Breaking News
Home / 2021 / ಮೇ / 05 (page 3)

Daily Archives: ಮೇ 5, 2021

ಬೆಡ್ ಬ್ಲಾಕಿಂಗ್ ದಂಧೆ; ಇಬ್ಬರು ವೈದ್ಯರು ಸೇರಿ 8 ಆರೋಪಿಗಳು ಸಿಸಿಬಿ ವಶಕ್ಕೆ

ಬೆಂಗಳೂರು: ಬೆಡ್ ಬ್ಲಾಕಿಂಗ್ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಇಬ್ಬರು ವೈದ್ಯರು ಸೇರಿದಂತೆ 8 ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಬಿಬಿಎಂಪಿ ಕೋವಿಡ್ ವಾರ್ ರೂಮ್ ಉಸ್ತುವಾರಿ ಡಾ.ರೆಹಾನ್ ಸೇರಿದಂತೆ 8 ಆರೋಪಿಗಳನ್ನು ಜಯನಗರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ನಿನ್ನೆ ರಾತ್ರಿಯೇ ವಾರ್ ರೂಮ್ ಮೇಲೆ ದಾಳಿ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾಗಿ ತಿಳಿದುಬಂದಿದೆ.   ಆರೋಪಿಗಳು ಕೊರೊನಾ ಸೋಂಕಿತರಿಗೆ 3 ಬೆಡ್ ಕೊಡಿಸಿ 1.7 ಲಕ್ಷ …

Read More »

ಬೆಡ್ ಬ್ಲಾಕಿಂಗ್ ದಂಧೆ‌ ಪ್ರಕರಣ: ಸಿಸಿಬಿಗೆ ವರ್ಗಾಯಿಸಿ ನಗರ ಪೊಲೀಸ್ ಆಯುಕ್ತ ಆದೇಶ

ಬೆಂಗಳೂರು: ಬೆಂಗಳೂರು ನಗರ ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಬೆಡ್ ಬ್ಲಾಕಿಂಗ್ ದಂಧೆ ಬಯಲು ಬೆನ್ನಲೇ‌ ಇದೇ ಕೃತ್ಯದಲ್ಲಿ ತೊಡಗಿದ್ದ ಮಹಿಳೆ ಸೇರಿ ಇಬ್ಬರನ್ನು ಜಯನಗರ ಪೊಲೀಸರು ಬಂಧಿಸಿದ್ದ ಪ್ರಕರಣವನ್ನು ಸಿಸಿಬಿಗೆ ವರ್ಗಾಯಿಸಿ ನಗರ ಪೊಲೀಸ್ ಆಯುಕ್ತ ಕಮಲ್‌ ಪಂತ್ ಆದೇಶ ಹೊರಡಿಸಿದ್ದಾರೆ. ಕೊರೊನಾ‌ ಸೋಂಕು ಗುಣಲಕ್ಷಣ ಇಲ್ಲದಿದ್ದರೂ ಪಾಸಿಟಿವ್ ಎಂದು ಕಂಡುಬಂದು ಹೋಮ್ ಐಸೋಲೇಷನ್​​ನಲ್ಲಿದ್ದ ಸೋಂಕಿತರ ಹೆಸರಿನಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಬೆಡ್ ಬ್ಲಾಕ್ ವಂಚನೆ ಜಾಲವನ್ನು …

Read More »

ಮೋದಿ ಯಾವ ಮಾರ್ಗದರ್ಶನ ನೀಡುತ್ತಾರೋ ಅದನ್ನು ಪಾಲಿಸಲಾಗುತ್ತದೆ. ಅವರು ಹೇಳಿದಂತೆ ಲಾಕ್ ಡೌನ್ ಬಗ್ಗೆ ತೀರ್ಮಾನ :B.S.Y.

ಮಿತಿ ಮೀರುತ್ತಿರುವ ಕೊರೊನಾ ಸೋಂಕು ನಿಯಂತ್ರಣಕ್ಕೆ ಮತ್ತೆ ಲಾಕ್ ದೌನ್ ಜಾರಿಯಾಗುವ ಸಾಧ್ಯತೆ ಇದ್ದು, ಇಂದು ಸಂಜೆ ನಿರ್ಧಾರ ಪ್ರಕಟವಾಗಲಿದೆ. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಸಿಎಂ ಬಿ.ಎಸ್.ಯಡಿಯೂರಪ್ಪ, ಪ್ರಧಾನಿ ಸೂಚನೆಗೆ ಕಾಯುತ್ತಿರುವುದಾಗಿ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಡಿದ ಸಿಎಂ, ಕೋವಿಡ್ ನಿಯಂತ್ರಣಕ್ಕೆ ಪ್ರಧಾನಿ ಮೋದಿ ಏನು ನಿರ್ದೇಶನ ನೀಡುತ್ತಾರೆಯೋ ಅದನ್ನು ಪಾಲಿಸುವುದು ನಮ್ಮ ಜವಾಬ್ದಾರಿ. ಸುಪ್ರೀಂ ಕೋರ್ಟ್ ಸಲಹೆ ಸೇರಿದಂತೆ ಎಲ್ಲವನ್ನೂ ಇಂದು ನಡೆಯಲಿರುವ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ …

Read More »

ಜಿಲ್ಲೆಗಳಲ್ಲಿ ಹೇಗಿದೆ ಆಮ್ಲಜನಕ ಸ್ಥಿತಿ ಗತಿ?

ಕೋವಿಡ್ ಉಲ್ಬಣಗೊಂಡ ರೋಗಿಗಳಿಗೆ ಪ್ರಾಣವಾಯು ಆಮ್ಲಜನಕದ ಪೂರೈಕೆ ಅತ್ಯಗತ್ಯ. ಆದರೆ ಈಗ ಪ್ರಾಣವಾಯು ತಯಾರಿಸುವುದು ಮತ್ತು ಪೂರೈಕೆಯದ್ದೇ ಚಿಂತೆ. ಚಾಮರಾಜನಗರ ದುರಂತವಂತೂ ಆಡಳಿತ ಯಂತ್ರವನ್ನು ಕಣ್ತೆರೆಯುವಂತೆ ಮಾಡಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾವಾರು ಪರಿಸ್ಥಿತಿ ಹೇಗಿದೆ ಎಂಬ ಬಗ್ಗೆ ಉದಯವಾಣಿ ರಿಯಾಲಿಟಿ ಚೆಕ್‌.. ಹೆಚ್ಚುವರಿ ಬೆಡ್‌ಗೆ ಪ್ರಯತ್ನ; ಬೆಂಗಳೂರು ಗ್ರಾಮಾಂತರ : ಜಿಲ್ಲೆಯಲ್ಲಿ ಹೆಚ್ಚಾಗುತ್ತಿರುವ ಕೊರೊನಾ ಪ್ರಕರಣಗಳ ಮಧ್ಯೆ ಐಸಿಯು, ಆಕ್ಸಿಜನ್‌ ಬೆಡ್‌ಗಳಿಗೆ ಖಾಸಗಿ ಆಸ್ಪತ್ರೆ ಮತ್ತು ಸರಕಾರಿ ಆಸ್ಪತ್ರೆಗಳಲ್ಲಿ ಹಾಹಾಕಾರ …

Read More »

ದೆಹಲಿಯ ಭಾರತೀಯ ಸೇನಾ ಆಸ್ಪತ್ರೆಯಲ್ಲಿ ದೆಹಲಿ ಸರ್ಕಾರವು ಆಕ್ಸಿಜನ್ ಸರಬರಾಜು ಗಣನೀಯವಾಗಿ ಕಡಿತ

ನವ ದೆಹಲಿ : ದೆಹಲಿಯ ಭಾರತೀಯ ಸೇನಾ ಆಸ್ಪತ್ರೆಯಲ್ಲಿ ದೆಹಲಿ ಸರ್ಕಾರವು ಆಕ್ಸಿಜನ್ ಸರಬರಾಜು ಗಣನೀಯವಾಗಿ ಕಡಿತಗೊಳಿಸಿದ ಹಿನ್ನೆಲೆಯಲ್ಲಿ ಮೆಡಿಕಲ್ ಆಕ್ಸಿಜನ್ ಕೊರತೆಯನ್ನು ಎದುರಿಸುತ್ತಿದೆ ಎಂದು ಮಿಲಿಟರಿ ಮೂಲಗಳು ತಿಳಿಸಿವೆ. ಈ ಬಗ್ಗೆ ಮಾಹಿತಿ ಹಂಚಿಕೊಂಡ ಆಸ್ಪತ್ರೆಗೆ ಸಂಬಂಧಿಸಿದ ಅಧಿಕಾರಿಯೊಬ್ಬರು, ಸದ್ಯದ ಮಟ್ಟಿಗೆ ಆಕ್ಸಿಜನ್ ಕೊರತೆಯಿಲ್ಲದಿದ್ದರೂ, ನಿತ್ಯ ಕಳಿಸುತ್ತಿರುವ ಆಕ್ಸಿಜನ್ ಪ್ರಮಾಣವನ್ನು ಕಡಿತಗೊಳಿಸಿರುವುದರಿಂದ ಮುಂದೆ ಕೋವಿಡ್ 19 ರೋಗಿಗಳ ಚಿಕಿತ್ಸೆಯಲ್ಲಿ ಗಂಭೀರ ಸಮಸ್ಯೆಗಳು ಉಂಟಾಗಬಹುದು ಎಂದು ಹೇಳಿದ್ದಾರೆ. 450 ಹಾಸಿಗೆಗಳ …

Read More »

ವಿದ್ಯಾರ್ಥಿನಿ ಸಾವಿಗೆ ಬೆಡ್‌ ಸಿಗದಿರುವುದೇ ಕಾರಣ: ಆರೋಪ

ದಾವಣಗೆರೆ: ಭಾರತ್‌ ಕಾಲೊನಿಯ 17 ವರ್ಷದ ಬಾಲಕಿ ಮಂಗಳವಾರ ಮೃತಪಟ್ಟಿದ್ದಾಳೆ. ಎಲ್ಲ ಆಸ್ಪತ್ರೆಗಳಿಗೆ ಅಲೆದಾಟ ನಡೆಸಿದರೂ ಬೆಡ್‌ ಸಿಗದೇ, ಸಕಾಲದಲ್ಲಿ ಚಿಕಿತ್ಸೆ ಸಿಗದೇ ಇದ್ದಿದ್ದರಿಂದ ಈ ಸಾವು ಉಂಟಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ. ನಗರದ ಭಾರತ್‌ ಕಾಲೊನಿಯ 12ನೇ ಕ್ರಾಸ್‌ ನಿವಾಸಿ ಮಂಜಪ್ಪ-ವೇಡಿಯಮ್ಮ ದಂಪತಿಯ ಮಗಳು ಸಂಗೀತ ಮೃತಪಟ್ಟವಳು. ಸಂಗೀತಾಳಿಗೆ ಸೋಮವಾರ ರಾತ್ರಿ ಎದೆನೋವು ಕಾಣಿಸಿಕೊಂಡಿತ್ತು. ಸ್ಥಳೀಯ ಕ್ಲಿನಿಕ್‌ನಲ್ಲಿ ಗ್ಲುಕೋಸ್‌ ಕೊಡಿಸಿ ಚಿಕಿತ್ಸೆಗಾಗಿ ವಿವಿಧ ಆಸ್ಪತ್ರೆಗೆ ಅಲೆದಾಡಿದ್ದಾರೆ. ಎಲ್ಲಿಯೂ ಬೆಡ್‌ …

Read More »

ಐಸಿಯುನಲ್ಲಿ ವಿದ್ಯುತ್ ಸಂಪರ್ಕ ಕಡಿತ: ಮಂಡ್ಯದಲ್ಲಿ ಕೋವಿಡ್ ಸೋಂಕಿತ ಯುವಕ ಸಾವು

ಮಂಡ್ಯ: ಐಸಿಯುನಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡ ಪರಿಣಾಮ ಕೋವಿಡ್ ಸೋಂಕಿತ ಯುವಕನೊಬ್ಬ ಮೃತಪಟ್ಟಿರುವ ಘಟನೆ ನಗರದ ಜಿಲ್ಲಾಸ್ಪತ್ರೆಯಲ್ಲಿ ಮಂಗಳವಾರ ನಡೆದಿದೆ. ಇಂಡುವಾಳು ಗ್ರಾಮದ ಸುನೀಲ್(29) ಮೃತಪಟ್ಟ ಯುವಕ. ಈತನಿಗೆ 14 ದಿನದ ಹಿಂದೆ ಸೋಂಕು ದೃಢಪಟ್ಟಿತ್ತು. ಮೊದಲ ಮೂರು ದಿನ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದನು. ಮನೆಗೆ ಬಂದ ಎರಡು ದಿನದಲ್ಲಿ ಉಸಿರಾಟ ಸಮಸ್ಯೆ ಕಾಣಿಸಿಕೊಂಡಿದೆ. ತಕ್ಷಣ ಮಿಮ್ಸ್ ಆಸ್ಪತ್ರೆಯ ಐಸಿಯುನಲ್ಲಿ ವೆಂಟಿವೇಟರ್ ವ್ಯವಸ್ಥೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. …

Read More »

ಬೆಡ್​ ಬ್ಲಾಕಿಂಗ್ ದಂಧೆ ನಡೆಸುತ್ತಿದ್ದ ಇಬ್ಬರ ಬಂಧನ; ಸಂಸದ-ಶಾಸಕರು ಪ್ರಕರಣ ಬಯಲಿಗೆಳೆದ ಬೆನ್ನಿಗೇ ಎಫ್​ಐಆರ್

ಬೆಂಗಳೂರು: ರಾಜ್ಯದ ಒಟ್ಟಾರೆ ಸೋಂಕಿನ ಪೈಕಿ ಅತಿಹೆಚ್ಚು ರಾಜ್ಯದ ರಾಜಧಾನಿಯಲ್ಲೇ ಇದ್ದು, ಸೋಂಕಿತರು ಸರಿಯಾದ ಸಮಯಕ್ಕೆ ಹಾಸಿಗೆ, ಐಸಿಯು, ಆಕ್ಸಿಜನ್ ಸಿಗದೆ ಒದ್ದಾಡುತ್ತಿದ್ದರೆ ಒಂದಷ್ಟು ಮಂದಿ ಇಂಥ ಸಂದರ್ಭದಲ್ಲೂ ಬೆಡ್ ಬ್ಲಾಕಿಂಗ್ ಮಾಡಿಸಿ ಹಣ ಮಾಡಿಕೊಳ್ಳುತ್ತಿದ್ದಾರೆ. ಅಂಥ ಪ್ರಕರಣವನ್ನು ಸಂಸದ-ಶಾಸಕರು ಜತೆಯಾಗಿ ಬಯಲಿಗೆಳೆದ ಬೆನ್ನಿಗೇ ಇಬ್ಬರು ಆರೋಪಿಗಳ ಬಂಧನವಾಗಿದೆ. ಬೆಡ್​ ಬ್ಲಾಕಿಂಗ್ ದಂಧೆಗೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರು ರೋಹಿತ್ ಮತ್ತು ನೇತ್ರಾ ಎಂಬಿಬ್ಬರು ಏಜೆಂಟ್​ಗಳನ್ನು ಬಂಧಿಸಿದ್ದಾರೆ. ಬೆಡ್​ ಬ್ಲಾಕಿಂಗ್ ಬಗ್ಗೆ …

Read More »

ಕೋವಿಡ್ ವಾರ್​ ರೂಮ್​ಗೆ ಒಂದೇ ಸಮುದಾಯದವರೇಕೆ?: ಸಿಬ್ಬಂದಿ ಪಟ್ಟಿ ನೋಡಿ ತೇಜಸ್ವಿ ಸೂರ್ಯ ಫುಲ್ ಗರಂ

ಬೆಂಗಳೂರು: ರಾಜಧಾನಿಯಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಬೆಡ್ ಬ್ಲಾಕಿಂಗ್ ದಂಧೆಯನ್ನು ಬಯಲಿಗೆಳೆದ ಸಂಸದ-ಶಾಸಕರು ಆ ನಂತರ ಕೋವಿಡ್​ ವಾರ್​ ರೂಮ್​ಗೆ ನೇಮಿಸಲಾಗಿರುವ ಸಿಬ್ಬಂದಿಯ ಪಟ್ಟಿ ನೋಡಿ ಕೆಂಡಾಮಂಡಲವಾಗಿದ್ದಾರೆ. ಅವರನ್ನೆಲ್ಲ ನೇಮಿಸಿದ್ದು ಯಾರು, ಹೇಗೆ ನೇಮಿಸಿಕೊಳ್ಳಲಾಗಿದೆ ಎಂದು ಹೆಲ್ಪ್​ಲೈನ್ ಉಸ್ತುವಾರಿಗಿದ್ದವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕೋವಿಡ್ ವಾರ್ ರೂಮ್​ಗೆ ನೇಮಿಸಲ್ಪಟ್ಟಿರುವ 17 ಮಂದಿಯ ಪಟ್ಟಿಯಲ್ಲಿದ್ದ ಹೆಸರುಗಳನ್ನು ಸಂಸದ ತೇಜಸ್ವಿ ಸೂರ್ಯ ಓದಿದ್ದಾರೆ. ಆ ಪಟ್ಟಿಯಲ್ಲಿ ಇದ್ದ ಹೆಸರುಗಳನ್ನು ಓದಿದ ತೇಜಸ್ವಿ ಸೂರ್ಯ, ಅಲ್ಲಿ ಬರೀ …

Read More »

ಹುಬ್ಬಳ್ಳಿಯಲ್ಲಿ ಐವರು ಕೋವಿಡ್ ಸೋಂಕಿತರ ಸಾವು ! ದುರಂತಕ್ಕೆ ಆಕ್ಸಿಜನ್ ಕೊರತೆ ಆರೋಪ

ಹುಬ್ಬಳ್ಳಿ: ಇಲ್ಲಿನ ಗೋಕುಲ ರಸ್ತೆಯ ಲೈಫ್ ಲೈನ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಐವರು ಕೋವಿಡ್ ಸೋಂಕಿತರು ಚಿಕಿತ್ಸೆ ಫಲಿಸದೆ ಮಂಗಳವಾರ ಸಂಜೆ ಮೃತಪಟ್ಟಿದ್ದಾರೆ. ಮೃತರ ಕುಟುಂದವರು ಆಕ್ಸಿಜನ್ ಕೊರತೆ ಕಾರಣ ಎಂದು ಆರೋಪಿಸಿದ್ದಾರೆ. ಆದರೆ, ಆಸ್ಪತ್ರೆ ಮೂಲಗಳು ಇದನ್ನು ನಿರಾಕರಿಸಿವೆ. ಜಿಲ್ಲಾ ಆರೋಗ್ಯಾಧಿಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಘಟನೆ ಕುರಿತು ಪರಿಶೀಲಿಸಿದರು. ಮೃತರ ಕುಟುಂಬದವರು ಆಕ್ಸಿಜನ್ ಕೊರತೆಯಿಂದಲೇ ಮೃತಪಟ್ಟಿದ್ದಾರೆಂದು ಆರೋಪಿಸಿದರು. ಆದರೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಯಶವಂತ …

Read More »