Home / 2021 / ಮೇ (page 39)

Monthly Archives: ಮೇ 2021

ಖಾಸಗಿ ವಾಹಿನಿ ನಕಲಿ ಗುರುತಿನಚೀಟಿ ತೋರಿಸಿ ಸಿಕ್ಕಿಬಿದ್ದ ಕದೀಮ

ಹುಬ್ಬಳ್ಳಿ: ಕೊರೊನಾ ಕರ್ಫ್ಯೂ ಬಿಗಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಕೆಲವರು ನಕಲಿ ಐಡಿ ಕಾರ್ಡ್‌ಗಳನ್ನು ತೋರಿಸಿ ಓಡಾಡುತ್ತಿರುವುದನ್ನು ಪತ್ತೆ ಹಚ್ಚಲು ಪೊಲೀಸರು ಮುಂದಾಗಿದ್ದಾರೆ. ಮಂಗಳವಾರ ಚನ್ನಮ್ಮ ವೃತ್ತದಲ್ಲಿ ಖಾಸಗಿ ವಾಹಿನಿಯೊಂದರ ನಕಲಿ ಗುರುತಿನ ಚೀಟಿ ತೋರಿಸಿ ವ್ಯಕ್ತಿಯೊಬ್ಬ ಪೊಲೀಸರ ಅತಿಥಿಯಾಗಿದ್ದಾನೆ. ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕರ್ಫ್ಯೂ ಬಿಗಿಗೊಳಿ ಸಲಾಗುತ್ತಿದೆ. ಚೆಕ್‌ಪೋಸ್ಟ್‌ ಗಳನ್ನು ಬಿಗಿಗೊಳಿಸಲಾಗುತ್ತಿದೆ. ಅನಗತ್ಯ ಸಂಚಾರ ಎಂದು ಕಂಡುಬಂದರೆ ವಾಹನಗಳನ್ನು ಜಪ್ತಿ ಮಾಡಲಾಗುತ್ತಿದೆ. ಹೀಗಾಗಿ ಪೊಲೀಸರ ಕಣ್ಣು …

Read More »

ಆಂಬುಲೆನ್ಸ್ ದುಬಾರಿ ದರಕ್ಕೆ ಬ್ರೇಕ್!

ಶಿವಮೊಗ್ಗ: ಕೋವಿಡ್ ಸೋಂಕು ಹೆಚ್ಚಳವಾಗುತ್ತಿದ್ದು, ಆಂಬ್ಯುಲೆನ್ಸ್ ಎಗ್ಗಿಲ್ಲದೇ ಪಡೆಯುವ ಫೀಸ್ ಹಾವಳಿಗೆ ಇದೀಗ ಶಿವಮೊಗ್ಗದಲ್ಲಿ ಬ್ರೇಕ್ ಬಿದ್ದಿದೆ. ದುಬಾರಿ ಬಾಡಿಗೆ ಸುಲಿಗೆ ತಡೆಯಲು ಹೊಸ ಪ್ಲಾನ್ ಮಾಡಲಾಗಿದೆ. ಶಿವಮೊಗ್ಗದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಆಂಬ್ಯುಲೆನ್ಸ್ ಮಾಫಿಯಾ ನಡೆಯುತ್ತಿದ್ದು ಅದನ್ನು ತಡೆಯಲು ಇದೀಗ ಪೋಲಿಸ್, ಆರ್.ಟಿ.ಒ. ಜಂಟಿಯಾಗಿ ಮಾಫಿಯಾ ವಿರುದ್ಧ ಕಾರ್ಯಾಚರಣೆ ನಡೆಸಿದೆ. ಆಂಬುಲೆನ್ಸ್‌ಗಳಿಗೆ ಪ್ರೀಪೇಯ್ಡ್ ವ್ಯವಸ್ಥೆ ಮಾಡಲಾಗಿದೆ. ಮೆಗ್ಗಾನ್‌ನಿಂದ ಕೊರೋನಾ ಸೋಂಕಿತರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಆಸ್ಪತ್ರೆಗಳಿಗೆ ಕರೆದೊಯ್ಯುವ ವೇಳೆ …

Read More »

ಕೋವಿಡ್ ನಿರ್ವಹಣೆಗೆ ಗ್ರಾ.ಪಂ ಗಳಿಗೆ ಹಣ : ಸಿಎಂ

ಬೆಂಗಳೂರು : ಕೊರೊನಾ ವೈರಸ್ ಇದೀಗ ಗ್ರಾಮೀಣ ಪ್ರದೇಶಗಳಲ್ಲೂ ತನ್ನ ಕಬಂದ ಬಾಹುಗಳನ್ನು ಚಾಚಿದೆ. ಈ ಹಿನ್ನೆಲೆಯಲ್ಲಿ ಕೋವಿಡ್ ನಿರ್ವಹಣೆಗೆ ರಾಜ್ಯದ ಪ್ರತಿ ಗ್ರಾಮ ಪಂಚಾಯಿತಿಗಳಿಗೆ ಹಣ ನೀಡುವುದಾಗಿ ಸಿಎಂ ಬಿ.ಎಸ್ ಯಡಿಯೂರಪ್ಪ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸುತ್ತಿರುವ ಅವರು, ಕೋವಿಡ್ ನಿರ್ವಹಣೆಗೆ ಗ್ರಾ.ಪಂ ಗಳಿಗೆ ಹಣ ನೀಡುವುದಾಗಿ ತಿಳಿಸಿದರು. ಗ್ರಾಮ ಪಂಚಾಯಿತಿಗಳಿವೆ 50,000 ಮುಂಗಡ ಹಣ ಪಾವತಿ ಮಾಡಲಾಗುವುದು. ಇದರಿಂದ 6 ಸಾವಿರ ಗ್ರಾ.ಪಂ ಗಳಿಗೆ ಲಾಭವಾಗಲಿದೆ ಎಂದು …

Read More »

ಕಾಟಾಚಾರಕ್ಕೆ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ; ಸತೀಶ್ ಜಾರಕಿಹೊಳಿ

ಬೆಳಗಾವಿ: ವಿರೋಧ ಪಕ್ಷದವರ ಒತ್ತಡದಿಂದ ಮತ್ತು ಜನರಿಗೆ ಪ್ಯಾಕೇಜ್ ಕೊಟ್ಟಿದ್ದೇವೆ ಎಂದು ಬಿಂಬಿಸಿಕೊಳ್ಳುವುದಕ್ಕಾಗಿ ಮಾತ್ರ ರಾಜ್ಯ ಸರ್ಕಾರ ಪ್ಯಾಕೇಜ್ ಘೋಷಣೆ ಮಾಡಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಆರೋಪಿಸಿದರು. ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಘೋಷಣೆ ಮಾಡಿರುವ ಕೋವಿಡ್ ಪ್ಯಾಕೇಜ್ ನಲ್ಲಿ ಜನರಿಗೆ ಅನುಕೂಲವಾಗುವ ಯೋಜನೆಗಳು ಇಲ್ಲ. ಕೇವಲ ಕಾಟಾಚಾರಕ್ಕಾಗಿ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ತಮಿಳುನಾಡಿನಲ್ಲಿ ಪ್ರತಿಯೊಬ್ಬರಿಗೂ 4,000 ರೂ. ಘೋಷಣೆ …

Read More »

ಸ್ಮಶಾನ ಕಾರ್ಮಿಕರ ಬೇಡಿಕೆ ಈಡೇರಿಸುವಂತೆ ಸರ್ಕಾರಕ್ಕೆ ನಟ ಚೇತನ್ ಮನವಿ

ಬೆಂಗಳೂರು: ದೇಶದಲ್ಲಿ ಕೋವಿಡ್ 2ನೇ ಅಲೆ ಸೃಷ್ಟಿಸಿರುವ ಭೀಕರ ಪರಿಸ್ಥಿತಿಗೆ ಜನರು ಅದ್ರಲ್ಲು ಬಡವರು ತತ್ತರಿಸಿಹೋಗಿದ್ದಾರೆ. ಒಂದೆಡೆ ಆಕ್ಸಿಜನ್ ಕೊರೆತ, ಬೆಡ್ ಕೊರತೆ ಮತ್ತೊಂದೆಡೆ , ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೇ , ಚಿಕಿತ್ಸೆಗೆ ಹಣವಿಲ್ಲದೇ ಪರದಾಡುವ ಸ್ಥಿತಿ ಇದೆ.. ದಿನೇ ದಿನೇ , ಸೋಂಕಿತರ ಸಂಖ್ಯೆ , ಸಾವಿನ ಸಂಖ್ಯೆ ಹೆಚ್ಚಾಗ್ತಲೇ ಇದೆ.. ಈ ನಡುವೆ ಸ್ಯಾಂಡಲ್ ವುಡ್ , ಬಾಲಿವುಡ್ , ಟಾಲಿವುಡ್ , ಕಾಲಿವುಡ್ ನ …

Read More »

ಆಟೋ, ಕ್ಯಾಬ್ ಚಾಲಕರು, ಕಟ್ಟಡ ಕಾರ್ಮಿಕರಿಗೆ ಎಷ್ಟು ಪರಿಹಾರ?

ಬೆಂಗಳೂರು, ಮೇ 19; ಕೋವಿಡ್ 2ನೇ ಅಲೆಯು ಹರಡುವಿಕೆ ತಡೆಯಲು ಕರ್ನಾಟಕದಲ್ಲಿ ಲಾಕ್‌ಡೌನ್ ಘೋಷಣೆ ಮಾಡಲಾಗಿದೆ. ಆಟೋ, ಕ್ಯಾಬ್ ಚಾಲಕರು ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇವರಿಗಾಗಿ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದೆ. ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸುಮಾರು 1,250 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ಘೋಷಿಸಿದರು. ವಿವಿಧ ವರ್ಗದ ಜನರಿಗೆ ಸಹಾಯಕವಗುವಂತೆ ಪ್ಯಾಕೇಜ್ ಘೋಷಣೆ ಮಾಡಿದ್ದು, ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಹಣ …

Read More »

ಬೆಂಗಳೂರು: ಮಾರ್ಗಸೂಚಿ ಉಲ್ಲಂಘಿಸಿದ 20 ಸಾವಿರಕ್ಕೂ ಅಧಿಕ ವಾಹನಗಳ ಜಪ್ತಿ

ಬೆಂಗಳೂರು, ಮೇ 18: ಕೋವಿಡ್ ಸಂಬಂಧ ರಾಜ್ಯ ಸರಕಾರ ಜಾರಿಗೊಳಿಸಿರುವ ಮಾರ್ಗಸೂಚಿ ಉಲ್ಲಂಘಿಸಿದ ಆರೋಪ ಸಂಬಂಧ 20 ಸಾವಿರಕ್ಕೂ ಹೆಚ್ಚು ವಾಹನಗಳನ್ನು ನಗರ ಪೊಲೀಸರು ಜಪ್ತಿ ಮಾಡಿದ್ದಾರೆ. 20,895 ಜಪ್ತಿಯಾದ ವಾಹನಗಳ ಪೈಕಿ 19,056 ಬೈಕ್‍ಗಳಿದ್ದು, 879 ಆಟೊ ರಿಕ್ಷಾಗಳಿವೆ. ಇನ್ನು, 960 ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Read More »

ಪೊಲೀಸರಿಗೆ ಹೆದರದ ಕಳ್ಳರು- ದರೋಡೆಕೋರರಿಗೆ ಕೊರೊನಾ ಅಂದ್ರೆ ಭಯ !

ಬೆಂಗಳೂರು, ಮೇ. 19: ಕೊರೊನಾ ಸೋಂಕಿಗೆ ಕಳ್ಳರು- ದರೋಡೆಕೋರರು ಕೂಡ ಹೆದರಿದ್ದಾರೆ. ಕೊರೊನಾ ಸೋಂಕು ಭಯದಿಂದ ಕ್ರಿಮಿನಲ್ ಗಳು ಕೂಡ ರಜೆ ಮೊರೆ ಹೋದಂತಿದೆ. ಕೊರೊನಾ ಭೀತಿ ಹಾಗೂ ಲಾಕ್ ಡೌನ್ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಅಪರಾಧ ಪ್ರಕರಣಗಳು ಗಣನೀಯವಾಗಿ ಇಳಿಕೆಯಾಗಿವೆ. ಆದರೆ, ಸೈಬರ್ ಕಳ್ಳರು ಮಾತ್ರ ತಮ್ಮ ಕೈಚಳಕ ತೋರಿದ್ದಾರೆ. ಅರ್ಧಕ್ಕೆ ಅರ್ಧ ಪ್ರಕರಣ ಕಡಿಮೆ: ಒಂದಂಡೆ ಕೊರೊನಾ ಭೀತಿ. ಇನ್ನೊಂದಡೆ ಕೊರೊನಾ ಲಾಕ್ ಡೌನ್ ನಿಯಮ. ಹೀಗಾಗಿ …

Read More »

ವೈದ್ಯರಿಗೆ ನಟ ಸೋನು ಸೂದ್ ಕೇಳಿದ ಪ್ರಶ್ನೆಗೆ ಭೇಷ್ ಎನ್ನಲೇಬೇಕು

ಕೊರೊನಾ ಸಾಂಕ್ರಾಮಿಕ ರೋಗದ ಮಧ್ಯೆ ನಟ ಸೋನು ಸೂದ್ ಕೆಲಸ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ. ಕೊರೊನಾ ಮೊದಲ ಅಲೆ ಹಾಗೂ ಎರಡನೇ ಅಲೆ ಎರಡರಲ್ಲೂ ಸೋನು ಸೂದ್ ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ. ನೆರವು ಕೇಳಿದ ಜನರಿಗೆ ಸೋನು ಸಹಾಯ ಮಾಡಿದ್ದಾರೆ. ಜನರ ನೆರವಿಗೆ ಹಗಲು-ರಾತ್ರಿ ಕೆಲಸ ಮಾಡಿದ ಸೋನು ಸೂದ್ ವೈದ್ಯರಿಗೆ ಕೆಲ ಪ್ರಶ್ನೆಗಳನ್ನು ಕೇಳಿದ್ದಾರೆ. ಸೋನು ಸೂದ್ ಅವರ ಇತ್ತೀಚಿನ ಟ್ವೀಟ್, ಸಾಮಾಜಿಕ ಜಾಲತಾಣದಲ್ಲಿ ಸಂವೇದನೆ ಸೃಷ್ಟಿಸಿದೆ. ಒಂದು …

Read More »

ಕೊರೊನಾ ರೋಗಿಗಳು ಆರಂಭದಲ್ಲಿ ಈ ತಪ್ಪುಗಳನ್ನು ಮಾಡಬೇಡಿ

ಕೊರೊನಾ ವೈರಸ್ ಲಕ್ಷಣಗಳು ಕಾಣಿಸಿಕೊಳ್ತಿದ್ದಂತೆ ತಕ್ಷಣ ಚಿಕಿತ್ಸೆ ಪಡೆಯಬೇಕು. ಸರಿಯಾದ ಸಮಯಕ್ಕೆ ಸರಿಯಾದ ಚಿಕಿತ್ಸೆ ಸಿಕ್ಕಿದಲ್ಲಿ ಮಾತ್ರ ಕೊರೊನಾ ಗೆಲ್ಲಲು ಸಾಧ್ಯ. ಅನೇಕರು ಕೊರೊನಾಕ್ಕೆ ಹೆದರಿ ಆಸ್ಪತ್ರೆಗೆ ಹೋಗುವುದಿಲ್ಲ. ಇದ್ರಿಂದ ಪರಿಸ್ಥಿತಿ ಉಲ್ಭಣಿಸುತ್ತದೆ. ಸಾಮಾನ್ಯವಾಗಿ ಕೊರೊನಾ ಲಕ್ಷಣ ಆರಂಭದಲ್ಲಿ ಸೌಮ್ಯವಾಗಿರುತ್ತದೆ. ಆದ್ರೆ ಒಳಗಿನಿಂದಲೇ ತೊಡಕು ಮಾಡುವ ವೈರಸ್, ರೋಗಿ ಆಸ್ಪತ್ರೆಗೆ ದಾಖಲಾಗುವಂತೆ ಮಾಡುತ್ತದೆ. ವೈದ್ಯರ ಪ್ರಕಾರ ಮೊದಲ ದಿನದಿಂದಲೇ ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ರೋಗ ಲಕ್ಷಣಗಳನ್ನು ಎಂದಿಗೂ ಕಡೆಗಣಿಸಬಾರದು. …

Read More »