Breaking News
Home / 2021 / ಮಾರ್ಚ್ (page 13)

Monthly Archives: ಮಾರ್ಚ್ 2021

ರಾಜ್ಯದಲ್ಲಿ ‘ಭ್ರಷ್ಟ’ ಮತ್ತು ‘ಪ್ರಾಮಾಣಿಕ ರಾಜಕಾರಣಿಗಳು’ ಎಂಬ ಎರಡು ಗುಂಪುಗಳಿವೆ ಎಂದ ಯತ್ನಾಳ್

ಹಾವೇರಿ: ರಾಜ್ಯದಲ್ಲಿ ಕೋವಿಡ್ ಚರ್ಚೆಗಿಂತಲೂ ಹೆಚ್ಚಾಗಿ ಸಿಡಿ ಕೇಸ್ ಗೆ ಸಂಬಂಧಿಸಿದ ಚರ್ಚೆ ಜೋರಾಗಿದೆ. ಮಾಜಿ ಸಚಿವ ರಮೇಶ ಜಾರಕಿಹೊಳಿ ಸೆಕ್ಸ್ ಸಿಡಿಗೆ ಸಂಬಂಧಿಸಿದಂತೆ ಸಂತ್ರಸ್ತ ಯುವತಿ ಈಗಾಗಲೇ ಮಹಾನಾಯಕನ ಹೆಸರು ಬಾಯಿಬಿಟ್ಟಿದ್ದಾಳೆ. ಇದರ ಮಧ್ಯೆ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ ‘ಕಾಂಗ್ರೆಸ್ ಮಹಾನಾಯಕ’ ಮತ್ತು ‘ಬಿಜೆಪಿಯ ಯುವರಾಜ’ ಇವರ ಬಳಿ ಸಿ.ಡಿ. ತಯಾರಿಸುವ ಕಾರ್ಖಾನೆಗಳಿವೆ. ಇವರು ಸಿ.ಡಿ.ಗಳನ್ನೂ ಖರೀದಿ ಮಾಡುತ್ತಾರೆ. ಈಗಾಗಲೇ ಕೆಲವೇ ದಿನಗಳಲ್ಲಿ ‘ಬಿಜೆಪಿ …

Read More »

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ – ಮ್ಯಾಜಿಸ್ಟ್ರೇಟ್ ಮುಂದೆ ಯುವತಿ ನೀಡುವ ಹೇಳಿಕೆಯತ್ತ ಎಲ್ಲರ ಚಿತ್ತ

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಇದೀಗ ಸಿಡಿಯಲ್ಲಿರುವ ಯುವತಿ ನೀಡುವ ಹೇಳಿಕೆಯ ಮೇಲೆ ಎಲ್ಲರ ಗಮನ ನೆಟ್ಟಿದೆ. ಎಸ್ ಐ ಟಿ ವಿಚರಣೆ ಬಳಿಕ ಸುದ್ದಿಗೋಷ್ಠಿ ನಡೆಸಿದ್ದ ಸಿಡಿ ಲೇಡಿ ಪೋಷಕರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಇದರ ಬೆನ್ನಲ್ಲೇ ತಾನು ನಿರಪರಾಧಿ ಎಂದು ಯುವತಿ ಪೋಷಕರೇ ಹೇಳಿದ್ದಾರೆ ಎಂದಿರುವ ರಮೇಶ್ ಜಾರಕಿಹೊಳಿ ಇಂದು ಡಿ.ಕೆ.ಶಿವಕುಮಾರ್ ವಿರುದ್ಧ …

Read More »

ಡಿ.ಕೆ. ಶಿವಕುಮಾರ್ ಮಗಳನ್ನು ಒತ್ತೆಯಾಳಾಗಿಟ್ಟುಕೊಂಡಿದ್ದಾರೆ :ಸಿಡಿ ಯುವತಿ ಪೋಷಕರು

ಬೆಳಗಾವಿ: ರಮೇಶ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಎಸ್‌ಐಟಿ ವಿಚಾರಣೆಗೆ ಹಾಜರಾಗಿದ್ದ ಯುವತಿ ಪೋಷಕರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ತಮ್ಮ ಮಗಳನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡಲಾಗ್ತಿದೆ. ಡಿ.ಕೆ. ಶಿವಕುಮಾರ್ ಮಗಳನ್ನು ಒತ್ತೆಯಾಳಾಗಿಟ್ಟುಕೊಂಡಿದ್ದಾರೆ ಎಂದು ಪೋಷಕರು ದೂರಿದ್ದಾರೆ. ಅವರು ಬೆಂಗಳೂರಿಂದ ಹೊರಟು ತಡರಾತ್ರಿ 3 ಗಂಟೆಗೆ ಬೆಳಗಾವಿಗೆ ಆಗಮಿಸಿದ್ದಾರೆ. ಎಸ್‌ಐಟಿ ಅಧಿಕಾರಿಗಳ ಜೊತೆ ನೇರವಾಗಿ ಎಪಿಎಂಸಿ ಠಾಣೆಗೆ ಆಗಮಿಸಿದ್ದಾರೆ. ಎಸಿಪಿ ಪರಮೇಶ್ವರ್ ನೇತೃತ್ವದಲ್ಲಿ …

Read More »

ರಮೇಶ್ ಜಾರಕಿಹೊಳಿ ಬೆಂಬಲಿಗರಿಂದ ಡಿಕೆಶಿ ಶವಯಾತ್ರೆ

ಗೋಕಾಕ : ಸಿಡಿ ಪ್ರಕರಣದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಕೈವಾಡವಿದೆ ಎಂದು ರಮೇಶ್ ಆರೋಪಿಸಿದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡುವಂತೆ ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಇಲ್ಲಿನ ಬಸವೇಶ್ವರ ವೃತ್ತದಲ್ಲಿ ಭಾನುವಾರ ಬೃಹತ್ ಪ್ರತಿಭಟನೆ ನಡೆಸಿದರು. ಇಲ್ಲಿನ ಗೋಕಾಕ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಬಸವೇಶ್ವರ ವೃತ್ತದವರೆಗೆ ಮೆರವಣಿಗೆ ನಡೆಸಿ, ಡಿ.ಕೆ. ಶಿವಕುಮಾರ್ ಅವರ ಅಣುಕು ಶವ ಯಾತ್ರೆ ನಡೆಸಿ, ಕೈಯಲ್ಲಿ ಖಳನಾಯಕ ಡಿ.ಕೆ.ಶಿಗೆ ಶ್ರದ್ಧಾಂಜಲಿ ಎಂಬ ಬ್ಯಾನರ್ ಹಿಡಿದು ಆಕ್ರೋಶ ವ್ಯಕ್ತ …

Read More »

ಸಚಿನ್ ತೆಂಡೂಲ್ಕರ್ ಗೂ ಕೊರೊನಾ ಸೋಂಕು ದೃಢ

ಮುಂಬೈ: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಗೂ ಕೊರೊನಾ ಸೋಂಕು ದೃಢಪಟ್ಟಿದೆ. ಈ ಕುರಿತು ಟ್ವೀಟ್ ಮಾಡಿ ಮಾಹಿತಿ ನೀಡಿರುವ ತೆಂಡೂಲ್ಕರ್ ತಮಗೆ ಕೊರೊನ ಅಪಾಸಿಟಿವ್ ಬಂದಿರುವುದಾಗಿ ತಿಳಿಸಿದ್ದಾರೆ. ನಾನು ಕೋವಿಡ್ ಟೆಸ್ಟ್ ಗೆ ಒಳಗಾಗಿದ್ದೆ. ಈ ವೇಳೆ ವರದಿಯಲ್ಲಿ ಕೋವಿಡ್ ಪಾಸಿಟಿವ್ ಬಂದಿದೆ. ನನ್ನನ್ನು ಹೊರತುಪಡಿಸಿ ಮನೆಯ ಉಳಿದ ಸದಸ್ಯರ ವರದಿ ನೆಗೆಟಿವ್ ಬಂದಿದೆ. ಮನೆಯಲ್ಲಿ ಕ್ವಾರಂಟೈನ್ ಆಗಿದ್ದು, ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿಸಿದ್ದಾರೆ.

Read More »

ಡಿಕೆಎಸ್​ ವಿರುದ್ಧದ ಆರೋಪದ ಗಂಭೀರ ತನಿಖೆ ನಡೆಸಬೇಕು- ಪ್ರಹ್ಲಾದ್ ಜೋಶಿ

ಬೆಳಗಾವಿ: ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ವಿರುದ್ಧ ಸಿಡಿ ಪ್ರಕರಣದ ಸಂತ್ರಸ್ತೆಯ ಯುವತಿಯ ಪೋಷಕರು ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಯೆ ನೀಡಿದ್ದಾರೆ. ಬೆಳಗಾವಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು.. ಯುವತಿಯ ಪೋಷಕರು ಡಿ.ಕೆ. ಶಿವಕುಮಾರ್ ಮೇಲೆ ಮಾಡಿರುವ ಆರೋಪ ವಿಚಾರ ಗಂಭೀರದುದ್ದು. ಈಗಾಗಲೇ ಸಿಡಿ ವಿಚಾರವಾಗಿ ರಾಜ್ಯ ಸರ್ಕಾರದ ತನಿಖಾ ಸಂಸ್ಥೆಗಳಿಗೆ ಸಂಪೂರ್ಣವಾಗಿ ಅಧಿಕಾರ ನೀಡಲಾಗಿದೆ. ಎಸ್ ಐ ಟಿ ಡಿ.ಕೆ. ಶಿವಕುಮಾರ್ ವಿರುದ್ಧ …

Read More »

ಕೇಂದ್ರ ಸರ್ಕಾರ ರೈತರ ಬೇಡಿಕೆ ಈಡೇರಿಸದಿದ್ರೆ 16 ರಾಜ್ಯಗಳ ವಿದ್ಯುತ್ ಸಂಪರ್ಕ ಕಟ್- ರಾಕೇಶ್ ಟಿಕಾಯತ್

ಕೇಂದ್ರ ಸರ್ಕಾರ ರೈತರ ಬೇಡಿಕೆಗಳನ್ನು ಈಡೇರಿಸದಿದ್ದರೆ 16 ರಾಜ್ಯಗಳ ವಿದ್ಯುತ್ ಸಂಪರ್ಕವನ್ನೇ ಕಟ್ ಮಾಡ್ತೇವೆ ಎಂದು ಭಾರತೀಯ ಕಿಸಾನ್ ಯೂನಿಯನ್ ಸಂಘಟನೆಯ ರೈತ ಮುಖಂಡ ರಾಕೇಶ್ ಟಿಕಾಯತ್ ಎಚ್ಚರಿಕೆ ನೀಡಿದ್ದಾರೆ. ರಾಜಸ್ಥಾನದಲ್ಲಿ ನಡೆಯುತ್ತಿದ್ದ ಮಹಾಪಂಚಾಯತ್​​ನಲ್ಲಿ ಪಾಲ್ಗೊಳ್ಳಲು ತೆರಳುವ ವೇಳೆ ರಾಕೇಶ್ ಟಿಕಾಯತ್ ಈ ಹೇಳಿಕೆ ನೀಡಿದ್ದಾರೆ. ಮುಂದುವರೆದು ಕೇಂದ್ರದಲ್ಲಿ ಸರ್ಕಾರವೇ ಇಲ್ಲ. ವ್ಯಾಪಾರಿಗಳು ದೇಶವನ್ನ ಆಳುತ್ತಿದ್ದಾರೆ. ಅವರು ಎಲ್ಲ ಸರ್ಕಾರಿ ಸಂಸ್ಥೆಗಳನ್ನು ಮಾರಾಟ ಮಾಡಿದ್ದಾರೆ. ದೇಶದ ಜನರು ಅವರನ್ನ ಸರ್ಕಾರದಿಂದ …

Read More »

; ಕಲುಷಿತ ಗಾಳಿ ಶುದ್ಧೀಕರಿಸಲಿದೆ ಈ ಯಂತ್ರ

ಬೆಂಗಳೂರು, ಮಾರ್ಚ್ 28: ಮಲಿನಗಾಳಿಯನ್ನು ಶುದ್ಧೀಕರಿಸಲು ಯಂತ್ರವನ್ನು ಅಭಿವೃದ್ಧಿಪಡಿಸಲಾಗಿದೆ. ಬೆಂಗಳೂರು ನಗರದ ಹಡ್ಸನ್ ವೃತ್ತದ ಬಳಿ ಇದನ್ನು ಪ್ರಾಯೋಗಿಕವಾಗಿ ಅಳವಡಿಕೆ ಮಾಡಲಾಗಿದೆ. ನೂತನ್ ಲ್ಯಾಬ್ಸ್ ಕರ್ನಾಟಕ ಎಂಬ ಸ್ಟಾರ್ಟ್‌ ಅಪ್ ಕಂಪನಿ ಹೊಂಜು ಗೋಪುರ (Smog tower) ಅಭಿವೃದ್ಧಿಪಡಿಸಿದೆ. ಭಾರತೀಯ ವಿಜ್ಞಾನ ಸಂಸ್ಥೆಯು ಇದಕ್ಕೆ ಸಹಕಾರ ನೀಡಿದೆ. ವಿದೇಶದಿಂದ ಈಗಾಗಲೇ ಯಂತ್ರಕ್ಕೆ ಬೇಡಿಕೆಯೂ ಬರುತ್ತಿದೆ. ಗೋಪುರ ಯಂತ್ರವು 15 ಅಡಿ ಎತ್ತರ, 6 ಅಡಿ ಸುತ್ತಳತೆ ಹೊಂದಿದೆ. ಯಂತ್ರ ಕಾರ್ಯ …

Read More »

40ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ: ಹಳಸಿದ ಆಹಾರ ಸೇವನೆಯಿಂದ ವಾಂತಿಭೇದಿ ಶಂಕೆ

ಗುಂಡ್ಲುಪೇಟೆ/ಚಾಮರಾಜನಗರ: ತಾಲ್ಲೂಕಿನ ಚೆನ್ನವಡೆಯನಪುರದಲ್ಲಿ ಶುಕ್ರವಾರ 40ಕ್ಕೂ ಹೆಚ್ಚು ಜನರಿಗೆ ವಾಂತಿ ಭೇದಿ ಕಾಣಿಸಿಕೊಂಡಿರುವುದು ಕಲುಷಿತ ನೀರು ಸೇವನೆಯಿಂದಲ್ಲ, ಹಳಸಿದ ಆಹಾರ ಸೇವನೆಯಿಂದ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ರವಿಕುಮಾರ್ ಶಂಕೆ ವ್ಯಕ್ತಪಡಿಸಿದ್ದಾರೆ. ಗ್ರಾಮದ ನಾಗಯ್ಯ ಅವರ ನೂತನ ಮನೆಯ ಗೃಹ ಪ್ರವೇಶ ಸಮಾರಂಭ ಮಾ.25ರಂದು ಗುರುವಾರ ನಡೆದಿದೆ. ಈ ಕಾರ್ಯಕ್ರಮದಲ್ಲಿ ಮಧ್ಯಾಹ್ನದಿಂದ ರಾತ್ರಿವರೆಗೂ ಸುಮಾರು 300 ಜನ ಊಟ ಮಾಡಿದ್ದಾರೆ. ಆದರೆ ರಾತ್ರಿ ವೇಳೆ ಊಟ ಮಾಡಿದ 40 ಜನರಿಗೆ …

Read More »

ಪೊಲೀಸರೆದುರೇ ಬಿಜೆಪಿ ಶಾಸಕನ ಮೇಲೆ ಹಲ್ಲೆ ನಡೆಸಿ ಬಟ್ಟೆ ಹರಿದು ಹಾಕಿದ ರೈತರ ಗುಂಪು!

ಮುಕ್ತ್ಸಾರ್: ಉದ್ರಿಕ್ತ ರೈತರ ಗುಂಪೊಂದು ಬಿಜೆಪಿ ಶಾಸಕನ ಮೇಲೆ ಮುತ್ತಿಗೆ ಹಾಕಿ ಬಟ್ಟೆ ಹಾರಿದು ಹಾಕಿದ ಘಟನೆ ಪಂಜಾಬ್ ರಾಜ್ಯದ ಮುಕ್ತ್ಸಾರ್ ಜಿಲ್ಲೆಯ ಮಾಲೌಟ್ ನಲ್ಲಿ ಶನಿವಾರ ನಡೆದಿದೆ. ಅಬೋಹರ್ ಬಿಜೆಪಿ ಶಾಸಕ ಅರುಣ್ ನಾರಂಗ್ ಹಲ್ಲೆಗೊಳಗಾದವರು. ಮಲೌಟ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಲು ಶಾಸಕ ಹೋದಾಗ ರೈತರ ಗುಂಪು ಹಲ್ಲೆ ನಡೆಸಿದೆ. ಪ್ರತಿಭಟನಾ ನಿರತ ರೈತರು, ಶಾಸಕ ಅರುಣ್ ನಾರಂಗ್ ಗಾಗಿ ಬಿಜೆಪಿ ಕಚೇರಿಯ ಮುಂದೆ ಕಾದು ಕುಳಿತಿದ್ದರು. ಅರುಣ್ …

Read More »