Breaking News
Home / 2021 / ಏಪ್ರಿಲ್ / 21 (page 3)

Daily Archives: ಏಪ್ರಿಲ್ 21, 2021

ಆಕ್ಸಿಜನ್ ಮತ್ತು ರೆಮಿಡಿಸಿವಿರ್ ಪೂರೈಕೆಗೆ 24/7 ವಾರ್ ರೂಮ್ ಸ್ಥಾಪನೆ : ಡಾ. ಸುಧಾಕರ್

ಬೆಂಗಳೂರು : ಕೋವಿಡ್ ರೂಪಾಂತರಿ ಅಲೆ ರಾಜ್ಯದಲ್ಲಿ ನಿತ್ಯ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ನಿನ್ನೆ(ಮಂಗಳವಾರ, ಏಪ್ರಿಲ್ 20) ರಾತ್ರಿ ವೀಕೆಂಡ್ ಲಾಕ್ ಡೌನ್, ವಾರದ ಐದು ದಿನಗಳ ನೈಟ್ ಕರ್ಫ್ಯೂ ಘೋಷಣೆ ಮಾಡಿ ಕೆಲವು ಕಠಿಣ ನಿರ್ಬಂಧಗಳನ್ನು ಹೇರಿದೆ. ರಾಜ್ಯದಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಎರಡು ವಾರಗಳ ಭಾಗಶಃ ಲಾಕ್ ಡೌ ನ್ ರಾಜ್ಯದಲ್ಲಿರಲಿದೆ. ಕೋವಿಡ್ ಸೋಂಕಿನ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವುದರ ಜೊತೆಗೆ ರಾಜ್ಯದಲ್ಲಿ …

Read More »

ರಾಜ್ಯದಲ್ಲಿ ‘ಸಾರಿಗೆ ಬಸ್ ಸಂಚಾರ’ ಯಥಾಸ್ಥಿತಿಗೆ : ಇಂದು 1ಗಂಟೆ ವೇಳೆಗೆ ‘10,084 ಸಾರಿಗೆ ಬಸ್ ಸಂಚಾರ’ ಆರಂಭ

ಬೆಂಗಳೂರು : ರಾಜ್ಯದಲ್ಲಿ ಸಾರಿಗೆ ಬಸ್ ಸಂಚಾರ ಕೂಡಲೇ ಆರಂಭಿಸುವಂತೆ ಹೈಕೋರ್ಟ್ ಮುಷ್ಕರ ನಿರತ ಸಾರಿಗೆ ನೌಕರರ ಕೂಟಕ್ಕೆ ನಿನ್ನೆ ನೋಟಿಸ್ ನೀಡಿದ ಪರಿಣಾಮ, ಇಂದು ಮಧ್ಯಾಹ್ನದ ವೇಳೆಗೆ ಸಾರಿಗೆ ಬಸ್ ಸಂಚಾರ ರಾಜ್ಯಾಧ್ಯಂತ ಯಥಾಸ್ಥಿತಿಯತ್ತೆ ದಾಪುಗಾಲಿಟ್ಟಿದೆ. ಮಧ್ಯಾಹ್ನ 1 ಗಂಟೆಯ ವೇಳೆ 10,084 ಸಾರಿಗೆ ಬಸ್ ಗಳು ಸಂಚಾರ ಆರಂಭಿಸಿವೆ. ಈ ಕುರಿತಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮಾಹಿತಿ ಬಿಡುಗಡೆ ಮಾಡಿದ್ದು, ಇಂದು ರಾಜ್ಯಾಧ್ಯಂತ 1 …

Read More »

ಕೊರೋನಾ ಹೆಚ್ಚಳ’ದ ಎಫೆಕ್ಟ್ : ‘ಕುವೆಂಪು ವಿವಿ ಎಲ್ಲಾ ಪರೀಕ್ಷೆ’ಗಳು ಮುಂದೂಡಿಕೆ

ಶಿವಮೊಗ್ಗ : ರಾಜ್ಯದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವುದರಿಂದ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿಯನ್ನು ಮಂಗಳವಾರ ಪ್ರಕಟಿಸಿದ್ದು, ಏಪ್ರಿಲ್ 21ರಿಂದ ಮೇ 04ರವರೆಗೆ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಈ ಹಿನ್ನೆಲೆ ಯಲ್ಲಿ ಏಪ್ರಿಲ್ 21ರಿಂದ ಮೇ 03ರವರೆಗೆ ನಿಗದಿಯಾಗಿರುವ ಕುವೆಂಪು ವಿಶ್ವವಿದ್ಯಾಲಯದ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ಕುಲಸಚಿವ ಪ್ರೊ. ಪಿ. ಕಣ್ಣನ್ ತಿಳಿಸಿದ್ದಾರೆ. ರಾಜ್ಯ ಸರ್ಕಾರದ ಮಾರ್ಗಸೂಚಿ ಹೊರಬಿದ್ದ ಬಳಿಕ ಪತ್ರಿಕಾ ಪ್ರಕಟಣೆ ನೀಡಿರುವ …

Read More »

ಬೆಳಗಾವಿ ಲೋಕಸಭಾ ಉಪಚುನಾವಣೆ ಈ ಬಾರಿ ಕಾಂಗ್ರೆಸ್ ಗೆಲುವು ನಿಶ್ಚಿತ : ಸತೀಶ್ ಜಾರಕಿಹೊಳಿ

ಬೆಳಗಾವಿ : ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಒಳ್ಳೆಯ ಕೆಲಸ ಮಾಡಿದ್ದು, ಈ ಬಾರಿ ಕಾಂಗ್ರೆಸ್ ಗೆಲುವು ನಿಶ್ಚಿತ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕಳೆದ 20 ವರ್ಷಗಳಿಂದ ಬೆಳಗಾವಿ ಲೋಕಸಭಾ ಕ್ಷೇತ್ರವನ್ನು ಕಳೆದುಕೊಂಡಿರುವ ಕಾಂಗ್ರೆಸ್ ಈ ಬಾರಿ ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಗೆಲ್ಲುವುದು ಖಚಿತ. ಎಂಇಎಸ್ ಅಭ್ಯರ್ಥಿ ಸ್ಪರ್ಧೆ ಮಾಡಿರುವುದು ನಮಗೆ ಯಾವುದೇ ತೊಂದರೆಯಾಗಿಲ್ಲ. ನಮ್ಮ ಮತಗಳು ನಮಗೆ ಇರುತ್ತವೆ …

Read More »

ಮಹಾರಾಷ್ಟ್ರದ ಆಸ್ಪತ್ರೆವೊಂದರಲ್ಲಿ ʼಆಕ್ಸಿಜನ್ ಟ್ಯಾಂಕ್ ಸೋರಿಕೆʼ: 11 ಮಂದಿ ಸಾವು, ಆನೇಕರ ಸ್ಥಿತಿ ಗಂಭೀರ

ನಾಸಿಕ್:‌ ಮಹಾರಾಷ್ಟ್ರದ ನಾಸಿಕ್ʼನಲ್ಲಿರುವ ಡಾ. ಜಾಕಿರ್ ಹುಸೇನ್ ಎನ್ ಎಂಸಿ ಆಸ್ಪತ್ರೆಯಲ್ಲಿ ಮಂಗಳವಾರ ಆಕ್ಸಿಜನ್ ಟ್ಯಾಂಕ್ ಸೋರಿಕೆಯಾಗಿದ್ದು, 11 ಜನರು ಮೃತಪಟ್ಟಿದ್ದಾರೆ ಎಂದು ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ಟೋಪ್ ಹೇಳಿದ್ದಾರೆ. ಎಎನ್ ಐ ಟ್ವೀಟ್ ಮಾಡಿದ ವೀಡಿಯೊದಲ್ಲಿ ಅನಿಲ ಆಮ್ಲಜನಕವು ಆಸ್ಪತ್ರೆಯು ಬಳಸಬೇಕಾಗಿದ್ದ ಪ್ರದೇಶದಾದ್ಯಂತ ಹರಡುವುದನ್ನ ಕಾಣ್ಬೋದು. ಅಗ್ನಿಶಾಮಕ ದಳದ ರಕ್ಷಣಾ ತಂಡ ಸ್ಥಳದಲ್ಲಿದ್ದು, ಸುಮಾರು 171 ರೋಗಿಗಳು ಈ ಆಸ್ಪತ್ರೆಯಲ್ಲಿ ಆಮ್ಲಜನಕವನ್ನ ಹೊಂದಿದ್ದರು. #WATCH | An …

Read More »

ಬೆಳಗಾವಿಯ ಕಾಡಂಚಿನ ಗ್ರಾಮದಲ್ಲಿ ಅರ್ಧಕ್ಕರ್ಧ ಜನರಿಗೆ ಕೊರೊನಾ ಪಾಸಿಟಿವ್: ಇಡೀ ಊರನ್ನೇ ಸೀಲ್​ಡೌನ್ ಮಾಡಿದ ಅಧಿಕಾರಿಗಳು

ಬೆಳಗಾವಿ: ಕರ್ನಾಟಕದಲ್ಲಿ ಕೊರೊನಾ ಎರಡನೇ ಅಲೆ ಅಬ್ಬರ ಹೆಚ್ಚಾಗಿದ್ದು, ಇಂದಿನಿಂದ ಮೇ.4ರ ತನಕ ಕೆಲ ಕಠಿಣ ನಿಯಮಗಳನ್ನು ಜಾರಿಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ನಡುವೆ ಕೆಲವೆಡೆ ಕಾರ್ಮಿಕರ ವಲಸೆ ಆರಂಭವಾಗಿದ್ದು, ಬೆಳಗಾವಿ ಜಿಲ್ಲೆಗೆ ಇದು ಮಾರಕವಾಗಿ ಪರಿಣಮಿಸುತ್ತಿದೆ. ಜಿಲ್ಲೆಯ ಖಾನಾಪುರ ತಾಲ್ಲೂಕಿನ ಕಾಡಂಚಿನಲ್ಲಿರುವ ಪುಟ್ಟ ಗ್ರಾಮವಾದ ಅಬನಾಳಿ ಎಂಬಲ್ಲಿ ಬರೋಬ್ಬರಿ 146 ಜನರಲ್ಲಿ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದ್ದು, ಅಧಿಕಾರಿಗಳು ಮುಂಜಾಗ್ರತಾ ಕ್ರಮವಾಗಿ ಇಡೀ ಗ್ರಾಮವನ್ನೇ ಸೀಲ್​ಡೌನ್ ಮಾಡಿದ್ದಾರೆ. …

Read More »

ಹಂಪಿ ಸ್ಮಾರಕಗಳ ವೀಕ್ಷಣೆಗೆ ನಿರ್ಬಂಧ!

ಹೊಸಪೇಟೆ: ಕೊರೊನಾ ಪ್ರಕರಣಗಳ ಹೆಚ್ಚಳದ ಹಿನ್ನೆಲೆಯಲ್ಲಿ ಹಂಪಿಯಲ್ಲಿ ಸ್ಮಾರಕಗಳ ವೀಕ್ಷಣೆಗೆ ಮೇ 15ರವರೆಗೆ ಭಾರತೀಯ ಪುರಾತತ್ವ ಇಲಾಖೆ ನಿಷೇ ಧಿಸಿ ಆದೇಶ ಹೊರಡಿಸಿದೆ. ಲಾಕ್‌ಡೌನ್‌ ತೆರವುಗೊಳಿಸಿದ ಬಳಿಕ ಹಂಪಿಗೆ ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಭಾರಿ ಏರಿಕೆ ಕಂಡಿತ್ತು. ಈಗ ಕೊರೊನಾ ಪ್ರಕರಣಗಳ ಹೆಚ್ಚಳ ಹಿನ್ನೆಲೆಯಲ್ಲಿ ಭಾರತೀಯ ಪುರಾತತ್ವ ಇಲಾಖೆ ಹಂಪಿ ಸೇರಿದಂತೆ ದೇಶದ ರಾಷ್ಟ್ರೀಯ ಸ್ಮಾರಕಗಳ ವೀಕ್ಷಣೆಗೆ ನಿರ್ಬಂಧ ವಿಧಿ ಸಿ ಆದೇಶಿಸಿದೆ. ಹೀಗಾಗಿ ಹಂಪಿಯಲ್ಲಿ ಸದಾ ಪ್ರವಾಸಿಗರಿಂದ ಲವಲವಿಕೆಯಾಗಿರುತ್ತಿದ್ದ ಸ್ಮಾರಕಗಳು ಈಗ …

Read More »

ರಾಜ್ಯದಲ್ಲಿ ಮೇ 4 ರವರೆಗೆ ನೈಟ್ ಕರ್ಫ್ಯೂ ಜೊತೆಗೆ ವೀಕೆಂಡ್ ಕರ್ಫ್ಯೂ ಜಾರಿ

ಬೆಂಗಳೂರು : ರಾಜ್ಯದಲ್ಲಿ ಶುಕ್ರವಾರ ರಾತ್ರಿ 9 ಗಂಟೆಯಿಂದ ಸೋಮವಾರ ಬೆಳಗ್ಗೆ 6 ಗಂಟೆಯವರೆಗೆ ಮುಂದಿನ ಮೇ 4 ರವರೆಗೆ ವೀಕೆಂಡ್ ಕರ್ಫ್ಯೂ ಘೋಷಣೆ ಮಾಡಿ ಮಂಗಳವಾರ ಸರ್ಕಾರ ಆದೇಶ ಹೊರಡಿಸಿದೆ. ಇದರ ಜೊತೆ ನೈಟ್ ಕರ್ಫ್ಯೂ ಕೂಡ ಜಾರಿಯಲ್ಲಿ ಇರುತ್ತದೆ. ಕೋವಿಡ್ ಹಿನ್ನೆಲೆ ಸರ್ಕಾರ ಹೊಸ ಮಾರ್ಗ ಸೂಚಿ ಪ್ರಕಟ ಮಾಡಿದೆ ನೈಟ್‌ ಕರ್ಫ್ಯೂ ಮಾರ್ಗಸೂಚಿಗಳು – ದೂರದ ಊರುಗಳಿಗೆ ತೆರಳುವ ಬಸ್‌ಗಳು, ರೈಲು ಸೇವೆ, ವಿಮಾನ ಸೇವೆಗಳಿಗೆ …

Read More »

ಮೃತರಿಗೂ ರೇಷನ್‌! ಸಿಂಧನೂರಿನಲ್ಲಿ ಆಹಾರ ಇಲಾಖೆ ಅವಾಂತರ

ಸಿಂಧನೂರು: ಮೃತಪಟ್ಟವರ ಹೆಸರಿನಲ್ಲೂ ಆಹಾರ ಇಲಾಖೆ ಪಡಿತರ ಆಹಾರ ಧಾನ್ಯ ವಿತರಿಸಿದ ಘಟನೆ ಉತ್ತರ ಕರ್ನಾಟಕದ ಸಿಂಧನೂರು ತಾಲೂಕಿನಲ್ಲಿ ನಡೆದಿದೆ. ತಾಲೂಕಿನಲ್ಲಿ 737 ಜನ ಮೃತ ಪಟ್ಟಿದ್ದರೂ ಅವರ ಹೆಸರಿನಲ್ಲಿ ಸತತವಾಗಿ ಆಹಾರ ಧಾನ್ಯ ಹಂಚಿಕೆ ಮಾಡಲಾಗಿದೆ. ಕಾರ್ಡ್‌ ಸಂಖ್ಯೆ, ಪಡಿತರ ಹೆಸರನ್ನು ನಮೂದಿಸಿ ಮೇಲಧಿಕಾರಿಗಳು ತಾಲೂಕು ಕಚೇರಿಗೆ ಪತ್ರ ರವಾನಿಸಿದ ಬೆನ್ನಲ್ಲೇ ಪಡಿತರ “ಲೆಕ್ಕ’ ಸರಿಪಡಿಸಲು ಸಿಬಂದಿ ಕಸರತ್ತು ನಡೆಸಿದ್ದಾರೆ. ಹತ್ತಾರು ಎಕರೆ ಭೂ ಮಾಲಕರಿಗೂ ಆಹಾರ ಧಾನ್ಯ ನೀಡಿರುವ …

Read More »

ರಾಜ್ಯಗಳಿಗೆ ಬೇಕಾಗಿರುವುದು ನೆರವಿನ ಹಸ್ತವೇ ಹೊರತು ಉಪದೇಶದ ಬುರುಡೆ ಮಾತಲ್ಲ”

ನವದೆಹಲಿ: ದೇಶದ ಜನರನ್ನು ಕುರಿತು ಪ್ರಧಾನಿ ಮೋದಿ ಇಂದು ಮಾತನಾಡಿರುವ ಕುರಿತು ವ್ಯಂಗ್ಯವಾಡಿರುವ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಮೋದಿ ಎಂದಿನಂತೆ ತಮ್ಮ ಪ್ರವಚನ ಮಾಡಿದಂತಿದೆ ಎಂದು ಹೇಳಿದ್ದಾರೆ. ದೇಶದ ಜನರಿಗೆ ದೇಶದಲ್ಲಿ ಎದುರಾಗಿರುವ ಆರೋಗ್ಯ ಬಿಕ್ಕಟ್ಟಿನ ಬಗ್ಗೆ ಭರವಸೆ ನೀಡುವ ಬದಲು ಮೋದಿ ಎಂದಿನಂತೆ ತಮ್ಮ ಪ್ರವಚನ ಮಾಡಿದ್ದಾರೆ. ಆದರೆ ಇವರ ಭಾಷಣ ಜನರಲ್ಲಿ ವಿಶ್ವಾಸವನ್ನು ತುಂಬಿಲ್ಲ. ದೇಶ ಇದಕ್ಕಿಂತ ಉತ್ತಮ ಸಂಗತಿಯ ಕುರಿತು ಎದುರು …

Read More »