Breaking News
Home / 2021 / ಮೇ / 17 (page 5)

Daily Archives: ಮೇ 17, 2021

ಖಾಕಿ ಪಡೆಯಿಂದ ಹಸಿದವರಿಗೆ ಊಟ, ಗದಗದಲ್ಲಿ ಅಲೆಮಾರಿಗಳ ಪಾಲಿಗೆ ಇವರೇ ಅನ್ನದಾತರು !

ಗದಗ: ಅವರೆಲ್ಲಾ ಕೊರೊನಾ ವಾರಿಯರ್ಸಗಳು. ಸರಕಾರ ಜಾರಿ ಮಾಡಿರೋ ಲಾಕ್ಡೌನ್ ಯಶಸ್ಸು ಕಾಣ್ತಾಯಿದ್ರೆ ಇವರೇ ಕೇಂದ್ರ ಬಿಂದು. ತಮ್ಮ ಪ್ರಾಣವನ್ನೂ ಲೆಕ್ಕಿಸದೇ ಇತ್ತ ತಮ್ಮ ಹಸಿವನ್ನೂ ಲೆಕ್ಕಿಸದೇ ಜನರಿಗೆ ರಕ್ಷಕರಾದವರು. ಆದ್ರೆ ಅದೇ ಆರಕ್ಷಕರೀಗ ಇಲ್ಲಿ ಅನ್ನದಾತರೂ ಆಗಿದ್ದಾರೆ. ಲಾಠಿ ಹಿಡಿದ ಕೈಗಳು ಅನ್ನದ ಕೈಯನ್ನೂ ಹಿಡಿದಿವೆ. ಕೊರೊನಾ ಎಲ್ಲರ ಬದುಕನ್ನು ನುಂಗಿ ನೀರು ಕುಡಿತಿದೆ. ಅದರಲ್ಲೂ ಬಡ ಹಾಗೂ ನಿರ್ಗತಿಕರ ಪಾಡಂತೂ ಹೇಳತೀರದಾಗಿದೆ. ಅಲೆಮಾರಿ ಕುಟುಂಬಗಳ ಬದುಕು‌ ದುಸ್ಥರವಾಗಿದೆ. …

Read More »

1,418 ಪೊಲೀಸ ಸಿಬ್ಬಂದಿಗಳಿಗೆ ವಕ್ಕರಿಸಿದ ವೈರಸ್

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಅಟ್ಟಹಾಸಕ್ಕೆ ಖಾಕಿ ಪಡೆ ನಲುಗುತ್ತಿದೆ. ಬರೋಬ್ಬರಿ 1418 ಪೊಲೀಸ್ ಸಿಬ್ಬಂದಿಗಳಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಕೊರೊನಾ ಮಾಹಾಮಾರಿ ಪೊಲೀಸ್ ಇಲಾಖೆಯನ್ನು ಇನ್ನಿಲ್ಲದಂತೆ ಕಾಡುತ್ತಿದ್ದು, 13 ಪೊಲೀಸರು ಸೋಂಕಿಗೆ ಬಲಿಯಾಗಿದ್ದಾರೆ. 725 ಪೊಲೀಸರು ಹೋಂ ಐಸೋಲೇಟ್ ಆಗಿದ್ದಾರೆ. ಸಿಲಿಕಾನ್ ಸಿಟಿಯ 655 ಪೊಲೀಸರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಕೊರೊನಾ ವಾರಿಯರ್ಸ್ ಆಗಿರುವ ಪೊಲೀಸರೇ ಇದೀಗ ವೈರಸ್ ಗೆ ತುತ್ತಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

Read More »

ನಾವ್ ಕೊರೋನ ಹೋದ್ರೂ ಆಸ್ಪತ್ರೆ ಬಿಟ್ ಹೋಗಲ್ಲ!’

ಕೊರೋನಾ ಪರಿಸ್ಥಿತಿ ಹೇಗಾಗಿದೆ ಅಂದ್ರೆ ರೋಗಿಗಳು ಗುಣಮುಖರಾದ್ರು ಆಸ್ಪತ್ರೆ ಇಂದ ಹೋಗೋ ಮನಸ್ಸು ಮಾಡ್ತ ಇಲ್ಲಾ. ಇಂತಹ ವಿಚಿತ್ರ ಘಟನೆ ಬಾಗಲಕೋಟೆಯ ಆಸ್ಪತ್ರೆಗಳಲ್ಲಿ ನಡೆದಿದೆ. ಇಲ್ಲಿ ಒಂದುಕಡೆ ಕೊರೋನಾ ರೋಗಿಗಳ ಸಂಖ್ಯೆ ಹೆಚ್ಚಾಗ್ತ ಇದ್ರೆ , ಚಿಕಿತ್ಸೆ ಪಡೆದು ಗುಣ ಮುಖರಾದ್ರು ಮನೆಗೆ ತೆರಳದ ರೋಗಿಗಳು ಇನ್ನೊಂದು ಕಡೆ. ಯಾಕೆ ಈ ರೋಗಿಗಳು ಆಸ್ಪತ್ರೆ ಬಿಟ್ಟು ಮನೆಗೆ ಹೋಗಲು ಕೇಳಲ್ಲ ಅಂತ ವಿಚಾರಿಸಿದ ಜಿಲ್ಲಾಡಳಿತಕ್ಕೆ, ರೋಗಿಗಳ ಉತ್ತರ ಕೇಳಿ ದಂಗಾಗಿದೆ. …

Read More »

ರಾಯಚೂರು ಹಾಗೂ ಹುಬ್ಬಳ್ಳಿಯಲ್ಲಿ ಕಂಡುಬಂದ ಬ್ಲ್ಯಾಕ್ ಫಂಗಸ್ ಕಾಯಿಲೆ

ರಾಯಚೂರು: ನಿರಂತರ ಆಕ್ಸಿಜನ್ ಬಳಕೆ ಜತೆಗೆ ಇನ್ನಿತರ ಕಾರಣಗಳಿಂದ ಬರುವ ಅಪಾಯಕಾರಿ ಬ್ಲ್ಯಾಕ್ ಫಂಗಸ್ ಕಾಯಿಲೆ ಜಿಲ್ಲೆಯ ಇದೀಗ ರಾಜ್ಯದ ಇನ್ನು ಹಲವು ಕಡೆಗಳಲ್ಲಿ ಕಂಡುಬರುತ್ತಿದ್ದು, ಕರ್ನಾಟಕದಲ್ಲಿಯೂ ಇದು ವೇಗವಾಗಿ ಹಬ್ಬುತ್ತಿರುವುದು ತಲೆನೋವಾಗಿ ಪರಿಣಮಿಸಿದೆ. ಇದುವರೆಗೂ ಬೆಂಗಳೂರಿನಲ್ಲಿ ಮಾತ್ರ ಕಾಣಿಸಿಕೊಂಡಿದ್ದ ಈ ಕಾಯಿಲೆ ರಾಯಚೂರು ಹಾಗೂ ಹುಬ್ಬಳ್ಳಿಯಲ್ಲಿ ಕಂಡುಬಂದಿದೆ. ರಾಯಚೂರಿನಲ್ಲಿ ನಾಲ್ವರಲ್ಲಿ ಕಾಣಿಸಿಕೊಂಡಿದ್ದು, ಒಪೆಕ್ ಕೋವಿಡ್ ಕೇಂದ್ರದಲ್ಲಿ ದಾಖಲಾದ ಮೂವರು ಹಾಗೂ ಖಾಸಗಿ ಆಸ್ಪತ್ರೆಯ ಒಬ್ಬ ರೋಗಿಯಲ್ಲಿ ಈ ಕಾಯಿಲೆ …

Read More »

ಮಾಸ್ಕ್‌ ಹಾಕದೆ ರೋಗಿಗಳಿಗೆ ಚಿಕಿತ್ಸೆ! ಧೈರ್ಯ ತುಂಬುವ ಯತ್ನ ಎಂದ ಡಾ. ರಾಜು

ಬೆಂಗಳೂರು: ನಗರದ ಮೂಡಲಪಾಳ್ಯ ವೃತ್ತದಲ್ಲಿರುವ ಸಾಗರ್‌ ಕ್ಲಿನಿಕ್‌ನಲ್ಲಿ ವೈದ್ಯರು, ಶುಶ್ರೂಷಕರು ಸೇರಿದಂತೆ ಯಾವುದೇ ವೈದ್ಯಕೀಯ ಸಿಬ್ಬಂದಿ ಮಾಸ್ಕ್‌ ಹಾಕದೆ, ಸ್ಯಾನಿಟೈಸರ್ ಬಳಸದೆ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಇದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ನಾಗರಿಕರು, ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ‘ರೋಗಿಗಳಿಗೆ ಧೈರ್ಯ ತುಂಬಬೇಕು ಎಂದು ಸಾಗರ್ ಕ್ಲಿನಿಕ್‌ನ ಡಾ. ರಾಜು ಕೃಷ್ಣಮೂರ್ತಿ ಮತ್ತು ಅವರ ಸಿಬ್ಬಂದಿ ಮಾಸ್ಕ್‌ ಹಾಕದೆ, ಪಿಪಿಇ ಕಿಟ್ ಧರಿಸದೆ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. …

Read More »

ಅನುಕಂಪದ ಆಧಾರದ ಮೇಲಿನ ಕೆಲಸಕ್ಕೆ ಕುತ್ತು; ನ್ಯಾಯಕ್ಕೆ ಮೊರೆಯಿಟ್ಟ ಲೀಲಾವತಿ

ಚಿತ್ರದುರ್ಗ, (ಮೇ.16) : ಅನುಕಂಪದ ಆಧಾರದ ಮೇಲೆ ಪಡೆದ ಗ್ರಂಥಪಾಲಕ ಹುದ್ದೆಯಲ್ಲಿ ನಾನು ಮುಂದುವರಿಯಲು ನನಗೆ ನ್ಯಾಯ ಕೊಡಿಸಿ ಎಂದು ಲೀಲಾವತಿ ಕೋರಿದ್ದಾರೆ. ಹಿರಿಯೂರು ತಾಲ್ಲೂಕಿನ ಗೌಡನಹಳ್ಳಿ ಗ್ರಾಮದಲ್ಲಿ ಬಿ.ಬಸವರಾಜ್ ಎಂಬುವ ವ್ಯಕ್ತಿ 2007 ರಿಂದ ಗ್ರಂಥಪಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದರು. ಆದರೆ 2020 ಮಾರ್ಚ್ 14 ರಂದು ಅವರು ಆಕಸ್ಮಿಕವಾಗಿ ಮೃತಪಟ್ಟರು. ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹಾಗೂ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಅವರ ಶಿಫಾರಸ್ಸಿನ ಆಧಾರದ ಮೇಲೆ ಮೃತನ ಪತ್ನಿ …

Read More »

ಅಕ್ಕ ತಂಗಿಯನ್ನು ಮದುವೆ ಆಗಿದ್ದಾತನ ಮೇಲೆ ಪೋಲೀಸ್‌ ಮೊಕದ್ದಮೆ

ಕೋಲಾರ, ; ಸುಪ್ರಿಯಾ ಮತ್ತು ಲಲಿತಾರನ್ನು ವಿವಾಹವಾಗಿದ್ದ ಕೋಲಾರದ ಉಮಾಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ವಿವಾಹಕ್ಕೆ ಸಂಬಂಧಿಸಿದಂತೆ ಒಟ್ಟು 7 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ವೇಗಮಡುಗು ಉಮಾಪತಿ ಸುಪ್ರಿಯಾ ಮತ್ತು ಲಲತಾರನ್ನು 7/5/2021ರಂದು ಒಂದೇ ಮುಹೂರ್ತದಲ್ಲಿ ವಿವಾಹವಾಗಿದ್ದರು. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅಪ್ರಾಪ್ತ ಯುವತಿಯನ್ನು ವಿವಾಹವಾದ ಪ್ರಕರಣದಲ್ಲಿ ಮದುಮಗನನ್ನು ಪೊಲೀಸರು ಬಂಧಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳು ವೈರಲ್ ಆಗುತ್ತಿದ್ದಂತೆ ಅನುಮಾನಗೊಂಡ …

Read More »