Breaking News
Home / 2021 / ಫೆಬ್ರವರಿ (page 91)

Monthly Archives: ಫೆಬ್ರವರಿ 2021

ಅಪಘಾತಕ್ಕೀಡಾದ ವಿದ್ಯಾರ್ಥಿನಿಯ ಆರೋಗ್ಯ ವಿಚಾರಿಸಿದ ಸಚಿವ ಸುರೇಶ್ ಕುಮಾರ್

ಬೆಂಗಳೂರು: ರಾಷ್ಟ್ರೀಯ ಪ್ರತಿಭಾನ್ವೇಷಣಾ ಪರೀಕ್ಷೆ ಬರೆಯಲು ತೆರಳುವಾಗ ಕೆಂಗೇರಿ ಬಳಿ ರಸ್ತೆ ಅಪಘಾತಕ್ಕೊಳಗಾಗಿ ತೀವ್ರವಾಗಿ ಗಾಯಗೊಂಡು ನಿಮ್ಹಾನ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿನಿಯನ್ನು ಭೇಟಿಯಾದ ಸಚಿವ ಎಸ್. ಸುರೇಶ್ ಕುಮಾರ್ ಆಕೆಯ ಆರೋಗ್ಯ ವಿಚಾರಿಸಿದರು. ಸರ್ಕಾರಿ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿನಿಯಾದ ಯಶಸ್ವಿನಿಗೆ ಕತ್ತಿನ ಬೆನ್ನುಮೂಳೆಯ ಎರಡು ವರ್ಟೆಬ್ರಿಯಾಗಳು ತೀವ್ರವಾಗಿ ಘಾಸಿಗೊಳಾಗಿದ್ದು ಎರಡು ಶಸ್ತ್ರ ಚಿಕಿತ್ಸೆಯ ಅಗತ್ಯವಿದೆ. ವಿದ್ಯಾರ್ಥಿನಿಗೆ ಅಗತ್ಯವಿರುವ ಶಸ್ತ್ರಚಿಕಿತ್ಸೆ ಮಾಡಬೇಕೆಂದು ಆಸ್ಪತ್ರೆಯ ನಿರ್ದೇಶಕರಿಗೆ ಸಚಿವರು ಮನವಿ ಮಾಡಿದರು.

Read More »

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದ ನಾರಾಯಣ ಗಾಣಿಗ ವಂಡ್ಸೆ ನಿಧನ

ಕುಂದಾಪುರ: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷಗಾನದ ಹಿರಿಯ ಸ್ತ್ರೀವೇಷಧಾರಿ ವಂಡ್ಸೆ ನಾರಾಯಣ ಗಾಣಿಗ ಅವರು ಸೋಮವಾರ ನಿಧನ ಹೊಂದಿದರು. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿರುವ ಕೊಲ್ಲೂರಿನ ವಂಡ್ಸೆ ಗ್ರಾಮದವರಾದ ನಾರಾಯಣ ಗಾಣಿಗರು, ಸುಮಾರು 28 ವರ್ಷಗಳ ಕಾಲ ಹಲವು ಮೇಳಗಳಲ್ಲಿ ತಿರುಗಾಟ ನಡೆಸಿದ್ದರು. ಮಾರಣಕಟ್ಟೆ, ಮಂದಾರ್ತಿ, ಕೊಲ್ಲೂರು, ಧರ್ಮಸ್ಥಳ, ಪೆರ್ಡೂರು, ಸಾಲಿಗ್ರಾಮ ಮತ್ತು ಇಡಗುಂಜಿ ಮೇಳಗಳಲ್ಲಿ ಇವರು ಕಲಾಕೃಷಿ ನಡೆಸಿದ್ದರು. ನಾರಾಯಣ ಗಾಣಿಗ ಅವರು ದ್ರೌಪದಿ, ಶಶಿಪ್ರಭೆ, ಚಿತ್ರಾಂಗದೆ, ಮಂಡೋದರಿ, …

Read More »

“ಆತ್ಮ ಬರ್ಬಾದ್” ಬಜೆಟ್ ಘೋಷಿಸಿದ್ದಾರೆ ನಿರ್ಮಲಾ : ಸಿದ್ದರಾಮಯ್ಯ

ಬೆಂಗಳೂರು : ನಾನು ಬಜೆಟ್ ಬಗ್ಗೆ ಯಾವುದೇ ನಿರೀಕ್ಷೆ ಇಟ್ಟುಕೊಂಡಿರಲಿಲ್ಲ. ನಿರ್ಮಲಾ ಅವರು “ಆತ್ಮ ಬರ್ಬಾದ್” ಬಜೆಟ್ ಕೊಟ್ಟಿದ್ದಾರೆ ಎಂದು ವಿಧಾನ ಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಕೇಂದ್ರ ಬಟೆಜ್ ಬಗ್ಗೆ ತೀವ್ರ ಟೀಕೆ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್ಥಿಕ ಪರಿಸ್ಥಿತಿ ಅಧೋಗತಿಗೆ ಹೋಗಿದೆ ಅದನ್ನು ಚೇತರಿಕೆ ಹಾದಿಗೆ ತರುತ್ತಾರೆ ಎಂಬ ನಿರೀಕ್ಷೆ ಇತ್ತು ಅದು ಹುಸಿಯಾಗಿದೆ. ಬಹಳ ಜನರು ಕೊರೊನಾ ಲಾಕ್ ಡೌನ್ ನಿಂದ ಉದ್ಯೋಗ ಕಳೆದುಕೊಂಡಿದ್ದರು. …

Read More »

ಸುವರ್ಣ ಸೌಧವನ್ನು ಬೆಳಗಾವಿಯಲ್ಲಿ ಮಾಡಿದ್ದೇಕೆ ? ಡಿ.ಕೆ.ಶಿವಕುಮಾರ್

ಬೆಂಗಳೂರು: ಬೆಳಗಾವಿ ಸುವರ್ಣ ಸೌಧದಲ್ಲಿ ಅಧಿವೇಶನ ನಡೆಸದೇ ಉತ್ತರ ಕರ್ನಾಟಕದ ಜನರಿಗೆ ಅನ್ಯಾಯ ಮಾಡಲಾಗುತ್ತಿದೆ. ಬಜೆಟ್ ಅಧಿವೇಶವನ್ನು ಬೆಳಗಾವಿಯಲ್ಲಿ ಮಾಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹಿಸಿದ್ದಾರೆ. ಸುವರ್ಣ ಸೌಧವನ್ನು ಬೆಳಗಾವಿಯಲ್ಲಿ ಯಾಕೆ ಮಾಡಿದ್ದೇವೆ ಎಂಬುದನ್ನೇ ಸರ್ಕಾರ ಮರೆತಿದೆ. ಹೀಗಾಗಿ ಅಲ್ಲಿಯೇ ಬಜೆಟ್ ಅಧಿವೇಶ ಮಾಡುವಂತೆ ಒತ್ತಾಯಿಸಿದ್ದೇವೆ. ಆದರೆ ಬಜೆಟ್ ಅಧಿವೇಶನ ಬಳಿಕ ಮುಂದಿನ ಅಧಿವೇಶನ ಬೆಳಗಾವಿಯಲ್ಲಿ ಮಾಡುತ್ತೇವೆ ಎಂದಿದ್ದಾರೆ ಎಂದು ಹೇಳಿದರು. ಇನ್ನು ಕೇಂದ್ರ ಸರ್ಕಾರ ಮಂಡಿಸುತ್ತಿರುವ ಬಜೆಟ್ …

Read More »

ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ 684 ಮದ್ಯದ ಬಾಟಲ ವಶಕ್ಕೆ

ಬೆಳಗಾವಿ: ಬಸ್ ನಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು 684 ಮದ್ಯದ ಬಾಟಲುಗಳನ್ನು ವಶಕ್ಕೆ ಪಡೆದಿರುವ ಘಟನೆ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಕಣಕುಂಟ ಬಳಿ ನಡೆದಿದೆ. ಬೆಳಗಾವಿ ಉಪ ವಿಭಾಗ ಹಾಗೂ ತನಿಖಾ ಠಾಣೆಯ ಅಧಿಕಾರಿಗಳು ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಬಿಳಿ ಬಣ್ಣದ ಅಶೋಕಾ ಲೈಲ್ಯಾಂಡ್ ಕಂಪನಿಯ ಎಸಿ ಬಸ್ ನಿಲ್ಲಿಸಿ ಪರಿಶೀಲಿಸಿದಾಗ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿರುವುದು ಗೊತ್ತಾಗಿದೆ. ಪ್ರಕರಣ …

Read More »

ಶಿವಲಿಂಗಕ್ಕೆ ಕಣ್ಣು ಬಂದಿದ್ದಾವೆ..?

ಬೆಳಗಾವಿ : ಈ ಹಿಂದೆ ಸಾಯಿ ಬಾಬಾ ಪೋಟೋದಲ್ಲಿ ವಿಭೂತಿ ಉದುರಿದ್ದು, ಗಣೇಶ ಹಾಲು ಕುಡಿದಿದ್ದು ಕೇಳಿರುತ್ತೀರಿ. ಇದೇ ಮಾದರಿಯಲ್ಲೇ ಇಲ್ಲೊಂದು ಕಲ್ಲಿನ ಶಿವಲಿಂಗಕ್ಕೆ ಕಣ್ಣು ಮೂಡಿದೆಯಂತೆ. ಶಿವಲಿಂಗಕ್ಕೆ ಕಣ್ಣು ಬಂದಿದ್ದಾವೆ ಎಂಬ ಮಾತು ನಂಬಿದಂತ ನೂರಾರು ಭಕ್ತರು, ದೇವಾಲಯಕ್ಕೆ ಹರಿದು ಬರುತ್ತಿದ್ದಾರೆ. ಇಂತಹ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆಯ ಗೋಕಾಕ್ ನ ಬಣಗಾರ ಗಲ್ಲಿಯಲ್ಲಿ ಶಂಕರಲಿಂಗ ದೇವಾಲಯವಿದೆ. ಇಂತಹ ದೇವಾಲಯದಲ್ಲಿರುವಂತ ಶಿವಲಿಂಗಮೂರ್ತಿಯಲ್ಲಿ ಕಣ್ಣು ಮೂಡಿದೆಯಂತೆ. ಹೀಗೆಂದು …

Read More »

ಕೇಂದ್ರ ಬಜೆಟ್ 2021: ಯಾವುದರ ಬೆಲೆ ಏರಿಕೆ? ಯಾವುದು ಇಳಿಕೆ?

ನವದೆಹಲಿ, ಫೆಬ್ರುವರಿ 01: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೋಮವಾರ 2021ನೇ ಸಾಲಿನ ಕೇಂದ್ರ ಬಜೆಟ್ ಮಂಡನೆ ಮಾಡಿದ್ದಾರೆ. ಹಲವು ಕ್ಷೇತ್ರಗಳಿಗೆ ಅನುದಾನಗಳನ್ನು ಘೋಷಿಸಿದ್ದಾರೆ. 2020ರಲ್ಲಿ ಕೊರೊನಾ ಸೋಲಿಸಲು 27.1 ಲಕ್ಷ ಕೋಟಿ ಮಿನಿ ಬಜೆಟ್ ಮೋದಿ ಸರ್ಕಾರದ ಈ ಒಂಬತ್ತನೇ ಬಜೆಟ್ ನಲ್ಲಿ ಈ ಬಾರಿ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಿ ಅಭಿವೃದ್ಧಿ ಯೋಜನೆಗಳನ್ನು ಉತ್ತೇಜಿಸಲಾಗಿದೆ. ಕೊರೊನಾ ಸೋಂಕಿನ ಕಾರಣದಿಂದ ವರ್ಷದಿಂದಲೂ ಜನರ ಆರ್ಥಿಕ ಸ್ಥಿತಿಗತಿ ಕುಂಠಿತವಾಗಿದ್ದು, …

Read More »

Big Breaking: ಕೇಂದ್ರ ಬಜೆಟ್‌ ಎಫೆಕ್ಟ್‌ : ಮದ್ಯ, ಪೆಟ್ರೋಲ್‌, ಡಿಸೇಲ್‌ ಬೆಲೆಯಲ್ಲಿ ಭಾರಿ ಹೆಚ್ಚಳ,ಇಂದು ಮದ್ಯರಾತ್ರಿಯಿಂದಲೇ ಜಾರಿ

ನವದೆಹಲಿ: ದೇಶದಲ್ಲಿ ಪ್ರಪ್ರಥಮ ಬಾರಿಗೆ ಪೆಪರ್‌ ಲೆಸ್‌ ಕೇಂದ್ರ ಬಜೆಟ್ ಮಂಡನೆಯಾಗ್ತಿದ್ದು, ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವ್ರು ಬಜೆಟ್ ಮಂಡಿಸುತ್ತಿದ್ದಾರೆ. ಇದೇ ವೇಳೆ ಅವರು ಹಲವಾರು ಮಾಹಿತಿಗಳನ್ನು ಮಂಡನೆ ಮಾಡಿದ್ದಾರೆ. ಈ ನಡುವೆ ಇಂದು ಮಂಡಿಸಿದ ಬಜೆಟ್‌ನಲ್ಲಿ ಕೃಷಿ ಮೂಲಸೌಕರ್ಯ ಸೆಸ್‌ದರದಲ್ಲಿ ಹೆಚ್ಚಳ ಹಿನ್ನಲೆಯಲ್ಲಿ ಪೆಟ್ರೋಲ್‌, ಡಿಸೇಲ್‌ ದರದಲ್ಲಿ ಮತ್ತೆ ಏರಿಕೆ ಕಾಣಲಿದೆ ಅಂತ ಅಂದಾಜಿಸಲಾಗಿದ್ದು, ಇದರ ನೇರ ಪರಿಣಾಮ ಜನಸಾಮಾನ್ಯನ ಕಿಸೆ ಮೇಲೆ ಬೀಳಲಿದೆ. ಡಿಸೇಲ್‌ಗೆ …

Read More »

ರೈತರನ್ನು ದೇಶದ್ರೋಹಿಗಳು ಎನ್ನಬೇಡಿ: ಸಿದ್ದರಾಮಯ್ಯ

ಬೆಂಗಳೂರು: ಕೃಷಿ ಸಂಬಂಧಿ ಕಾಯ್ದೆಗಳ ತಿದ್ದುಪಡಿ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರು ಸ್ವಾರ್ಥಕ್ಕಾಗಿ ಹೋರಾಡುತ್ತಿಲ್ಲ. ದೇಶದ ಎಲ್ಲರಿಗಾಗಿ ಹೋರಾಡುತ್ತಿರುವ ರೈತರನ್ನು ದೇಶದ್ರೋಹಿಗಳು ಎಂಬುದಾಗಿ ಕರೆಯಬೇಡಿ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.     ರಾಜ್ಯದ ಜನರಿಗೆ ಬರೆದಿರುವ ಸುದೀರ್ಘವಾದ ಪತ್ರವೊಂದನ್ನು ಭಾನುವಾರ ಹಂಚಿಕೊಂಡಿರುವ ಅವರು, ‘ಕೇಂದ್ರ ಸರ್ಕಾರ ತಂದಿರುವ ಮೂರು ಕಾಯ್ದೆಗಳು ಕೃಷಿ ಮತ್ತು ಕೃಷಿಕರ ನಾಶಕ್ಕೆ ದಾರಿಯಾಗಲಿವೆ. ಅವುಗಳನ್ನು ಹಿಂಪಡೆಯುವಂತೆ …

Read More »

ಪಲ್ಸ್‌ ಪೋಲಿಯೊ: ಶೇ 90.5 ರಷ್ಟು ಸಾಧನೆ

ಬೆಂಗಳೂರು: ಪಲ್ಸ್ ಪೋಲಿಯೊ ಲಸಿಕೆ ವಿತರಣೆ ಅಭಿಯಾನಕ್ಕೆ ರಾಜ್ಯದಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ನಿಗದಿಪಡಿಸಲಾಗಿದ್ದ 5 ವರ್ಷದೊಳಗಿನ ಮಕ್ಕಳಲ್ಲಿ ಶೇ 90.5ರಷ್ಟು ಮಕ್ಕಳು ಪೋಲಿಯೊ ಹನಿ ಹಾಕಿಸಿಕೊಂಡಿದ್ದಾರೆ. ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಬ್ಬರು ಮಕ್ಕಳಿಗೆ ಪೋಲಿಯೊ ಹನಿ ಹಾಕುವ ಮೂಲಕ ಲಸಿಕೆ ವಿತರಣೆ ಅಭಿಯಾನಕ್ಕೆ ಚಾಲನೆ ನೀಡಿದರು. ‘ದೇಶವು ಪೋಲಿಯೊ ಮುಕ್ತವಾಗಿದ್ದರೂ ನೆರೆಯ ರಾಷ್ಟ್ರವಾದ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಲ್ಲಿ ಪ್ರಕರಣಗಳು ವರದಿಯಾಗಿವೆ. ಹಾಗಾಗಿ ಐದು …

Read More »