Breaking News
Home / 2021 / ಮೇ / 24

Daily Archives: ಮೇ 24, 2021

ಕೊರೊನಾಗೆ ಬೆಳಗ್ಗೆ ಪತಿ ಸಂಜೆ ಪತ್ನಿ ಬಲಿ

ಚಾಮರಾಜನಗರ: ಪ್ರೀತಿಸಿ ಮದುವೆಯಾಗಿ ಸುಖ ಸಂಸಾರ ನಡೆಸುತ್ತಿದ್ದ ದಂಪತಿ ಬಾಳಿಗೆ ಕೊರೊನಾ ಕೊಳ್ಳಿ ಇಟ್ಟಿದ್ದು ಒಂದೇ ದಿನ ಗಂಡ-ಹೆಂಡತಿ ಕೊರೊನಾಗೆ ಬಲಿಯಾಗಿರುವ ಘಟನೆ ಗುಂಡ್ಲುಪೇಟೆಯಲ್ಲಿ ನಡೆದಿದೆ. ಸುದರ್ಶನ(51) ಹಾಗೂ ಹೇಮಲತಾ (46) ಮೃತರು. ಕಳೆದ ಒಂದು ವಾರದ ಹಿಂದೆ ಈ ದಂಪತಿಗೆ ಕೋವಿಡ್ ದೃಢವಾಗಿತ್ತು. ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು‌. ಆದರೆ ವಿಧಿಯ ಆಟವೇ ಬೆರೆಯಾಗಿತ್ತು ಅನಿಸುತ್ತೆ. ಚಿಕಿತ್ಸೆ ಫಲಕಾರಿಯಾಗದೇ ಇಂದು ಮುಂಜಾನೆ ಸುದರ್ಶನ್ ಅಸುನೀಗಿದರೇ ಸಂಜೆ ಹೇಮಲತಾ …

Read More »

ಕೋವಿಡ್ 3ನೇ ಅಲೆ ಭೀತಿ: ಕರ್ನಾಟಕದಲ್ಲಿ ಮಕ್ಕಳ ಆರೈಕೆ ಕೇಂದ್ರಗಳ ಸ್ಥಾಪನೆ

ಬೆಂಗಳೂರು, ಮೇ 24: ಕರ್ನಾಟಕದಲ್ಲಿ ಇನ್ನೂ ಕೊರೊನಾ ವೈರಸ್ 2ನೇ ಅಲೆ ತಾಂಡವಾಡುತ್ತಿದೆ. ಆದರೂ ದಾಖಲೆಯ ಸಂಖ್ಯೆಯಲ್ಲಿ ಮಕ್ಕಳಿಗೆ ಕೋವಿಡ್-19 ಪಾಸಿಟಿವ್ ಕಾಣಿಸಿಕೊಳ್ಳುತ್ತಿರುವುದನ್ನು ನೋಡಿದರೆ ಆಗಲೇ ಕೋವಿಡ್ 3ನೇ ಅಲೆ ಪ್ರಾರಂಭವಾಗಿದೆಯಾ ಎಂಬ ಪ್ರಶ್ನೆ ಕಾಡುತ್ತಿದೆ. ಕೋವಿಡ್ 3ನೇ ಅಲೆಯಿಂದ ಮಕ್ಕಳನ್ನು ರಕ್ಷಿಸಲು ಸರ್ಕಾರ ಈಗಾಗಲೇ ಸಿದ್ಧತೆ ನಡೆಸುತ್ತಿದ್ದು, ಕೊರೊನಾ ಮೊದಲ ಅಲೆಗಿಂತ 2ನೇ ಅಲೆಯ ವೇಳೆ ಮಕ್ಕಳಲ್ಲಿ ಕೋವಿಡ್ ಸೋಂಕು ಪ್ರಕರಣಗಳ ಸಂಖ್ಯೆ ಎರಡು ಪಟ್ಟು ಹೆಚ್ಚಾಗಿದೆ. ಈ …

Read More »

ತುರ್ತು ಸೇವೆಗೆ ಆಂಬುಲೆನ್ಸ್‌ ವ್ಯವಸ್ಥೆ

ಕಾರಟಗಿ: ‘ಕ್ಷೇತ್ರದಲ್ಲಿ ಕೊರೊನಾ ಸೋಂಕಿತರು ಸೇರಿದಂತೆ ವಿವಿಧ ರೋಗಿಗಳಿಗೆ ತುರ್ತು ಆರೋಗ್ಯ ಸೇವೆ ಸಮರ್ಪಕವಾಗಿ ದೊರೆಯಲಿ ಎನ್ನುವ ಉದ್ದೇಶದಿಂದ ವೈಯಕ್ತಿಕ ವೆಚ್ಚದಲ್ಲಿ 2 ಆಮ್ಲಜನಕ ಸಹಿತ ಆಂಬುಲೆನ್ಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಜನರು ಅಗತ್ಯ ಸಂದರ್ಭದಲ್ಲಿ ಪ್ರಯೋಜನಾ ಪಡೆಯಬಹುದು’ ಎಂದು ಶಾಸಕ ಬಸವರಾಜ ದಢೇಸೂಗೂರು ಹೇಳಿದರು. ಭಾನುವಾರ ತಮ್ಮ ಕಚೇರಿ ಬಳಿ ಆಂಬುಲೆನ್ಸ್‌ ಹಸ್ತಾಂತರಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಕ್ಷೇತ್ರದಲ್ಲಿ ಕೋವಿಡ್ ಹೆಚ್ಚಳವಾಗುತ್ತಿರುವುದು ಕಳವಳಕಾರಿ ಸಂಗತಿ. ಗ್ರಾಮೀಣ ಪ್ರದೇಶದ ರೋಗಿಗಳು ಚಿಕಿತ್ಸೆಗಾಗಿ …

Read More »

“ಪ್ರತಿ ಮನೆಗೂ ಬರಲಿದೆ ಕೊರೊನಾ ಪರೀಕ್ಷಾ ವಿಶೇಷ ತಂಡ”

ಬೆಂಗಳೂರು, ಮೇ 24: ರಾಜ್ಯದ ಗ್ರಾಮೀಣ‌ ಮತ್ತು ಪಟ್ಟಣ ಪ್ರದೇಶಗಳಲ್ಲಿ ಕೊರೊನಾ ಸೋಂಕಿನ‌ ಲಕ್ಷಣವಿರುವವರನ್ನು ಪ್ರತಿ ಮನೆ-ಮನೆಗೂ ಹೋಗಿ ಪರೀಕ್ಷಿಸಲು ವಿಶೇಷ ತಂಡ ರಚಿಸಲಾಗುವುದು ಎಂದು ಕಂದಾಯ ಸಚಿವ ಹಾಗೂ ವಿಪತ್ತು ನಿರ್ವಹಣಾ ಪ್ರಾಧಿಕಾರದ ಉಪಾಧ್ಯಕ್ಷ ಆರ್.ಅಶೋಕ ತಿಳಿಸಿದ್ದಾರೆ. ಈ ಬಗ್ಗೆ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್ ಸುತ್ತೋಲೆ ಹೊರಡಿಸಲಿದ್ದಾರೆ ಎಂದು ತಿಳಿಸಿದ ಸಚಿವರು, ಸೋಂಕು ನಿಯಂತ್ರಣಕ್ಕೆ ಸಾಕಷ್ಟು ಕ್ರಮ ಅನುಸರಿಸುತ್ತಿದ್ದರೂ, ಗ್ರಾಮೀಣ ಭಾಗಗಳಲ್ಲಿ ಕೋವಿಡ್ ಸೋಂಕು …

Read More »

ಮೇ 26ರಂದು ದೇಶವ್ಯಾಪಿ ಪ್ರತಿಭಟನೆ ನಡೆಸಲು ರೈತ ಸಂಘಗಳು ನಿರ್ಧಾರ : 12 ಪ್ರತಿಪಕ್ಷಗಳ ಬೆಂಬಲ

ನವದೆಹಲಿ : ಕೇಂದ್ರ ಜಾರಿಗೆ ತಂಡ ಕೃಷಿ ಮಸೂದೆ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಆರು ತಿಂಗಳು ತುಂಬುತ್ತಿರುವ ಹಿನ್ನೆಲೆಯಲ್ಲಿ ಮೇ 26ರಂದು ದೇಶವ್ಯಾಪಿ ಪ್ರತಿಭಟನೆ ನಡೆಸಲು ಸಂಯುಕ್ತ ಕಿಸಾನ್‌ ಮೋರ್ಚಾ ನಿರ್ಧರಿಸಿದ್ದು, ಅದಕ್ಕೆ 12 ಪ್ರತಿಪಕ್ಷಗಳು ಬೆಂಬಲ ಸೂಚಿಸಿವೆ.   ಮೇ 26ಕ್ಕೆ ಪ್ರತಿಭಟನೆಗೆ ಆರು ತಿಂಗಳು ಪೂರ್ಣಗೊಳ್ಳಲಿದ್ದು, ಅಂದು ದೇಶವ್ಯಾಪಿ ಪ್ರತಿಭಟನೆಗೆ ಕಿಸಾನ್‌ ಮೋರ್ಚಾ ಕರೆ ನೀಡಿದೆ. ಇದಕ್ಕೆ ಕಾಂಗ್ರೆಸ್‌, ಟಿಎಂಸಿ, ಜೆಡಿಎಸ್‌ ಸೇರಿದಂತೆ 12 ಪ್ರತಿಪಕ್ಷಗಳು …

Read More »

ಮೂರನೇ ಆಲೆ ಆತಂಕ: ಪರಿಷತ್‌ ಸಭಾಪತಿ ಹೊರಟ್ಟಿ ಸಲಹೆ

ಬೆಂಗಳೂರು: ಕರೊನಾ ಮೂರನೇ ಅಲೆ ಮಕ್ಕಳನ್ನು ಬಾಧಿಸುವ ಸಾಧ್ಯತೆ ಬಗ್ಗೆ ಪರಿಣಿತರು ಅಭಿಪ್ರಾಯಪಟ್ಟಿರುವ ಹಿನ್ನೆಲೆಯಲ್ಲಿ ಸರ್ಕಾರ ಅಧ್ಯಯನ ನಡೆಸಿ ಸೂಕ್ತ ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಸಲಹೆ ನೀಡಿದ್ದಾರೆ. ಈ ಕುರಿತು ಮುಖ್ಯಮಂತ್ರಿಬಿ.ಎಸ್‌.ಯಡಿಯೂರಪ್ಪ ಹಾಗೂ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್‌ ಅವರಿಗೆ ಪತ್ರ ಬರೆದಿರುವ ಅವರು, ಮೂರನೇ ಆಲೆಯು ಭವಿಷ್ಯದ ವಾರಸುದಾರರಾದ ಮಕ್ಕಳ ಮೇಲೆ ಬೀರಬಹುದ ಪರಿಣಾಮಗಳ ಬಗ್ಗೆ ತಿಳಿದುಕೊಂಡು ಈಗಲೇ ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದ್ದಾರೆ. …

Read More »

ದಲಿತ ಯುವಕನ ಮೇಲೆ ದೌರ್ಜನ್ಯ ಪ್ರಕರಣ : ಗೋಣಿಬೀಡು ಪಿಎಸ್ ಐ ಅರ್ಜುನ್ ಅಮಾನತು

ಚಿಕ್ಕಮಗಳೂರು; ಮೂಡಿಗೆರೆ ತಾಲ್ಲೂಕು ಗೋಣಿಬೀಡು ಪೋಲಿಸ್ ಠಾಣೆ ವ್ಯಾಪ್ತಿಯ ಕಿರುಗುಂದ ಪರಿಶಿಷ್ಟ ಜಾತಿ ಯುವಕನ ಮೇಲೆ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋಣಿಬೀಡು ಪೋಲಿಸ್ ಠಾಣೆ ಪಿಎಸ್ ಐ ಅರ್ಜುನ್ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ, ಸದ್ಯ ಈ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಲಾಗಿದೆ. ಕಿರಗುಂದ ಗ್ರಾಮದ ಪರಿಶಿಷ್ಟ ಜಾತಿ ಯುವಕ ಪುನೀತ್ ಎಂಬುವನನ್ನು ಮೇ 10 ರಂದು ಯಾವುದೇ ದೂರು ದಾಖಲಿಸಿಕೊಳ್ಳದೆ. ಪೋಲಿಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಿದ ಪಿಎಸ್ …

Read More »

ಕೊರೋನ ಇಂದ ಪಾರಾಗಲು ಪಾರಿಜಾತ ಎಲೆಯ ಕಷಾಯ ಕುಡಿಯಿರಿ: ಅವಧುತ ವಿನಯ್ ಗುರೂಜಿ

ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲೆ ಗೌರಿಗದ್ದೆಯ ಅವಧೂತ ವಿನಯ್ ಗುರೂಜಿ ಕೊರೋನಗೆ ಮದ್ದು ಒಂದನ್ನು ಹೇಳಿದ್ದು, ಪಾರಿಜಾತ ಎಲೆಯ ಕಷಾಯ ಮಾಡಿ ಕುಡಿಯಿರಿ ಎಂದಿದ್ದಾರೆ. ಎಲ್ಲರೂ ಪಾರಿಜಾತ ಎಲೆಯ ಕಷಾಯ ಕುಡಿಯುವಂತೆ ತಮ್ಮ ಭಕ್ತರಿಗೆ ಸಂದೇಶವನ್ನೂ ಅವರು ರವಾನಿಸಿರುವ ಇವರು, ಕಷಾಯ ತಯಾರಿಸುವ ವಿಧಾನವನ್ನೂ ತಿಳಿಸಿದ್ದಾರೆ . ಅವರು ತಿಳಿಸಿರುವ ಪ್ರಕಾರ ಐದು ಪಾರಿಜಾತದ ಎಲೆ , ಕಾಳುಮೆಣಸು , ಶುಂಠಿ , ಲಿಂಬೆಹಣ್ಣಿನ ರಸ ಹಾಕಿ ಕುದಿಸಿ ಕುಡಿದರೆ …

Read More »