Breaking News
Home / 2021 / ಏಪ್ರಿಲ್ / 21 (page 2)

Daily Archives: ಏಪ್ರಿಲ್ 21, 2021

ಟಂಟಂಗೆ ಲಾರಿ ಡಿಕ್ಕಿ: 5 ಕೂಲಿ ಕಾರ್ಮಿಕರು ಸಾವು

ಟಂಟಂ ಆಟೋಗೆ ಕಾಂಕ್ರಿಟ್ ಮಿಕ್ಸರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಐವರು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಯಾದಗಿರಿಯಲ್ಲಿ ಸಂಭವಿಸಿದೆ. ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಕೊಳೂರು ಎಂ ಗ್ರಾಮದ ಬಳಿ ರಾಜ್ಯ ಹೆದ್ದಾರಿಯಲ್ಲಿ ಬುಧವಾರ ಬೆಳಿಗ್ಗೆ ಈ ದುರ್ಘಟನೆ ಸಂಭವಿಸಿದ್ದು, ಐವರು ಕೂಲಿ ಕಾರ್ಮಿಕರು ಸ್ಥಳದಲ್ಲಿಯೇ ಮೃತಪಟ್ಟರೆ ಮೂವರಿಗೆ ಗಂಭೀರ ಗಾಯಗಳಾಗಿವೆ. ವಡಗೇರ ತಾಲೂಕಿನ ಮುನಮುಟಗಿ ಗ್ರಾಮಸ್ಥರಾದ ಅಯ್ಯಮ್ಮ (60) ಶರಣಮ್ಮ (40) ಕಾಸೀಂಬೀ (40) ಭೀಮಬಾಯಿ (40) …

Read More »

ಚಾಕುವಿನಿಂದ ಇರಿದು ಕಟ್ಟಡ ಕಾರ್ಮಿಕನ ಕೊಲೆ

ಬೆಂಗಳೂರು, ಏ.21- ನಿರ್ಮಾಣ ಹಂತದ ಕಟ್ಟಡ ಕಾರ್ಮಿಕನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ವಿದ್ಯಾರಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ. ಹುಬ್ಬಳ್ಳಿ ನಿವಾಸಿ ಪ್ರಕಾಶ್ (25) ಕೊಲೆಯಾದ ಕಾರ್ಮಿಕ. ತಿಂಡ್ಲು ಸಮೀಪದ ಸಪ್ತಗಿರಿ ಲೇಔಟ್‍ನಲ್ಲಿ ನಿರ್ಮಾಣ ಹಂತದ ಕಟ್ಟಡ ಕಾಮಗಾರಿ ನಡೆಯುತ್ತಿದೆ. ಇಲ್ಲಿ ಪ್ರಕಾಶ್ ಗಾರೆ ಕೆಲಸ ಮಾಡಿಕೊಂಡು ಈ ಜಾಗದಲ್ಲೇ ನಿರ್ಮಿಸಲಾಗಿದ್ದ ಲೇಬರ್ ಶೆಡ್‍ನಲ್ಲಿ ನೆಲೆಸುತ್ತಿದ್ದನು. ರಾತ್ರಿ ಪ್ರಕಾಶ್ ಹೊರಗೆ ಹೋಗಿ ಮನೆಗೆ ವಾಪಸಾಗುತ್ತಿದ್ದಾಗ ಶೆಡ್‍ನಿಂದ …

Read More »

ಬೀದರ್ ತಾಲೂಕಿನ ಬಾವಗಿ ಗ್ರಾಮಸ್ಥರು ಸ್ವಯಂ ಲಾಕ್‌ಡೌನ್ ಜಾರಿಗೊಳಿಸಿದ್ದಾರೆ.

ಬೀದರ್, ಏಪ್ರಿಲ್ 21: ಕಳೆದ ಕೆಲವು ದಿನಗಳಿಂದ ಬೀದರ್ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕು ಪ್ರಕರಣಗಳಿಂದ ಜನರು ಆತಂಕಕ್ಕೊಳಗಾಗಿದ್ದು, ಬೀದರ್ ತಾಲೂಕಿನ ಬಾವಗಿ ಗ್ರಾಮಸ್ಥರು ಸ್ವಯಂ ಲಾಕ್‌ಡೌನ್ ಜಾರಿಗೊಳಿಸಿದ್ದಾರೆ. ರಾಜ್ಯ ಸರ್ಕಾರ ಲಾಕ್‌ಡೌನ್ ಮಾಡಲು ಮೀನಮೇಷ ಏಣಿಸುತ್ತಿರುವಾಗಲೇ ಬಾವಗಿ ಗ್ರಾಮಸ್ಥರ ನಿರ್ಣಯ ಎಲ್ಲರೂ ಹುಬ್ಬೇರಿಸುವಂತೆ ಮಾಡಿದೆ. ಸರ್ಕಾರ ಈ ಹಿಂದೆ ಮಾಡಿದ ಲಾಕ್‌ಡೌನ್ ಮಾದರಿಯಲ್ಲೇ ಬಾವಗಿಯಲ್ಲಿ ಕಳೆದ ಏ.೧೯ರಿಂದ ಸ್ವಯಂ ದಿಗ್ಭಂಧನ ವಿಧಿಸಲಾಗಿದೆ. ಗ್ರಾಮದಲ್ಲಿ ಡಂಗೂರ ಸಾರಿ ಗ್ರಾಮಸ್ಥರಿಗೆ ಲಾಕ್‌ಡೌನ್ …

Read More »

ನಾಸಿಕ್ ನಲ್ಲಿ ಆಕ್ಸಿಜನ್ ಸಿಲಿಂಡರ್ ಸೋರಿಕೆ : 22 ಮಂದಿ ಸಾವು

ಮಹಾರಾಷ್ಟ್ರ : ಮಹಾರಾಷ್ಟ್ರದ ನಾಸಿಕ್ ನಲ್ಲಿ ಕೋವಿಡ್ -19 ರೋಗಿಗಳಿಗೆ ಸಿವಿಕ್ ಆಸ್ಪತ್ರೆಯಲ್ಲಿ ಆಮ್ಲಜನಕದ ಪೂರೈಕೆಯಲ್ಲಿ ವ್ಯತ್ಯಾಸದಿಂದಾಗಿ 22 ರೋಗಿಗಳು ಬುಧವಾರ (ಏಪ್ರಿಲ್ 21) ಸಾವನ್ನಪ್ಪಿದ್ದಾರೆ ಎಂಬ ವರದಿಯಾಗಿದೆ.   ಜಾಕಿರ್ ಹುಸೇನ್ ಪುರಸಭೆಯ ಆಸ್ಪತ್ರೆಯಲ್ಲಿ ಆಮ್ಲಜನಕದ ಪೂರೈಕೆಯಲ್ಲಿ ವ್ಯತ್ಯಾಸದಿಂದಾಗಿ 22 ಜನರು ಸಾವನ್ನಪ್ಪಿದ್ದಾರೆ. ರೋಗಿಗಳು ವೆಂಟಿಲೇಟರ್‌ ಗಳಲ್ಲಿದ್ದರು ಮತ್ತು ಆಮ್ಲಜನಕದ ಪೂರೈಕೆಯಾಗುತ್ತಿದ್ದರೂ, ಆಮ್ಲಜನಕ ಪೂರೈಕೆ ತೊಟ್ಟಿಯಲ್ಲಿ ಸೋರಿಕೆಯ ಕಾರಣದಿಂದ ಈ ಅವಘಡ ಸಂಭವಿಸಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ …

Read More »

ಶ್ರೀರಾಮನವಮಿ ಅಂಗವಾಗಿ ರಮೇಶ್ ಜಾರಕಿಹೊಳಿ ಅವರ ಟ್ವಿಟರ್ ಖಾತೆಯಲ್ಲಿ ಶುಭಾಶಯ

ಬೆಂಗಳೂರು, ಏ.21- ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಸಕ್ರಿಯರಾಗಿದ್ದಾರೆ. ಶ್ರೀರಾಮನವಮಿ ಅಂಗವಾಗಿ ರಮೇಶ್ ಜಾರಕಿಹೊಳಿ ಅವರ ಟ್ವಿಟರ್ ಖಾತೆಯಲ್ಲಿ ಶುಭಾಶಯ ತಿಳಿಸಲಾಗಿದೆ. ಫೆ.18ರಿಂದ ನಿಷ್ಕ್ರಿಯವಾಗಿದ್ದ ಟ್ವಿಟರ್ ಖಾತೆ ಇಂದು ಬೆಳಗ್ಗೆ ಸಕ್ರಿಯವಾಗಿದೆ. ಸಿಡಿ ಪ್ರಕರಣದಲ್ಲಿ ಸಿಲುಕಿದ ರಮೇಶ್ ಜಾರಕಿಹೊಳಿ ಅವರು ಇದ್ದಕ್ಕಿದ್ದಂತೆ ಅಜ್ಞಾತವಾಸಕ್ಕೆ ತೆರಳಿದ್ದರು. ನ್ಯಾಯಾೀಶರ ಮುಂದೆ ಯುವತಿ ಹೇಳಿಕೆ ನೀಡಿದ ಬಳಿಕ ರಮೇಶ್ ಜಾರಿಕಿಹೊಳಿ ಬೆಳಗಾವಿ ಸೇರಿಕೊಂಡಿದ್ದು, ಕೊರೊನಾ ಸೋಂಕು ತಗುಲಿದೆ ಎಂದು ಚಿಕಿತ್ಸೆ …

Read More »

ಸೆಕೆಯಿಂದ ಪಾರಾಗೋಕೆ ಹೊಸ ಪ್ಲಾನ್​ ಕಂಡು ಹಿಡಿದ ಗ್ರಾಮಸ್ಥರು..!

ಬೇಸಿಗೆ ಕಾಲ ಶುರುವಾಗಿರೋದ್ರಿಂದ ಸೂರ್ಯನ ಶಾಖದಿಂದ ತಪ್ಪಿಸಿಕೊಳ್ಳೋಕೆ ಜನರು ಇನ್ನಿಲ್ಲದ ಹರಸಾಹಸ ಪಡ್ತಿದ್ದಾರೆ. ಫ್ಯಾನ್​, ಎಸಿಗಳು ಮನೆಯಲ್ಲಿ ಇರುವಾಗ, ಕಟ್ಟಡದಲ್ಲಿ ಇರುವಾಗ ಬಳಕೆ ಮಾಡಬಹುದು. ಆದರೆ ಮನೆಯಿಂದ ಹೊರಗಿದ್ದಾಗ ಸೆಖೆಯಿಂದ ಪಾರಾಗೋಕೆ ಏನು ಮಾಡೋದು..? ಎಂಬ ಯೋಚನೆ ಅನೇಕರಲ್ಲಿ ಇರಬಹುದು. ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆದ ಈ ವಿಡಿಯೋದಲ್ಲಿ ಗ್ರಾಮಸ್ಥನೊಬ್ಬ ಕತ್ತೆಯ ಸಹಾಯದಿಂದ ಸೆಕೆಯಿಂದ ಪಾರಾಗಿದ್ದಾನೆ. 54 ಸೆಕೆಂಡ್​ಗಳ ಈ ವಿಡಿಯೋದಲ್ಲಿ, ಮರುಭೂಮಿ ಪ್ರದೇಶದಲ್ಲಿ ಮಂಚದ ಮೇಲೆ ಜನರು ಕೂತಿರೋದನ್ನ …

Read More »

ಆಕ್ಸಿಜನ್ ಕೊರತೆ ನೀಗಿಸಲು ಟಾಟಾ ಸಹಾಯ ಹಸ್ತ ! 24 ಕ್ರಯೋಜೆನಿಕ್ ಕಂಟೇನರ್​ಗಳ ಆಮದು

ನವದೆಹಲಿ : ಭಾರತದಲ್ಲಿ ಉಂಟಾಗುತ್ತಿರುವ ಆಕ್ಸಿಜನ್ ಕೊರತೆಯನ್ನು ಕಡಿಮೆ ಮಾಡಲು ದ್ರವರೂಪದ ಆಕ್ಸಿಜನ್​​ಅನ್ನು ಸಾಗಣೆ ಮಾಡುವುದಕ್ಕಾಗಿ 24 ಕ್ರಯೋಜೆನಿಕ್ ಕಂಟೇನರ್​ಗಳನ್ನು ಆಮದು ಮಾಡುವುದಾಗಿ ಟಾಟಾ ಕಂಪೆನಿಗಳ ಗುಂಪು ಪ್ರಕಟಿಸಿದೆ. ಕರೊನಾ ವಿರುದ್ಧದ ಹೋರಾಟದಲ್ಲಿ ಇಡೀ ದೇಶ ಒಂದಾಗಿ ನಿಲ್ಲಬೇಕು ಎಂದು ನಿನ್ನೆ ಪ್ರಧಾನಿ ಮೋದಿ ಮಾಡಿದ ಮನವಿಗೆ ಸ್ಪಂದಿಸಿ, ಈ ಘೋಷಣೆ ಮಾಡಿದೆ. ನಿನ್ನೆ ರಾತ್ರಿ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಕರೊನಾ ರೋಗಿಗಳಿಗೆ ಉಂಟಾಗುತ್ತಿರುವ ಆಕ್ಸಿಜನ್ …

Read More »

ಮಾಸ್ಕ್​​ ಇಲ್ಲ, ಸಾಮಾಜಿಕ ಅಂತರ ಇಲ್ಲ : ಬಳ್ಳಾರಿಯಲ್ಲಿ ‘ಸಚಿವ ಶ್ರೀರಾಮುಲು’ ಚುನಾವಣಾ ಪ್ರಚಾರ

ಬಳ್ಳಾರಿ : ರಾಜ್ಯದಲ್ಲಿ ಕೊರೋನಾ ಸೋಂಕಿನ 2ನೇ ಅಲೆಯ ಅಬ್ಬರಿಸುತ್ತಿದೆ. ಇಂತಹ ಸಂದರ್ಭದಲ್ಲೇ ಉಪ ಚುನಾವಣೆಯ ಬಳಿಕ, ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆ ನಡೆಯುತ್ತಿದೆ. ಈ ಮಹಾನಗರ ಪಾಲಿಕೆ ಚುನಾವಣೆ ನಿಮಿತ್ತವಾಗಿ ನಗರದ 25ನೇ ವಾರ್ಡಿನಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸುತ್ತಿರುವಂತ ಸಚಿವ ಬಿ ಶ್ರೀರಾಮುಲು, ಕೊರೋನಾ ಸೋಂಕಿನ ಮಾರ್ಗಸೂಚಿ ಕ್ರಮಗಳನ್ನೇ ಗಾಳಿಗೆ ತೂರಿದ್ದಾರೆ. ಮಾಸ್ಕ್ ಇಲ್ಲದೇ, ಸಾಮಾಜಿಕ ಅಂತವನ್ನು ಕಾಯ್ದುಕೊಳ್ಳದೋ, ಚುನಾವಣಾ ಪ್ರಚಾರದಲ್ಲಿ ತೊಡಗಿರೋದು, ಸಾರ್ವಜನಿಕರ ಟೀಕೆಗೆ …

Read More »

ಹೆಚ್ಚುತ್ತಿರುವ ಸಾವಿನ ಸಂಖ್ಯೆ :ಚಟ್ಟಗಳಿಗೆ ಡಿಮ್ಯಾಂಡ್, ಜನರಲ್ಲಿ ಆತಂಕ

ಮೈಸೂರು : ಜಿಲ್ಲೆಯಲ್ಲಿ ಕೊರೊನಾ ಸೋಂಕಿತರು ಹಾಗೂ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಇದರ ಬೆನ್ನಲ್ಲೇ ಬಿದಿರು ಚಟ್ಟಕ್ಕೆ ಬೇಡಿಕೆ ಕೂಡ ಹೆಚ್ಚಾಗತೊಡಗಿದೆ. ನಂಜುಮಳಿಗೆ ವೃತ್ತದ ಬಳಿ ಬಿದಿರಿನಿಂದ ಗೃಹೋಪಯೋಗಿ ಸೇರಿದಂತೆ ನಾನಾ ವಸ್ತುಗಳನ್ನು ಮಾಡುತ್ತಿದ್ದ ವ್ಯಾಪಾರಿಗಳು ಇದೀಗ ಅಂತ್ಯ ಸಂಸ್ಕಾರಕ್ಕಾಗಿ ಚಟ್ಟ ತಯಾರಿಸಲು ಮುಂದಾಗಿದ್ದಾರೆ. ಪ್ರತಿದಿನ 20ಕ್ಕೂ ಹೆಚ್ಚು ಚಟ್ಟಗಳ ವ್ಯಾಪಾರ ನಡೆಯುತ್ತಿದೆ.  

Read More »

ಮೇ 1 ರ ನಂತರ ಕೊವಿಶೀಲ್ಡ್​ ದರ ಬದಲು, ಕೇಂದ್ರಕ್ಕೆ ರೂ 150, ರಾಜ್ಯಗಳಿಗೆ ರೂ 400, ಖಾಸಗಿ ಆಸ್ಪತ್ರೆಗಳಿಗೆ ರೂ 600 ಕ್ಕೆ ಲಸಿಕೆ ಮಾರಾಟ

ಮೇ 1 ರ ನಂತರ ಲಸಿಕೆ ಪಡೆಯುವ ಯುವಕರು ಈ ಸುದ್ದಿ ಓದಬೇಕು. ಕೊವಿಶೀಲ್ಡ್​ ಲಸಿಕೆ ಮೇ 1 ರಿಂದ ದುಬಾರಿ ಆಗಲಿದೆ. ಈಗ ಕೊವಿಶೀಲ್ಡ್​ ಲಸಿಕೆ ಸರಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿದೆ ಮತ್ತು ಖಾಸಗಿ ಆಸ್ಪತ್ರೆಯಲ್ಲಿ ಇದನ್ನು ರೂ 250 ಕ್ಕೆ ನೀಡಲಾಗುತ್ತಿದೆ. ಸೀರಂ ಇನ್ಸ್​​ಟಿಟ್ಯೂಟ್​ ಆಫ್​ ಇಂಡಿಯಾ ಉತ್ಪಾದಿಸುವ ಕೋವಿಶೀಲ್ಡ್ ಲಸಿಕೆಯನ್ನು ಇನ್ನು ಮುಂದೆ, ಅಂದರೆ ಮೇ 1 ರಿಂದ, ಮೂರು ದರಗಳಲ್ಲಿ ಮಾರಾಟ ಮಾಡಲಾಗುವುದು ಎಂದು ಸೀರಂ …

Read More »