Breaking News
Home / 2021 / ಏಪ್ರಿಲ್ / 15 (page 3)

Daily Archives: ಏಪ್ರಿಲ್ 15, 2021

ನಾನು ಸಿ.ಎಂ. ಸ್ಥಾನದ ಆಕಾಂಕ್ಷಿ : ಶಾಸಕ ಯತ್ನಾಳ ಏ.18 ರಂದು ರಾಜ್ಯ ರಾಜಕಾರಣದ ಭವಿಷ್ಯ ಹೇಳುತ್ತೇನೆ

ವಿಜಯಪುರ :ನಾನು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಾಗಿದ್ದು, ಪಕ್ಷದ ಹೈಕಮಾಂಡ್ ಬಯಸಿದಲ್ಲಿ ಅವಕಾಶ ಕಲ್ಪಿಸಿದಲ್ಲಿ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ 150 ಸ್ಥಾನ ಗೆಲ್ಲಿಸಿ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರುತ್ತೇನೆ ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ನೇರವಾಗಿ ತಾವು ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿರುವುದಾಗಿ ಬಹಿರಂಗವಾಗಿ ಹೊರ ಹಾಕಿದ್ದಾರೆ. ಬುಧವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಉತ್ತರ ಕರ್ನಾಟಕದವರು ಅದರಲ್ಲೂ ವಿಜಯಪುರ ಜಿಲ್ಲೆಯವರು ಮುಖ್ಯಮಂತ್ರಿ ಸ್ಥಾನ ನಿರ್ವಹಸುವಲ್ಲಿ …

Read More »

ಮುಷ್ಕರ ನಿರತರಿಂದ 60 ಬಸ್ಸುಗಳಿಗೆ ಹಾನಿ,152 ಕೋಟಿ ರೂ.ಆದಾಯ ನಷ್ಟ : ಸಚಿವ ಲಕ್ಷ್ಮಣ ಸವದಿ

ಬೆಂಗಳೂರು: ಮುಷ್ಕರ ನಿರತ ಸಾರಿಗೆ ನೌಕರರ ವಿಚಾರದಲ್ಲಿ ನಮ್ಮ ಸರ್ಕಾರ ಎಷ್ಟೇ ಸಮಾಧಾನ, ಸೌಹಾರ್ದದ ಕ್ರಮ ಅನುಸರಿಸುತ್ತಿದ್ದರೂ ಸಹ ಕಳೆದ 7 ದಿನಗಳಲ್ಲಿ ರಾಜ್ಯಾದ್ಯಂತ 60 ಸರ್ಕಾರಿ ಬಸ್ಸುಗಳ ಮೇಲೆ ದಾಳಿ ಮಾಡಿ ಹಾನಿಗೊಳಿಸಿದ್ದು ತೀರ ಖಂಡನೀಯ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ. ರಾಜ್ಯದಲ್ಲಿ ನಡೆಯುತ್ತಿರುವ ಸಾರಿಗೆ ನೌಕರರ ಕುರಿತು ಇಂದು ತಮ್ಮ ಅಧಿಕೃತ ಫೇಸ್‍ಬುಕ್‍ನಲ್ಲಿ ಬರೆದುಕೊಂಡಿರುವ ಅವರು, ಕೆ.ಎಸ್.ಆರ್.ಟಿ.ಸಿ.ಯ 34, ಬಿ.ಎಂ.ಟಿ.ಸಿ.ಯ 3, ಈಶಾನ್ಯ ಸಾರಿಗೆಯ …

Read More »

ರಾಜ್ಯದ ವಿವಿಧೆಡೆ ಉತ್ತಮ ಮಳೆ : ಮಂಗಳೂರು ರಸ್ತೆ ಬದಿ ಕುಸಿತ, ಎರಡು ದಿನ ಎಲ್ಲೋ ಅಲರ್ಟ್‌

ಮಡಿಕೇರಿ/ಮಣಿಪಾಲ: ರಾಜ್ಯದಲ್ಲಿ ಪೂರ್ವ ಮುಂಗಾರು ಮಳೆ ಬಿರುಸುಗೊಂಡಿದೆ. ಕರಾವಳಿ, ದಕ್ಷಿಣ ಒಳನಾಡು, ಉತ್ತರ ಒಳನಾಡುಗಳಲ್ಲಿ ಕೆಲವು ದಿನಗಳಿಂದ ಉತ್ತಮ ಮಳೆಯಾಗುತ್ತಿದೆ. ಬುಧವಾರ ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯಾದ್ಯಂತ ಸಿಡಿಲು, ಗುಡುಗು ಸಹಿತ ಧಾರಾಕಾರ ಮಳೆಯಾಗಿದ್ದು, ಕೆಲವು ಭಾಗಗಳಲ್ಲಿ ಮರ, ಬರೆ ಕುಸಿದು ಹಾನಿಯಾದ ಘಟನೆ ನಡೆದಿದೆ. ಕೊಡಗಿನಲ್ಲಿ ಬುಧವಾರ ಸುಮಾರು ಒಂದು ತಾಸು ಸುರಿದ ಮಳೆಗೆ ಚರಂಡಿ ಮತ್ತು ರಸ್ತೆಗಳಲ್ಲಿ ನೀರು ತುಂಬಿ ಹರಿದಿದೆ. ರಾಜಾಸೀಟು ಉದ್ಯಾವನದ ಆವರಣದಲ್ಲಿ …

Read More »

ಮುಷ್ಕರನಿರತ ಸಾರಿಗೆ ನೌಕರರಿಗೆ ಸರ್ಕಾರದಿಂದ ಶಾಕ್: 271 ಚಾಲಕರು, ನಿರ್ವಾಹಕರು ಸಸ್ಪೆಂಡ್

ಬೆಂಗಳೂರು: ಮುಷ್ಕರನಿರತ ನೌಕರರ ಮೇಲೆ ಬಿಎಂಟಿಸಿ ಶಿಸ್ತು ಕ್ರಮ ಕೈಗೊಂಡಿದೆ. 271 ಚಾಲಕರು ಮತ್ತು ನಿರ್ವಾಹಕರನ್ನು ಅಮಾನತು ಮಾಡಲಾಗಿದೆ. ಕರ್ತವ್ಯಕ್ಕೆ ಗೈರು ಹಾಜರಾದ ಹಿನ್ನೆಲೆಯಲ್ಲಿ ಚಾಲಕರು ಮತ್ತು ನಿರ್ವಾಹಕರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. ಕಳೆದ 8 ದಿನದಲ್ಲಿ 495 ನೌಕರರ ಮೇಲೆ ಶಿಸ್ತಿನ ಅಸ್ತ್ರ ಪ್ರಯೋಗಿಸಲಾಗಿದೆ. ಸಾರಿಗೆ ನೌಕರರ ಮುಷ್ಕರ 9 ನೇ ದಿನಕ್ಕೆ ಕಾಲಿಟ್ಟಿದ್ದು, ಇಂದು ಸಂಜೆ ಮೇಣದಬತ್ತಿ ಹಿಡಿದು ಪ್ರತಿಭಟನೆ ನಡೆಸಲಾಗುವುದು. ಸಾರಿಗೆ ನೌಕರರ ಮುಷ್ಕರವನ್ನು …

Read More »

ಹಾವೇರಿಯಲ್ಲಿ ಹೋಳಿ ಹಬ್ಬದಲ್ಲಿ ಕೈಚಳಕ ತೋರಿದ್ದ ಕಳ್ಳರು ಪೊಲೀಸರ ಬಲೆಗೆ

ಹಾವೇರಿ: ಮಾರ್ಚ್ 28, 2021ರಂದು ಹಾವೇರಿ ನಗರದ ಜನರು ಅದರಲ್ಲೂ ಯಾಲಕ್ಕಿ ಓಣಿಯ ಜನರು ಅಕ್ಷರಶಃ ಬೆಚ್ಚಿ ಬಿದ್ದಿದ್ದರು. ಯಾಕಂದರೆ, ಮಾರ್ಚ್ 28, 2021ರಂದು ರಾತ್ರಿಯಿಡೀ ಜನರು ಹೋಳಿ ಹುಣ್ಣಿಮೆ ಪ್ರಯುಕ್ತ ಹಲಗೆ ಬಾರಿಸುವುದರಲ್ಲಿ ಬ್ಯುಸಿ ಆಗಿದ್ದರು. ಹೀಗೆ ಜನರು ಹಬ್ಬದ ಸಂಭ್ರಮದಲ್ಲಿ ಇದ್ದಾಗಲೇ ಹುಬ್ಬಳ್ಳಿ ಕಡೆಯಿಂದ ಬಂದಿದ್ದ ಮೂವರು ಖದೀಮರ ಗ್ಯಾಂಗ್ ಬೀಗ ಹಾಕಿದ ಮನೆಗಳನ್ನ ಟಾರ್ಗೆಟ್ ಮಾಡಿ ಹುಡುಕಾಡ್ತಿದ್ದರು‌. ಆಗ ಯಾಲಕ್ಕಿ ಓಣಿಯ ಗುಡಿಸಲು ಕೇರಿ ಓಣಿಯಲ್ಲಿ …

Read More »

ಹನುಮ ಜನ್ಮಭೂಮಿಯಿಂದ ರಾಮ ಜನ್ಮಭೂಮಿಗೆ ಸೈಕಲ್ ಯಾತ್ರೆ ಹೊರಟ ಹಾವೇರಿ ಯುವಕ

ಹಾವೇರಿ: ಯಾಲಕ್ಕಿ ಕಂಪಿನ ನಾಡಿನ ರಾಮಭಕ್ತ ಯುವಕ ಹನುಮ ಜನ್ಮಸ್ಥಳ ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟದಿಂದ ರಾಮಜನ್ಮಭೂಮಿ ಅಯೋಧ್ಯೆ ವರೆಗೆ ಸೈಕಲ್ ಯಾತ್ರೆ ಕೈಗೊಂಡಿದ್ದಾರೆ. ಈ ಸೈಕಲ್ ಯಾತ್ರೆಗೆ ಹುಕ್ಕೇರಿಮಠದ ಸದಾಶಿವ ಶ್ರೀಗಳು ಹಾಗೂ ಗಣ್ಯರು ಚಾಲನೆ ನೀಡಿದರು. ನಗರದ ವಿವೇಕಾನಂದ.ಎಸ್.ಇಂಗಳಗಿ ತಮ್ಮ ಒತ್ತಡದ ಕೆಲಸಗಳ ನಡುವೆ ದೇಶದ ಒಳಿತಿಗಾಗಿ ಸಂಕಲ್ಪ ಮಾಡಿಕೊಂಡು ಯಾತ್ರೆಯನ್ನು ಕೈಗೊಂಡಿದ್ದಾರೆ. ಕೊರೊನಾ ಮುಕ್ತ ಭಾರತವಾಗಬೇಕು. ಜಿಲ್ಲೆಯ ಅಭಿವೃದ್ಧಿ, ಸಮಸ್ತ ಕರ್ನಾಟಕ ಜನರ ಒಳಿತಿಗಾಗಿ ಹಾಗೂ …

Read More »

ಯಡಿಯೂರಪ್ಪ ಆರೋಗ್ಯದಲ್ಲಿ ಏರುಪೇರು-

ಬೆಳಗಾವಿ: ಉಪಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿರುವ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ಹೌದು. ಯಡಿಯೂರಪ್ಪ ಅವರಿಗೆ ಜ್ವರ ಬಂದಿರುವ ಹಿನ್ನೆಲೆಯಲ್ಲಿ ಬೆಳಗಾವಿಯ ಖಾಸಗಿ ಹೋಟೆಲ್ ಗೆ ವೈದ್ಯಕೀಯ ತಪಾಸಣೆ ನಡೆಸಲು ವೈದ್ಯರ ತಂಡ ಆಗಮಿಸಿದೆ. ಕೆ.ಎಲ್‍ಇ ಆಸ್ಪತ್ರೆಯ ವೈದ್ಯರಾದ ಮಾಧವ ಪ್ರಭು, ಸಂತೋಷ ಪಾಟೀಲ್ ಆಗಮಿಸಿ ಬಿಎಸ್‍ವೈ ಅವರ ಆರೋಗ್ಯ ತಪಾಸಣೆ ನಡೆಸಿದ್ದಾರೆ. ಇಸಿಜಿ, ಪಲ್ಸ್ ಆಕ್ಸಿ ಮೀಟರ್ ಸೇರಿದಂತೆ ವೈದ್ಯಕೀಯ ತಪಾಸಣೆ ನಡೆಸಲು ಉಪಕರಣವನ್ನು ಸಿಬ್ಬಂದಿ ತಂದಿದ್ದಾರೆ. …

Read More »

ಕೊನೆಯ ಸ್ಲಾಗ್ ಓವರ್ ಗಳಲ್ಲಿ ಬೌಲರ್ ಗಳ ಅತ್ಯುತ್ತಮ ಪ್ರದರ್ಶನದಿಂದ ಆರ್ ಸಿಬಿ ಹೈದರಾಬಾದ್ ವಿರುದ್ಧ 6 ರನ್‍ಗಳಿಂದ ಪಂದ್ಯವನ್ನು ರೋಚಕವಾಗಿ ಗೆದ್ದುಕೊಂಡಿದೆ.

ಚೆನ್ನೈ: ಕೊನೆಯ ಸ್ಲಾಗ್ ಓವರ್ ಗಳಲ್ಲಿ ಬೌಲರ್ ಗಳ ಅತ್ಯುತ್ತಮ ಪ್ರದರ್ಶನದಿಂದ ಆರ್ ಸಿಬಿ ಹೈದರಾಬಾದ್ ವಿರುದ್ಧ 6 ರನ್‍ಗಳಿಂದ ಪಂದ್ಯವನ್ನು ರೋಚಕವಾಗಿ ಗೆದ್ದುಕೊಂಡಿದೆ. ಗೆಲ್ಲಲು 150 ರನ್ ಗಳ ಸವಾಲು ಪಡೆದ ಹೈದರಾಬಾದ್ ಅಂತಿಮವಾಗಿ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 143 ರನ್ ಗಳಿಸಿ ಸೋಲನ್ನು ಅನುಭವಿಸಿತು. 96 ರನ್ ಗಳಿಗೆ 1 ವಿಕೆಟ್ ಕಳೆದುಕೊಂಡು ಉತ್ತಮ ಸ್ಥಿತಿಯಲ್ಲಿದ್ದ ಹೈದರಾಬಾದ್ 46 ರನ್ ಗಳಿಸುಷ್ಟರಲ್ಲಿ 8 …

Read More »