮತ್ತು ಸೇವಾನಿರತ ಸರ್ಕಾರಿ ನೌಕರರು ಮುಂದಿನ ವರ್ಷದ ಮಾರ್ಚ್ 22 ರೊಳಗೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ತೆಗೆದುಕೊಂಡು ಉತ್ತೀರ್ಣರಾಗದಿದ್ದಲ್ಲಿ ಮುಂಬಡ್ತಿ, ವಾರ್ಷಿಕ ಬಡ್ತಿ ಪಡೆಯಲು ಅನರ್ಹರಾಗಿರುತ್ತಾರೆ ಎಂದು ಸರ್ಕಾರ ಸುತ್ತೋಲೆ ಹೊರಡಿಸಿದೆ.   ಕರ್ನಾಟಕ ಸಿವಿಲ್ ಸೇವಾ ನಿಯಮಗಳು 2012 ಅಡಿಯಲ್ಲಿ ನಿರ್ದಿಷ್ಟ ಹುದ್ದೆ ಹೊರತುಪಡಿಸಿ ಇನ್ನಿತರ ಎಲ್ಲ …

Read More »

ಡಗ್ಸ್ ಜಾಲ ಜಾಲವನ್ನು ನಿರ್ಮೂಲನೆ ಮಾಡುತ್ತೇವೆ : ಗೃಹ ಸಚಿವ ಆರಗ ಜ್ಞಾನೇಂದ್ರ

ಬೆಂಗಳೂರು, ಆ.25- ರಾಜ್ಯದಲ್ಲಿ ಮಾದಕ ದ್ರವ್ಯ ಜಾಲವನ್ನು ನಿರ್ಮೂಲನೆ ಮಾಡಲು ನಿರ್ಧಾರ ಮಾಡಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.ಕೋರಮಂಗಲದ ಕೆಎಸ್‍ಆರ್‍ಪಿ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಪೊಲೀಸ್ ಪಬ್ಲಿಕ್ ಶಾಲೆಯ ಶಿಶು ವಿಹಾರ, ಆಡಳಿತ ಕಚೇರಿಯ ನೂತನ ಕಟ್ಟಡ ಉದ್ಘಾಟನೆ ಹಾಗೂ ಕೆಎಸ್‍ಆರ್‍ಪಿ ತರಬೇತಿ ಶಾಲೆ- 4ನೆ ಪಡೆ ನವೀಕೃತ ಕಟ್ಟಡ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮಾದಕ ವಸ್ತುಗಳ ವ್ಯಸನಿಗಳಾಗಿ ಯುವ ಪೀಳಿಗೆ ಹಾಳಾಗುವುದನ್ನು ತಪ್ಪಿಸಬೇಕಿದೆ ಎಂದರು. …

Read More »

ಮತ್ತೆ ರಣಕಹಳೆ ಊದಿದ ಪಂಚಮಸಾಲಿ ಸಮುದಾಯ, ಇವತ್ತಿನಿಂದ್ಲೇ ‘ಪಂಚಮಸಾಲಿ’ ಹೋರಾಟ ಶುರು

ಬೆಂಗಳೂರು: ಸೆಪ್ಟಂಬರ್ 13 ರಿಂದ ವಿಧಾನ ಮಂಡಲ ಅಧಿವೇಶನ ಶುರುವಾಗ್ತಿದೆ. ಇದರ ಬೆನ್ನಲ್ಲೇ ಮತ್ತೆ ಮೀಸಲಾತಿ ಕಿಚ್ಚು ಹೊತ್ತಿಕೊಳ್ಳೋ ಸಾಧ್ಯತೆ ಇದೆ. ಯಾಕೆಂದ್ರೆ, ಪಂಚಮಸಾಲಿ ಸಮುದಾಯ 2ಎ ಮೀಸಲಾತಿಗೆ(2A Reservation Row )ಮತ್ತೆ ರಣಕಹಳೆ ಊದಿದೆ. ಇದ್ರಿಂದ ಬಸವರಾಜ ಬೊಮ್ಮಾಯಿ(Basavaraj Bommai) ಸರ್ಕಾರಕ್ಕೆ ಮೀಸಲಾತಿ ಸವಾಲ್ ಎದುರಾಗಿದೆ. 2ಎ ಮೀಸಲಾತಿಗಾಗಿ ಪಂಚಮಸಾಲಿ ಸಮುದಾಯ ಪ್ರತಿಭಟನೆ ಮಾಡಿತ್ತು. ಜಯಮೃತ್ಯುಂಜಯ ಸ್ವಾಮೀಜಿ ಪಾದಯಾತ್ರೆ ನಡೆಸಿದ್ರು. ದೊಡ್ಡ ಮಟ್ಟದಲ್ಲಿ ಸಮಾವೇಶ ಕೂಡ ಮಾಡಿದ್ರು. ಬಿ.ಎಸ್.ಯಡಿಯೂರಪ್ಪ …

Read More »

ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ: ಸಾಮೂಹಿಕ ಅತ್ಯಾಚಾರ ಪ್ರಸ್ತಾಪಿಸಿ ಸಿದ್ದರಾಮಯ್ಯ ಟೀಕೆ

ಬೆಂಗಳೂರು: ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವುದನ್ನು ಪ್ರಸ್ತಾಪಿಸಿ ರಾಜ್ಯ ಸರ್ಕಾರದ ವೈಫಲ್ಯದ ಬಗ್ಗೆ ಸಿದ್ದರಾಮಯ್ಯ ಟೀಕಿಸಿದ್ದಾರೆ. ಟ್ವೀಟ್ ಮೂಲಕ ಸರ್ಕಾರದ ವಿರುದ್ಧ ಹರಿಹಾಯ್ದಿರುವ ಅವರು ಮೈಸೂರಿನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವುದು ದುರದೃಷ್ಟಕರ ಸಂಗತಿ. ಈ ವೇಳೆ ನಾನು ಸಂತ್ರಸ್ತೆ ಮತ್ತು ಅವರ ಕುಟುಂಬಸ್ಥರ ಪರವಾಗಿ ನಿಲ್ಲುತ್ತೇನೆ. ಮುಖ್ಯಮಂತ್ರಿ ಹಾಗೂ ಗೃಹಸಚಿವರು ನ್ಯಾಯ ದೊರಕಿಸಿಕೊಡಬೇಕು ಎಂದು ವಿರೋಧ ಪಕ್ಷದ ನಾಯಕ …

Read More »

ಭೀಕರ ಅಪಘಾತ; ಮೀನಿನ ಲಾರಿ ಹಾಗೂ ಬಸ್ ನಡುವೆ ಮುಖಾಮುಖಿ ಡಿಕ್ಕಿ

ಉತ್ತರ ಕನ್ನಡ: ಜಿಲ್ಲೆಯ ಅಂಕೋಲಾ ತಾಲೂಕಿನ ಬಾಳೆಗುಳಿ ಬಳಿ ಬಸ್ ಹಾಗೂ ಮೀನಿನ ಲಾರಿ ನಡುವೆ ಮುಖಾಮುಖಿ ಡಿಕ್ಕಿಯಾದ ಘಟನೆ ನಡೆದಿದೆ. ಘಟನೆಯಿಂದಾಗಿ ಎರಡೂ ವಾಹನಗಳ ಚಾಲಕರಿಗೆ ಗಾಯಗಳಾಗಿವೆ. ಮೀನು ತುಂಬಿಕೊಂಡು ಸಾಗುತ್ತಿದ್ದ ಲಾರಿ ಹಾಗೂ ಅಂಕೋಲಾದಿಂದ ಕಾರವಾರ ಕಡೆಗೆ ಬರುತ್ತಿದ್ದ ಬಸ್​ ನಡುವೆ ಈ ಅಪಘಾತ ಸಂಭವಿಸಿದೆ. ಅಪಘಾತದ ರಭಸಕ್ಕೆ ಚಾಲಕ ಲಾರಿಯಲ್ಲಿಯೇ ಸಿಲುಕಿಕೊಂಡಿದ್ದ.. ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಚಾಲಕನನ್ನ ಹೊರಗೆ ತೆಗೆದಿದ್ದಾರೆ. ಅಂಕೋಲಾ ಪೊಲೀಸ್ ಠಾಣಾ …

Read More »

8 ತೊಲೆ ಬಂಗಾರವನ್ನು ಮರಳಿಸಿ ಮಹಿಳೆ ಪಾಲಿಗೆ ಬಂಗಾರದ ಮನುಷ್ಯನಾದ ಆಟೋ ಚಾಲಕ..!

ಗದಗ: ಹಣವೆಂದರೆ ಹೆಣ ಕೂಡ ಬಾಯಿ ಬಿಡುತ್ತದೆ ಅನ್ನುವ ಕಾಲಘಟ್ಟದಲ್ಲಿ ಮಾನವೀಯತೆಯು ಇನ್ನೂ ಮರೆಯಾಗಿಲ್ಲ ಎಂಬುದನ್ನು ಗದಗ ಜಿಲ್ಲೆಯಲ್ಲಿ ನಡೆದ ಘಟನೆಯೊಂದು ಸಾಬೀತು ಮಾಡಿದೆ. ಒಂದಲ್ಲ, ಎರಡಲ್ಲ ಬರೋಬ್ಬರಿ 8 ತೊಲೆ ಬಂಗಾರವನ್ನು ಕಳೆದುಕೊಂಡವರಿಗೆ ಹಿಂತಿರುಗಿಸಿದ ಆಟೋ ಚಾಲ ಪ್ರಾಮಾಣಿಕತೆ ಮೆರೆದಿದ್ದಾರೆ. ಆಟೋ ಚಾಲಕನ ಹೆಸರು ವೀರಣ್ಣ ಯಾವಗಲ್. ವೀಣಾ ಅವರು ಮರೆತು ಹೋಗಿದ್ದ ಬ್ಯಾಗ್​ನಲ್ಲಿದ್ದ 8 ತೊಲೆ ಬಂಗಾರವನ್ನು ವೀರಣ್ಣ ಹಿಂತಿರುಗಿಸಿ ಜನ ಮೆಚ್ಚುಗೆಯನ್ನು ಗಳಿಸಿದ್ದಾರೆ. ವಿವರಣೆಗೆ ಬರುವುದಾದರೆ, ಗದಗಿನ …

Read More »

ರಾಜ್ಯ ಸರ್ಕಾರದಿಂದ ಮಹಿಳಾ ಮಣಿಗಳಿಗೆ ಭರ್ಜರಿ ಸಿಹಿ ಸುದ್ದಿ : ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವತಿಯಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ

ಬಳ್ಳಾರಿ : ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವತಿಯಿಂದ 2021-22ನೇ ಸಾಲಿನ ಉದ್ಯೋಗಿನಿ,ಕಿರುಸಾಲ,ಸಮೃದ್ಧಿ ಯೋಜನೆಗಳಿಗೆ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.   ಅರ್ಜಿ ಹಾಗೂ ಹೆಚ್ಚಿನ ಮಾಹಿತಿ ಪಡೆಯಲು ಆಯಾ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಗೆ ಭೇಟಿ ನೀಡಬಹುದು ಅಥವಾ ದೂ.ಸಂ:08392-2294127 ಮೊ.ಸಂ:9110653738 ಗೆ ಸಂಪರ್ಕಿಸಬಹುದು. ಸೆ.6ರೊಳಗಾಗಿ ಅರ್ಜಿ ಸಲ್ಲಿಸಬೇಕು.   ಉದ್ಯೋಗಿನಿ …

Read More »