Breaking News

ಮಾರ್ಕಾಂಡೇಯ ನದಿ ನೀರುಪಾಲಾಗಿದ್ದ ರೈತ ಶವವಾಗಿ ಪತ್ತೆ

Spread the love

ಬೆಳಗಾವಿ: ಭಾರಿ ಮಳೆಯಿಂದ ಕಾಕತಿ ಬಳಿ ಮಾರ್ಕಾಂಡೇಯ ನದಿ ನೀರುಪಾಲಾಗಿದ್ದ ರೈತ ಶವವಾಗಿ ಪತ್ತೆಯಾಗಿದ್ದು, ಎರಡು ದಿನಗಳ ಬಳಿಕ ದರ್ಗಾ ಸೇತುವೆ ಬಳಿ ಮೃತದೇಹ ಪತ್ತೆಯಾಗಿದೆ.

ಎರಡು ದಿನಗಳ ಹಿಂದೆ ಮಾರ್ಕಾಂಡೇಯ ನದಿಗೆ ಕಾಕತಿ ಬಳಿ ನಿರ್ಮಿಸಿದ್ದ ಸೇತುವೆ ಬಳಿ ಕಾಲು ತೊಳೆಯಲೆಂದು ಹೋಗಿದ್ದ ರೈತ ಸಿದ್ರಾಯಿ ದೊಡ್ಡರಾಮ ಸುತಗಟ್ಟಿ ನೀರಿನ ರಭಸಕ್ಕೆ ನದಿ ನೀರಿನಲ್ಲಿ ಕೊಚ್ಚಿ ಹೋಗಿದ್ದರು. ರೈತನಿಗಾಗಿ ಎರಡು ದಿನಗಳಿಂದ ಎನ್ ಡಿ ಆರ್ ಎಫ್ ತಂಡ ಸ್ಥಳೀಯರ ನೆರವಿನಿಂದ ಶೋಧ ನಡೆಸಿತ್ತು. ಇದೀಗ ಕಾಕತಿ ಸೇತುವೆಯಿಂದ ಮೂರು ಕೀ.ಮೀ ದೂರದಲ್ಲಿರುವ ಮತ್ತೊಂದು ಸೇತುವೆ ದರ್ಗಾ ಸೇತುವೆ ಬಳಿ ಸಿದ್ರಾಯಿ ದೊಡ್ಡರಾಮ ಶವ ಪತ್ತೆಯಾಗಿದೆ. ಶವವನ್ನು ಹೊರತೆಗೆಯಲಾಗಿದೆ.

ನೀರಿನ ಹರಿವು ಹೆಚ್ಚಿರುವಲ್ಲಿ, ಸೇತುವೆಗಳ ಮೇಲೆ ರಭಸದಿಂದ ನೀರು ಹರಿಯುತ್ತಿರುವ ಸಂದರ್ಭದಲ್ಲಿ ಜನರು ಯಾವುದೇ ಸಾಹಸಕ್ಕೆ ಇಳಿಯದೇ ಎಚ್ಚರಿಕೆವಹಿಸಬೇಕು ಎಂದು ತಾಲೂಕು ಪಂಚಾಯ್ತಿ ಸದಸ್ಯ ಯಲ್ಲಪ್ಪ ಕೊಳೇಕರ ಮನವಿ ಮಾಡಿದ್ದಾರೆ.


Spread the love

About Laxminews 24x7

Check Also

ಕೃಷಿ ಕ್ಷೇತ್ರದಲ್ಲಿನ ಮಕ್ಕಳ ಬಳಕೆ ಕುರಿತ ಅಧ್ಯಯನದ ಪೂರ್ವಭಾವಿ ಸಭೆ

Spread the loveಬೆಳಗಾವಿ: ನವದೆಹಲಿಯ ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಯು ಕೃಷಿ ಕ್ಷೇತ್ರದಲ್ಲಿನ ಮಕ್ಕಳ ಬಳಕೆ ಕುರಿತ ಅಧ್ಯಯನಕ್ಕಾಗಿ ಬೆಳಗಾವಿ ಜಿಲ್ಲೆಯನ್ನು ಪ್ರಾಯೋಗಿಕವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ