Breaking News
Home / 2021 / ಏಪ್ರಿಲ್ / 17 (page 4)

Daily Archives: ಏಪ್ರಿಲ್ 17, 2021

ಬೆಳಗಾವಿ: ಕೋವಿಡ್ ಹಿನ್ನೆಲೆಯಲ್ಲಿ ಮತಗಟ್ಟೆಗಳಲ್ಲಿ ಮುಂಜಾಗ್ರತಾ ಕ್ರಮ

ಬೆಳಗಾವಿ: ‘ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಏ.17ರಂದು ನಡೆಯಲಿದೆ. ಕೋವಿಡ್-19 ಎರಡನೇ ಅಲೆಯ ಆತಂಕದ ಹಿನ್ನೆಲೆಯಲ್ಲಿ, ಮತಗಟ್ಟೆಗಳಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ’ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಕೆ. ಹರೀಶ್‌ಕುಮಾರ್‌ ತಿಳಿಸಿದರು. ಇಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಮತಯಂತ್ರವನ್ನು ಎಲ್ಲರೂ ಬಳಸುತ್ತಾರೆ ಎಂಬ ಆತಂಕ ಮತದಾರರಿಗೆ ಇದೆ. ರಾಜಕೀಯ ಪಕ್ಷದವರೂ ಈ ಬಗ್ಗೆ ಗಮನಸೆಳೆದಿದ್ದರು. ಹೀಗಾಗಿ, ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಚುನಾವಣಾ ಆಯೋಗ ಹಾಗೂ ಆರೋಗ್ಯ …

Read More »

ಮತದಾನ ಮಾಡಿ ಗೆಲ್ಲುವ ವಿಶ್ವಾಸ ನನ್ನಲಿದೆ ಎಂದ ಮಂಗಲ್ ಅಂಗಡಿ

ಬೆಳಗಾವಿ, ಏಪ್ರಿಲ್ 17: ಬೆಳಗಾವಿ ಲೋಕಸಭೆ ಉಪಚುನಾವಣೆ ಮತದಾನ ಪ್ರಕ್ರಿಯೆ ಬೆಳಗ್ಗೆ 7 ಗಂಟೆಯಿಂದ ಆರಂಭವಾಗಿದೆ. ಬಿಜೆಪಿ ಅಭ್ಯರ್ಥಿ ಮಂಗಲ ಅಂಗಡಿ ಮತದಾನ ಮಾಡಿದ ಪ್ರಮುಖರಲ್ಲಿ ಮೊದಲಿಗರಾಗಿದ್ದು ವಿಶೇಷ. ವಿಶ್ವೇಶ್ವರಯ್ಯ ನಗರದಲ್ಲಿರುವ ಸರ್ಕಾರಿ ಶಾಲೆಯ ಮತಗಟ್ಟೆ ಸಂಖ್ಯೆ ಎರಡರಲ್ಲಿ ಬೆಳಗ್ಗೆ 7 ಗಂಟೆಗೆ ಆಗಮಿಸಿದ ಮಂಗಲ ಅವರು ಮತದಾನ ಮಾಡಿದರು. ಮತಗಟ್ಟೆ ಆಗಮಿಸುತ್ತಿದ್ದಂತೆ ಮೊದಲಿಗೆ ಮತದಾರರ ಕಾಲು ಮುಗಿದು ಆಶೀರ್ವಾದ ಪಡೆದ ಮಂಗಲ ಅವರು ನಂತರ ಸರತಿ ಸಾಲಿನಲ್ಲಿ ನಿಂತರು. …

Read More »

ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷರ ಮೇಲೆ ಹಲ್ಲೆ

ಹೊನ್ನಾಳಿ: ತಾಲ್ಲೂಕಿನ ಕುಂದೂರು ಗ್ರಾಮದ ಹೊರವಲಯದ ಮನೆಯೊಂದರ ಮೇಲೆ ಐದು ಜನರಿದ್ದ ದುಷ್ಕರ್ಮಿಗಳ ತಂಡ ಗುರುವಾರ ರಾತ್ರಿ ಕುಂದೂರು ಗ್ರಾಮದ ನಿವಾಸಿ, ಹೊನ್ನಾಳಿ ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಎಂಜಿಆರ್ ಮಂಜುನಾಥ್ ಅವರ ಮೇಲೆ ಹಲ್ಲೆ ನಡೆಸಿದೆ. ತೀವ್ರವಾಗಿ ಗಾಯಗೊಂಡಿರುವ ಅವರನ್ನು ಹೊನ್ನಾಳಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಂದೂರು ಗ್ರಾಮಕ್ಕೆ ಪಿಎಸ್‌ಐ ಬಸನಗೌಡ ಬಿರಾದಾರ ಅವರು ಭೇಟಿ ನೀಡಿ ಪರಿಶೀಲಿಸಿದರು. ಈ ಸಂಬಂಧ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ‌. ತಪ್ಪಿಸಿಕೊಂಡಿರುವ ಇತರ …

Read More »

ರೇಕಿಂಗ್ : CBI ಮಾಜಿ ಮುಖ್ಯಸ್ಥ ರಂಜಿತ್ ಸಿನ್ಹಾ ನಿಧನ

ನವದೆಹಲಿ : ಸಿಬಿಐ ಮಾಜಿ ಮುಖ್ಯಸ್ಥ ರಂಜಿತ್ ಸಿನ್ಹಾ ಇಂದು ಬೆಳಗ್ಗೆ ನಿಧನರಾಗಿದ್ದಾರೆ. 1974 ರ ಬ್ಯಾಚ್ ಐಪಿಎಸ್ ಅಧಿಕಾರಿಯಾಗಿದ್ದ ರಂಜಿತ್ ಸಿನ್ಹಾ ಸಿಬಿಐ ನಿರ್ದೇಶಕರು ಮತ್ತು ಡಿಜಿ ಐಟಿಬಿಪಿ ಸೇರಿದಂತೆ ಹಲವು ಹುದ್ದೆಗಳನ್ನು ಅಲಂಕರಿಸಿದ್ದರು. ನಿವೃತ್ತ ಅಧಿಕಾರಿ ರಂಜಿತ್ ಸಿನ್ಹಾ ಅವರಿಗೆ ಕೊರೊನಾ ಸೋಂಕು ತಗುಲಿದ್ದು, ಇಂದು ಬೆಳಗ್ಗೆ 4.30 ಸುಮಾರಿಗೆ ದೆಹಲಿಯಲ್ಲಿ ನಿಧನರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Read More »

ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚ

ಬೆಂಗಳೂರು : ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗುತ್ತಿದ್ದು ಇದರ ನಿಯಂತ್ರಣಕ್ಕೆ ಸರಕಾರ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಇದರಂತೆ ರಾಜ್ಯದಲ್ಲಿ ನಡೆಸುವ ಸಾರ್ವಜನಿಕ ಸಮಾರಂಭಗಳು, ಆಚರಣೆಗಳು ಹಾಗೂ ಮನೋರಂಜನಾ ಕಾರ್ಯಕ್ರಮಗಳಿಗೆ ಹೆಚ್ಚಿನ ಮಿತಿಯನ್ನು ಹೇರಲಾಗಿದೆ. ಈ ಹೊಸ ಮಾರ್ಗಸೂಚಿಯು ಏಪ್ರಿಲ್ 30 ರ ವರೆಗೆ ಜಾರಿಯಲ್ಲಿರಲಿದೆ. ಮಾರ್ಗಸೂಚಿಗಳು : – ತೆರೆದ ಪ್ರದೇಶದಲ್ಲಿ ನಡೆಸುವ ಮದುವೆ ಕಾರ್ಯಕ್ರಮಗಳಲ್ಲಿ 200 ಮಂದಿಗೆ ಅವಕಾಶ ಕಲ್ಪಿಸಲಾಗಿದ್ದು, ಹಾಗೂ ಕಲ್ಯಾಣ …

Read More »

ಏಪ್ರಿಲ್ 18 ರಂದು ಸಿಎಂ ಜೊತೆ ನಡೆಯಬೇಕಿದ್ದ ಸರ್ವಪಕ್ಷ ಸಭೆ ಮುಂದೂಡಿಕೆ!

ಬೆಂಗಳೂರು : ಏಪ್ರಿಲ್ 18 ರಂದು ಸಿಎಂ ಯಡಿಯೂರಪ್ಪ ಕರೆದಿದ್ದ ಸರ್ವ ಪಕ್ಷ ಸಭೆಯನ್ನು ಮುಂದೂಡಿಕೆ ಮಾಡಲಾಗಿದೆ. ವಿಧಾನಸೌಧದಲ್ಲಿ ಏಪ್ರಿಲ್ 18 ಸಂಜೆ 4 ಗಂಟೆಗೆ ಸಭೆಯನ್ನು ಆಯೋಜನೆ ಮಾಡಲಾಗಿತ್ತು. ಕೋವಿಡ್ ನಿಯಂತ್ರಣ ಸಂಬಂಧ ಎಲ್ಲಾ ಪಕ್ಷದ ಮುಖಂಡರ ಜೊತೆ ಸಲಹೆ ಪಡೆಯುವ ಉದ್ದೇಶದಿಂದ ಸಿಎಂ ಸಭೆ ಕರೆದಿದ್ದರು. ಸಭೆಯಲ್ಲಿ ಸಿದ್ದರಾಮಯ್ಯ, ಕುಮಾರಸ್ವಾಮಿ, ಡಿಕೆ ಶಿವಕುಮಾರ್ ಸೇರಿದಂತೆ ಹಲವು ಮುಖಂಡರು ಭಾಗಿಯಾಗುತ್ತಾರೆ ಎಂದು ಹೇಳಲಾಗಿತ್ತು. ಇದೀಗ ಸಭೆಯನ್ನು ದಿಢೀರ್ ಮುಂದೂಡಿಕೆ …

Read More »

ತಮಿಳು ಚಿತ್ರರಂಗದ​ ಹಿರಿಯ ಹಾಸ್ಯ ಕಲಾವಿದ ವಿವೇಕ್​ ವಿಧಿವಶ

ಚೆನ್ನೈ: ನಿನ್ನೆ (ಏಪ್ರಿಲ್​ 16) ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದ ತಮಿಳು ಚಿತ್ರರಂಗದ ಹಿರಿಯ ಹಾಸ್ಯ ಕಲಾವಿದ ವಿವೇಕ್ ಚಿಕಿತ್ಸೆ ಫಲಿಸದೇ ಇಂದು ಬೆಳಗ್ಗೆ (ಏಪ್ರಿಲ್​ 17) ವಿಧಿವಶರಾಗಿದ್ದಾರೆ.​ ಎಡ ಮುಂಭಾಗದ ಅಪಧಮನಿ ನಾಳವು ಶೇ 100 ರಷ್ಟು ಬ್ಲಾಕ್​ ಆಗಿದ್ದು, ತೀವ್ರತರವಾದ ಹೃದಯಾಘಾತಕ್ಕೆ ಕಾರಣವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ವಿವೇಕ್ ಅವರ ಹೃದಯಾಘಾತಕ್ಕೆ ಗುರುವಾರ ತೆಗೆದುಕೊಂಡ ಕೋವಿಡ್​ ಲಸಿಕೆ ಕಾರಣ ಎಂಬ ಆರೋಪ ಕೇಳಿಬಂದಿತ್ತು. ಇದರ ಬೆನ್ನಲ್ಲೇ ಸ್ಪಷ್ಟನೆ ನೀಡಿದ …

Read More »

ರೈಲು ಇಳಿಯುತ್ತಿದ್ದಂತೆ ನಿಲ್ದಾಣದಿಂದ ಎದ್ನೋ ಬಿದ್ನೋ ಎಂದು ಓಡಿದ ಜನರು: ಕಾರಣ ಕೇಳಿದ್ರೆ ದಂಗಾಗ್ತೀರಾ!

ಪಟನಾ: ಎಲ್ಲಿ ನಮ್ಮನೆಲ್ಲ ಹಿಡಿದು ಕರೊನಾ ವೈರಸ್​ ಟೆಸ್ಟ್​ ಮಾಡಿಸುತ್ತಾರೋ ಎಂಬ ಭಯದಲ್ಲಿ ಮಕ್ಕಳು, ಯುವಕರು ಸೇರಿದಂತೆ ಅನೇಕರು ರೈಲು ನಿಲ್ದಾಣದಲ್ಲಿ ಯರ್ರಾಬಿರ್ರಿ ಓಡಿದ ಘಟನೆ ಬಿಹಾರದ ಬುಕ್ಸರ್​ನಲ್ಲಿ ಗುರುವಾರ ನಡೆದಿದೆ.​ ರೈಲು ಇಳಿದು ನಿಲ್ದಾಣದಿಂದ ಹೊರ ಹೋಗುವ ಮುಂಚೆ ಕರೊನಾ ಟೆಸ್ಟ್​ ಮಾಡಿಸಲು ಅಲ್ಲಿನ ಆರೋಗ್ಯ ಕಾರ್ಯಕರ್ತರು ಕೇಳಿದಾಗ, ಟೆಸ್ಟ್​ ತಪ್ಪಿಸಿಕೊಳ್ಳುವ ಉದ್ದೇಶದಿಂದಲೇ ಜನರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ರೈಲು …

Read More »