Breaking News
Home / 2021 / ಜೂನ್ (page 29)

Monthly Archives: ಜೂನ್ 2021

ಅಪ್ಪಂದಿರ ದಿನವೇ ದುರಂತ: ತನ್ನ ಇಬ್ಬರು ಮುದ್ದು ಮಕ್ಕಳೊಂದಿಗೆ ಆತ್ಮಹತ್ಯೆಗೆ ಶರಣಾದ ತಂದೆ.!

ಚಿಕ್ಕೋಡಿ: ಪತ್ನಿ ಸಾವಿನಿಂದ ಮನನೊಂದಿದ್ದ ಪತಿ ತನ್ನ ಇಬ್ಬರು ಹೆಣ್ಣುಮಕ್ಕಳ ಜೊತೆ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಚಿಕ್ಕೋಡಿ ತಾಲೂಕಿನ ಪೊಗತ್ಯಾನಟ್ಟಿ ಗ್ರಾಮದಲ್ಲಿ ರವಿವಾರ ಬೆಳಗಿನ ಜಾವ ನಡೆದಿದೆ. ಕಾಡಪ್ಪ ಪ್ರದಾನಿ ರಂಗಾಪಪುರೆ(48), ಹೆಣ್ಣುಮಕ್ಕಳಾದ ಕೀರ್ತಿ(18) ಹಾಗೂ ಸ್ಪೂರ್ತಿ (16) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ವಾರದ ಹಿಂದೆ ಚೆನ್ನವ್ವ ರಂಗಾಪುರೆ ಸಾವನ್ನಪ್ಪಿದ್ದರು. ಪತ್ನಿ ಸಾವಿನಿಂದ ಮನನೊಂದು ಪತಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.   …

Read More »

81 ದಿನಗಳ ಬಳಿಕ 60 ಸಾವಿರಕ್ಕಿಂತ ಕಡಿಮೆ ಕೋವಿಡ್‌ ಪ್ರಕರಣ

ನವದೆಹಲಿ: ದೇಶದಲ್ಲಿ ಕೋವಿಡ್ 19 ಪ್ರಕರಣ ತೀವ್ರಗತಿಯಲ್ಲಿ ಇಳಿಕೆಯಾಗುತ್ತಿದೆ. ಕಳೆದ 24ಗಂಟೆಗಳಲ್ಲಿ 58,419 ಕೋವಿಡ್ ಪ್ರಕರಣ ವರದಿಯಾಗಿದ್ದು, 1,576 ಮಂದಿ ಸಾವನ್ನಪ್ಪಿದ್ದಾರೆ. 81 ದಿನಗಳಲ್ಲಿ ಇದೇ ಮೊದಲ ಬಾರಿಗೆ 60 ಸಾವಿರಕ್ಕಿಂತ ಕಡಿಮೆ ಪ್ರಮಾಣದಲ್ಲಿ ಪ್ರಕರಣ ವರದಿಯಾಗಿದೆ. ದೇಶದ ಐದು ರಾಜ್ಯಗಳಲ್ಲಿ ಗರಿಷ್ಠ ಪ್ರಮಾಣದ ಸೋಂಕು ಪ್ರಕರಣ ಪತ್ತೆಯಾಗಿದೆ ಎಂದೆ ಕೇಂದ್ರ ಆರೋಗ್ಯ ಸಚಿವಾಲಯ ಭಾನುವಾರ ಬಿಡುಗಡೆ ಮಾಡಿರುವ ಅಂಕಿಅಂಶದಲ್ಲಿ ತಿಳಿಸಿದೆ. ಕೇರಳದಲ್ಲಿ 12,443 ಪ್ರಕರಣ, ಮಹಾರಾಷ್ಟ್ರದಲ್ಲಿ 8,912 ಕೋವಿಡ್ …

Read More »

ಮಾರ್ಕಾಂಡೇಯ ನದಿ ನೀರುಪಾಲಾಗಿದ್ದ ರೈತ ಶವವಾಗಿ ಪತ್ತೆ

ಬೆಳಗಾವಿ: ಭಾರಿ ಮಳೆಯಿಂದ ಕಾಕತಿ ಬಳಿ ಮಾರ್ಕಾಂಡೇಯ ನದಿ ನೀರುಪಾಲಾಗಿದ್ದ ರೈತ ಶವವಾಗಿ ಪತ್ತೆಯಾಗಿದ್ದು, ಎರಡು ದಿನಗಳ ಬಳಿಕ ದರ್ಗಾ ಸೇತುವೆ ಬಳಿ ಮೃತದೇಹ ಪತ್ತೆಯಾಗಿದೆ. ಎರಡು ದಿನಗಳ ಹಿಂದೆ ಮಾರ್ಕಾಂಡೇಯ ನದಿಗೆ ಕಾಕತಿ ಬಳಿ ನಿರ್ಮಿಸಿದ್ದ ಸೇತುವೆ ಬಳಿ ಕಾಲು ತೊಳೆಯಲೆಂದು ಹೋಗಿದ್ದ ರೈತ ಸಿದ್ರಾಯಿ ದೊಡ್ಡರಾಮ ಸುತಗಟ್ಟಿ ನೀರಿನ ರಭಸಕ್ಕೆ ನದಿ ನೀರಿನಲ್ಲಿ ಕೊಚ್ಚಿ ಹೋಗಿದ್ದರು. ರೈತನಿಗಾಗಿ ಎರಡು ದಿನಗಳಿಂದ ಎನ್ ಡಿ ಆರ್ ಎಫ್ ತಂಡ …

Read More »

ಕೋವಿಡ್ ನಿಂದ ತಂದೆ-ತಾಯಿ ಕಳೆದುಕೊಂಡ ಮಕ್ಕಳಿಗೆ ಬೆಂಬಲ ನೀಡುವ ಕಾರ್ಯಕ್ರಮ

ಬೆಳಗಾವಿ: ಕೋವಿಡ್ ಸೋಂಕಿನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳು ಅವರು ಎದುರಿಸುತ್ತಿರುವ ಸಂಕಷ್ಟದ ಪರಿಸ್ಥಿತಿಯಿಂದ ಹೊರಬಂದು ಅವರು ಮೊದಲಿನಂತೆ ಸಾಮಾನ್ಯ ಜೀವನ ನಡೆಸಲು ಅನುವಾಗುವಂತೆ ಅವರಿಗೆ ಭಾವನಾತ್ಮಕ, ಸಾಮಾಜಿಕ ಮತ್ತು ಶೈಕ್ಷಣಿಕ, ಆರ್ಥಿಕ ಬೆಂಬಲ ನೀಡಲು ಬಾಲಹಿತೈಷಿ ಕಾರ್ಯಕ್ರಮದಡಿ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸಲು ಆಸಕ್ತ ಅಭ್ಯರ್ಥಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಮಕ್ಕಳಿಗೆ ಸಾಮಾಜಿಕ ಆರ್ಥಿಕ ಶೈಕ್ಷಣಿಕ ಎಲ್ಲಾ ರೀತಿಯ ಬೆಂಬಲಗಳನ್ನು ನೀಡಲು ಮುಂದೆ ಬರುವ ವ್ಯಕ್ತಿಗಳು ಬಾಲಹಿತೈಷಿ ಯೋಜನೆಯಡಿ ಮಾರ್ಗದರ್ಶಕರಾಗಿ ಕಾರ್ಯದರ್ಶಿ ಕರು ಎಂದು …

Read More »

ನಿಮ್ಹಾನ್ಸ್‌ಗೆ ಡಾ. ಪ್ರತಿಮಾ ಮೂರ್ತಿ ನಿರ್ದೇಶಕಿ

ಬೆಂಗಳೂರು: ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯ (ನಿಮ್ಹಾನ್ಸ್) ನಿರ್ದೇಶಕರನ್ನಾಗಿ ಡಾ. ಪ್ರತಿಮಾ ಮೂರ್ತಿ ಅವರನ್ನು ಕೇಂದ್ರ ಆರೋಗ್ಯ ಸಚಿವಾಲಯ ನೇಮಕ ಮಾಡಿದೆ. ಮನೋವೈದ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಅವರು ಕಾರ್ಯನಿರ್ವಹಿಸುತ್ತಿದ್ದರು. ನಿರ್ದೇಶಕರ ಅವಧಿ 5 ವರ್ಷ ಇರಲಿದ್ದು, ಪ್ರತಿಮಾ ಅವರು 2026ರ ಮಾರ್ಚ್‌ನಲ್ಲಿ ನಿವೃತ್ತಿ ಹೊಂದಲಿದ್ದಾರೆ. ಡಾ.ವೈ.ಸಿ. ಜನಾರ್ದನ ರೆಡ್ಡಿ ಅವರನ್ನು ಮನೋವೈದ್ಯಶಾಸ್ತ್ರ ವಿಭಾಗದ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ. ಕಳೆದ ವರ್ಷ ಅ.4ರಂದು ಡಾ.ಬಿ.ಎನ್. ಗಂಗಾಧರ್ ನಿವೃತ್ತರಾದ ಬಳಿಕ …

Read More »

ಭಾರತದಲ್ಲಿ ಬೇಡಿಕೆ ತಗ್ಗುವವರೆಗೆ ಕೋವಿಡ್-19 ಲಸಿಕೆ ರಫ್ತು ಇಲ್ಲ

ನವದೆಹಲಿ: ದೇಶದಲ್ಲಿ ಗಮನಾರ್ಹ ಪ್ರಮಾಣದ ಜನಸಂಖ್ಯೆಗೆ ಲಸಿಕೆ ನೀಡುವವರೆಗೆ ವಿದೇಶಗಳಿಗೆ ಲಸಿಕೆ ರಫ್ತು ಮಾಡುವುದನ್ನು ತಡೆಯ ಹಿಡಿಯಲಾಗಿದೆ ಎಂದು ಕೋವಿಡ್ -19 ಕಾರ್ಯಪಡೆಯ ಮುಖ್ಯಸ್ಥ ಎಂದು ವಿನೋದ್ ಕೆ. ಪಾಲ್ ತಿಳಿಸಿದ್ದಾರೆ. ಲಸಿಕೆ ರಫ್ತು ಮೇಲಿನ ನಿರ್ಬಂಧಗಳನ್ನು ತೆಗೆದುಹಾಕುವಲ್ಲಿ ನಿಖರವಾದ ಸಮಯದ ಚೌಕಟ್ಟು ಇಲ್ಲ ಎಂದು ವಿನೋದ್ ಕೆ. ಪಾಲ್ ಅವರೊಂದಿಗಿನ ಸಂದರ್ಶನವನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ‘ಎಎಫ್‌ಪಿ’ ವರದಿ ಮಾಡಿದೆ. ಕೋವಿಡ್‌ ಎರಡನೇ ಅಲೆ ದೇಶಕ್ಕೆ ಪ್ರಬಲ ಹೊಡೆತ …

Read More »

ಆಡಳಿತ ಪಕ್ಷದಲ್ಲಿ ಭ್ರಷ್ಟಾಚಾರದಲ್ಲೂ ಪೈಪೋಟಿ: ಸಿದ್ದರಾಮಯ್ಯ

ಬೆಂಗಳೂರು: ‘ರಾಜ್ಯದಲ್ಲಿರುವ ಲೂಟಿಕೋರ ಬಿಜೆಪಿ ಸರ್ಕಾರದಲ್ಲಿ ಹಣ ದೋಚಲು ಆಡಳಿತ ಪಕ್ಷದವರ ನಡುವೆಯೇ ಕಿತ್ತಾಟ ನಡೆಯುತ್ತಿದೆ. ಜಿದ್ದಿಗೆ ಬಿದ್ದವರಂತೆ ಭ್ರಷ್ಟಾಚಾರದಲ್ಲೂ ಪೈಪೋಟಿಯಲ್ಲಿ ತೊಡಗಿದ್ದಾರೆ’ ಎಂದು ವಿರೋಧ ‍ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದರು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಜನ್ಮದಿನದ ಅಂಗವಾಗಿ ಅರ್ಚಕರು, ಆಟೊ ಚಾಲಕರು, ಆಶಾ ಕಾರ್ಯಕರ್ತರಿಗೆ ಪಡಿತರ ಕಿಟ್ ವಿತರಿಸಲು ಯುವ ಕಾಂಗ್ರೆಸ್ ವತಿಯಿಂದ ಮಲ್ಲೇಶ್ವರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಆಡಳಿತ ಪಕ್ಷದವರೇ ಸರ್ಕಾರದ ಭ್ರಷ್ಟಾಚಾರದ …

Read More »

ವಿಶ್ವ ಅಪ್ಪಂದಿರ ದಿನ: ಅಯ್ಯೋ! ಅಪ್ಪ ಇಲ್ಲವಲ್ಲ…

ತುಮಕೂರು: ‘ಅಯ್ಯೋ… ಅಪ್ಪ ಇಲ್ಲವಲ್ಲ ಎಂಬ ಕೊರಗು ಸದಾ ನೆನಪಿನಲ್ಲಿ ಕಾಡುತ್ತಿದೆ. ವಿಧಿಯಾಟ, ಕೋವಿಡ್ ನಮ್ಮ ತಂದೆಯನ್ನು ಬಲಿಪಡೆಯಿತು’ ಎಂದು ಹೇಳುತ್ತಲೇ ಮೇಘನ ಮಾತು ನಿಲ್ಲಿಸಿದರು. ತುಮಕೂರು ತಾಲ್ಲೂಕಿನ ಮಲ್ಲಸಂದ್ರ ಸಮೀಪದ ಹಬ್ಬತ್ತನಹಳ್ಳಿಯ ಈ ಬಾಲಕಿಯ ಕಣ್ಣೀರು ತಂದೆ, ತಾಯಿಗಳನ್ನು ಕಳೆದುಕೊಂಡ ಹಲವರ ಕಣ್ಣೀರ ಕಥೆಯಾಗಿದೆ. ಗಂಗರಾಜು ಅವರಿಗೆ ಇನ್ನೂ 45 ವರ್ಷ. ದುಡಿಯುವ ವಯಸ್ಸು, ಬದುಕುವ ಛಲ. ಪತ್ನಿ ಚೂಡಾವಣೆ, ಇಬ್ಬರು ಹೆಣ್ಣು ಮಕ್ಕಳ ಸಂಸಾರ. 14 ವರ್ಷದ …

Read More »

ಭಾಷೆಗಳ ಕಲಿಕಾ ತರಬೇತಿಯಲ್ಲಿ ಕನ್ನಡವನ್ನು ಕಡೆಗಣಿಸಿರುವ ಲೋಕಸಭಾ ಸಚಿವಾಲಯ

ಬೆಂಗಳೂರು: ಭಾಷೆಗಳ ಕಲಿಕಾ ತರಬೇತಿಯಲ್ಲಿ ಕನ್ನಡವನ್ನು ಕಡೆಗಣಿಸಿರುವ ಲೋಕಸಭಾ ಸಚಿವಾಲಯದ ‘ಪಾರ್ಲಿಮೆಂಟರಿ ರಿಸರ್ಚ್ ಆಯಂಡ್ ಟ್ರೈನಿಂಗ್ ಇನ್‌ಸ್ಟಿಟ್ಯೂಟ್ ಫಾರ್ ಡೆಮಾಕ್ರಸಿ’ (ಪ್ರೈಡ್) ಸಂಸ್ಥೆಯ ನಡೆಗೆ ಖಂಡನೆ ವ್ಯಕ್ತವಾಗಿದೆ. ಸಂಸ್ಥೆಯು ಆನ್‌ಲೈನ್ ಮೂಲಕ ಇದೇ 22ರಿಂದ 6 ವಿದೇಶಿ ಭಾಷೆಗಳು, 6 ದೇಶಿಯ ಭಾಷೆಗಳ ಕಲಿಕಾ ತರಬೇತಿಯನ್ನು ಪ್ರಾರಂಭಿಸುತ್ತಿದೆ. ಇದರಲ್ಲಿ ಸಂಸತ್ತಿನ ಸದಸ್ಯರು, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಶಾಸಕರು ಹಾಗೂ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ವಿದೇಶಿ ಭಾಷೆಗಳಾದ ಫ್ರೆಂಚ್, ಜರ್ಮನ್, ಜಪಾನೀಸ್, …

Read More »

ರಾಜೀನಾಮೆ ನೀಡದೆ ಬಿಜೆಪಿಗೆ ಸೇರಿರುವ 10 ಶಾಸಕರನ್ನ ಪಕ್ಷಕ್ಕೆ ಸೇರಿಸಲ್ಲ : ಗುಂಡೂರಾವ್

ಪಣಜಿ : ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡದೆಯೇ ಬಿಜೆಪಿಗೆ ಸೇರಿರುವ 10 ಜನ ಶಾಸಕರಿಗೆ ಮತ್ತೆ ಕಾಂಗ್ರೇಸ್ ಪಕ್ಷಕ್ಕೆ ಪ್ರವೇಶ ನೀಡಲಾಗುವುದಿಲ್ಲ ಎಂದು ಗೋವಾ ಕಾಂಗ್ರೇಸ್ ಪ್ರಭಾರಿ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದ್ದಾರೆ. ಕಾಂಗ್ರೇಸ್ ಪಕ್ಷದ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿಯವರ ಹುಟ್ಟುಹಬ್ಬದ ಅಂಗವಾಗಿ ಗೋವಾದ ಮಡಗಾಂವ ಹಾಗೂ ಪಣಜಿ ಸಮೀಪದ ಸಂತಾಕ್ರೂಜ್‍ನಲ್ಲಿ ಉಚಿತ ಸಸಿ ವಿತರಿಸಿದ ನಂತರ ಸುದ್ಧಿಗಾರರಿಗೆ ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ ನೀಡಿದರು. ಕಾಂಗ್ರೇಸ್ ಪಕ್ಷದಿಂದ ಬಿಜೆಪಿ ಸೇರಿರುವ …

Read More »