Breaking News
Home / 2021 / ಮಾರ್ಚ್ / 17 (page 2)

Daily Archives: ಮಾರ್ಚ್ 17, 2021

ಏಪ್ರಿಲ್ 1 ರಿಂದ ಮತ್ತಷ್ಟು ದುಬಾರಿಯಾಗಲಿದೆ ರಾಷ್ಟ್ರೀಯ ಹೆದ್ದಾರಿ ಪ್ರಯಾಣ

ನವದೆಹಲಿ : ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯ ಬೆನ್ನಲ್ಲೇ ವಾಹನ ಸವಾರರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತೊಂದು ಬಿಗ್ ಶಾಕ್ ನೀಡಿದ್ದು, ಎನ್ ಎಚ್‌ಎಐ ಟೋಲ್ ತೆರಿಗೆಯನ್ನು ಶೇ. 5 ರಷ್ಟು ಹೆಚ್ಚಿಸಲು ಸಿದ್ಧತೆ ನಡೆಸಿದೆ ಎನ್ನಲಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಏಪ್ರಿಲ್ 1 ರಿಂದ ಟೋಲ್ ಪ್ಲಾಜಾ ಮೂಲಕ ಹಾದುಹೋಗುವ ವಾಹನಗಳಿಗೆ ಟೋಲ್ ಪ್ಲಾಜಾ ಮಾಜಿಸಕ ಪಾಸ್ 10 ರಿಂದ 20 ರೂ. ವರೆಗೆ ಹೆಚ್ಚಿಸುವ ಸಾಧ್ಯತೆ ಇದೆ …

Read More »

ಸರ್ಕಾರಿ ಕಚೇರಿಯ ಮುಂದೆಯೇ ವ್ಯಕ್ತಿಯ ಭೀಕರ ಕೊಲೆ…!

ಗದಗ: ಯುವಕನೋರ್ವ ಅಶ್ಲೀಲವಾಗಿ ಬೈದಾಡುತ್ತಿದ್ದ ಸಂಬಂಧಿಯನ್ನು ಬರ್ಬರವಾಗಿ ಕೊಲೆಗೈದ ಘಟನೆ ನಗರದ ಬೆಟಗೇರಿಯ ಕುರಹಟ್ಟಿ ಪೇಟೆನಲ್ಲಿ ನಡೆದಿದೆ. ಕುರಹಟ್ಟಿ ಪೇಟೆ ನಿವಾಸಿ ಪ್ರವೀಣ್ ಗದುಗಿನ (23) ಕೊಲೆಗೈದ ಯುವಕ. ಪ್ರವೀಣ್ ತನ್ನ ಸಂಬಂಧಿಯಾದ ಮಂಜುನಾಥ್ ಗದುಗಿನ (44)ನನ್ನು ಕೊಲೆ ಮಾಡಿದ್ದಾನೆ. ಮಂಜುನಾಥ್ ಆಗಾಗ ಪ್ರವೀಣ್ ಮನೆ ಬಳಿ ಬಂದು ಅಶ್ಲೀಲವಾಗಿ ಬೈದಾಡುತ್ತಿದ್ದ. ಮಂಗಳವಾರ ರಾತ್ರಿ ಸಹ ಮಂಜುನಾಥ್ ಬೈದಾಡುತ್ತಿದ್ದ. ಇದರಿಂದ ಕೋಪಗೊಂಡ ಪ್ರವೀಣ್ ಆತನ ಕುತ್ತಿಗೆಗೆ ಚಾಕು ಹಾಕಿ ಕೊಲೆಗೈದು …

Read More »

ಭಾರತೀಯ ರೈಲ್ವೆ ಎಂದಿಗೂ ಖಾಸಗೀಕರಣಗೊಳ್ಳುವುದಿಲ್ಲ:ಪಿಯೂಷ್ ಗೋಯಲ್

ನವದೆಹಲಿ: ಭಾರತೀಯ ರೈಲ್ವೆ ಖಾಸಗೀಕರಣದ ಬಗ್ಗೆ ಹಲವಾರು ಗಾಳಿಸುದ್ದಿಗಳು ಹರಿದಾಡುತ್ತಿದ್ದ ಹಿನ್ನೆಲೆಯಲ್ಲಿ ರೈಲ್ವೆ ಸಚಿವ ಪಿಯೂಷ್ ಗೋಯಲ್ ಸ್ಪಷ್ಟನೆ ನೀಡಿದ್ದು, ಭಾರತೀಯ ರೈಲ್ವೆ ಎಂದಿಗೂ ಖಾಸಗೀಕರಣಗೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ರೈಲ್ವೆಗಾಗಿ ಬಿಡುಗಡೆಯಾದ ಅನುದಾನ ಕುರಿತು ಸದಸ್ಯರು ಕೇಳಿದ ಪ್ರಶ್ನೆಗೆ ಚರ್ಚೆವೇಳೆ ಉತ್ತರಿಸಿದ ಕೇಂದ್ರ ರೈಲ್ವೇ ಸಚಿವ ಪಿಯೂಷ್ ಗೋಯಲ್, ಪ್ರಧಾನಿ ಮೋದಿ ಸರ್ಕಾರ ರೈಲ್ವೆ ಹೂಡಿಕೆಯನ್ನು ಹೆಚ್ಚಿಸಿದೆ. 2019-20ರ ಆರ್ಥಿಕ ವರ್ಷದಲ್ಲಿ 1.5 ಲಕ್ಷ ಕೋಟಿ ಇದ್ದ ಹೂಡಿಕೆ 2021-22ರ …

Read More »

ಮೋದಿ ಪ್ರಧಾನ ಸಲಹೆಗಾರ ಪಿ.ಕೆ ಸಿನ್ಹಾ ರಾಜೀನಾಮೆ PM Modi’s principal advisor P K Sinha resigns

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರ ಪ್ರಧಾನ ಸಲಹೆಗಾರರಾಗಿದ್ದ ಪ್ರದೀಪ್ ಕುಮಾರ್ ನಿನ್ಹಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ತಮ್ಮ ವೈಯಕ್ತಿಕ ಕಾರಣಗಳಿಂದಾಗಿ ಪಿಕೆ ಸಿನ್ಹಾ ಅವರು ಈ ರಾಜೀನಾಮೆ ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ. 1977ನೇ ಬ್ಯಾಚ್ ನ ನಿವೃತ್ತಿ ಐಎಎಸ್ ಅಧಿಕಾರಿಯಾಗಿರುವ ಸಿನ್ಹಾ ಅವರನ್ನ 2019ರ ಆಗಸ್ಟ್ ತಿಂಗಳಲ್ಲಿ ಮೋದಿಯವರ ಪ್ರಧಾನ ಸಲಹೆಗಾರರನ್ನಾಗಿ ನೇಮಕ ಮಾಡಲಾಗಿತ್ತು. ಇದಲ್ಲದೆ ಸಿನ್ಹಾ ಅವರು ನಾಲ್ಕು ವರ್ಷಗಳ ಕಾಲ ಕ್ಯಾಬಿನೆಟ್ …

Read More »

ಬಾಲಸುಟ್ಟ ಶಿವಸೇನೆ ಹುಲಿ : ಬೆಳಗಾವಿ ಕೇಂದ್ರಾಡಳಿತವಾಗದು ಎಂದು ಕೇಂದ್ರ ಸ್ಪಷ್ಟನೆ

ಹೊಸದಿಲ್ಲಿ/ ಮುಂಬಯಿ : ಬೆಳಗಾವಿ ವಿಚಾರಕ್ಕೆ ಕೈಹಾಕಿದ ಶಿವಸೇನೆ ಬಾಲ ಸುಟ್ಟುಕೊಂಡಿದೆ. “ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸುವ ಪ್ರಸ್ತಾವ ಸರಕಾರದ ಮುಂದಿಲ್ಲ’ ಎನ್ನುವ ಮೂಲಕ ಉದ್ಧವ್‌ ಠಾಕ್ರೆಯ “ಮಹಾಉದ್ಧಟತನ’ದ ಕನಸಿಗೆ ಕೇಂದ್ರ ಸರಕಾರ ತಣ್ಣೀರು ಎರಚಿದೆ. ತನ್ನ ಮುಖವಾಣಿ  “ಸಾಮ್ನಾ’ದಲ್ಲಿ ಶಿವಸೇನೆ “ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಬೇಕು’ ಎಂದಿತ್ತು. ಲೋಕಸಭೆಯಲ್ಲಿ ಇದಕ್ಕೆ ಪ್ರತಿಕ್ರಿಯಿಸಿದ ಗೃಹ ಖಾತೆಯ ಸಹಾಯಕ ಸಚಿವ ನಿತ್ಯಾನಂದ ರಾಯ್‌, “ಕಾಲ ಕಾಲಕ್ಕೆ ಕೆಲವರು ಮತ್ತು ಸಂಘಟನೆಗಳು ಬೆಳಗಾವಿಯನ್ನು …

Read More »

‘ರಾಜ್ಯದಲ್ಲಿ ಉಚಿತ ಮರಳು ನೀತಿ ತರಲು ಚಿಂತನೆ ನಡೆಸಿದ್ದೇವೆ’: ಸಚಿವ ನಿರಾಣಿ

ಬೆಂಗಳೂರು: ಗಣಿಗಾರಿಕೆ ವಿಚಾರವಾಗಿ ಭ್ರಷ್ಟಾಚಾರ ನಡೆಯುತ್ತಿರುವುದು ಸತ್ಯ ಎಂದು ವಿಧಾನಪರಿಷತ್​ನಲ್ಲಿ ಗಣಿ ಮತ್ತು ಭೂವಿಜ್ಞಾನ ಸಚಿವ ನಿರಾಣಿ ಒಪ್ಪಿಕೊಂಡಿದ್ದಾರೆ. ಗಣಿ ಮಾಲೀಕರ ಬಳಿ ಹಫ್ತಾ ವಸೂಲಿ ಮಾಡ್ತಿರುವುದೂ ಸತ್ಯ. ಗಣಿ & ಭೂವಿಜ್ಞಾನ ಇಲಾಖೆ ಅಧಿಕಾರಿಗಳಿಂದ ಹಫ್ತಾ ವಸೂಲಿ ನಡೆಯುತ್ತಿದೆ. ಆದರೆ, ಇಲಾಖೆಗೆ ನಾನು ಬಂದ ನಂತರ ಹಫ್ತಾ ನೀಡದಂತೆ ಸೂಚನೆ ಕೊಟ್ಟಿದ್ದೇನೆ. ಹಫ್ತಾ ನೀಡದಂತೆ ಗಣಿ ಮಾಲೀಕರಿಗೆ ಸೂಚನೆ ನೀಡಿದ್ದೇನೆ ಎಂದು ನಿರಾಣಿ ಹೇಳಿದರು. ಅಧಿಕಾರಿ ಎಷ್ಟೇ ಪ್ರಭಾವಿ …

Read More »

ಸಿಡಿ’ಯಲ್ಲಿರುವಳು ನಾನಲ್ಲ ನನ್ನಂತೆ ಕಾಣುವ ಹುಡುಗಿಯ ದೃಶ್ಯ ಎಡಿಟ್ ಮಾಡಿದ್ದಾರೆ. ಅದು ನಕಲಿ ಸಿಡಿ,: ನನ್ನ ಮಗಳು ಹಾಗೆ ಹೇಳಿದ್ದಳು ಎಂದ ಸಂತ್ರಸ್ತೆಯ ತಾಯಿ

ಬೆಳಗಾವಿ: ‘ಸಿಡಿ’ಯಲ್ಲಿರುವಳು ನಾನಲ್ಲ ಎಂದು ಮಗಳು ಹೇಳಿದಳು ಎಂದು ಸಂತ್ರಸ್ತೆಯ ತಾಯಿ ಹೇಳಿದ್ದಾರೆ. ನನ್ನಂತೆ ಕಾಣುವ ಹುಡುಗಿಯ ದೃಶ್ಯ ಎಡಿಟ್ ಮಾಡಿದ್ದಾರೆ. ಅದು ನಕಲಿ ಸಿಡಿ, ಆ ಸಿಡಿಯಲ್ಲಿ ನನ್ನ ಪಾತ್ರವೇ ಇಲ್ಲ ಎಂದು ಸಿಡಿ ವೈರಲ್ ಆದಾಗ ಕೇಳಿದ್ದಕ್ಕೆ ನನ್ನ ಮಗಳು ಹಾಗೆ ಹೇಳಿದ್ದಳು ಎಂದು ಸಂತ್ರಸ್ತೆಯ ತಾಯಿ ಹೇಳಿದ್ದಾರೆ. ಮನೆಗೆ ವಾಪಸ್ ಬಂದಾಗ ಹೇಳುವೆ ಎಂದಿದ್ದಳು. ಸದ್ಯಕ್ಕೆ ಏನೂ ಹೇಳುವ ಸ್ಥಿತಿಯಲ್ಲಿಲ್ಲ ಎಂದು ಹೇಳಿದ್ದಳು. ನಾನೆಲ್ಲಿದ್ದೀನಿ ಎನ್ನುವುದೂ …

Read More »

ರಾಜ್ಯ ರಸ್ತೆ ಸಾರಿಗೆ ನೌಕರರಿಂದ ಮತ್ತೆ ಮುಷ್ಕರ;

ಬೆಂಗಳೂರು: ರಾಜ್ಯ ಸರ್ಕಾರ ಮೂರು ತಿಂಗಳ ಗಡುವಿನೊಳಗೆ ಸಾರಿಗೆ ನೌಕರರ ಒಂಬತ್ತು ಬೇಡಿಕೆ ಈಡೇರಿಸದ ಹಿನ್ನೆಲೆಯಲ್ಲಿ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ ಏಪ್ರಿಲ್ 7ರಿಂದ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲು ತೀರ್ಮಾನಿಸಿದೆ. ಈ ಕುರಿತಂತೆ ಕೂಟವು ಮುಖ್ಯಮಂತ್ರಿ, ಸಾರಿಗೆ ಸಚಿವ, ರಸ್ತೆ ಸಾರಿಗೆಯ ನಾಲ್ಕು ನಿಗಮದ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಕಾರ್ಮಿಕ ಇಲಾಖೆ ಆಯುಕ್ತರಿಗೆ ಮಂಗಳವಾರ ಮುಷ್ಕರದ ನೋಟಿಸ್ ನೀಡಿದೆ. ಕಾರ್ಮಿಕ ಕಾಯ್ದೆ ನಿಯಮದ ಪ್ರಕಾರ ನೋಟಿಸ್ ನೀಡಿದ 22 …

Read More »

ಉಪಚುನಾವಣೆ: ಬಿಜೆಪಿ- ಕಾಂಗ್ರೆಸ್ ಸಿದ್ಧತೆ: ಸ್ಪರ್ಧೆ ಬಗ್ಗೆ ತೀರ್ಮಾನಿಸದ ಜೆಡಿಎಸ್

ಬೆಂಗಳೂರು: ಬೆಳಗಾವಿ ಲೋಕಸಭಾ ಕ್ಷೇತ್ರ, ಬಸವಕಲ್ಯಾಣ ಮತ್ತು ಮಸ್ಕಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳು ವೇದಿಕೆ ಸಜ್ಜುಪಡಿಸಿಕೊಂಡಿದ್ದು, ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಬಗ್ಗೆ ಜೆಡಿಎಸ್‌ ತೀರ್ಮಾನ ಇನ್ನಷ್ಟೇ ಹೊರಬೀಳಬೇಕಿದೆ. ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್‌ ಎರಡೂ ಪಕ್ಷಗಳಲ್ಲೂ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚೇ ಇದೆ. ಬಿಜೆಪಿಯಿಂದ ದಿವಂಗತ ಸುರೇಶ್‌ ಅಂಗಡಿ ಪುತ್ರಿ ಶ್ರದ್ಧಾ ಶೆಟ್ಟರ್‌, ರಮೇಶ ಕತ್ತಿ, ಪ್ರಭಾಕರ ಕೋರೆ, ಮಹಂತೇಶ ಕವಟಗಿಮಠ ಅವರ …

Read More »

ಬೆಳಗಾವಿ ಲೋಕಸಭೆ ಉಪಚುನಾವಣೆ ಕಾಂಗ್ರೆಸ್ಸ್ ಹಾಗೂ ಬಿಜೆಪಿಯಿಂದ ಸ್ಪ್ರದಿಸೋ ಅಭರ್ಥಿ ಗಳು ಯಾರು ಗೊತ್ತಾ..?

ಬೆಂಗಳೂರು: ಬೆಳಗಾವಿ ಲೋಕಸಭೆ ಮತ್ತು ಮಸ್ಕಿ, ಬಸವಕಲ್ಯಾಣ ವಿಧಾನಸಭೆ ಕ್ಷೇತ್ರಗಳಿಗೆ ಉಪಚುನಾವಣೆ ದಿನಾಂಕ ನಿಗದಿಯಾಗಿದೆ. ಮಾರ್ಚ್ 23 ರಂದು ಅಧಿಸೂಚನೆ ಪ್ರಕಟಿಸಲಾಗುವುದು. ಮಾರ್ಚ್ 30 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ಮಾರ್ಚ್ 31 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಏಪ್ರಿಲ್ 3 ರಂದು ನಾಮಪತ್ರ ಹಿಂಪಡೆದುಕೊಳ್ಳಲು ಕೊನೆಯ ದಿನವಾಗಿದ್ದು, ಏಪ್ರಿಲ್ 17 ರಂದು ಮತದಾನ ನಡೆಯಲಿದೆ. ಮೇ 2 ರಂದು ಮತ ಎಣಿಕೆ ನಡೆಸಲಾಗುವುದು. ಬೆಳಗಾವಿ ಲೋಕಸಭೆ ಸದಸ್ಯರಾಗಿದ್ದ ಕೇಂದ್ರ …

Read More »