Breaking News
Home / 2021 / ಮೇ (page 11)

Monthly Archives: ಮೇ 2021

ಗ್ರಾಮಸ್ಥರೊಂದಿಗೆ ವೈಮನಸ್ಯ; ಶವವನ್ನು ಹೊತ್ತು ಅಂತ್ಯಸಂಸ್ಕಾರ ಮಾಡಿದ ಹೆಣ್ಣುಮಕ್ಕಳು

ರಾಂಚಿ : ಮೃತಪಟ್ಟ ಮಹಿಳೆಯ ಶವವನ್ನು ಹೊರಲು ಪುರುಷರು ನಿರಾಕರಿಸಿದ ಕಾರಣಕ್ಕೆ ಮಹಿಳೆಯರೇ ಶವಸಂಸ್ಕಾರ ಮಾಡಿರುವ ಘಟನೆ ಜಾರ್ಖಂಡ್ ರಾಜ್ಯದ ಗ್ರಾಮ ಒಂದರಲ್ಲೇ ನಡೆದಿದೆ. ಜಾರ್ಖಂಡ್ ರಾಜ್ಯದ ಹಜಾರಿಬಾಗ್ ಜಿಲ್ಲೆಯ ಖಂಡ್ವಾ ಗ್ರಾಮದಲ್ಲಿ ಉಂಟಾದ ವೈಮನಸ್ಸಿನಿಂದಾಗಿ ಮೃತಪಟ್ಟ ಮಹಿಳೆಯ ಶವ ಹೊರಲು ಪುರುಷರು ಮುಂದಾಗದ ಹಿನ್ನೆಲೆಯಲ್ಲಿ ಹೆಣ್ಣುಮಕ್ಕಳೇ ಶವಸಂಸ್ಕಾರ ಮಾಡಿದ್ದಾರೆ. ಮೃತರಾಗಿರುವ ಮಹಿಳೆ ಕುಂತೀದೇವಿ ನಾಲ್ಕು ವರ್ಷಗಳ ಹಿಂದೆ ಗಲಾಟೆ ಮಾಡಿಕೊಂಡಿದ್ದರು . ಆದ್ದರಿಂದ ಅವರನ್ನು ಗ್ರಾಮದ ಮುಖಂಡರು ತಮ್ಮ …

Read More »

ಬೆಂಗಳೂರಲ್ಲಿ ಲಸಿಕೆ ವಿತರಣೆಯಲ್ಲೂ ಗೋಲ್ಮಾಲ್..!

ಬೆಂಗಳೂರು: ಮಹಾಮಾರಿ ಕೊರೊನಾ ವೈರಸ್ ಒಂದೆಡೆ ತನ್ನ ರೌದ್ರನರ್ತನ ತೋರುತ್ತಿದ್ದರೆ, ಇನ್ನೊಂದೆಡೆ ಸಿಲಿಕಾನ್ ಸಿಟಿಯಲ್ಲಿ ಲಸಿಕೆ ವಿತರಣೆಯಲ್ಲಿಯೂ ಗೋಲ್ ಮಾಲ್ ನಡೆಯುತ್ತಿದೆ. ಬೆಂಗಳೂರಲ್ಲಿ ಬಿಜೆಪಿ ನಾಯಕರ ಆಪ್ತರಿಗೆ ಸುಲಭದಲ್ಲಿ ಲಸಿಕೆ ಸಿಗುತ್ತಿದೆ. ಮುಂಚೂಣಿ ಕಾರ್ಯಕರ್ತರಿಗೆ ಸರ್ಕಾರ ಉಚಿತ ಲಸಿಕೆ ಘೋಷಿಸಿದೆ. ಈ ಲಸಿಕೆಯನ್ನು ಬಿಜೆಪಿ ಕಾರ್ಯಕರ್ತರಿಗೆ ನೀಡಲಾಗುತ್ತಿದೆ. ಈ ಮೂಲಕ ಲಸಿಕೆ ವಿತರಣೆಯಲ್ಲೂ ರಾಜಕಾರಣ ನಡೆಯುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್‍ನಲ್ಲಿ ಲಸಿಕೆ ರಾಜಕಾರಣ ಬಯಲಾಗಿದೆ. …

Read More »

ಕೊರೊನಾ ಸೋಂಕಿತ ವ್ಯಕ್ತಿಯ ಜೇಬಿನಿಂದ 11 ಸಾವಿರ ರೂ. ನಗದನ್ನು ಕಳವು ಮಾಡಿದ ಆಸ್ಪತ್ರೆಯ ಮಹಿಳಾ ಸಿಬ್ಬಂದಿ

ಮಡಿಕೇರಿ: ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತ ವ್ಯಕ್ತಿಯ ಜೇಬಿನಿಂದ 11 ಸಾವಿರ ರೂ. ನಗದನ್ನು ಕಳವು ಮಾಡಿದ್ದ ಆಸ್ಪತ್ರೆಯ ತಾತ್ಕಾಲಿಕ ಡಿ ಗ್ರೂಪ್ ಸಿಬ್ಬಂದಿಯನ್ನು ಬಂಧಿಸುವಲ್ಲಿ ಮಡಿಕೇರಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಕೋವಿಡ್ ಆಸ್ಪತ್ರೆಯಲ್ಲಿ ಕಳೆದ 17 ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಡಿ ಗ್ರೂಪ್ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಮಡಿಕೇರಿ ತಾಲೂಕಿನ ಜೋಡುಪಾಲ ನಿವಾಸಿ ದಿಲ್‍ಶಾದ್(45) ಬಂಧಿತ ಆರೋಪಿಯಾಗಿದ್ದಾಳೆ. ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕೂಡಿಗೆ ಗ್ರಾಮದ ರಜನಿಕಾಂತ್ …

Read More »

ಇಚ್ಚಂಗಿ ಗ್ರಾಮದ ಶ್ರೀ ಶಿವಾನಂದ ಮಠದ ಶರಣಮ್ಮನವರು(ಪಾರ್ವತೆಮ್ಮನವರು) ಇಂದು ಲಿಂಗೈಕ್ಯ…

ಹಾವೇರಿ: ಜಿಲ್ಲೆಯ ಸವಣೂರು ತಾಲೂಕಿನ ಇಚ್ಚಂಗಿ ಗ್ರಾಮದ ಶ್ರೀ ಶಿವಾನಂದ ಮಠದ ಶರಣಮ್ಮನವರು(ಪಾರ್ವತೆಮ್ಮನವರು) ಇಂದು ಲಿಂಗೈಕ್ಯರಾಗಿದ್ದಾರೆ. ಶರಣಮ್ಮನವರಿಗೆ ಸುಮಾರು 105 ವರ್ಷ ವಯಸ್ಸಾಗಿತ್ತು. ಹೀಗಾಗಿ ವಯೋಸಹಜ ಖಾಯಿಲೆಯಿಂದ ಶಿವಾನಂದ ಮಠದ ಶರಣಮ್ಮನವರು ಶುಕ್ರವಾರ ಬೆಳಗ್ಗೆ ಲಿಂಗೈಕ್ಯರಾಗಿದ್ದಾರೆ. ಕಳೆದ 65 ವರ್ಷಗಳ ಹಿಂದೆಯೇ ಸಂಸಾರ ತ್ಯಜಿಸಿ, ಗದಗ ಶಿವಾನಂದ ಮಠದ ಜಗದ್ಗುರುಗಳಿಂದ ಧೀಕ್ಷೆ ಪಡೆದಿದ್ದ ಅಮ್ಮನವರು, ಅಪಾರ ಭಕ್ತ ಸಮೂಹವನ್ನು ಹೊಂದಿದ್ದರು. ತಮ್ಮ ಇಡೀ ಬದುಕನ್ನೇ ಸಮಾಜ ಸೇವೆಗಾಗಿ ಮುಡುಪಾಗಿಟ್ಟಿದ್ದರು. ಇಚ್ಚಂಗಿ …

Read More »

ಕಿಮ್ಸ್ ನ ಕೊರೊನಾ ಐಸಿಯು ವಾರ್ಡ್ ನಲ್ಲಿ ಅಟೆಂಡರ್ ಗಳು ಸಹ ವಾಸ

ಹುಬ್ಬಳ್ಳಿ: ಸದಾ ಒಂದಿಲ್ಲೊಂದು ಕಾರಣದಿಂದ ಸುದ್ದಿಯಾಗುತ್ತಿರುವ ಕಿಮ್ಸ್ ಆಸ್ಪತ್ರೆ ಇದೀಗ ಮತ್ತೊಂದು ಅವ್ಯವಸ್ಥೆಗೆ ಹೆಸರಾಗಿದೆ. ಕೊರೊನಾ ಐಸಿಯು ವಾರ್ಡ್ ನಲ್ಲಿ ಯಾರೂ ಹೋಗಬಾರದು ಅನ್ನೋ ನಿಯಮವಿದೆ. ವೈದ್ಯರು, ನರ್ಸ್ ಗಳು ಭಯದಿಂದ ಪಿಪಿಇ ಕಿಟ್ ಹಾಕಿಕೊಂಡು ರೋಗಿಗಳಿಗೆ ಚಿಕಿತ್ಸೆ ನೀಡುತ್ತಾರೆ. ಆದರೆ ಕಿಮ್ಸ್ ನ ಕೊರೊನಾ ಐಸಿಯು ವಾರ್ಡ್ ನಲ್ಲಿ ಅಟೆಂಡರ್ ಗಳು ಸಹ ವಾಸವಾಗಿರುವುದು ಕಿಮ್ಸ್ ಆಸ್ಪತ್ರೆಯ ಭದ್ರತಾ ವೈಫಲ್ಯ ಎತ್ತಿ ತೋರಿಸುವಂತಾಗಿದೆ. ಕೊರೊನಾ ಐಸಿಯು ವಾರ್ಡ್ ನಲ್ಲಿ …

Read More »

ಸಚಿವರಿಂದಲೇ ಅಧಿಕಾರ ದುರುಪಯೋಗ , ಬೆಡ್ ಬ್ಲಾಕಿಂಗ್ ದಂಧೆಯಲ್ಲಿ ಆರೋಗ್ಯ ಸಚಿವರೇ ಭಾಗಿ?: ಹೆಚ್.ಎನ್.ರವೀಂದ್ರ ಆರೋಪ

ಬೆಂಗಳೂರು: ಬೆಂಗಳೂರು ಬೆಡ್ ಬ್ಲಾಕಿಂಗ್ ದಂಧೆಯಲ್ಲಿ ಆರೋಗ್ಯ ಸಚಿವರೇ ಭಾಗಿಯಾಗಿದ್ದಾರೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ವಿರುದ್ಧ ಐಎಂಎ ಮಾಜಿ ಅಧ್ಯಕ್ಷ ಹೆಚ್.ಎನ್.ರವೀಂದ್ರ ಆರೋಪಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ರವೀಂದ್ರ, ಆರೋಗ್ಯ ಸಚಿವ ಸುಧಾಕರ್ ಅವರೇ ಬೆಡ್ ಬ್ಲಾಕಿಂಗ್ ನಲ್ಲಿ ಶಾಮೀಲಾಗಿದ್ದಾರೆ. ಏರ್ ಪೋರ್ಟ್ ರಸ್ತೆಯಲ್ಲಿರುವ ಆಸ್ಟರ್ ಆಸ್ಪತ್ರೆಯಲ್ಲಿ ಬೆಡ್ ಬ್ಲಾಕ್ ಮಾಡಿಸಿದ್ದು, ವಾರ್ ರೂಂ ಪ್ರಕಾರ ಇವತ್ತಿಗೂ ಅಲ್ಲಿ ಬೆಡ್ ಖಾಲಿ ಇಲ್ಲ. ಆದರೆ ವಾಸ್ತವದಲ್ಲಿ ಆಸ್ಟರ್ ಆಸ್ಪತ್ರೆಯಲ್ಲಿ ಬೆಡ್ …

Read More »

ಲಕ್ಷ್ಮಿ ನಿವ್ಸ್ ಫೇಸ್ ಬುಕ್ ಪೇಜ್ ಹ್ಯಾಕ್ ಮಾಡಿದ್ದಾರೆ, ಏನೇ ತಪ್ಪು ಸಂದೇಶ ಬಂದ್ರು ವಾಹಿನಿಯ ವೀಕ್ಷಕರು ತಪ್ಪು ತಿಳಿಯಬೇಡಿ…

ಎಲ್ಲಾ ಲಕ್ಷ್ಮಿ news ವೀಕ್ಷಕರಿಗೆ ನಮಸ್ಕಾರ .. ಒಂದು ವಿಷಾದದ ಸಂಗತಿ , ನಮ್ಮ ಹಾಗುವನಿಮ್ಮೆಲ್ಲರ್ ಗೋಕಾಕ ನ ಲಕ್ಷ್ಮಿ news ವಾಹಿನಿ ಫೇಸ್ಬುಕ್ ಪೇಜ ಅನ್ನ ಯಾರೋ ಕಿಡಿ ಗೆಡಿ ಗಳು ನಿನ್ನೆ ಹ್ಯಾಕ್ ಮಾಡಿದ್ದಾರೆ. ಹಾಗೂ ಅದರಲ್ಲಿ ಅಶ್ಲೀಲ ಚಿತ್ರ ಗಳನ್ನ ಹಾಕುತ್ತಿದ್ದಾರೆ, ದಯವಿಟ್ಟು ಯಾರು ವಾಹಿನಿಯ ಬಗ್ಗೆ ತಪ್ಪು ತಿಳುವಳಿಕೆ ಯನ್ನ ತಿಳಿಬೇಡಿ ಇದು ಯಾರೋ ಕುತಂತ್ರಿ ಗಳ ಕೆಲ್ಸ ಹಾಗೂ ತಾವು ಕಂಡಂತೆ ನಮ್ಮ …

Read More »

ಜನಸೇವಾ ಕಲ್ಯಾಣ ಟ್ರಸ್ ಮೊಬೈಲ್ ಕೋವಿಡ್ ಕೇರ್ ಸೆಂಟರ್ ಆರಂಭಿಸಿದ್ದು, ಬೆಳಗಾವಿಜನರಿಗೆ ವಿಶಿಷ್ಷ ಸೇವೆ

ಬೆಳಗಾವಿ – ಇಲ್ಲಿಯ ಆರ್ ಎಸ್ಎಸ್ನ ಜನಸೇವಾ ಕಲ್ಯಾಣ ಟ್ರಸ್ ಮೊಬೈಲ್ ಕೋವಿಡ್ ಕೇರ್ ಸೆಂಟರ್ ಆರಂಭಿಸಿದ್ದು, ಬೆಳಗಾವಿಜನರಿಗೆ ವಿಶಿಷ್ಷ ಸೇವೆ ಸಲ್ಲಿಸಲು ಮುಂದಾಗಿದೆ. ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಸೋಂಕಿತರ ಮನೆಗೇ ತೆರಳುವಕೋವಿಡ್ ಕೇರ್ ಸಂಟರ್ ಅಲ್ಲಿಯೆ ರೋಗಿಯನ್ನು ಪರೀಕ್ಷೆಗೊಳಪಡಿಸಲಿದೆ. ಓರ್ವ ಎಂಬಿಬಿಎಸ್ ವೈದ್ಯರು, ಓರ್ವ ನರ್ಸ್, ಸ್ವಯಂ ಸೇಲಕ ಹಾಗೂ ವ್ಯಾನ್ ಚಾಲಕ ಈ ಮೊಬೈಲ್ ಕೋವಿಡ್ ಕೇರ್ ಸೆಂಟರ್ ನಲ್ಲಿರಲಿದ್ದಾರೆ. ಇದರಲ್ಲಿ ಆಕ್ಸಿಜನ್ ಕಾನ್ಸಂಟ್ರೇಟರ್ …

Read More »

ಕೋವಿಡ್-19 ಸೋಂಕಿತರು ಉಚಿತ ಚಿಕಿತ್ಸೆ ಪಡೆಯಬಹುದು: ಎಂ.ಜಿ.ಹಿರೇಮಠ

ಬೆಳಗಾವಿ: ನೋಂದಾಯಿತ ಖಾಸಗಿ ಆಸ್ಪತ್ರೆಗಳ ಕಾಯ್ದಿರಿಸಿದ ಹಾಸಿಗೆಗಳಲ್ಲಿ ಕೋವಿಡ್-19 ಸೋಂಕಿತರು ಉಚಿತ ಚಿಕಿತ್ಸೆ ಪಡೆಯಬಹುದು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ. ಸರ್ಕಾರದ ನಿರ್ದೇಶನದಂತೆ, ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆಯಡಿಯಲ್ಲಿ ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಶೇಕಡಾ 50 ರಷ್ಟು ಹಾಸಿಗೆಗಳನ್ನು ಕೋವಿಡ್-19 ಸೋಂಕಿತರಿಗೆ ಉಚಿತ ಚಿಕಿತ್ಸೆ ನೀಡಲು ಕಾಯ್ದಿರಿಸಲಾಗಿದೆ ಎಂದಿದ್ದಾರೆ. ಜಿಲ್ಲೆಯಲ್ಲಿ 06 ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ, 9 ತಾಲೂಕಾ ಆರೋಗ್ಯ ಕೇಂದ್ರಗಳಲ್ಲಿ ಹಾಗೂ ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ …

Read More »

ಯುವತಿಯ ಮೇಲೆ ಅತ್ಯಾಚಾರ,ಸಾಮಾಜಿಕ ಜಾಲ ತಾಣದಲ್ಲಿ ವಿಡಿಯೋ ವೈರಲ್, ಐವರು ಆರೋಪಿಗಳನ್ನು ಬಂಧಿಸಿದ ಪೊಲೀಸರು

ಬೆಂಗಳೂರು, ಮೇ. 28: ಬಾಂಗ್ಲಾದೇಶ ಮೂಲದ ಯುವತಿಯ ಮೇಲೆ ಅತ್ಯಾಚಾರ ಎಸಗಿ ಆಕೆಗೆ ಚಿತ್ರಹಿಂಸೆ ನೀಡುವ ದೃಶ್ಯಗಳು ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿವೆ. ಈ ಸಂಬಂಧ ಗ್ಯಾಂಗ್ ರೇಪ್ ಪ್ರಕರಣ ದಾಖಲಿಸಿಕೊಂಡಿರುವ ರಾಮಮೂರ್ತಿನಗರ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಸಾಮಾಜಿಕ ಜಾಲ ತಾಣದಲ್ಲಿ ವಿಡಿಯೋ ವೈರಲ್ ಆದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದ್ದು, ರಾಮಮೂರ್ತಿನಗರದ ಎನ್‌ಆರ್‌ಐ ಬಡಾವಣೆಯಲ್ಲಿ ಕಳೆದ ಹತ್ತು ದಿನಗಳ ಹಿಂದೆ ಈ ಘಟನೆ ನಡೆದಿದೆ. …

Read More »