Breaking News

ವಿಕ್ರಾಂತ್ ರೋಣ”ನ ನಂತರ ಕಾಲಿವುಡ್ ನಲ್ಲಿ ಕಿಚ್ಚ..!

Spread the love

ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಇತ್ತೀಚೆಗಷ್ಟೇ ತಮ್ಮ ಬಹುನಿರೀಕ್ಷೆಯ ಪ್ಯಾನ್ ಇಂಡಿಯಾ ಸಿನಿಮಾ ವಿಕ್ರಾಂತ್ ರೋಣನ ಡಬ್ಬಿಂಗ್ ಕೆಲಸ ಮುಗಿಸಿದ್ದಾರೆ.. ಈ ನಡುವೆ ಅವರ ಅಭಿನಯದ ಕೋಟಿಗೊಬ್ಬ 3 ಕೂಡ ರಿಲೀಸ್ ಗಾಗಿ ಕಾಯ್ತಿದೆ.. ಆದ್ರೆ ಕಿಚ್ಚನ ಮುಂದಿನ ಸಿನಿಮಾ ಯಾವುದು ಯಾರ ಜೊತೆಗೆ ಅನ್ನೋ ಕ್ಯೂರಿಯಾಸಿಟಿ ಹೆಚ್ಚಾಗಿದೆ.. ಆದ್ರೆ ಮುಂದಿನ ಸಿನಿಮಾ ಕಾಲಿವುಡ್ ನಲ್ಲಾ ಅನ್ನೋ ಗುಸುಗುಸು ಶುರುವಾಗಿದೆ..

ಕಾಲಿವುಡ್ ಖ್ಯಾತ ನಿರ್ದೇಶರಕಾದ ವೆಂಕಟ್ ಪ್ರಭು ಇತ್ತೀಚೆಗೆ ಸುದೀಪ್ ಅವರ ಮನೆಗೆ ಭೇಟಿ ನೀಡಿದ್ದಾರೆ. ಈ ವೇಳೆ ವೆಂಕಟ್ ಅವರಿಗೆ ಕಿಚ್ಚ ತಮ್ಮ ಕೈಯಾರೆ ಅಡುಗೆ ಮಾಡಿ ಬಡಿಸಿದ್ದಾರೆ. ಈ ಫೋಟೋ ವೈರಲ್ ಆಗುತ್ತಿದೆ.

ವೆಂಕಟ್ ಪ್ರಭು ಅವರು ಸುದೀಪ್ ಜೊತೆ ಇರುವ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು. “ಎಂಥ ಅದ್ಭುತ ಆತಿಥ್ಯ. ಧನ್ಯವಾದಗಳು ಸುದೀಪ್ ಅವರೇ. ನೀವು ಅತ್ಯುತ್ತಮ ಬಾಣಸಿಗ. ನಮ್ಮ ಮುಂದಿನ ಸಿನಿಮಾಗಾಗಿ ಕಾಯುತ್ತಿದ್ದೇನೆ. ಮುಂಚಿತವಾಗಿಯೇ ಹುಟ್ಟುಹಬ್ಬದ ಶುಭಾಶಯಗಳು” ಎಂದು ಟ್ವೀಟ್ ಮಾಡಿದ್ದರು. ಇದೇ ಪೋಸ್ಟ್ ಇದೀಗ ಇಂತಹದೊಂದು ಚರ್ಚೆಯನ್ನ ಹುಟ್ಟುಹಾಕಿದೆ.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ