Breaking News

ಗ್ರಾಮಸ್ಥರೊಂದಿಗೆ ವೈಮನಸ್ಯ; ಶವವನ್ನು ಹೊತ್ತು ಅಂತ್ಯಸಂಸ್ಕಾರ ಮಾಡಿದ ಹೆಣ್ಣುಮಕ್ಕಳು

Spread the love

ರಾಂಚಿ : ಮೃತಪಟ್ಟ ಮಹಿಳೆಯ ಶವವನ್ನು ಹೊರಲು ಪುರುಷರು ನಿರಾಕರಿಸಿದ ಕಾರಣಕ್ಕೆ ಮಹಿಳೆಯರೇ ಶವಸಂಸ್ಕಾರ ಮಾಡಿರುವ ಘಟನೆ ಜಾರ್ಖಂಡ್ ರಾಜ್ಯದ ಗ್ರಾಮ ಒಂದರಲ್ಲೇ ನಡೆದಿದೆ.

ಜಾರ್ಖಂಡ್ ರಾಜ್ಯದ ಹಜಾರಿಬಾಗ್ ಜಿಲ್ಲೆಯ ಖಂಡ್ವಾ ಗ್ರಾಮದಲ್ಲಿ ಉಂಟಾದ ವೈಮನಸ್ಸಿನಿಂದಾಗಿ ಮೃತಪಟ್ಟ ಮಹಿಳೆಯ ಶವ ಹೊರಲು ಪುರುಷರು ಮುಂದಾಗದ ಹಿನ್ನೆಲೆಯಲ್ಲಿ ಹೆಣ್ಣುಮಕ್ಕಳೇ ಶವಸಂಸ್ಕಾರ ಮಾಡಿದ್ದಾರೆ.

ಮೃತರಾಗಿರುವ ಮಹಿಳೆ ಕುಂತೀದೇವಿ ನಾಲ್ಕು ವರ್ಷಗಳ ಹಿಂದೆ ಗಲಾಟೆ ಮಾಡಿಕೊಂಡಿದ್ದರು . ಆದ್ದರಿಂದ ಅವರನ್ನು ಗ್ರಾಮದ ಮುಖಂಡರು ತಮ್ಮ ಜಾತಿಯಿಂದ ಬಹಿಷ್ಕಾರ ಹಾಕಿದ್ದರು . ಕಳೆದ ಕೆಲ ದಿನಗಳಿಂದ ಪಾರ್ಶ್ವವಾಯುಗೆ ತುತ್ತಾಗಿದ್ದ ಅವರು ಇಂದು ಮೃತಪಟ್ಟರು . ಆದರೆ ಜಗಳ ಮಾಡಿಕೊಂಡಿದ್ದ ಕಾರಣ , ಯಾರೂ ಶವ ಎತ್ತಲು ಮುಂದೆ ಬರಲಿಲ್ಲ .

ಜಾತಿಯಿಂದ ಹೊರಕ್ಕೆ ಹಾಕಿರುವ ಕಾರಣ , ಅವರನ್ನು ಮುಟ್ಟುವುದಿಲ್ಲ ಎಂದು ಹೇಳಿದ ಕಾರಣ ಆಕೆಯ ಎಂಟು ಮಂದಿ ಪುತ್ರಿಯರು ಮುಂದೆ ನಿಂತು ಶವವನ್ನು ತೆಗೆದಕೊಂಡು ಹೋಗಿ ಅಂತಿಮ ಸಂಸ್ಕಾರ ಮಾಡಿದರು.

ಇದೀಗ ಹೆಣ್ಣುಮಕ್ಕಳು ಅಂತ್ಯಸಂಸ್ಕಾರ ಮಾಡುತ್ತಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು , ಗ್ರಾಮಸ್ಥರ ನಡುವಳಿಕೆಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿ ಸಲಾಗುತ್ತಿದೆ.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ