Breaking News

ಸಿಡಿ’ಯಲ್ಲಿರುವಳು ನಾನಲ್ಲ ನನ್ನಂತೆ ಕಾಣುವ ಹುಡುಗಿಯ ದೃಶ್ಯ ಎಡಿಟ್ ಮಾಡಿದ್ದಾರೆ. ಅದು ನಕಲಿ ಸಿಡಿ,: ನನ್ನ ಮಗಳು ಹಾಗೆ ಹೇಳಿದ್ದಳು ಎಂದ ಸಂತ್ರಸ್ತೆಯ ತಾಯಿ

Spread the love

ಬೆಳಗಾವಿ: ‘ಸಿಡಿ’ಯಲ್ಲಿರುವಳು ನಾನಲ್ಲ ಎಂದು ಮಗಳು ಹೇಳಿದಳು ಎಂದು ಸಂತ್ರಸ್ತೆಯ ತಾಯಿ ಹೇಳಿದ್ದಾರೆ. ನನ್ನಂತೆ ಕಾಣುವ ಹುಡುಗಿಯ ದೃಶ್ಯ ಎಡಿಟ್ ಮಾಡಿದ್ದಾರೆ. ಅದು ನಕಲಿ ಸಿಡಿ, ಆ ಸಿಡಿಯಲ್ಲಿ ನನ್ನ ಪಾತ್ರವೇ ಇಲ್ಲ ಎಂದು ಸಿಡಿ ವೈರಲ್ ಆದಾಗ ಕೇಳಿದ್ದಕ್ಕೆ ನನ್ನ ಮಗಳು ಹಾಗೆ ಹೇಳಿದ್ದಳು ಎಂದು ಸಂತ್ರಸ್ತೆಯ ತಾಯಿ ಹೇಳಿದ್ದಾರೆ.

ಮನೆಗೆ ವಾಪಸ್ ಬಂದಾಗ ಹೇಳುವೆ ಎಂದಿದ್ದಳು. ಸದ್ಯಕ್ಕೆ ಏನೂ ಹೇಳುವ ಸ್ಥಿತಿಯಲ್ಲಿಲ್ಲ ಎಂದು ಹೇಳಿದ್ದಳು. ನಾನೆಲ್ಲಿದ್ದೀನಿ ಎನ್ನುವುದೂ ಗೊತ್ತಿಲ್ಲ ಎಂದು ಹೇಳಿದ್ದಳು ಎಂದು ಸಂತ್ರಸ್ತೆಯ ತಾಯಿ ಹೇಳಿದ್ದಾರೆ. ಮಗಳನ್ನು ಯಾರೋ ಒತ್ತೆಯಾಳಾಗಿರಿಸಿಕೊಂಡಿದ್ದಾರೆ. ಮಗಳ ಜೀವಕ್ಕೆ ಅಪಾಯವಿದೆ ಎಂದು ಆಕೆಯ ತಾಯಿ ಆತಂಕ ವ್ಯಕ್ತಪಡಿಸಿದರು.

‘ನನ್ನ ಜೀವಕ್ಕೆ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಿದ್ದಳು’
ಟಿವಿಯಲ್ಲಿ ವಿಡಿಯೋ ನೋಡಿ ನಾನು ಪುತ್ರಿಗೆ ಕರೆ ಮಾಡಿದ್ದೆ. ಕರೆ ಮಾಡಿದ್ದಾಗ ಟಿವಿ ನೋಡು ಎಂದು ಮಗಳಿಗೆ ಹೇಳಿದ್ದೆ. ಟಿವಿಯಲ್ಲಿ ದೃಶ್ಯವನ್ನು ನೋಡಿ ನಮಗೆ ಆಘಾತವಾಯಿತು ಎಂದು ಸಂತ್ರಸ್ತೆಯ ತಾಯಿ ಹೇಳಿದರು.

ಆಗ, ನಾನು ಯಾವುದೇ ತಪ್ಪು ಮಾಡಿಲ್ಲ, ಅದು ನಾನಲ್ಲ ಅಂದಿದ್ಲು. ನನ್ನಂತೆ ಕಾಣುವ ಹುಡುಗಿ ಫೋಟೋ ಎಡಿಟ್ ಮಾಡಿದ್ದಾರೆ. ನನ್ನ ಪುತ್ರಿ ಮೊಬೈಲ್​ಗೆ ಕರೆ ಮಾಡಿದ್ದಾಗ ಹೀಗೆ ಹೇಳಿದ್ದಳು. ಊರಿಗೆ ಬಂದು ತಪ್ಪುಮಾಡಿಲ್ಲವೆಂದು ಹೇಳುವೆ ಬಾ ಎಂದಿದ್ದೆ. ನಾನು ಊರಿಗೆ ಕರೆದಿದ್ದಕ್ಕೆ ಬರುವುದಿಲ್ಲವೆಂದು ಹೇಳಿದ್ದಳು. ನನ್ನ ಜೀವಕ್ಕೆ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಿದ್ದಳು ಎಂದು ಸಂತ್ರಸ್ತೆಯ ತಾಯಿ ಹೇಳಿದ್ದಾರೆ.

ನಾನು ಇರುವಲ್ಲಿ ಕ್ಷೇಮವಾಗಿದ್ದೀನಿ, ತೊಂದರೆಯಿಲ್ಲ ಅಂದ್ಲು. ನನ್ನನ್ನು ಇಲ್ಲೇ ಒಂದು ಕಡೆ ಇಟ್ಟಿದ್ದಾರೆ, ನೀವು ಆರಾಮಾಗಿರಿ. ನನಗೆ ಫೋನ್, ಮೆಸೇಜ್ ಮಾಡಬೇಡಿ ಎಂದು ಸೂಚಿಸಿದ್ದಳು. ನಮ್ಮೊಟ್ಟಿಗೆ ಇರುವ ಮಕ್ಕಳಿಗೆ ಮಗಳು ಸೂಚನೆ ನೀಡಿದ್ದಳು. ನನ್ನ ಫೋನ್​ ಚೆಕ್​ ಮಾಡುತ್ತಾರೆ ಎಂದು ಎಚ್ಚರಿಕೆ ನೀಡಿದ್ದಳು. ಒಂದು ದಿನ ಬಿಟ್ಟು ಫೋನ್ ಮಾಡಿದಾಗ ಸ್ವಿಚ್​ ಆಫ್​ ಆಗಿತ್ತು ಎಂದು ಸಂತ್ರಸ್ತೆಯ ತಾಯಿ ಮಾಹಿತಿ ನೀಡಿದ್ದಾರೆ. ಹಾಗಾಗಿ, ನಾವು ಬೆಳಗಾವಿಗೆ ಬಂದು ಪೊಲೀಸರಿಗೆ ದೂರು ನೀಡಿದೆವು ಎಂದುಯುವತಿಯ ತಾಯಿ ಹೇಳಿದ್ದಾರೆ. ಜೊತೆಗೆ, ಇದ್ರಲ್ಲಿ ಯಾರು ಇದ್ದಾರೆ ಅವರಿಗೆ ಶಿಕ್ಷೆಯಾಗಬೇಕು. ನಮ್ಮ ಮಗಳನ್ನ ಹುಡುಕಿಕೊಡಿ ಎಂದು ದಂಪತಿ ಕೈಮುಗಿದು ಕೇಳಿಕೊಂಡರು.


Spread the love

About Laxminews 24x7

Check Also

ಬೆಟಗೇರಿ ಕೃಷ್ಣ್ಣಶರ್ಮರು ಮಾತೃ ಹೃದಯದ ಆಶ್ರಯದಲ್ಲಿ ಬೆಳೆದವರು

Spread the love ಬೆಳಗಾವಿ: ಡಾ.ಬೆಟಗೇರಿ ಕೃಷ್ಣ್ಣಶರ್ಮರು ಮಾತೃ ಹೃದಯದ ಆಶ್ರಯದಲ್ಲಿ ಬೆಳೆದವರು. ಹೀಗಾಗಿ, ಅವರ ಕೃತಿಗಳಲ್ಲಿ ಸ್ತ್ರೀತ್ವದ ಅಂಶಗಳು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ