Breaking News
Home / 2021 / ಮೇ / 19 (page 4)

Daily Archives: ಮೇ 19, 2021

ಕಾರವಾರ: ದೇವರ ಮುಂದೆ ಮಗುವಿನ ಶವ ಕೊಂಡೊಯ್ದ ಅಜ್ಜಿ ; ಬದುಕಿಸು ಎಂದು ಪ್ರಾರ್ಥಿಸಿದಳು

ಕಾರವಾರ: cವಿನ ಗಂಟಲಲ್ಲಿ ಶೇಂಗಾ ಬೀಜ ಸಿಲುಕಿ ಉಸಿರುಗಟ್ಟಿ ಮೃತಪಟ್ಟ ನಂತರ , ಆತನ ಅಜ್ಜಿ ಗಣಪತಿ ದೇವಸ್ಥಾನಕ್ಕೆ ತೆರಳಿ, ಮಗುವಿನ ಶವವಿಟ್ಟು , ಬದುಕಿಸುವಂತೆ ಪ್ರಾರ್ಥಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ನಡೆದಿದೆ. ಮಂಗಳವಾರ ಯಲ್ಲಾಪುರದ ಗಣಪತಿ ಗಲ್ಲಿಯಲ್ಲಿ ದೇವಸ್ಥಾನದಲ್ಲಿ ಈ ಮನ ಕಲಕುವ ಘಟನೆ ನಡೆಯಿತು. ಮಗು ಸಾವನ್ನಪ್ಪಿದ ತಕ್ಷಣ ದಿಕ್ಕೇ ತೋಚದ ಮಗುವಿನ ಅಜ್ಜಿ, ಸಮೀಪದ ದೇವಸ್ಥಾನಕ್ಕೆ ಮೃತದೇಹವನ್ನು ತೆಗೆದುಕೊಂಡು ಹೋಗಿ , ದೇವಸ್ಥಾನದ …

Read More »

ಗದಗ ಜಿಮ್ಸ್ ಆಸ್ಪತ್ರೆ ಸಿಬ್ಬಂದಿ ಎಡವಟ್ಟಿಗೆ ಮಹಿಳೆ ಬಲಿ; ಸಂಬಂಧಿಕರ ಆರೋಪ

ಗದಗ: ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯೊಬ್ಬರು ಆಸ್ಪತ್ರೆ ಸಿಬ್ಬಂದಿ ಎಡವಟ್ಟಿಗೆ ಬಲಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಉಸಿರಾಟ ಸಮಸ್ಯೆಯಿಂದ ಒದ್ದಾಡುತ್ತಿದ್ದ ಸುಮಿತ್ರಾ ಮನ್ನೂರ ಎಂಬ ಮಹಿಳೆ ಆಕ್ಸಿಜನ್ ಸಿಗದೆ ಮಹಿಳೆ ನರಳಿ ನರಳಿ ಮೃತಪಟ್ಟಿದ್ದಾರೆ ಎಂದು ಮಹಿಳೆ ಸಂಬಂಧಿಕರು ಆರೋಪಿಸುತ್ತಿದ್ದಾರೆ. ಮಹಿಳೆ ಆಕ್ಸಿಜನ್ ಮೇಲೆ ಚಿಕಿತ್ಸೆ ಪಡೆಯುತ್ತಿದ್ದರು. ಆಕ್ಸಿಜನ್ ತೆಗೆದು ಬೇರೆ ಮಷಿನ್ನನ್ನು ಅಳವಡಿಸಲು ಆಸ್ಪತ್ರೆ ಸಿಬ್ಬಂದಿ ಬಂದಿದ್ದರು. ಅಲ್ಟ್ರನೇಟಿವ್ ಆಕ್ಸಿಜನ್ ವ್ಯವಸ್ಥೆ ಮಾಡಿ ಅಂತ ಕುಟುಂಬಸ್ಥರು ಗೋಗರೆದರೂ ಆಸ್ಪತ್ರೆ …

Read More »

ಕೊಪ್ಪಳ ಸಂಪೂರ್ಣ ಲಾಕ್​ಡೌನ್​: ಊರಿಗೆ ತೆರಳಲು ಬಸ್, ಆಟೋಗಳಿಲ್ಲದೆ ಅಜ್ಜಿ ಪರದಾಟ

ಕೊಪ್ಪಳ: ಕೊರೊನಾ ಸೋಂಕನ್ನು ನಿಯಂತ್ರಿಸಲು ಜಿಲ್ಲೆಯಲ್ಲಿ 17 ರಿಂದ 21ರ ವರೆಗೆ ಅಂದರೆ ಐದು ದಿನಗಳ ಕಾಲ ಸಂಪೂರ್ಣ ಲಾಕ್​ಡೌನ್​ ಘೋಷಣೆಯಾಗಿದೆ. ಹೀಗಾಗಿ ಯಾವುದೇ ಆಟೋಗಳು ಜಿಲ್ಲೆಯಲ್ಲಿ ಓಡಾಡುತ್ತಿಲ್ಲ. ಇದರಿಂದ ಅಜ್ಜಿಯೊಬ್ಬರು ಊರಿಗೆ ತೆರಳಲು ಪರದಾಟ ಪಟ್ಟಿದ್ದಾರೆ. ಸಿದ್ದಮ್ಮ ಎಂಬ ವೃದ್ಧೆ ಕೊಪ್ಪಳದಿಂದ ತಳಕಲ್ಗೆ ಹೋಗಬೇಕಿತ್ತು. ಆದರೆ ಊರಿಗೆ ತೆರಳಲು ಬಸ್, ಆಟೋಗಳಿಲ್ಲದೆ ಅಜ್ಜಿಗೆ ದಿಕ್ಕು ತೋಚದಂತಾಗಿತ್ತು. ನಿನ್ನೆ ರಾತ್ರಿ ಅಜ್ಜಿಯ ಪತಿಗೆ ಸೋಂಕು ಕಾಣಿಸಿಕೊಂಡ ಹಿನ್ನೆಲೆ ಗವಿ ಮಠದ …

Read More »

ತಮಿಳು ನಟ ವಿಜಯಕಾಂತ್ ಆಸ್ಪತ್ರೆಗೆ ದಾಖಲು

ಚೆನ್ನೈ: ದೇಸಿಯ ಮುರಪೊಕ್ಕು ದ್ರಾವಿಡ ಕಳಗಂ(ಡಿಎಂಡಿಕೆ) ಸಂಸ್ಥಾಪಕ ಹಾಗೂ ನಟ ವಿಜಯಕಾಂತ್ ಉಸಿರಾಟದ ಸಮಸ್ಯೆಯಿಂದ ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.ಬುಧವಾರ ಮೇ 19 ವಿಜಯಕಾಂತ್‍ರವರಿಗೆ ಉಸಿರಾಟ ಸಮಸ್ಯೆ ಕಾಣಿಸಿಕೊಂಡಿದ್ದು, ಬೆಳಗ್ಗಿನ ಜಾವ ಸುಮಾರು 3 ಗಂಟೆ ಸುಮಾರಿಗೆ ಚೆನ್ನೈನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ಯಲಾಗಿದೆ. ಕಳೆದ ವರ್ಷವು ಅವರು ಹಲವು ಆರೋಗ್ಯ ಸಮಸ್ಯೆಗಳಿಂದ ಹೊಂದಿದ್ದರು. ವೈದ್ಯರ ತಂಡ ಇದೀ ವಿಜಯಕಾಂತ್‍ರವರ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸುತ್ತಿದ್ದಾರೆ. ಅವರ ಪಕ್ಷದ ಸದಸ್ಯರು ವಿಜಯಕಾಂತ್‍ರವರು …

Read More »

ಜ್ಯೂನಿಯರ್ ಆರ್ಟಿಸ್ಟ್ ಗಳನ್ನಿಟ್ಟುಕೊಂಡು ವೇಶ್ಯಾವಾಟಿಕೆ; ಪ್ರೊಡಕ್ಷನ್ ಮ್ಯಾನೇಜರ್ ಬಂಧನ

ಹೈದರಾಬಾದ್​: ಸಿನಿಮಾ ಪ್ರೊಡ್ಯೂಸರ್ ಒಬ್ಬ ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಪರಿಚಯವಿದ್ದ ಜೂನಿಯರ್​ ನಟಿಯನ್ನು ಇಟ್ಟುಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದನೆಂದು ಆತನನ್ನು ಹೈದರಾಬಾದ್​ ನ ಸರೋರ್​ ನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತನಾಗಿರುವ ಸಿನಿಮಾ ಪ್ರೊಡ್ಯೂಸರ್, ಸುಧೀರ್​ (31) ಎಂದು ಗುರುತಿಸಲಾಗಿದೆ. ಈತ ಕರೊನಾ ಲಾಕ್​ಡೌನ್​ ಸಮಯದಲ್ಲಿ ಜಾಲತಾಣದಲ್ಲಿ ಮಹಿಳೆಯರ ಅರೆಬೆತ್ತಲೆ ಫೋಟೋ ಹಾಕಿ ದಂಧೆಗೆ ಯುವಕರನ್ನು ಸೆಳೆಯುತ್ತಿದ್ದ ಎಂಬುದು ಗೊತ್ತಾಗಿದೆ. ಈ ವೇಶ್ಯಾವಾಟಿಕೆ ದಂಧೆ ನಡೆಸಲು ಮಧಪುರ್​ ನ ಅಯ್ಯಪ್ಪ ಸೊಸೈಟಿಯಲ್ಲಿ ಮನೆಯೊಂದನ್ನು …

Read More »

ಪ್ರಶ್ನೆ ಪತ್ರಿಕೆ ಸೋರಿಕೆ ಕಿಂಗ್​ಪಿನ್ ಶಿವಕುಮಾರ್​​ ಕೊರೋನಾಗೆ ಬಲಿ

ತುಮಕೂರು: ವಿವಿಧ ಪಶ್ನೆ ಪತ್ರಿಕೆಗಳ ಸೋರಿಕೆ ಪ್ರಕರಣದ ಪ್ರಮುಖ ಆರೋಪಿ ಶಿವಕುಮಾರ್ ಕೋವಿಡ್‌ನಿಂದ ಮಂಗಳವಾರ ಸಾವನ್ನಪ್ಪಿದ್ದಾನೆ. ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕು ಬಿದರೆಕಾಗ್ಗೆರೆ ಗ್ರಾಮದವರಾಗಿದ್ದು, ಮೇ 16ರಂದು ಕೋವಿಡ್ ಚಿಕಿತ್ಸೆಗಾಗಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದ, ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ. 2011ರಲ್ಲಿ ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಸಂಬಂಧ ಈತನ ವಿರುದ್ಧ ಗುಬ್ಬಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 2012ರಲ್ಲಿ ತುಮಕೂರಿನ ಹೊಸ ಬಡಾವಣೆ ಪೊಲೀಸ್‌ …

Read More »

ಬಾಡಿಗೆ ಮನೆಯಲ್ಲಿ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ 3 ಮಹಿಳೆಯರು, ಮೂವರು ಗ್ರಾಹಕರು ಅರೆಸ್ಟ್

ನೋಯ್ಡಾ: ಗ್ರೇಟರ್ ನೋಯ್ಡಾದಲ್ಲಿ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಮೂವರು ಮಹಿಳೆಯರು ಸೇರಿದಂತೆ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಹಂತ 3 ಪೊಲೀಸ್ ಠಾಣೆ ಪ್ರದೇಶದ ಮನೆಯೊಂದರಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಬಂಧಿತ ಮಹಿಳೆಯರಲ್ಲಿ ಒಬ್ಬಳು ಬಾಡಿಗೆದಾರಳಾಗಿ ವಾಸಿಸುತ್ತಿದ್ದಾಳೆ. ಆಕೆ ಮೊಬೈಲ್ ಮೂಲಕ ಗ್ರಾಹಕರನ್ನು ಸಂಪರ್ಕಿಸಿ ಮನೆಗೆ ಆಹ್ವಾನಿಸುತ್ತಿದ್ದಳು. ಬೇರೆ ಮಹಿಳೆಯರನ್ನು ಬಳಸಿಕೊಂಡು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದಳು. ಈ ಬಗ್ಗೆ ಮಾಹಿತಿ ಪಡೆದು ಕಾರ್ಯಾಚರಣೆ ನಡೆಸಲಾಗಿದೆ. …

Read More »

ವೈದ್ಯರ ಮೇಲೆ ಹಲ್ಲೆ ಆರೋಪ: ಇನ್ಸ್​​​ಪೆಕ್ಟರ್​​ ಕ್ಯಾತ್ಯಾಯಿನಿ ಅಮಾನತು​

ಬೆಂಗಳೂರು: ವೈದ್ಯರ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ಸಂಜಯನಗರ ಪೊಲೀಸ್​ ಠಾಣೆ ಇನ್ಸ್​​​ಪೆಕ್ಟರ್​​ ಕ್ಯಾತ್ಯಾಯಿನಿ ಸೇರಿ ಮೂರು ಜನ ಕ್ರೈಂ ಸಿಬ್ಬಂದಿಯನ್ನು ಕರ್ತವ್ಯದಿಂದ ಅಮಾನತು ಮಾಡಿ ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಆದೇಶ ಹೊರಡಿಸಿದ್ದಾರೆ. ಸಂಜಯನಗರ ಪೊಲೀಸರ ವಿರುದ್ಧ ಅಕ್ರಮ ರೆಮ್ಡಿಸಿವರ್​ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯ ನಾಗರಾಜ್​ ಅವರನ್ನು ಠಾಣೆಗೆ ಕರೆಸಿ ಹಲ್ಲೆ ಮಾಡಿದ್ದಲ್ಲದೇ ಐದೂವರೆ ಲಕ್ಷ ಹಣ ಸುಲಿಗೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿ …

Read More »

ನಕಲಿ R,T,P,C,R,ವರದಿಯನ್ನು ನೀಡುತ್ತಿದ್ದ ಮೂವರ ಬಂಧನ

ನವದೆಹಲಿ, : ಜನರಿಗೆ ನಕಲಿ ಆರ್‌ಟಿ-ಪಿಸಿಆರ್ ವರದಿಯನ್ನು ನೀಡಿ ವಂಚಿಸುತ್ತಿದ್ದ ತಂಡವನ್ನು ದೆಹಲಿ ಪೊಲೀಸರು ಭೇದಿಸಿದ್ದಾರೆ. ಖಾಸಗಿ ಟೆಸ್ಟಿಂಗ್ ಲ್ಯಾಬ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮೂವರನ್ನು ಬಂಧಿಸಲಾಗಿದೆ ಎಂದು ಮಾಹಿತಿಯನ್ನು ನೀಡಿದ್ದಾರೆ. ಬಂಧಿತರಿಂದ ಒಂದು ಲ್ಯಾಪ್‌ಟಾಪ್, ನಕಲಿ ಬಿಲ್‌ಗಳು ಮತ್ತು ಎರಡು ಮೊಬೈಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಸನ್ನಿ ಹಾಗೂ ಆತನ ಇಬ್ಬರು ಸಹಾಯಕರಾದ ಜೀತೇಂದ್ರ ಸಾಹು ಮತ್ತು ಸುನಿಲ್ ಕುಮಾರ್ ಎಂಬವರು ಬಂಧಿತ ಆರೋಪಿಗಳು ಎಂದು ಪೊಲೀಸರು ವಿವರಗಳನ್ನು ನೀಡಿದ್ದಾರೆ. ಪೊಲೀಸರು …

Read More »

2ನೇ ಅಲೆ ಹೊಡೆತ: ಕೋವಿಡ್ ನಿಂದ 300ಕ್ಕೂ ಅಧಿಕ ಪತ್ರಕರ್ತರು ನಿಧನ

ನವದೆಹಲಿ: ಕಳೆದ ವರ್ಷ ಕೋವಿಡ್ ಮೊದಲ ಅಲೆಯಲ್ಲಿ ಫ್ರಂಟ್ ಲೈನ್ ವರ್ಕರ್ಸ್ ಗಳಾದ ವೈದ್ಯರು, ಆರೋಗ್ಯ ಕಾರ್ಯಕರ್ತರು, ಪೊಲೀಸರು ಸೋಂಕಿನಿಂದ ಪ್ರಾಣ ಕಳೆದುಕೊಂಡಿದ್ದರು. ನಂತರ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಲಸಿಕೆ ವಿತರಣೆಯಲ್ಲಿ ಆದ್ಯತೆ ನೀಡಿದ್ದರು. ಇದರಿಂದ ಎರಡನೇ ಅಲೆಯಲ್ಲಿ ಪ್ರಾಣಹಾನಿ ಪ್ರಮಾಣ ಕಡಿಮೆ ಮಾಡುವ ಉದ್ದೇಶ ಹೊಂದಲಾಗಿತ್ತು. ಆದರೆ ಪತ್ರಕರ್ತರು ಮಾತ್ರ ಈ ವಿಚಾರದಲ್ಲಿ ದುರಾದೃಷ್ಟವಂತರಾಗಿದ್ದರು!   ಕೋವಿಡ್ ತೀವ್ರವಾಗಿ ಹರಡುತ್ತಿದ್ದ ಸಂದರ್ಭದಲ್ಲಿಯೂ ಪತ್ರಕರ್ತರು ನಿರಂತರವಾಗಿ ಫೀಲ್ಡ್ ನಲ್ಲಿದ್ದು …

Read More »