Breaking News
Home / 2021 / ಜುಲೈ / 26 (page 2)

Daily Archives: ಜುಲೈ 26, 2021

ಯಡಿಯೂರಪ್ಪ ಇಲ್ಲದ ಬಿಜೆಪಿ ನಾಶವಾಗುತ್ತೆ- ಬೂಕನಕೆರೆಯಲ್ಲಿ ಬಿಎಸ್‍ವೈ ಅಭಿಮಾನಿ ಕಣ್ಣೀರು

ಮಂಡ್ಯ: ಸಿಎಂ ಸ್ಥಾನಕ್ಕೆ ಬಿ.ಎಸ್.ಯಡಿಯೂರಪ್ಪನವರು ರಾಜೀನಾಮೆ ನೀಡಿರುವ ಹಿನ್ನೆಲೆ ಅವರ ಹುಟ್ಟೂರಾದ ಜಿಲ್ಲೆಯ ಬೂಕನಕೆರೆಯಲ್ಲಿ ಅಭಿಮಾನಿ ಕಣ್ಣೀರು ಹಾಕಿದ್ದಾರೆ. ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆಯ ಮಧುಸೂದನ್ ಅವರು ಕಣ್ಣೀರು ಹಾಕಿದ್ದಾರೆ. ಯಡಿಯೂರಪ್ಪ ಅವರು ನಮ್ಮೂರಿನ ಮಗ ಎಂಬುವ ಹೆಮ್ಮೆ ನಮಗೆ ಇದೆ. ಬಿಜೆಪಿ ಪಕ್ಷವನ್ನು ಕರ್ನಾಟಕದಲ್ಲಿ ತಳಮಟ್ಟದಿಂದ ಕಟ್ಟಿದವರು ಯಡಿಯೂರಪ್ಪನವರು. ಅವರನ್ನು ಸಂಪೂರ್ಣ ಅವಧಿಯಲ್ಲಿ ಸಿಎಂ ಆಗಿ ನೋಡಬೇಕು ಎನ್ನುವ ಆಸೆ ನಮಗೆ ಇತ್ತು. ಇದೀಗ ಅವರನ್ನು ಸಿಎಂ ಸ್ಥಾನದಿಂದ …

Read More »

ರಾಜ್ಯಪಾಲರನ್ನು ಭೇಟಿಯಾದ ಸ್ಪೀಕರ್

ಬೆಂಗಳೂರು: ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಇಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ರಾಜಭವನದಲ್ಲಿ ಭೇಟಿ ಮಾಡಿದರು. ಈ ಭೇಟಿಯ ವೇಳೆ, ಸ್ಪೀಕರ್ ಕಳೆದ ಎರಡು ವರ್ಷಗಳ ಅವಧಿಯಲ್ಲಿ ವಿಧಾನಸಭಾ ಸಚಿವಾಲಯ ಕೈಗೊಂಡಿರುವ ಕಾರ್ಯಕ್ರಮಗಳ ಕುರಿತಂತೆ ವಿವರಿಸಿದ್ದಾರೆ. ಅಲ್ಲದೆ ಇದೊಂದು ಸೌಹಾರ್ದಯುತ ಭೇಟಿ ಎನ್ನಲಾಗಿದೆ. ಭೇಟಿ ವೇಳೆ ಒಂದು ರಾಷ್ಟ್ರ ಒಂದು ಚುನಾವಣೆ, ಭಾರತದ ಸಂವಿಧಾನ ಕುರಿತ ಚರ್ಚೆ, ಸಂಸದೀಯ ನಡೆವಳಿಕೆಯಲ್ಲಿ ಮೌಲ್ಯಗಳು ಮತ್ತು ತತ್ವ, ಸಿದ್ಧಾಂತಗಳು …

Read More »

ನೂತನ ಮುಖ್ಯಮಂತ್ರಿಯಾಗಿ ಪ್ರಹ್ಲಾದ್ ಜೋಷಿ, ಡಿಸಿಎಂ ಆಗಿ ಬಿವೈ ವಿಜಯೇಂದ್ರ ನೇಮಕ.?

ಬೆಂಗಳೂರು : ಅಂತೂ ಇಂತೂ ಮುಖ್ಯಮಂತ್ರಿ ಸ್ಥಾನಕ್ಕೆ ಬಿಎಸ್ ಯಡಿಯೂರಪ್ಪ ( BS Yediyurappa Resignation ) ರಾಜಭವನಕ್ಕೆ ತೆರಳಿ ಅಧಿಕೃತವಾಗಿ ರಾಜೀನಾಮೆ ನೀಡಿದ್ದಾರೆ. ಈ ಬಳಿಕ ಇದೀಗ ಮುಂದಿನ ಮುಖ್ಯಮಂತ್ರಿ ಯಾರು ಎಂಬುದೇ ಯಕ್ಷ ಪ್ರಶ್ನೆಯಾಗಿದೆ. ಆದ್ರೇ ಬಿಜೆಪಿಯ ಮೂಲಗಳಿಂದ ತಿಳಿದು ಬಂದಂತೆ , ಮುಂದಿನ ಮುಖ್ಯಮಂತ್ರಿಯಾಗಿ ಪ್ರಹ್ಲಾದ್ ಜೋಶಿ ( Pralhad Joshi ) ಉಪಮುಖ್ಯಮಂತ್ರಿಯಾಗಿ ಬಿ.ವೈ.ವಿಜಯೇಂದ್ರ ( BY Vijayendra ) ಬಹುತೇಕ ಖಚಿತ ಎಂದೇ …

Read More »

ಯಡಿಯೂರಪ್ಪ ರಾಜೀನಾಮೆ: ಮುಂದಿನ ನಡೆಯೇನು? ಪುತ್ರರ ಭವಿಷ್ಯವೇನು?

ಬೆಂಗಳೂರು: ಹಲವು ಸಮಯದ ರಾಜಕೀಯ ಬೆಳವಣಿಗೆಗಳ ಬಳಿಕ ಇಂದು (ಜು.26) ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸುಮಾರು ಅರ್ಧಶತಮಾನದ ಸಕ್ರಿಯ ಚುನಾವಣಾ ರಾಜಕೀಯ ನಡೆಸಿದ ಬಿಎಸ್ ಯಡಿಯೂರಪ್ಪ ನಾಲ್ಕು ಬಾರಿ ರಾಜ್ಯದ ಮುಖ್ಯಮಂತ್ರಿಯಾದವರು. 2019ರಲ್ಲಿ ರಾಜಕೀಯ ಬೆಳವಣಿಗೆಯ ಬಳಿಕ ಮುಖ್ಯಮಂತ್ರಿ ಸ್ಥಾನಕ್ಕೇರಿದ ಬಿ ಎಸ್ ಯಡಿಯೂರಪ್ಪ ಇಂದಿನ ಎರಡು ವರ್ಷ. ಎರಡು ವರ್ಷದ ಸಂಭ್ರಮದ ಸಾಧನಾ ಸಮಾವೇಶದಲ್ಲಿ ಭಾವುಕತೆಯಿಂದ ಮಾತನಾಡಿದ ಯಡಿಯೂರಪ್ಪ ರಾಜೀನಾಮೆ ನೀಡುವುದಾಗಿ ಘೋಷಣೆ ಮಾಡಿದರು. ಮುಂದೇನು? …

Read More »

ಳೆದ 4 ದಿನಗಳಿಂದ ಪ್ರವಾಹದಿಂದಾಗಿ ಬಂದ್ ಮಾಡಲಾಗಿದ್ದ ರಾಷ್ಟ್ರೀಯ ಹೆದ್ದಾರಿ ನಂ 4 ಈಗ ಸಂಚಾರಕ್ಕೆ ಮುಕ್ತವಾಗಿದೆ.

ಬೆಳಗಾವಿ – ಕಳೆದ 4 ದಿನಗಳಿಂದ ಪ್ರವಾಹದಿಂದಾಗಿ ಬಂದ್ ಮಾಡಲಾಗಿದ್ದ ರಾಷ್ಟ್ರೀಯ ಹೆದ್ದಾರಿ ನಂ 4 ಈಗ ಸಂಚಾರಕ್ಕೆ ಮುಕ್ತವಾಗಿದೆ. ಬೆಳಗಾವಿ -ಕೊಲ್ಲಾಪುರ ಮಧ್ಯೆ ಸಂಕೇಶ್ವರ ಬಳಿ ವೇದಗಂಗಾ ನದಿ ಉಕ್ಕಿ ಹರಿದು ಸಂಚಾರ ಬಂದ್ ಆಗಿತ್ತು, ಅಲ್ಲದೆ ಮಧ್ಯೆ ಮಧ್ಯೆ ಕೆಲವು ಹಳ್ಳಗಳೂ ರಸ್ತೆಯ ಮೇಲೆ ಹರಿದು ಸಂಚಾರ ತಡೆದಿದ್ದವು. ಇಂದು ಮಧ್ಯಹ್ನ 12 ಗಂಟೆ ಹೊತ್ತಿಗೆ ರಾಷ್ಟ್ರೀಯ ಹೆದ್ದಾರಿ ಮೇಲಿನ ನೀರು ಖಾಲಿಯಾಗಿದ್ದು, ವಾಹನ ಸಂಚಾರಕ್ಕೆ ಅನುಮತಿ …

Read More »

ಬಿಎಸ್ ವೈ ಕಣ್ಣೀರು ಪದತ್ಯಾಗ’ ವಲ್ಲ ‘ಪದಚ್ಯುತಿ’ ಎಂದು ಸಾರಿ ಹೇಳುತ್ತಿದೆ : ಕಾಂಗ್ರೆಸ್

ಬೆಂಗಳೂರು: ಕರ್ನಾಟಕ ಮುಖ್ಯಮಂತ್ರಿ ಸ್ಥಾನಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ರಾಜೀನಾಮೆ ಘೋಷಿಸಿದ್ದಾರೆ. ಇದರ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ ” ಬಿಎಸ್ ವೈ ಕಣ್ಣೀರು ಪದತ್ಯಾಗ’ ವಲ್ಲ ‘ಪದಚ್ಯುತಿ’ ಎಂದು ಸಾರಿ ಹೇಳುತ್ತಿದೆ” ಎಂದು ವ್ಯಂಗ್ಯವಾಡಿದೆ. ತಮ್ಮದು ವಿಫಲ ಸರ್ಕಾರ, ವಿಫಲ ಆಡಳಿತ, ವಿಫಲ ನಾಯಕತ್ವ ಎನ್ನುವುದನ್ನು ಬಿ.ಎಸ್. ಯಡಿಯೂರಪ್ಪ ಅವರು ರಾಜೀನಾಮೆ ಘೋಷಣೆ ಮಾಡುವ ಮೂಲಕ ಒಪ್ಪಿಕೊಂಡಂತಾಗಿದೆ. ಅವರೇ ಹೇಳಿಕೊಳ್ಳುವಂತೆ ಸಮರ್ಥ ಆಡಳಿತವೇ ಆಗಿದ್ದಿದ್ದರೆ ಈ ಬಿಜೆಪಿಯ ಹೈಕಮಾಂಡ್ …

Read More »

ರಾಜೀನಾಮೆ ಬೆನ್ನಲ್ಲೇ ಬೆಂಗಳೂರಿನ ಡಾಲರ್ಸ್​ ಕಾಲೋನಿಯ ಬಿಎಸ್​ವೈ ನಿವಾಸ ಖಾಲಿ ಖಾಲಿ

ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆ, ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪರ ಡಾಲರ್ಸ್ ಕಾಲೋನಿಯ ನಿವಾಸಕ್ಕೆ ಹೆಚ್ಚಿನ ಭದ್ರತೆ ನೀಡಲಾಗಿದ್ದು, ಐವತ್ತಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ. ಅಲ್ಲದೆ ಸಿಎಂ ಡಾಲರ್ಸ್ ಕಾಲೋನಿ ನಿವಾಸದ ಎರಡು ಕಡೆಯ ರಸ್ತೆಗೆ ಮೂವತ್ತಕ್ಕೂ ಹೆಚ್ಚು ಬ್ಯಾರೀಕೆಡ್ ಹಾಕಲಾಗಿದೆ. ಆದರೆ ಕಳೆದೊಂದು ವಾರದಿಂದ ಸಿಎಂ ಡಾಲರ್ಸ್ ಕಾಲೋನಿ ನಿವಾಸ ಖಾಲಿಯೇ ಇದೆ. ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪನವರ ಕುಟುಂಬಸ್ಥರು ಯಾರು ಡಾಲರ್ಸ್ ಕಾಲೋನಿ ನಿವಾಸದಲ್ಲಿಲ್ಲ. ಸದ್ಯ ಡಾಲರ್ಸ್ …

Read More »

ಬಿಎಸ್​ವೈ ರಾಜೀನಾಮೆ ನಿರ್ಧಾರ: ಕಾರು ಚಾಲಕನ ಕಣ್ಣೀರು

ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪಇಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿರುವುದಾಗಿ ಘೋಷಿಸಿದ್ದಾರೆ. ಜನಸ್ನೇಹಿ ಆಡಳಿತ ಕಾರ್ಯಕ್ರಮದಲ್ಲಿ ಭಾವುಕರಾಗಿ ಯಡಿಯೂಪ್ಪ ತಮ್ಮ ನಿರ್ಧಾರ ತಿಳಿಸಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ವಿಧಾನ ಸೌಧದ ಹೊರಗೆ ನಿಂತಿದ್ದ ಚನ್ನಗಿರಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರ ಕಾರು ಚಾಲಕನ ಕಣ್ಣೀರು ಹಾಕಿದ್ದಾರೆ. ಯಡಿಯೂರಪ್ಪ ಅವರ ನಿರ್ಧಾರ ನೆನೆದು ಕಾರು ಚಾಲಕ ರವಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

Read More »

ನಾಳೆಯೇ ಕರ್ನಾಟಕಕ್ಕೆ ಹೊಸ ಸಿಎಂ ಘೋಷಣೆ…?

ಬೆಂಗಳೂರು: ಸಿಎಂ ಸ್ಥಾನಕ್ಕೆ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ಘೋಷಿಸಿರುವ ಬೆನ್ನಲ್ಲೇ ರಾಜ್ಯದ ಮುಂದಿನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಕುತೂಹಲ ಮೂಡಿದೆ. ಈ ನಡುವೆ ನಾಳೆಯೇ ಮುಂದಿನ ಸಿಎಂ ಹೆಸರು ಘೋಷಣೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ನಾಳೆ ನವದೆಹಲಿಯಲ್ಲಿ ಬೆಳಿಗ್ಗೆ 9:30ಕ್ಕೆ ಬಿಜೆಪಿ ಸಂಸದೀಯ ಮಂಡಳಿ ಸಭೆ ನಡೆಯಲಿದ್ದು, ಸಭೆಯಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಹೆಸರನ್ನು ಪ್ರಕಟಿಸುವ ಸಾಧ್ಯತೆ ಇದೆ. ಈಗಾಗಲೇ ಸಿಎಂ ರೇಸ್ ನಲ್ಲಿ ಹಲವರ ಹೆಸರು ಕೇಳಿಬಂದಿದ್ದು, ಸ್ಪೀಕರ್ ವಿಶ್ವೇಶ್ವರ …

Read More »

ಮುಂದಿನ ಸಿಎಂ ಆಯ್ಕೆಯಲ್ಲಿ ನನ್ನ ಪಾತ್ರ ಇಲ್ಲ- ಯಡಿಯೂರಪ್ಪ

ವಿಧಾನಸೌಧದಲ್ಲಿಂದು ಬಿಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರ 2ನೇ ವರ್ಷದ ಸಂಭ್ರಮಾಚರಣೆ ಜೊತೆಗೆ ವಿದಾಯಕ್ಕೂ ವೇದಿಕೆಯಾಗಿತ್ತು. ಯಡಿಯೂರಪ್ಪ ಅವರು ತಮ್ಮ ಸರ್ಕಾರ, ಕರ್ನಾಟಕದಲ್ಲಿ ಬಿಜೆಪಿ ಕಟ್ಟಿ ಬೆಳೆಸಿದ ಹೋರಾಟದ ಹಾದಿಯನ್ನು ಸ್ಮರಿಸಿ ಭಾವುಕರಾದರು. ಭಾಷಣದ ಕೊನೆಯಲ್ಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿರುವುದಾಗಿ ಘೋಷಿಸಿದರು. ಈ ಮೂಲಕ ಕರ್ನಾಟಕದಲ್ಲಿನ ಬಿರುಸಿನ ರಾಜಕೀಯ ಚಟುವಟಿಕೆಗಳು ಇನ್ನಷ್ಟು ಚುರುಕುಗೊಳ್ಳುವಂತಾಗಿದೆ. ಮುಂದಿನ ಸಿಎಂ ಯಾರಾಗಬಹುದು? ಯಾರೆಲ್ಲ ಡಿಸಿಎಂ ಸ್ಥಾನಕ್ಕೆ ಲಾಬಿ ನಡೆಸಿದ್ದಾರೆ? ಸಂಪುಟ ರಚನೆ ಹೇಗಿರಲಿದೆ? ಎಂಬುದರ …

Read More »