Breaking News
Home / 2021 / ಏಪ್ರಿಲ್ / 11 (page 2)

Daily Archives: ಏಪ್ರಿಲ್ 11, 2021

ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಭೇಟಿಯಾದ ಡಿ.ಕೆ. ಶಿ.

ಧಾರವಾಡ: ಉಪಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಭರ್ಜರಿ ಚುನಾವಣಾ ಪ್ರಚಾರ ಕೈಗೊಂಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪಂಚಮಸಾಲಿ ಶ್ರೀಗಳನ್ನು ಭೇಟಿಯಾಗಿದ್ದಾರೆ. ಧಾರವಾಡಕ್ಕೆ ಆಗಮಿಸಿರುವ ಡಿ.ಕೆ.ಶಿವಕುಮಾರ್, ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಅವರನ್ನು ಭೇಟಿ ಮಾಡಿ, ಆಶೀರ್ವಾದ ಪಡೆದರು. ಶಾಸಕ ಗಣೇಶ್ ಹುಕ್ಕೇರಿ, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಮತ್ತಿತರರು ಉಪಸ್ಥಿತರಿದ್ದರು.

Read More »

ಮದ್ವೆಯಾಗಿ ಕೊಲ್ಹಾಪುರದಿಂದ ಬೆಳಗಾವಿಗೆ ಬಂದ್ರು – ಮೊದಲ ರಾತ್ರಿಯೇ ಕನ್ಯತ್ವ ಪರೀಕ್ಷೆ ಶೀಲ ಶಂಕಿಸಿ ವಿಚ್ಛೇಧನ

ಮುಂಬೈ: ಪತ್ನಿಯರ ಶೀಲ ಶಂಕಿಸಿ ಇಬ್ಬರು ಸಹೋದರಿಯರನ್ನು ಅವರ ಪತಿಯಂದಿರು ಮನೆಯಿಂದ ಹೊರ ಹಾಕಿರುವ ಘಟನೆ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ನಡೆದಿದೆ. ಈ ಪತಿಯದಿರ ಕುಟುಂಬದ ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರಕರಣದ ಹಿನ್ನಲೆ: 2020ರಲ್ಲಿ ನವೆಂಬರ್‍ನಲ್ಲಿ ಕಂಬರ್ಜಾಟ್ ಸಮುದಾಯಕ್ಕೆ ಸೇರಿದ ಇಬ್ಬರು ಅಕ್ಕತಂಗಿಯರು, ಅದೇ ಸಮುದಾಯದ ಕರ್ನಾಟಕದ ಬೆಳಗಾವಿ ಒಂದೇ ಸಮುದಾಯದ ಯುವಕರನ್ನು ವಿವಾಹವಾದರು. ಮೊದಲ ರಾತ್ರಿಯಂದು ಸಮುದಾಯ ಸಂಪ್ರದಾಯದಂತೆ ಅಕ್ಕತಂಗಿಯರ ಶೀಲ ಪರೀಕ್ಷೆಸಲಾಗಿದೆ. ಈ ಪರೀಕ್ಷೆಯಲ್ಲಿ ಅಕ್ಕ ವಿಫಲಳಾಗಿದ್ದಾಳೆ. ಆದರೆ …

Read More »

ರೆಸಾರ್ಟ್‍ನಲ್ಲಿ ಕೊರೊನಾ ನಿಯಮ ಉಲ್ಲಂಘನೆ ಪಾರ್ಟಿ – 150ಕ್ಕೂ ಹೆಚ್ಚು ಜನ ಪೊಲೀಸ್ ವಶಕ್ಕೆ

ಹಾಸನ: ಖಾಸಗಿ ರೆಸಾರ್ಟ್ ಮೇಲೆ ಪೊಲೀಸರ ದಾಳಿ ನಡೆಸಿ ಕೊರೊನಾ ನಿಯಮ ಮೀರಿ ಪಾರ್ಟಿಯಲ್ಲಿ ಭಾಗವಹಿಸಿದ್ದ 150 ಕ್ಕೂ ಹೆಚ್ಚು ಜನ ವಶಕ್ಕೆ ಪಡೆದಿರುವ ಘಟನೆ ಹಾಸನದಲ್ಲಿ ನಡೆದಿದೆ. ಹಾಸನ ಜಿಲ್ಲೆ, ಆಲೂರು ತಾಲೂಕಿನ ಹಲವೆಡೆ ಖಾಸಗಿ ರೆಸಾರ್ಟ್ ಮೇಲೆ ದಾಳಿ ನಡೆಸಿದ ಎಸ್‍ಪಿ ಶ್ರೀನಿವಾಸ್ ಗೌಡ ನೇತೃತ್ವದ ತಂಡ ರೆಸಾರ್ಟ್‍ನಲ್ಲಿ ಪಾರ್ಟಿಯಲ್ಲಿ ತೊಡಗಿದ್ದ ಯುವಕ ಯುವತಿಯರನ್ನು ವಶಕ್ಕೆ ಪಡೆದಿದ್ದಾರೆ. ಒಂದು ಕಡೆ ಹಾಸನದಲ್ಲಿ ಕೊರೊನ ಆತಂಕ ದಿನದಿಂದ ದಿನಕ್ಕೆ …

Read More »

ಸಾರಿಗೆ ಅಧಿಕಾರಿಗಳ ವಿರುದ್ಧ ಖಾಸಗಿ ಬಸ್ ಚಾಲಕರ ಆಕ್ರೋಶ

ಮೈಸೂರು: ಸಾರಿಗೆ ಅಧಿಕಾರಿಗಳು ಮತ್ತು ಖಾಸಗಿ ಬಸ್‍ಗಳ ಚಾಲಕರು, ನಿರ್ವಾಹಕರ ನಡುವೆ ವಾಗ್ವಾದ ನಡೆದಿರುವ ಘಟನೆ ಮೈಸೂರಿನ ಕೇಂದ್ರಿಯ ಬಸ್ ನಿಲ್ದಾಣದಲ್ಲಿ ನಡೆದಿದೆ. ಸಾರಿಗೆ ನೌಕರರು ಮುಷ್ಕರ ಮುಂದುವರಿದ ಹಿನ್ನೆಲೆ ಕೆಎಸ್‌ಆರ್‌ಟಿಸಿ ಬಸ್‍ಗಳು ಇಲ್ಲದೇ ಖಾಸಗಿ ಬಸ್‍ಗಳು ಸೇವೆ ಸಲ್ಲಿಸುತ್ತಿವೆ. ಇದೀಗ ಒಂದೊಂದಾಗಿ ಕೆಎಸ್‌ಆರ್‌ಟಿಸಿ ಬಸ್‍ಗಳು ರಸ್ತೆಗಿಳಿಯುತ್ತಿದೆ. ಹಾಗಾಗಿ ಖಾಸಗಿ ಬಸ್‍ಗಳ ಚಾಲಕರು ಮತ್ತು ನಿರ್ವಾಹಕರು ನಾವು ಬೆಳಿಗ್ಗೆಯಿಂದಲೇ ನಮ್ಮ ಬಸ್‍ಗಳನ್ನು ತಂದು ನಿಲ್ಲಿಸಿ ಕಾದು ಕುಳಿತಿದ್ದೇವೆ. ನೀವು ಈಗ …

Read More »

‘ನಿನ್ನ ವಿಳಾಸ ಹೇಳು, ಬ್ರಾ ಕಳುಹಿಸುತ್ತೇನೆ’ ಎಂದ ಯುವತಿಗೆ ನಟಿ ಕೊಟ್ಟ ಉತ್ತರವೇನು?

ಸಾಮಾಜಿಕ ಜಾಲತಾಣದಲ್ಲಿ ಬಾಡಿ ಶೇಮಿಂಗ್ ಘಟನೆಗಳು ಹೆಚ್ಚಾಗಿ ವರದಿಯಾಗುತ್ತಿದೆ. ಇತ್ತೀಚಿಗಷ್ಟೆ ನೆಟ್ಟಿಗನೊಬ್ಬ ಬ್ರಾ (ಒಳ ಉಡುಪು) ಸೈಜ್ ಕೇಳಿದ್ದ ಘಟನೆ ಕುರಿತು ಬಾಲಿವುಡ್ ಕಿರುತೆರೆ ನಟಿ ಸಯಂತನಿಗೆ ಘೋಷ್ ಹೇಳಿಕೊಂಡಿದ್ದರು. ಇದೀಗ, ಕಿರುತೆರೆ ನಟಿ ಅನುಷಾ ದಾಂಡೇಕರ್ ಅವರಿಗೆ ”ನಿನ್ನ ವಿಳಾಸ ಕಳುಹಿಸಿ, ನನ್ನದೊಂದು ಜೊತೆ ಬ್ರಾ (ಒಳ ಉಡುಪು) ಕಳುಹಿಸುತ್ತೇನೆ” ಎಂದು ಕಾಮೆಂಟ್ ಮಾಡಿದ್ದಾರೆ. ಈ ಕಾಮೆಂಟ್ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಅಗಿದೆ.   ಕಿರುತೆರೆ ನಟಿ …

Read More »

ಅಜಯ್ ದೇವಗನ್-ಅಮಿತಾಭ್ ಸಿನಿಮಾದ ಚಿತ್ರೀಕರಣಕ್ಕೆ ಕೊರೊನಾ ಅಡ್ಡಿ

ಬಾಲಿವುಡ್ ನಟ ಅಜಯ್ ದೇವಗನ್ ನಿರ್ದೇಶನದಲ್ಲಿ ತಯಾರಾಗುತ್ತಿರುವ ‘ಮೇಡೇ’ ಸಿನಿಮಾದ ಚಿತ್ರೀಕರಣ ಮುಂದೂಡಿಕೆಯಾಗಿದೆ. ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ನಿಗದಿಯಾಗಿದ್ದ ಶೂಟಿಂಗ್ ತಾತ್ಕಾಲಿಕವಾಗಿ ಮುಂದಕ್ಕೆ ಹಾಕಲಾಗಿದೆ. 2020ರ ಡಿಸೆಂಬರ್ ತಿಂಗಳಲ್ಲಿ ಸೆಟ್ಟೇರಿದ್ದ ‘ಮೇಡೇ’ ಸಿನಿಮಾ ಅದಾಗಲೇ ಕೆಲವು ದೃಶ್ಯಗಳ ಚಿತ್ರೀಕರಣ ಮಾಡಿದೆ. ಆದರೆ, ಕೋವಿಡ್ ಕಾರಣದಿಂದ ಶೂಟಿಂಗ್ ಸ್ಥಗಿತಗೊಂಡಿತ್ತು.   ಅಂದ್ಹಾಗೆ, ಏಪ್ರಿಲ್ ಕೊನೆಯಲ್ಲಿ ದೋಹಾದಲ್ಲಿ ಶೂಟಿಂಗ್ ಶುರು ಮಾಡಲು ಎಲ್ಲಾ ತಯಾರಿ ನಡೆದಿತ್ತು. ಈ ವೇಳೆ ಅಜಯ್ …

Read More »

ಇಂದಿರಾನಗರದ ಗೂಂಡಾ ನಾನೇ’ ಎಂದು ದ್ರಾವಿಡ್‌ಗೆ ಸೆಡ್ಡು ಹೊಡೆದ ಖ್ಯಾತ ನಟಿ

ಸಿಲಿಕಾನ್ ಸಿಟಿ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡ ಕ್ರಿಕೆಟಿಗ ರಾಹುಲ್ ದ್ರಾವಿಡ್ ”ನಾನು ಇಂದಿರಾನಗರದ ಗೂಂಡಾ” ಎಂದು ಕಿರುಚಾಡಿ ಅಕ್ಕಪಕ್ಕದ ಕಾರುಗಳ ಗಾಜು ಪುಡಿ ಪುಡಿ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಂದ್ಹಾಗೆ, ಇದು ಜಾಹೀರಾತು. ಕ್ರಿಕೆಟ್ ಜಗತ್ತಿನ ಜಂಟಲ್‌ಮ್ಯಾನ್ ಎಂದೇ ಗುರುತಿಸಿಕೊಂಡಿರುವ ರಾಹುಲ್ ದ್ರಾವಿಡ್ ಅವರನ್ನು ಹಿಂದೆಂದೂ ಈ ರೀತಿ ನೋಡಿರಲು ಸಾಧ್ಯವಿಲ್ಲ. ಆದರೆ, ಜಾಹೀರಾತಿಗಾಗಿ ತಮ್ಮ ಉಗ್ರರೂಪ ತೋರಿಸಿದ್ದಾರೆ. ಇದೀಗ, ‘ನಾನು ಇಂದಿರಾನಗರದ ಗೂಂಡಾ’ ಎಂಬ ಡೈಲಾಗ್ …

Read More »

ಬಸ್ ನಲ್ಲಿ ಸಾಗಿಸುತ್ತಿದ್ದ 3.25 ಕೋಟಿ ಪತ್ತೆ ; ಬೆಂಗಳೂರಿನ ಚಾಲಕ ಸೇರಿ ಇಬ್ಬರು‌ ಸೆರೆ

ಕರ್ನೂಲ್(ಆಂಧ್ರಪ್ರದೇಶ),ಏ.10 : ತೆಲಂಗಾಣ ಗಡಿಯಲ್ಲಿರುವ ಪಂಚಲಿಂಗಲ ಚೆಕ್‌ಪೋಸ್ಟ್‌ನಲ್ಲಿ ಶೋಧ ನಡೆಸುತ್ತಿದ್ದ ವೇಳೆ ಖಾಸಗಿ ಬಸ್‌ನಲ್ಲಿ ಹೈದರಾಬಾದ್‌ನಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ವ್ಯಕ್ತಿಯ ಬಳಿ 3.25 ಕೋಟಿ ನಗದು ಪತ್ತೆಯಾಗಿದೆ. ಹಣ ಸಾಗಿಸುತ್ತಿದ್ದ ಬೆಂಗಳೂರಿನ ಖಾಸಗಿ ಟ್ರಾವೆಲ್ ಕಂಪನಿಯಲ್ಲಿ ಡ್ರೈವರ್ ಆಗಿ ಕೆಲಸ ಮಾಡುತ್ತಿರುವ ಬಿ.ಎ.ಚೇತನ್ ಕುಮಾರ್ ಮತ್ತು ಚೆನ್ನೈ ಮೂಲದ ಅರುಣ್ ಎನ್ನುವ ಇಬ್ಬರನ್ನು ಬಂಧಿಸಿ ಅವರು ಸಾಗಿಸುತ್ತಿದ್ದ 3.25 ಕೋಟಿ ಹಣವನ್ನು ಕರ್ನೂಲ್ ವಿಶೇಷ ಜಾರಿ ಬ್ಯೂರೋ(ಎಸ್‌ಇಬಿ)ದ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ …

Read More »

ಬೆಂಗಳೂರಲ್ಲಿ ನಕಲಿ ಕೋವಿಡ್ ಟೆಸ್ಟ್; ಇಬ್ಬರ ವಿರುದ್ಧ ಎಫ್‌ಐಆರ್

ಬೆಂಗಳೂರು, ಏಪ್ರಿಲ್ 11; ಬೆಂಗಳೂರು ನಗರದಲ್ಲಿ ಕೋವಿಡ್ ಸೋಂಕಿನ ಸಂಖ್ಯೆ ಹೆಚ್ಚಾಗುತ್ತಿದೆ. ನಗರದಲ್ಲಿ ಶನಿವಾರದಿಂದ ರಾತ್ರಿ ಕರ್ಫ್ಯೂ ಜಾರಿಗೊಳಿಸಲಾಗಿದೆ. ಇದರ ನಡುವೆಯೇ ಆರೋಗ್ಯ ಇಲಾಖೆ ಸಿಬ್ಭಂದಿಗಳ ನಿರ್ಲಕ್ಷ್ಯವೂ ಬೆಳಕಿಗೆ ಬಂದಿದೆ. ಕೋಡಿಗೆಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳಾದ ನಾಗರಾಜ್ ಮತ್ತು ಹಿರೇಮಠ ಸರ್ಕಾರಕ್ಕೆ ಲೆಕ್ಕ ತೋರಿಸಲು ನಕಲಿ ಕೋವಿಡ್ ಟೆಸ್ಟ್ ಮಾಡುತ್ತಿದ್ದರು. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ನಾಗರಾಜ್ ಮತ್ತು ಹಿರೇಮಠ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, …

Read More »

ಕರ್ನಾಟಕದಲ್ಲಿ ಹೊಸದಾಗಿ 6955 ಕೊರೊನಾ ಸೋಂಕಿತರು ಪತ್ತೆ

ಬೆಂಗಳೂರು, ಏಪ್ರಿಲ್ 10: ಕರ್ನಾಟಕದಲ್ಲಿ ಹೊಸದಾಗಿ 6955 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ.ಆಸ್ಪತ್ರೆಯಿಂದ ಇಂದು 3350 ಮಂದಿ ಬಿಡುಗಡೆಗೊಂಡಿದ್ದು, ಈವರೆಗೆ ಒಟ್ಟು 980519 ಮಂದಿ ಡಿಸ್ಚಾರ್ಜ್ ಆಗಿರುವುದುಆಗಿ ತಿಳಿಸಿದ್ದಾರೆ. ಒಂದೇ ದಿನ 36 ಮಂದಿ ಸಾವನ್ನಪ್ಪಿದ್ದು, ಇದುವರೆಗೆ 12,849 ಮಂದಿ ಮೃತಪಟ್ಟಿದ್ದಾರೆ. 61653 ಸಕ್ರಿಯ ಪ್ರಕರಣಗಳಿವೆ, ಒಟ್ಟು 1055040 ಪ್ರಕರಣಗಳಿವೆ. 405 ಮಂದಿ ಐಸಿಯುನಲ್ಲಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಬಾಗಲಕೋಟೆ 44, ಬಳ್ಳಾರಿ 62, ಬೆಳಗಾವಿ 75, ಬೆಂಗಳೂರು ಗ್ರಾಮಾಂತರ …

Read More »