Breaking News
Home / 2021 / ಏಪ್ರಿಲ್ (page 12)

Monthly Archives: ಏಪ್ರಿಲ್ 2021

ಬೆಡ್ ಗಾಗಿ ರಾತ್ರಿ ಇಡೀ ಪರದಾಡಿದ ಕೋವಿಡ್ ಸೋಂಕಿತ, ಕುಳಿತ ಚೇರ್ ನಲ್ಲೇ ಸಾವು

ಬೆಂಗಳೂರು : ನಗರದಲ್ಲಿ ಕೊರೋನಾ ಸೋಂಕಿತರಿಗೆ ಬೆಡ್ ಸಿಗದ ಪರಿಸ್ಥಿತಿ ಮುಂದುವರೆದಿದೆ. ಕೊರೋನಾ ಸೋಂಕಿತ ತಂದೆಗೆ ಚಿಕಿತ್ಸೆ ಕೊಡಿಸೋದಕ್ಕಾಗಿ ರಾತ್ರಿಯಿಡೀ ಪರದಾಡಿದ್ರೂ, ಬೆಡ್ ಸಿಗದೇ ಬೆಳಗಾಗೋ ವೇಳೆಗೆ ಸಾವನ್ನಪ್ಪಿರುವಂತ ಧಾರುಣ ಘಟನೆ ನಡೆದಿದೆ. ಯಲಹಂಕದ 62 ವರ್ಷದ ವ್ಯಕ್ತಿಗೆ ಕೊರೋನಾ ತಗುಲಿತ್ತು. ಇಂತಹ ತಂದೆಗೆ ಚಿಕಿತ್ಸೆಗಾಗಿ ಐಸಿಯು ಬೆಡ್ ಅವಶ್ಯಕತೆ ಇತ್ತು. ರಾತ್ರಿಯಿಡೀ ಪರದಾಡಿದ್ರೂ ಚಿಕಿತ್ಸೆಗಾಗಿ ಬೆಡ್ ಸಿಕ್ಕಿಲ್ಲ. ಯಲಹಂಕ ಸಾರ್ವಜನಿಕ ಆಸ್ಪತ್ರೆಯಲ್ಲಿ ಚೇರಿನಲ್ಲೇ ಕುಳಿತು, ಆಕ್ಸಿಜನ್ ಹಾಕಿಸಿಕೊಂಡು ನರಳಾಡುತ್ತಿದ್ದಂತ …

Read More »

ವಿಶೇಷ ಪ್ಯಾಕೇಜ್ ಇಲ್ಲದೇ ಲಾಕ್‍ಡೌನ್ – ಸರ್ಕಾರದ ನಿಲುವೇನು? ಕೆಲವು ದುಡಿಯುವ ವರ್ಗಗಳಿಗೆ ದೊಡ್ಡ ಪ್ರಮಾಣದಲ್ಲಿಯೇ ಆರ್ಥಿಕ ಹೊಡೆತ ಬೀಳಲಿದೆ

ಬೆಂಗಳೂರು: ಯಾವುದೇ ವಿಶೇಷ ಪ್ಯಾಕೇಜ್ ಘೋಷಣೆ ಮಾಡದೇ ರಾಜ್ಯದಲ್ಲಿ ಸರ್ಕಾರ 16 ದಿನ ಲಾಕ್‍ಡೌನ್ ಮಾಡಿದೆ. ಕೊರೊನಾ ನಿಯಂತ್ರಣಕ್ಕಾಗಿ ಸರ್ಕಾರಕ್ಕೆ ಲಾಕ್‍ಡೌನ್ ಅನಿವಾರ್ಯವಾಗಿತ್ತು. ಆದ್ರೆ ಆರ್ಥಿಕ ಹೊಡೆತಕ್ಕೆ ಸಿಲುಕುವ ವಲಯಗಳಿಗೆ ಸರ್ಕಾರ ಯಾವುದೇ ಪ್ಯಾಕೇಜ್ ಘೋಷಣೆ ಮಾಡಿಲ್ಲ. 16 ದಿನದ ಜನತಾ ಲಾಕ್‍ಡೌನ್ ನಲ್ಲಿ ಕೆಲವು ದುಡಿಯುವ ವರ್ಗಗಳಿಗೆ ದೊಡ್ಡ ಪ್ರಮಾಣದಲ್ಲಿಯೇ ಆರ್ಥಿಕ ಹೊಡೆತ ಬೀಳಲಿದೆ. ಕಳೆದ ವರ್ಷದ ಲಾಕ್‍ಡೌನ್ ನಿಂದ ಚೇತರಿಸಿಕೊಳ್ಳುವಷ್ಟರಲ್ಲಿ ಮತ್ತೊಂದು ಲಾಕ್‍ಡೌನ್ ಘೋಷಣೆಯಾಗಿದೆ. ಗಾರ್ಮೆಂಟ್ಸ್ ಉದ್ಯೋಗಿಗಳು, …

Read More »

ಜಿಂದಾಲ್‍ಗೆ 3,667 ಎಕರೆ ಭೂಮಿ ಮಾರಾಟ ,ಕದ್ದು ಮುಚ್ಚಿ ಮಾರೋದು ಬಿಜೆಪಿಯ ಸಂಸ್ಕೃತಿ: ಹೆಚ್.ಡಿ.ಕುಮಾರಸ್ವಾಮಿ

ಬೆಂಗಳೂರು: ಜಿಂದಾಲ್ ಕಂಪನಿಗೆ ಸರ್ಕಾರ 3,667 ಎಕರೆ ಭೂಮಿ ಮಾರಾಟಕ್ಕೆ ಬಿಎಸ್‍ವೈ ಸರ್ಕಾರಕ್ಕೆ ಮುಂದಾಗಿರುವ ನಡೆಗೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಮೈತ್ರಿ ಸರ್ಕಾರದಲ್ಲಿ ಈ ನಿರ್ಧಾರವನ್ನ ವಿರೋಧಿಸಿದ್ದ ಬಿಜೆಪಿ, ಕಾಂಗ್ರೆಸ್ ಹಿರಿಯ ಮುಖಂಡ ಹೆಚ್.ಕೆ.ಪಾಟೀಲ್ ಅವರ ಮುಂದೆ ಸಾಲು ಸಾಲು ಪ್ರಶ್ನೆಗಳನ್ನಿರಿಸಿದ್ದಾರೆ. ‘ಬಿಎಸ್‍ವೈ ಅಹೋರಾತ್ರಿ ಧರಣಿ, ಬಿಜೆಪಿ ಯುವ ಮೋರ್ಚಾದಿಂದ ವಿಧಾನಸೌಧ ಮುತ್ತಿಗೆ, ಮೈತ್ರಿ ಸರ್ಕಾರದ ಮೇಲೆ ಕಿಕ್ ಬ್ಯಾಕ್ ಆರೋಪ…’ ಜಿಂದಾಲ್‍ಗೆ 3,677 ಎಕರೆ ಭೂಮಿ ಮಾರಾಟ …

Read More »

ಪಂಜಾಬ್‌ ವಿರುದ್ಧ 5 ವಿಕೆಟ್‌ಗಳಿಂದ ಗೆದ್ದ ಕೆಕೆಆರ್..!

ಅಹಮದಾಬಾದ್​: ಉತ್ತಮ ಬೌಲಿಂಗ್ ಪ್ರದರ್ಶನ, ರಾಹುಲ್ ತ್ರಿಪಾಠಿ ಹಾಗೂ ನಾಯಕ ಇಯಾನ್ ಮೋರ್ಗಾನ್ ಅಬ್ಬರದ ಬ್ಯಾಟಿಂಗ್‌ನಿಂದ ಪಂಜಾಬ್ ಕಿಂಗ್ಸ್‌ಅ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ 5 ವಿಕೆಟ್‌ಗಳಿಂದ ಗೆಲುವು ದಾಖಲಿಸಿದೆ. ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಟೂರ್ನಿಯ 21ನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ 124 ರನ್‌ಗಳ ಗುರಿ ನೀಡಿತ್ತು. ಈ ಸಾಧಾರಣ ಟಾರ್ಗೆಟ್ ಗುರಿ ಬೆನ್ನಟ್ಟಿದ ಕೆಕೆಆರ್ 20 ಎಸೆತಗಳು ಬಾಕಿ ಇರುವಂತೆ 5 …

Read More »

ನಟಿ ಮಾಲಾಶ್ರೀ ಪತಿ ರಾಮು ಕೊರೊನಾಗೆ ಬಲಿ

ಸ್ಯಾಂಡಲ್‍ವುಡ್ ನಟಿ ಮಾಲಾಶ್ರೀ ಅವರ ಪತಿ ನಿರ್ಮಾಪಕ ರಾಮು (52) ಅವರು ಕೊರೊನಾಗೆ ಬಲಿಯಾಗಿದ್ದಾರೆ. ಕಳೆದ ಒಂದು ವಾರದ ಹಿಂದೆ ಕೊರೊನಾ ದೃಢಪಟ್ಟಿದ್ದು, ಉಸಿರಾಟದ ತೊಂದರೆಯಿಂದಾಗಿ 3 ದಿನಗಳ ಹಿಂದೆ ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಇಂದು ಮೃತಪಟ್ಟಿದ್ದಾರೆ. ಎಕೆ 47, ಲಾಕಪ್ ಡೆತ್, ಕಲಾಸಿಪಾಳ್ಯ, ಸಿಬಿಐ ದುರ್ಗಾ, ಅರ್ಜುನಗೌಡ ಸೇರಿ ಹಲವು ಚಿತ್ರಗಳನ್ನು ನಿರ್ಮಿಸಿದ್ದರು. ಇವರು ಸ್ಯಾಂಡಲ್‍ವುಡ್‍ನಲ್ಲಿ ಕೋಟಿ ರಾಮು ಎಂದೇ ಹೆಸರು …

Read More »

ಬಾಗಲಕೋಟೆ: ಕಾರಾಗೃಹಕ್ಕೂ ಒಕ್ಕರಿಸಿದ ಕೋವಿಡ್; ಓರ್ವ ಸಿಬಂದಿ ಸೇರಿ 39 ಕೈದಿಗಳಿಗೆ ಸೋಂಕು

ಬಾಗಲಕೋಟೆ : ನಗರದ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಕೊರೊನಾ ದಾಳಿ ಇಟ್ಟಿದ್ದು, ಓರ್ವ ಸಿಬ್ಬಂದಿ ಸೇರಿ 40 ಜನರಿಗೆ ದೃಢಪಟ್ಟಿದೆ. ಜೈಲಿನಲ್ಲಿದ್ದ 39 ವಿಚಾರಣಾಧೀನ ಖೈದಿಗಳಿಗೆ ಹಾಗೂ ಓರ್ವ ಜೈಲಿನ ಸಿಬ್ಬಂದಿಗೂ ಕೊರೊನಾ ತಗುಲಿದೆ. ಎಪ್ರಿಲ್ 24 ರಂದು ಓರ್ವ ಖೈದಿಗೆ ಕೋವಿಡ್ ದೃಢವಾಗಿತ್ತು. ಆ ಹಿನ್ನೆಲೆ ಖೈದಿಗಳು ,ಸಿಬ್ಬಂದಿ ಸೇರಿದಂತೆ 200 ಜನರ ಟೆಸ್ಟ್ ಮಾಡಲಾಗಿತ್ತು. ಕೋವಿಡ್ ಹೇಗೆ ಬಂತು ಯಾವ ಮೂಲದಿಂದ ಬಂತು ಎಂದು ಆರೋಗ್ಯ ಇಲಾಖೆ …

Read More »

ರಾಜ್ಯಗಳು ಲಾಕ್‌ಡೌನ್ ಘೋಷಿಸಿದ್ದರೂ ರೈಲುಗಳು ಮಾತ್ರ ಎಂದಿನಂತೆ ಸಂಚರಿಸಲಿವೆ.:ಭಾರತೀಯ ರೈಲ್ವೆ ಮಂಡಳಿ

ನವದೆಹಲಿ: ಹೆಚ್ಚುತ್ತಿರುವ ಕೋವಿಡ್‌-19 ಪ್ರಕರಣಗಳನ್ನು ನಿಯಂತ್ರಿಸಲು ಹಲವು ರಾಜ್ಯಗಳು ಲಾಕ್‌ಡೌನ್ ಘೋಷಿಸಿದ್ದರೂ ರೈಲುಗಳು ಮಾತ್ರ ಎಂದಿನಂತೆ ಸಂಚರಿಸಲಿವೆ. ಅಗತ್ಯಬಿದ್ದರೆ ವಿಶೇಷ ರೈಲುಗಳನ್ನು ಓಡಿಸಲಾಗುವುದು ಎಂದು ಭಾರತೀಯ ರೈಲ್ವೆ ಮಂಡಳಿಯು ತಿಳಿಸಿದೆ. ಪ್ರಸ್ತುತ ಮೇಲ್ ಮತ್ತು ಎಕ್ಸ್‌ಪ್ರೆಸ್ ಸೇರಿದಂತೆ ಶೇ 70ರಷ್ಟು ರೈಲುಗಳು ಕೋವಿಡ್ ಪೂರ್ವದಿಂದಲೂ ಕಾರ್ಯನಿರ್ವಹಿಸುತ್ತಿವೆ. ಅಲ್ಲದೇ, ಸುಮಾರು 330 ಬೇಸಿಗೆ ವಿಶೇಷ ರೈಲುಗಳು ಸಹ ಸಂಚರಿಸುತ್ತಿವೆ ಎಂದು ರೈಲ್ವೆ ಮಂಡಳಿಯ ಅಧ್ಯಕ್ಷ ಸುನೀತ್ ಶರ್ಮಾ ಹೇಳಿದ್ದಾರೆ. ‘ಮಹಾರಾಷ್ಟ್ರ, ದೆಹಲಿ, …

Read More »

14 ದಿನ ಕರ್ನಾಟಕ ಲಾಕ್‌ಡೌನ್: ಬಸ್‌, ಕಾರು, ಆಟೊ ಸಂಚಾರವೂ ಇಲ್ಲ

ಬೆಂಗಳೂರು: ಕೋವಿಡ್‌ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿರುವ ಕಾರಣ ಸಾರ್ವಜನಿಕರು ಮನೆ ಬಿಟ್ಟು ಹೊರಬರುವುದನ್ನು ತಡೆಯಲು ಮಂಗಳವಾರ (ಏ.27) ರಾತ್ರಿಯಿಂದಲೇ 14 ದಿನಗಳ ಕಾಲ (ಮೇ 12ರವರೆಗೆ) ರಾಜ್ಯಾದ್ಯಂತ ಲಾಕ್‌ಡೌನ್‌ ಮಾಡಲು ಸರ್ಕಾರ ತೀರ್ಮಾನಿಸಿದೆ. ಕೊರೊನಾ ಸೋಂಕಿನ ಸರಪಳಿ ತುಂಡರಿಸಿ, ಕೋವಿಡ್‌ ಪ್ರಕರಣಗಳನ್ನು ತಗ್ಗಿಸಲು ಸಾಧ್ಯ ಎಂಬುದಾಗಿ ತಜ್ಞರು ನೀಡಿದ ಸಲಹೆಯನ್ನು ಆಧರಿಸಿ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ …

Read More »

ಖಾಸಗಿ ಬಸ್ಸುಗಳಿಂದ‌ ಸುಲಿಗೆ ಆರಂಭ: ದರ ಮೂರು ಪಟ್ಟು ಹೆಚ್ಚಳ!

ಬೆಂಗಳೂರು: ಕರ್ಫ್ಯೂ ಜಾರಿಯಾಗಿರುವುದನ್ನೇ ಬಂಡವಾಳ ಮಾಡಿಕೊಂಡಿರುವ ಖಾಸಗಿ ಬಸ್‌ ಕಂಪನಿಗಳು, ಏಕಾಏಕಿ ಪ್ರಯಾಣ ದರವನ್ನೂ ಮೂರು ಪಟ್ಟು ಏರಿಕೆ ಮಾಡಿವೆ. ಸೋಮವಾರ ಮಧ್ಯಾಹ್ನದವರೆಗೆ ಸಾಮಾನ್ಯ ಪ್ರಯಾಣ ದರವೇ ಇತ್ತು. ಆದರೆ, ಕರ್ಫ್ಯೂ ಘೋಷಣೆಯಾಗುತ್ತಿದ್ದಂತೆ ಪ್ರಯಾಣ ದರವನ್ನೂ ಹೆಚ್ಚಿಸಲಾಗಿದೆ. ಆನ್‌ಲೈನ್‌ ಮೂಲಕ ಸೀಟುಗಳ ಬುಕ್ಕಿಂಗ್ ಆರಂಭವಾಗಿದೆ. ಊರಿಗೆ ಹೋಗಲು ಸಿದ್ಧವಾಗಿರುವವರು ಅನಿವಾರ್ಯವಾಗಿಯೇ ದುಬಾರಿ ದರವನ್ನೇ ಕೊಟ್ಟು ಸೀಟು ಕಾಯ್ದಿರಿಸಿದ್ದಾರೆ. ಬೆಂಗಳೂರಿನಿಂದ ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಕಲಬುರ್ಗಿ, ವಿಜಯಪುರ, ಮಂಗಳೂರು ಸೇರಿದಂತೆ ಹಲವು ನಗರಗಳಿಗೆ …

Read More »

ದೇಶದಲ್ಲಿ ಕೊರೊನಾ ಏರಿಕೆಗೆ ಚುನಾವಣಾ ಆಯೋಗವೇ ಕಾರಣ ಎಂದ ಮದ್ರಾಸ್ ಹೈಕೋರ್ಟ್

ಚೆನ್ನೈ, ಏಪ್ರಿಲ್ 27: ದೇಶದಲ್ಲಿ ಕೊರೊನಾ ಎರಡನೇ ಅಲೆ ಇಷ್ಟು ಆತಂಕಕಾರಿ ಮಟ್ಟದಲ್ಲಿ ಹರಡಲು ಚುನಾವಣಾ ಆಯೋಗವೇ ಕಾರಣ ಎಂದು ಮದ್ರಾಸ್ ಹೈಕೋರ್ಟ್ ಕಿಡಿಕಾರಿದೆ. ಅತ್ಯಂತ ಬೇಜವಾಬ್ದಾರಿಯಿಂದ ಚುನಾವಣಾ ಆಯೋಗ ವರ್ತಿಸುತ್ತಿದೆ. ಈ ಆಯೋಗದ ಅಧಿಕಾರಿಗಳ ವಿರುದ್ಧ ಕೊಲೆ ಪ್ರಕರಣವನ್ನೂ ದಾಖಲಿಸಿಕೊಳ್ಳಬಹುದು ಎಂದಿದೆ. ಮೇ 2ರಂದು ಮತ ಎಣಿಕೆ ನಡೆಸುವಾಗ ಕೊರೊನಾ ತಡೆ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನಿರ್ದೇಶನ ನೀಡಬೇಕೆಂದು ಕೋರಿ ತಮಿಳುನಾಡು ಸಾರಿಗೆ ಸಚಿವ, ಎಐಎಡಿಎಂಕೆ ಅಭ್ಯರ್ಥಿ ಎಂ.ಆರ್. …

Read More »