Breaking News
Home / 2021 / ಏಪ್ರಿಲ್ (page 68)

Monthly Archives: ಏಪ್ರಿಲ್ 2021

ಎಬಿಡಿ ಸ್ಫೋಟಕ ಆಟ – ಕೊನೆಯ ಎಸೆತದಲ್ಲಿ ಆರ್‌ಸಿಬಿಗೆ ರೋಚಕ ಜಯ

ಚೆನ್ನೈ: ಹರ್ಷಲ್ ಪಟೇಲ್ ಭರ್ಜರಿ ಬೌಲಿಂಗ್,  ಎಬಿಡಿ ವಿಲಿಯರ್ಸ್ ಅವರ ಸ್ಫೋಟಕ ಬ್ಯಾಟಿಂಗ್‍ನಿಂದಾಗಿ ಮುಂಬೈ ವಿರುದ್ಧ ಕೊನೆಯ ಎಸೆತದಲ್ಲಿ ಬೆಂಗಳೂರು ತಂಡ ಜಯವನ್ನು ಸಾಧಿಸಿ ಶುಭಾರಂಭ ಮಾಡಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ 9 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿತು. ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಬೆಂಗಳೂರು 20ನೇ ಓವರಿನ ಕೊನೆಯ ಎಸೆತದಲ್ಲಿ ಒಂದು ರನ್ ಗಳಿಸುವ ಮೂಲಕ ಪಂದ್ಯವನ್ನು 2 ವಿಕೆಟ್‍ಗಳಿಂದ ಗೆದ್ದುಕೊಂಡಿತು. ಗೆದ್ದದ್ದು ಹೇಗೆ? …

Read More »

ಸವದತ್ತಿಯಲ್ಲಿ ಕಾಂಗ್ರೆಸ್ ಬೃಹತ್ ಸಮಾವೇಶ ,

ಬೆಳಗಾವಿ ಲೋಕಸಭಾ ಉಪಚುನಾವಣಾ ಪ್ರಚಾರದ ಅಂಗವಾಗಿ ಸವದತ್ತಿಯಲ್ಲಿ ಇಂದು ಕಾಂಗ್ರೆಸ್ ಬೃಹತ್ ಸಮಾವೇಶ ಜರುಗಿತು. “ಜನಸಾಮಾನ್ಯರಿಗೆ ಬೆಲೆ ಏರಿಕೆಯ ಮೂಲಕ ತೊಂದರೆ ನೀಡುತ್ತಿರುವ ಕೇಂದ್ರ ಸರ್ಕಾರಕ್ಕೆ ಉಪಚುನಾವಣೆಯಲ್ಲಿ ಜನರು ತಮ್ಮ ಶಕ್ತಿ ತೋರಿಸಬೇಕು” ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕಾಂಗ್ರೆಸ್ ನಾಯಕರಾದ ಎಂ.ಬಿ. ಪಾಟೀಲ, ಕೆ.ಎಚ್. ಮುನಿಯಪ್ಪ, ರುದ್ರಪ್ಪ ಲಮಾನಿ, ಕುಸುಮಾವತಿ ಶಿವಳ್ಳಿ, ಎಸ್.ಬಿ. ಘಾಟಗೆ, ಬಿ.ಆರ್. ಪಾಟೀಲ, ವಿಜಯ ಕಾಶಪ್ಪನವರ, ಆಲಕೋಡ ಹನುಮಂತಪ್ಪ, ವಿನಯ …

Read More »

ನಾಲ್ಕನೇ ದಿನವೂ ಮುಂದುವರಿದ ಬಸ್ ಮುಷ್ಕರ – ಇವತ್ತೂ ಸಿಗಲ್ಲ KSRTC, BMTC ಬಸ್

ಬೆಂಗಳೂರು: ಕೆಎಸ್‍ಆರ್ ಟಿಸಿ, ಬಿಎಂಟಿಸಿ ನೌಕರರು ನಡೆಸ್ತಿರುವ ಮುಷ್ಕರ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಇವತ್ತೂ ಕೆಎಸ್‍ಆರ್‍ಟಿಸಿ, ಬಿಎಂಟಿಸಿ ಬಸ್‍ಗಳು ಸಂಚಾರ ಮಾಡಲ್ಲ. ಇವತ್ತಿನಿಂದ ಸಾಲು ಸಾಲು ರಜೆ, ಯುಗಾದಿ ಹಬ್ಬಕ್ಕೆ ಊರಿಗೆ ಹೋಗುವವರಿಗೆ ಮುಷ್ಕರದ ಬಿಸಿ ತಟ್ಟಿದ್ದು, ಪ್ರಯಾಣಿಕರು ಪರದಾಡ್ತಿದ್ದಾರೆ. ಏಪ್ರಿಲ್ 12ರಂದು ಸಾರಿಗೆ ನೌಕರರು ತಟ್ಟೆ-ಲೋಟ ಚಳುವಳಿಗೆ ನಿರ್ಧರಿಸಿದ್ದಾರೆ. ಅಂದರೆ ಅಲ್ಲಿವರೆಗೂ ಮುಷ್ಕರ ಕೊನೆ ಆಗುವ ಲಕ್ಷಣಗಳಿಲ್ಲ. ಈ ನಡುವೆ ಮುಷ್ಕರ ನಿರತ ಬಿಎಂಟಿಸಿಯ 120 ಮಂದಿಯನ್ನು ಕೆಲಸದಿಂದ …

Read More »

IPL 2021 Live Score, MI vs RCB: ಆರ್​ಸಿಬಿ ಶುಭಾರಂಭ: ಟಾಸ್ ಗೆದ್ದ ವಿರಾಟ್ ಕೊಹ್ಲಿ

ಇಂಡಿಯನ್ ಪ್ರೀಮಿಯರ್ ಲೀಗ್‌ನ 14 ನೇ ಸೀಸನ್​ಗೆ ಚಾಲನೆ ದೊರೆತಿದೆ. ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಂಬೈ ಇಂಡಿಯನ್ಸ್​ನ್ನು ಎದುರಿಸುತ್ತಿದ್ದು, ಟಾಸ್ ಗೆದ್ದಿರುವ ಆರ್​ಸಿಬಿ ನಾಯಕ ವಿರಾಟ್ ಕೊಹ್ಲಿ ಬೌಲಿಂಗ್ ಆಯ್ದುಕೊಂಡಿದ್ದಾರೆ. ಎರಡೂ ತಂಡಗಳಲ್ಲೂ ಸ್ಟಾರ್ ಆಟಗಾರರ ದಂಡೇ ಇದ್ದು, ಹೀಗಾಗಿ ಇಂದಿನ ಪಂದ್ಯದಲ್ಲಿ ರೋಚಕ ಹೋರಾಟವನ್ನು ನಿರೀಕ್ಷಿಸಬಹುದು. ಅತ್ತ 6ನೇ ಬಾರಿ ಚಾಂಪಿಯನ್​ ಪಟ್ಟದ ಮೇಲೆ ಕಣ್ಣಿಟ್ಟಿರುವ ಮುಂಬೈ ಇಂಡಿಯನ್ಸ್​ಗೆ ಮೊದಲ ಪಂದ್ಯದಲ್ಲಿ ಗೆಲುವು ದಾಖಲಿಸುವ …

Read More »

1200 ಕೋಟಿ ಅನುದಾನವನ್ನು KSRTCಗೆ ನೀಡಲಾಗಿದೆ : ಅಶ್ವತ್ಥ್ ನಾರಾಯಣ್

ಮಂಗಳೂರು : ಸಾರಿಗೆ ನೌಕರರ ಸಂಬಳದ ವಿಚಾರವನ್ನು ಸ್ವಾಯತ್ತ ಸಂಸ್ಥೆಗಳಿಗೆ ಬಿಡಲಾಗಿದೆ. ಅವರ ಹಣಕಾಸಿನ ಪರಿಸ್ಥಿತಿಗೆ ಅನುಗುಣವಾಗಿ ಸಂಬಳಗಳು ನಿಗದಿಯಾಗಲಿದೆ ಎಂದು ಶುಕ್ರವಾರ ಮಂಗಳೂರಿನಲ್ಲಿ ಡಿಸಿಎಂ ಅಶ್ವತ್ಥ ನಾರಾಯಣ ಹೇಳಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಾರಿಗೆ ನೌಕರರಿಗೆ ಸರ್ಕಾರ ಈಗಾಗಲೇ ಸಾಕಷ್ಟು ಅನುದಾನವನ್ನ ಬಿಡುಗಡೆ ಮಾಡಿದೆ. 1200 ಕೋಟಿ ಅನುದಾನವನ್ನು KSRTCಗೆ ನೀಡಲಾಗಿದೆ. ಕೋವಿಡ್ ಸಮಯದಲ್ಲಿ ಸಾರಿಗೆ ಸಂಸ್ಥೆಗಳಿಗೆ ತುಂಬಾ ನಷ್ಟವಾಗಿದೆ. ಇದರ ನಡುವೆ ಸಾರಿಗೆ ನೌಕರರ ಬೇಡಿಕೆಗಳನ್ನು …

Read More »

18 ವರ್ಷ ಮೇಲ್ಪಟ್ಟವರು ಬೇಕಾದ ಧರ್ಮ ಆಯ್ಕೆ ಮಾಡಲು ಅರ್ಹರು : ಸುಪ್ರೀಂ ಕೋರ್ಟ್

ನವ ದೆಹಲಿ : 18 ವರ್ಷಕ್ಕಿಂತ ಮೇಲ್ಪಟ್ಟವರು ಯಾರಾದರೂ ತಮಗೆ ಹಿತವೆನ್ನಿಸುವ ಧರ್ಮವನ್ನು ಆರಿಸಲು ಮುಕ್ತರು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಧಾರ್ಮಿಕ ಮತಾಂತರವನ್ನು ತಡೆಯುವ ಉದ್ದೇಶದಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ಸೂಚಿಸಬೇಕು ಎಂದು ಕೋರಿ ಸಲ್ಲಿಸಿದ ಅರ್ಜಿಯನ್ನು ವಜಾಗೊಳಿಸಿ ಸುಪ್ರೀಂ ಕೋರ್ಟ್ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ತಮ್ಮ ಧರ್ಮವನ್ನು ಆಯ್ಕೆ ಮಾಡಲು ಅನುಮತಿಸದೆ ಇರಲು ಯಾವುದೇ ಕಾರಣವಿಲ್ಲ. ನಾವು ಈ ಅರ್ಜಿಗೆ ಅನುಮತಿಯನ್ನು …

Read More »

ಮಾಜಿ ಸಚಿವ ವಿನಯ್ ಕುಲಕರ್ಣಿ ಜಾಮೀನು ಅರ್ಜಿ ವಿಚಾರಣೆ ಮತ್ತೆ ಮುಂದೂಡಲಾಗಿದೆ.

ಬೆಂಗಳೂರು : ಜಿ.ಪಂ ಸದಸ್ಯ ಯೋಗೀಶ್ ಗೌಡ ಅವರ ಕೊಲೆ ಪ್ರಕರಣದ ಆರೋಪದಡಿ ಬಂಧನದಲ್ಲಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಜಾಮೀನು ಅರ್ಜಿ ವಿಚಾರಣೆ ಮತ್ತೆ ಮುಂದೂಡಲಾಗಿದೆ. ವಿಜಯ ಕುಲಕರ್ಣಿ ಜಾಮೀನು ಅರ್ಜಿಯನ್ನು ಬೆಂಗಳೂರಿನ ಹೈಕೋರ್ಟ್ ಮತ್ತೆ ಮುಂದೂಡಿದೆ. ಇಂದು ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಾಲಯ ಜಾಮೀನು ಅರ್ಜಿಯನ್ನು ಏಪ್ರಿಲ್ 15 ಕ್ಕೆ ಮುಂದೂಡಿದೆ. ಇಂದು ವಿಚಾರಣೆಯ ಮಾಡಿದ ನ್ಯಾಯಮೂರ್ತಿಗಳು ಜಾಮೀನು ಅರ್ಜಿಯನ್ನು ಏಪ್ರಿಲ್ 15 ಕ್ಕೆ ಮುಂದೂಡಿದ್ದಾರೆ. ಈ ಮೂಲಕ …

Read More »

ಪ್ರಹ್ಲಾದ್ ಜೋಶಿ ಮನೆ ಮುಂದೆ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ ಸಾವು

ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರ ಹುಬ್ಬಳ್ಳಿಯ ಮನೆಯ ಮುಂದೆ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.   ಶ್ರೀದೇವಿ ಕಮ್ಮಾರ ಮೃತ ಮಹಿಳೆ. ಮನೆ ಬಿದ್ದ ಪರಿಣಾಮ ಪರಿಹಾರಕ್ಕೆ ಅಲೆದಾಡಿದ ಮಹಿಳೆ ಮನನೊಂದು ಏಪ್ರಿಲ್ 6ರಂದು ಸಚಿವರ ಹುಬ್ಬಳ್ಳಿ ಮಯೂರಿ ಎಸ್ಟೇಟ್ ನಲ್ಲಿರುವ ಮನೆಯ ಎದುರು ಆತ್ಮಹತ್ಯೆಗೆ ಯತ್ನಿಸಿದ್ದರು. ಇದೇ ವೇಳೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ನಿನ್ನೆ …

Read More »

ಕೊರೊನಾ ಕರ್ಫ್ಯೂ ಮಾರ್ಗಸೂಚಿ ಪ್ರಕಟ ನಾಳೆ ರಾತ್ರಿಯಿಂದ 10 ದಿನಗಳ ಕಾಲ ಕರ್ಫ್ಯೂ ಜಾರಿ

ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕು ನಿಯಂತ್ರಣಕ್ಕೆ ಮುಂದಾಗಿರುವ ರಾಜ್ಯ ಸರ್ಕಾರ ನಾಳೆಯಿಂದ 8 ಜಿಲ್ಲೆಗಳಲ್ಲಿ ಕೊರೊನಾ ಕರ್ಫ್ಯೂ ಜಾರಿಗೊಳಿಸಿದ್ದು, ಹೊಸ ಮಾರ್ಗಸೂಚಿಯನ್ನು ಪ್ರಕಟಿಸಿದೆ. ನಾಳೆ ರಾತ್ರಿ 10ಗಂಟೆಯಿಂದ ಏಪ್ರಿಲ್ 20ರವರೆಗೆ ರಾತ್ರಿ ವೇಳೆ ಕೊರೊನಾ ಕರ್ಫ್ಯೂ ಜಾರಿಗೆ ಬರಲಿದ್ದು, ವೈದ್ಯಕೀಯ ಹಾಗೂ ತುರ್ತು ಸೇವೆಗೆ ಮಾತ್ರ ಅವಕಾಶ ನೀಡಲಾಗಿದೆ.ಉಳಿದಂತೆ ಎಲ್ಲಾ ವಾಣಿಜ್ಯ ಚಟುವಟಿಕೆಗಳಿಗೆ ನಿರ್ಬಂಧ ವಿಧಿಸಲಾಗಿದೆ. ರಾತ್ರಿ 10ಗಂಟೆಯಿಂದ ಎಲ್ಲಾ ಅಂಗಡಿಗಳು, ಹೋಟೆಲ್, ಬಾರ್, ರೆಸ್ಟೋರೆಂಟ್, ಸೇರಿದಂತೆ ವಾಣಿಜ್ಯ …

Read More »

ಲಾಟರಿಯಲ್ಲಿ ಕೋಟಿ ರೂ. ಒಲಿದ ಕಥೆ ಕಟ್ಟಿದ ತೊಕ್ಕೊಟ್ಟು ವಾಚ್‌ಮನ್

ಮಂಗಳೂರು, ಏಪ್ರಿಲ್ 9: ಸಾಲಗಾರರ ಕಾಟ ತಡೆಯಲಾರದೆ ಲಾಟರಿಯಲ್ಲಿ ಒಂದು ಕೋಟಿ ರೂ. ಗೆದ್ದ ಸುಳ್ಳಿನ ಕಥೆ ಕಟ್ಟಿ ಸೆಕ್ಯೂರಿಟಿ ಗಾರ್ಡ್ ಪರಾರಿಯಾದ ಸ್ವಾರಸ್ಯಕರ ಘಟನೆ ಮಂಗಳೂರಿನಲ್ಲಿ ನಡೆದಿದೆ. ಗುರುವಾರ ಮಂಗಳೂರು ನಗರ ಹೊರವಲಯದ ತೊಕ್ಕೊಟ್ಟು ಜಂಕ್ಷನ್ನಿನ ಕಟ್ಟಡದಲ್ಲಿ ಮೂರು ವರ್ಷಗಳಿಂದ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿರುವ ಕೇರಳದ ಕ್ಯಾಲಿಕಟ್ ನಿವಾಸಿ ಮೊಯಿದ್ದೀನ್ ಕುಟ್ಟಿ, ಗುರುವಾರ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿದ್ದರು.   ಸೆಕ್ಯೂರಿಟಿ ಗಾರ್ಡ್ ಕೇರಳದ ಲಾಟರಿಯಲ್ಲಿ …

Read More »