Breaking News
Home / 2021 / ಜೂನ್ (page 40)

Monthly Archives: ಜೂನ್ 2021

“ಬಿಜೆಪಿಯಲ್ಲಿ ಶಾಸಕರು – ಸಚಿವರ ಮಧ್ಯೆ ಗೊಂದಲವಿರೋದು ನಿಜ” : ಈಶ್ವರಪ್ಪ

ಬೆಂಗಳೂರು : ಕರ್ನಾಟಕದ ಭಾರತೀಯ ಜನತಾ ಪಾರ್ಟಿಯಲ್ಲಿ ಶಾಸಕರು ಸಚಿವರ ನಡುವೆ ಸ್ವಲ್ಪ ಗೊಂದಲ ಇರುವುದು ನಿಜ. ನಾಯಕತ್ವ ಬದಲಾವಣೆ ಅನ್ನೋದು ನೂರಕ್ಕೆ ನೂರು ಸುಳ್ಳು ಎಂದು ಸಚಿವ ಈಶ್ವರಪ್ಪ ಹೇಳಿದ್ದಾರೆ. ಅರುಣ್ ಸಿಂಗ್ ಭೇಟಿ ಬಗ್ಗೆ ಸುದ್ದಿವಾಹಿನಿಯೊಂದಿಗೆ ಮಾತನಾಡಿದ ಅವರು, ನಮ್ಮ ಪಾರ್ಟಿಯಲ್ಲಿ ಶಾಸಕರು ಸಚಿವರ ನಡುವೆ ಸ್ವಲ್ಪ ಗೊಂದಲ ಇರುವುದು ನಿಜ. ಅದರ ಬಗ್ಗೆ ಮಾತುಕತೆ ನಡೆಸಿ ಗೊಂದಲ ನಿವಾರಣೆ ಮಾಡಲು ಅರುಣ್ ಸಿಂಗ್ ಬರುತ್ತಿದ್ದಾರೆ. ಮುಖ್ಯಮಂತ್ರಿ …

Read More »

B.S.Y. ಅವರನ್ನು ಇಟ್ಟುಕೊಳ್ತೀರಾ..? ಕಿತ್ತು ಹಾಕ್ತೀರಾ..? : ಸಿದ್ಧರಾಮಯ್ಯ

ಬೆಂಗಳೂರು : ರಾಜ್ಯದಲ್ಲಿ ಕೋವಿಡ್ ಸೋಂಕಿನ ನಿರ್ವಹಣೆ ಸರಿಯಾಗಿ ನಡೆದಿಲ್ಲ, ರಾಜ್ಯದ ಆಡಳಿತ ನೇತೃತ್ವದ ಬದಲಾಗಬೇಕು ಎಂಬ ಮಾತುಗಳ ಕೆಲವು ತಿಂಗಳುಗಿಳಿಂದ ರಾಜ್ಯ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆಯಾದರೂ, ಕೆಲವು ದಿನಗಳಿಂದ ಅದು ತಾರಕಕ್ಕೇರಿದೆ. ನಾಯಕತ್ವದ ಬದಲಾವಣೆಯ ವಿಚಾರ ಹೈಕಮಾಂಡ್ ಗೆ ಕೂಡ ತಲುಪಿದ್ದು, ರಾಜ್ಯ ಬಿಜೆಪಿಯ ಸ್ಥಿತಿ ವಲಸೆ ವರ್ಸಸ್ ಮೂಲ ನಿವಾಸಿಗಳು ಎಂಬಂತಾಗಿದೆ.   ಆಡಳಿತ ಪಕ್ಷ ಬಿಜೆಪಿಯಲ್ಲಿ ಭಿನ್ನಮತ ಸ್ಪಷ್ಟವಾಗಿ ಕಾಣಿಸುತ್ತಿದ್ದು, ರಾಜ್ಯ ರಾಜಕಾರಣದಲ್ಲಿ ದೊಡ್ಡ …

Read More »

ಕುಡುಕನಿಂದ ಗಾಂಧೀಜಿ ಪ್ರತಿಮೆ ಭಗ್ನ

ಕೊಪ್ಪಳ: ತಾಲೂಕಿನ ಬಸಾಪುರ ಗ್ರಾಮದಲ್ಲಿ ಮದ್ಯ ವ್ಯಸನಿಯೋರ್ವನು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಪ್ರತಿಮೆಯನ್ನು ಕೆಡವಿ ಭಾರಿ ಆತಂಕ ಸೃಷ್ಟಿಸಿದ ಘಟನೆ ಬುಧವಾರ ಜರುಗಿದ್ದು, ಸ್ಥಳಕ್ಕೆ ಡಿಎಸ್‌ಪಿ ಹಾಗೂ ಕೊಪ್ಪಳ ತಹಸೀಲ್ದಾರ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೃತ್ಯ ಎಸಗಿದ ವ್ಯಕ್ತಿಯನ್ನು ಮುನಿರಾಬಾದ್ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸುವ ಸಿದ್ದತೆಯಲ್ಲಿದ್ದಾರೆ. ಕೃತ್ಯ ಎಸಗಿದ ವ್ಯಕ್ತಿಯನ್ನು ಮಹೇಶ ಕಲ್ಯಾಣಪ್ಪ ಓಜಿನಹಳ್ಳಿ ಎಂದು ಗುರುತಿಸಲಾಗಿದ್ದು, ಈತನು ನಿತ್ಯವೂ ಮದ್ಯ ಸೇವಿಸಿ ಊರಲ್ಲಿ …

Read More »

ಲವರ್ ಜೊತೆಗೆ ಐಷಾರಾಮಿಯಾಗಿ ಬದುಕಲು ಗಾಂಜಾ ಮಾರಾಟಕ್ಕಿಳಿದು ಸಿಕ್ಕಿಬಿದ್ದ ಪದವೀಧರೆ..!

ಬೆಂಗಳೂರು: ಅವರಿಬ್ಬರೂ ಸಿವಿಲ್ ಇಂಜಿನಿಯರಿಂಗ್ ಪದವೀಧರರಾಗಿದ್ದರು. ಇಬ್ಬರಿಗೂ ಕಾಲೇಜಿನ ಕಾರಿಡಾರ್ ನಲ್ಲಿ ಲವ್ ಶುರುವಾಗಿತ್ತು. ಆದರೆ ಪ್ರಿಯಕರನ ಐಷರಾಮಿ ಜೀವನದ ಮೋಡಿಗೆ ಬಿದ್ದ ಯುವತಿ ಈಗ ಗಾಂಜಾ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಸೇರಿದ್ದಾಳೆ‌. ಜೈಲುಪಾಲಾಗಿರುವ ಯುವರಿಯ ಹೆಸರು ರೇಣುಕಾ. ಇನ್ನೂ 25 ವರ್ಷ, ಸಿವಿಲ್ ಇಂಜಿನಿಯರಿಂಗ್ ಪದವೀಧರೆ. ರೇಣುಕಾ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದು, ಕೈತುಂಬಾ ಸಂಬಳ ಬರ್ತಿತ್ತು. ಆದ್ರೆ ಪ್ರೀತಿ ಎಂಬ ಮಾಹೆಗೆ ಸಿಲುಕಿದ ರೇಣುಕಾ ಪ್ರಿಯಕರ ಸಿದ್ದಾರ್ಥ …

Read More »

ಪೋಷಕರಲ್ಲಿ 3ನೇ ಅಲೆ ಆತಂಕ ಬೇಡ: ಡಾ|ಯೋಗಾನಂದರೆಡ್ಡಿ

ಬಳ್ಳಾರಿ: ಮೆಡಿಕಲ್‌ ಸರ್ವಿಸ್‌ ಸೆಂಟರ್‌ ರಾಜ್ಯ ಸಮಿತಿಯು ಕೋವಿಡ್‌ 3ನೇ ಅಲೆ ಮತ್ತು ಮಕ್ಕಳ ಮೇಲಾಗುವ ಪರಿಣಾಮಗಳ ಕುರಿತು ಈಚೆಗೆ ಆನ್‌ಲೈನ್‌ನಲ್ಲಿ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿತ್ತು. ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದ ಐಎಂಎ ಮಾಜಿ ರಾಜ್ಯಾಧ್ಯಕ್ಷ, ಖ್ಯಾತ ಮಕ್ಕಳ ತಜ್ಞ ಡಾ| ಯೋಗಾನಂದರೆಡ್ಡಿ ಮಾತನಾಡಿ, ಹಿಂದೆ ಆಗಿಹೋದ ಸಾಂಕ್ರಾಮಿಕ ಅಲೆಗಳನ್ನು ಅಭ್ಯಾಸಿಸಿ ಮತ್ತು ಪ್ರಸಕ್ತ ಕೋವಿಡ್‌ ಸಾಂಕ್ರಾಮಿಕವನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಿ ಹೇಳುವುದಾದರೆ, 3ನೇ ಅಲೆ ಬಗ್ಗೆ ಪೋಷಕರು ಆತಂಕ ಪಡುವ ಅಗತ್ಯವಿಲ್ಲ. …

Read More »

ಚಿಕ್ಕೋಡಿಯಲ್ಲಿ ಲಸಿಕೆ ಹಾಕಿಸಲು ಅಲೆಮಾರಿ ಜನಾಂಗ ಹಿಂದೇಟು

ಚಿಕ್ಕೋಡಿ: ದುರ್ಗಾ ಮಾತೆ ಇರುವಾಗ ನಮಗೇಕೆ ಕೊರೊನಾ ಲಸಿಕೆ ಎನ್ನುವ ಅಲೆಮಾರಿ ಜನಾಂಗಕ್ಕೆ ಕೊರೊನಾ ಭಯವೇ ಇಲ್ಲದಂತಿರುವುದು ಚಿಕ್ಕೋಡಿಯಲ್ಲಿ ಕಂಡುಬಂದಿದೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದ ಹೊರವಲಯದ ಜೋಪಡಿಗಳಲ್ಲಿ ವಾಸಿಸುತ್ತಿರುವ ಅಲೆಮಾರಿ ಜನಾಂಗಕ್ಕೆ ಕೊರೊನಾ ರೋಗದ ಭಯವೇ ಇಲ್ಲ. ಕೊರೊನಾ ರೋಗ ನಮಗೆ ಬರುವುದಿಲ್ಲ. ಈ ರೋಗಕ್ಕೂ ನಾವು ಹೆದರುವದಿಲ್ಲ. ಏಕೆಂದರೇ ನಮ್ಮನ್ನ ದುರ್ಗಾಮಾತಾ ರಕ್ಷಣೆ ಮಾಡುತ್ತಾಳೆ ಎನ್ನುವ ನಂಬಿಕೆಯಲ್ಲಿ ಈ ಜನಾಂಗದ ಜನರಿದ್ದಾರೆ. ಇಡೀ ಜಗತ್ತನ್ನೇ ಕೊರೊನಾ ಮಹಾಮಾರಿ …

Read More »

‘ಮೋದಿ, ಮೋದಿ’ ಎಂದರೆ ಬಡವರ ಬದುಕು ಬೂದಿಯಾಗೋದು ಖಚಿತ: ಸಿದ್ದರಾಮಯ್ಯ

ಬೆಂಗಳೂರು: ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರಾಗಲೀ, ಮುಖ್ಯಮಂತ್ರಿ ಬಿಎಸ್.ಯಡಿಯೂರಪ್ಪ ಅವರಾಗಲೀ ಸಂಕಷ್ಟ ಕಾಲದಲ್ಲಿ ಬಡವರ ನೆರವಿಗೆ ನಿಲ್ಲುತ್ತಿಲ್ಲ. ಮುಂದಿನ ಚುನಾವಣೆಯಲ್ಲಿಯೂ ‘ಮೋದಿ ಮೋದಿ’ ಎಂದೇನಾದರೂ ಹೇಳಿದರೆ ಬಡವರ ಬದುಕು ಬೂದಿಯಾಗುವುದು ಖಚಿತ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಬೆಂಗಳೂರಿನ ಜಯನಗರ ವಿಧಾನಸಭೆ ಕ್ಷೇತ್ರದ ಶಾಲಿನಿ ಆಟದ ಮೈದಾನದಲ್ಲಿ ಇಂದು ಶಾಸಕಿ ಸೌಮ್ಯ ರೆಡ್ಡಿಯವರು ಆಯೋಜಿಸಿದ್ದ ಕೊರೊನಾ ವಾರಿಯರ್ಸ್, ಪೌರ ಕಾರ್ಮಿಕರಿಗೆ …

Read More »

ಕೋವಿಡ್ ವಾರ್ಡ್‍ನಲ್ಲಿ ಅತ್ಯಾಚಾರಕ್ಕೆ ಯತ್ನ – ಚಿಕಿತ್ಸೆ ಫಲಕಾರಿಯಾಗದೇ ಯುವತಿ ಸಾವು

ಕಲಬುರಗಿ: ಜಿಮ್ಸ್ ಆಸ್ಪತ್ರೆ ಕೋವಿಡ್ ವಾರ್ಡ್ ನಲ್ಲಿ ಅತ್ಯಾಚಾರ ಯತ್ನಕ್ಕೆ ಒಳಗಾದ ಯುವತಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ. ಜೂನ್ 8ರ ರಾತ್ರಿಯಂದು ಖಾಸಗಿ ಅಂಬುಲೆನ್ಸ್ ಚಾಲಕ ಪಿಂಟು ರಾತ್ರಿ ಎಲ್ಲರೂ ಮಲಗಿದ್ದ ಸಮಯದಲ್ಲಿ ವಾರ್ಡ್ ಪ್ರವೇಶಿಸಿದ್ದಾನೆ. ಈ ವೇಳೆ ಅರೆ ಪ್ರಜ್ಞಾವಸ್ಥೆಯಲ್ಲಿದ್ದ ಯುವತಿಯ ಬಳಿ ಹೋಗಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಕೂಡಲೇ ಎಚ್ಚೆತ್ತ ಯುವತಿ ಚೀರಾಟ ನಡೆಸಿದ್ದಾಳೆ. ಆ ವೇಳೆ ಅಕ್ಕ ಪಕ್ಕದ ಬೆಡ್ ನಲ್ಲಿ ಮಲಗಿದ್ದವರು ಎಚ್ಚರಗೊಂಡಾಗ ಪಿಂಟು ಪರಾರಿಯಾಗಿದ್ದ. …

Read More »

ಯಡಿಯೂರಪ್ಪ ಪರವಾಗಿರುವವರು ಸೀಕ್ರೆಟ್ ಭೇಟಿ ಮಾಡುವ ಸಾಧ್ಯತೆ ? ಇದರಲ್ಲಿ ಬೆಳಗಾವಿಯ 6 ಶಾಸಕರು?

ಬೆಂಗಳೂರು – ಬಿಜೆಪಿ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಆಗಮಿಸಿರುವ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ ಸಿಂಗ್ ಅವರನ್ನು ವಯಕ್ತಿಕವಾಗಿ ಭೇಟಿ ಮಾಡಲು 28 ಬಿಜೆಪಿ ಶಾಸಕರು ಅವಕಾಶ ಕೇಳಿದ್ದಾರೆ. ಬೆಳಗ್ಗೆ 9 ಗಂಟೆಯಿಂದ ಕುಮಾರಕೃಪಾ ಗೆಸ್ಟ್ ಹೌಸ್ ನಲ್ಲಿ ಶಾಸಕರ ಜೊತೆಗೆ ಅರುಣ ಸಿಂಗ್ ವಯಕ್ತಿಕವಾಗಿ ಮಾತನಾಡಲಿದ್ದಾರೆ. ಬೆಳಗಾವಿಯ ಇಬ್ಬರು ಶಾಸಕರು ಸೇರಿದಂತೆ ಸುಮಾರು 28 ಶಾಸಕರು ಪ್ರತ್ಯೇಕವಾಗಿ ಭೇಟಿ ಮಾಡಿ ಮಾತನಾಡಲು ಅವಕಾಶ ಕೇಳಿದ್ದಾರೆ. ಹರತಾಳು ಹಾಲಪ್ಪ, ಸಿದ್ದು …

Read More »

ಹಾವೇರಿ ಜಿಲ್ಲೆಯಲ್ಲಿ ತುಂತುರು ಮಳೆ – ಮನೆಯ ಗೋಡೆಗಳಿಗೆ ಹಾನಿ

ಹಾವೇರಿ: ಜಿಲ್ಲೆಯಲ್ಲಿ ಬೆಳಗ್ಗೆಯಿಂದಲೇ ಮೋಡಕವಿದ ವಾತಾವರಣವಿದೆ. ಮೋಡಕವಿದ ವಾತಾವರಣದೊಂದಿಗೆ ಆಗಾಗ ತುಂತುರು ಮಳೆ ಆಗುತ್ತಿದೆ. ತುಂತುರು ಮಳೆಗೆ ಮನೆಯ ಹಳೆಯ ಗೋಡೆಗಳು ನೆನೆದು ಬಿದ್ದ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನಲ್ಲಿ ನಡೆದಿದೆ. ನೆರಗಲ್ ಗ್ರಾಮದ ತಿರಕಪ್ಪ ಗೋದಿ ಎಂಬವರ ಮನೆಯ ಗೋಡೆ ನೆಲಕಚ್ಚಿದೆ. ಅರಳೇಶ್ವರ ಗ್ರಾಮದ ಗಂಗಯ್ಯ ಹಿರೇಮಠ ಹಾಗೂ ಹಾನಗಲ್ ತಾಲೂಕಿನ ಅಕ್ಕಿವಳ್ಳಿ ಗ್ರಾಮದ ರಾಜು ಪಗಡೆ ಎಂಬವರ ಮನೆಯ ಗೋಡೆ ನೆಲಕಚ್ಚಿದೆ. ಮೂರು ಮನೆಯ ಗೋಡೆಗಳು …

Read More »