Breaking News
Home / 2021 / ಫೆಬ್ರವರಿ (page 60)

Monthly Archives: ಫೆಬ್ರವರಿ 2021

ಯುವತಿಯ ನಿಗೂಢ ಸಾವಿನಲ್ಲಿ ಕೊನೆಯಾಯ್ತು ಲವ್ ಮ್ಯಾರೇಜ್..!

ಶಿವಮೊಗ್ಗ. ಫೆ.10: ಕಳೆದ ವರ್ಷವಷ್ಟೇ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದಯುವ ಜೋಡಿಗಳ ಮಧ್ಯೆ ವೈಮನಸ್ಯ ತಲೆದೋರಿ ಯುವತಿಯ ಸಂಶಯಾಸ್ಪದ ಸಾವಿನೊಂದಿಗೆ ಪರ್ಯಾವಸಾನಗೊಂಡಿದೆ. ಆಯನೂರು ನಿವಾಸಿ ಶಂಕರ್ ನಾಯ್ಕ್ ಮಗಳಾದ ಮೋನಿಕಾ 16 ತಿಂಗಳ ಹಿಂದೆ ಕೊನಗವಳ್ಳಿ ಗೋಪಾಲನಾಯ್ಕ್ ಪುತ್ರ ಚಂದನ್ ನನ್ನು ಪ್ರೀತಿಸಿ ಮದುವೆಯಾಗಿದ್ದಳು. ಇವರಿಬ್ಬರೂ ಗಾಡಿಕೊಪ್ಪದಲ್ಲಿ ಮನೆ ಮಾಡಿಕೊಂಡು ವಾಸಿಸುತ್ತಿದ್ದು, ಕಳೆದ ಮೂರ್ನಾಲ್ಕು ತಿಂಗಳಿಂದ ಇವರ ದಾಂಪತ್ಯ ಜೀವನ ಸರಿ ಇರಲಿಲ್ಲ.ಮೋನಿಕಾ ತನ್ನ ಅಂತಸ್ಥಿಗೆ ತಕ್ಕಂತೆ ಇಲ್ಲ ಹಾಗೂ ತವರಿನಿಂದ …

Read More »

ನಾಯಕ ನಟನಾಗಿ ಮಿಂಚಲು ಮುಂದಾದ ‘ಪುರುಷೋತ್ತಮ’ ಜಿಮ್ ರವಿ

ಬೆಂಗಳೂರು, ಫೆ.10- ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿರುವ ಬಾಡಿಬಿಲ್ಡರ್ ಜಿಮ್ ರವಿ ಅವರು ಈಗ ನಾಯಕನಟರಾಗಿ ಮಿಂಚಲು ಮುಂದಾಗಿದ್ದಾರೆ. ಈಗಾಗಲೇ ಜಿಮ್ ರವಿ ಅವರು ರಾಜ್ಯ, ರಾಷ್ಟ್ರ ಅಷ್ಟೇ ಏಕೆ ಅಂತ ರಾಷ್ಟ್ರಮಟ್ಟದಲ್ಲೂ ಬಾಡಿ ಬಿಲ್ಡಿಂಗ್‍ನಲ್ಲಿ ಹೆಸರು ಮಾಡಿದ್ದಾರೆ. ಅಲ್ಲದೆ, ಕಿರುತೆರೆ, ಹಿರಿತೆರೆಯಲ್ಲೂ ನಟಿಸಿದ್ದಾರೆ. ಕಳೆದ ಬಾರಿ ಬಿಗ್‍ಬಾಸ್ ರಿಯಾಲಿಟಿ ಶೋನಲ್ಲಿ ಅವರು ಮಿಂಚಿದ್ದರು. ಇದೀಗ ಚಲನಚಿತ್ರದಲ್ಲಿ ನಾಯಕನಾಗಿ ನಟಿಸುವ ಮೂಲಕ ಅಭಿಮಾನಿಗಳ ಮನಗೆಲ್ಲಲು ಸಿದ್ಧರಾಗಿದ್ದಾರೆ. ರವಿ ಅವರು ಕಳೆದ …

Read More »

ನಾಲ್ಕು ರಾಜ್ಯಗಳಲ್ಲಿ ಅಸೆಂಬ್ಲಿ ಚುನಾವಣೆ ನಡೆಯಲಿದೆ. ನಾಲ್ಕೂ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ : ಹೆಚ್.ಡಿ.ದೇವೇಗೌಡ

ರಾಯಚೂರು: ನಾಲ್ಕು ರಾಜ್ಯಗಳಲ್ಲಿ ಅಸೆಂಬ್ಲಿ ಚುನಾವಣೆ ನಡೆಯಲಿದೆ. ನಾಲ್ಕೂ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ತಿಳಿಸಿದ್ದಾರೆ. ರಾಯಚೂರಿನಲ್ಲಿ ಮಾತನಾಡಿದ ದೇವೇಗೌಡರು, ತಮಿಳುನಾಡಿನಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನ ಸಿಗುವುದಿಲ್ಲ. ಕೇರಳದಲ್ಲಿ ಎಲ್ ಡಿಎಫ್ ಗೆ ಹೆಚ್ಚು ಶಕ್ತಿಯಿದೆ. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಹಾಗೂ ಬಿಜೆಪಿ ನಡುವೆ ಭಾರೀ ಪೈಪೋಟಿ ನಡೆದಿದೆ. ಮತಗಳು ಕಡಿಮೆ ಬಂದರೂ ಈ ಬಾರಿ ಮಮತಾ ಬ್ಯಾನರ್ಜಿ …

Read More »

ಸರಕಾರದ ಮಟ್ಟದಲ್ಲಿ ಹೋರಾಟಮಾಡಿ ಅನುದಾನ ತರುತ್ತಿದ್ದೇನೆ ​: ಲಕ್ಷ್ಮಿ ಹೆಬ್ಬಾಳಕರ್

ಬೆಳಗಾವಿ​ –  ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕಿರುವ ಹಿಂದುಳಿದ ಕ್ಷೇತ್ರ ಎನ್ನುವ ಹಣೆಪಟ್ಟಿಯನ್ನು ತೆಗೆದುಹಾಕುವುದೇ ನನ್ನ ಸಂಕಲ್ಪ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಹೇಳಿದ್ದಾರೆ. ಬಾಳೇಕುಂದ್ರಿ ಕೆ. ಎಚ್ ಗ್ರಾಮದ ಅಂಬೇಡ್ಕರ್ ಗಲ್ಲಿಯಲ್ಲಿ ಶಾಸಕರ ನಿಧಿಯ (MLA Fund) ವತಿಯಿಂದ ​8 ಲಕ್ಷ ರೂ,ಗಳ ವೆಚ್ಚದಲ್ಲಿ ರಸ್ತೆಯ ಎರ​ಡೂ​​ ಬದಿಗೆ ಕಾಂಕ್ರೀಟ್ ಗಟಾರ್ ನಿರ್ಮಾಣದ ಕಾಮಗಾರಿಗಳಿಗೆ ಅಧಿಕೃತವಾಗಿ ಚಾಲನೆಯನ್ನು ​ನೀಡಿ ಅವರು ಮಾತನಾಡಿದರು.  ಬೆಳಗಾವಿ ಗ್ರಾಮೀಣ ಕ್ಷೇತ್ರ ಹಿಂದಿನಿಂದಲೂ ಅಭಿವೃದ್ಧಿ ವಂಚಿತವಾಗಿದೆ. ಬೆಳಗಾವಿ ನಗರದ …

Read More »

ದಿಢೀರ್ ಹೆಚ್.ಸಿ.ಮಹದೇವಪ್ಪ ಭೇಟಿಯಾದ ಮಾಜಿ ಸಿಎಂ ಸಿದ್ದರಾಮಯ್ಯ : ಕುತೂಹಲ ಮೂಡಿಸಿದ ಭೇಟಿ

ಬೆಂಗಳೂರು : ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದಂತ ಹೆಚ್.ಸಿ.ಮಹದೇವಪ್ಪ ಅವರು, ಸಿದ್ದರಾಮಯ್ಯ ಜೊತೆಗಿನ ಆತ್ಮೀಯತೆಯಿಂದ ದೂರಾಗಿದ್ದರು. ಆದ್ರೇ ಇಂದು ದಿಢೀರ್ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮಾಜಿ ಸಚಿವ ಹೆಚ್ ಸಿ ಮಹದೇವಪ್ಪ ಅವರ ನಿವಾಸಕ್ಕೆ ಭೇಟಿ ನೀಡಿ ಚರ್ಚಿಸಿದರು. ಇಂತಹ ಭೇಟಿ ತೀವ್ರ ಕುತೂಹಲ ಮೂಡಿಸಿತ್ತು. ಮೈಸೂರು ಜಿಲ್ಲೆಯ ಪ್ರಭಾವಿ ರಾಜಕೀಯ ನಾಯಕರಾಗಿ ಗುರ್ತಿಸಿಕೊಂಡಿದ್ದವರು ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಹೆಚ್.ಸಿ.ಮಹದೇವಪ್ಪ. ಆದ್ರೇ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದಂತ …

Read More »

ಆಸ್ಟ್ರೇಲಿಯಾಗೆ ರವಾನೆಯಾಗುತ್ತಿದ್ದ ಭಾರತೀಯ ಉಡುಗೆಯಲ್ಲಿತ್ತು ರಾಶಿ ರಾಶಿ ಡ್ರಗ್ಸ್​..!

ಭಾರತೀಯ ಸಾಂಪ್ರದಾಯಿಕ ಉಡುಗೆಗಳಲ್ಲೊಂದಾದ ಲೆಹೆಂಗಾಗಳ ಒಳಗೆ 1.7 ಕೋಟಿ ರೂಪಾಯಿ ಮೌಲ್ಯದ ಡ್ರಗ್​​ಗಳನ್ನ ಸಾಗಿಸುತ್ತಿದ್ದ ತಂಡವನ್ನ ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಆಸ್ಟ್ರೇಲಿಯಾಗೆ ಈ ಲೆಹೆಂಗಾಗಳನ್ನ ರವಾನೆ ಮಾಡುತ್ತಿದ್ದ ವೇಳೆ ಮಾಹಿತಿ ಕಲೆ ಹಾಕಿದ ಗುಪ್ತಚರ ಇಲಾಖೆ ಕಸ್ಟಮ್ಸ್​ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು ಈ ಸರಕನ್ನ ದೆಹಲಿಯಲ್ಲಿ ವಶಪಡಿಸಿಕೊಳ್ಳಲಾಗಿದೆ. ಈ ಲೆಹೆಂಗಾಗಳ ಒಳಗೆ 3900 ಗ್ರಾಂನ ಎಂಡಿಎಂಎ ಡ್ರಗ್​ ಇತ್ತು ಎನ್ನಲಾಗಿದೆ. ಈ ಎಂಡಿಎಂಎ ಡ್ರಗ್​​ಗಳ ಅತಿಯಾದ ಸೇವನೆಯಿಂದ ಲಿವರ್​, …

Read More »

ಫೆ.23ರಂದು ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ಬೃಹತ್ ಪ್ರತಿಭಟನೆ

ಬೆಂಗಳೂರು(ಫೆ.10): ಖಾಸಗಿ ಶಿಕ್ಷಣ ಸಂಸ್ಥೆಗಳ ಹೋರಾಟ ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ.  ಮತ್ತೆ  ಸರ್ಕಾರದ ವಿರುದ್ಧ ತೊಡೆ ತಟ್ಟಲು ಖಾಸಗಿ ಶಾಲೆಗಳ ಒಕ್ಕೂಟ ನಿರ್ಧರಿಸಿದೆ. ಶುಲ್ಕ ಕಡಿತ ವಿಚಾರದಲ್ಲಿ ಸ್ಪೋಟ ಭುಗಿಲೆದ್ದಿದ್ದು, ಸರ್ಕಾರದ ವಿರುದ್ಧ ಖಾಸಗಿ ಶಾಲೆಗಳ ಒಕ್ಕೂಟಗಳು ಕಿಡಿಕಾರಿವೆ. ಶುಲ್ಕ ಕಡಿತ ಪುನರ್ ಪರಿಶೀಲನೆ ಮಾಡಿ ಎಂದು ಖಾಸಗಿ ಶಿಕ್ಷಣ ಸಂಸ್ಥೆಗಳು ಒತ್ತಾಯಿಸಿವೆ.  ಕ್ಯಾಮ್ಸ್, ಮಿಕ್ಸಾ, ಮಾಸ್ , ಕುಸಮ, ಸಿಬಿಎಸ್ ಇ ಹಾಗೂ ಐಸಿಎಸ್ಸಿ ಇ ಒಕ್ಕೂಟಗಳು ಪ್ರತಿಭಟನೆಗೆ …

Read More »

ಪ್ರಚೋದನಕಾರಿ ಪೋಸ್ಟ್ ಹಾಕುತ್ತಿದ್ದ 500 ಟ್ವಿಟರ್ ಖಾತೆಗಳು ಅಮಾನತು

ಬೆಂಗಳೂರು, ಫೆ.10- ಕೇಂದ್ರ ಸರ್ಕಾರದ ಕಟ್ಟುನಿಟ್ಟಿನ ಸೂಚನೆಯ ಮೇರೆಗೆ ಪ್ರಚೋದನಕಾರಿ ಪೋಸ್ಟ್ ಗಳನ್ನು ಹರಡುತ್ತಿದ್ದ 500 ಖಾತೆಗಳನ್ನು ತಾತ್ಕಾಲಿಕವಾಗಿ ಅಮಾನತು ಪಡಿಸಿರುವುದಾಗಿ ಟ್ವಿಟರ್ ಹೇಳಿದೆ. ರೈತರ ಹೋರಾಟದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಕೇಂದ್ರ ಸರ್ಕಾರ 500 ಖಾತೆಗಳನ್ನು ಗುರುತಿಸಿದ್ದು ಅವುಗಳನ್ನು ರದ್ದು ಪಡಿಸುವಂತೆ ಟ್ವಿಟರ್ ಸಂಸ್ಥೆಗೆ ಜನವರಿ 31 ಮತ್ತು ಫೆಬ್ರವರಿ 4ರಂದು ಪತ್ರ ಬರೆದಿತ್ತು. ಈ ಖಾತೆಗಳ ಮೂಲಕ ಹಿಂಸೆಗೆ ಪ್ರಚೋದನಕಾರಿಯಾದ ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ …

Read More »

ನಿಯತಿ ಫೌಂಡೇಶನ್ ವತಿಯಿಂದ ಅಮಟೆಗೆ ಸನ್ಮಾನ

ಬೆಳಗಾವಿ – ಪ್ರಾಣಿ ಕಲ್ಯಾಣ ಮಂಡಳಿಯ ಸದಸ್ಯೆ, ನಿಯತಿ ಫೌಂಡೇಶನ್ ಅಧ್ಯಕ್ಷೆ ಡಾ.ಸೋನಾಲಿ ಸರ್ನೋಬತ್ ಮಂಗಳವಾರ ಬೆಳಗಾವಿ ಡಿಸಿಪಿ ಡಾ. ವಿಕ್ರಂ ಅಮಟೆ ಅವರನ್ನು ಭೇಟಿ ಮಾಡಿ, ಪ್ರಾಣಿ ಕಲ್ಯಾಣ ಮಂಡಳಿ ಕೆಲಸದಲ್ಲಿ ಪೊಲೀಸರ ಸಹಕಾರದ ಕುರಿತು ಚರ್ಚಿಸಿದರು. ವಿಕ್ರಂ ಅಮಟೆ ಪಶು ವೈದ್ಯರಾಗಿದ್ದು, ಪ್ರಾಣಿಗಳ ರಕ್ಷಣೆ, ಕೈಗೊಳ್ಳಬೇಕಾದ ಕ್ರಮಗಳ ಕುರಿತು ಇಬ್ಬರೂ ಚರ್ಚಿಸಿದರು. ಈ ಸಂಬಂಧ ರಚಿಸಬೇಕಾದ ಎಸ್ ಪಿಸಿಎ ಸಮಿತಿ ಕುರಿತು ಸಹ ಚರ್ಚಿಸಲಾಯಿತು. ಪ್ರಾಣಿ ಕಲ್ಯಾಣ …

Read More »

ಮಠದ ಜಾಗದಲ್ಲಿ ಕೆಎಲ್ಇ ಮೆಡಿಕಲ್ ಕಾಲೇಜು ನಿರ್ಮಾಣವಾಗಬೇಕೆನ್ನುವುದು ಹಿಂದಿನ ಶ್ರೀಗಳ ಕನಸಾಗಿತ್ತು.: ಸಂಕೇಶ್ವರ

ಹುಬ್ಬಳ್ಳಿ: ಮೂರು ಸಾವಿರ ಮಠದ ವಿವಾದ ಮತ್ತೆ ತಾರಕಕ್ಕೇರಿದ್ದು, ಈ ಕುರಿತು ಮಾತನಾಡಿರುವ ಉದ್ಯಮಿ ವಿಜಯ ಸಂಕೇಶ್ವರ್, ಮೂಜಗು ಶ್ರೀಗಳು ಸಾಲದಿಂದ ಅಳುತ್ತಿದ್ದಾರೆ. ಮಠದ ಈಗಿನ ಪೀಠಾಧಿಪತಿಗಳಿಗೆ ಮಠವನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಇಬ್ಬರು ಸ್ವಾಮೀಜಿಗಳು ಕುಳಿತು ಸೌಹಾರ್ದಯುತವಾಗಿ ಸಮಸ್ಯೆ ಇತ್ಯರ್ಥ ಮಾಡಬೇಕು ಎಂದಿದ್ದಾರೆ. ನಾನು ಉನ್ನತ ಸಮಿತಿಯಲ್ಲಿದ್ದಾಗ ಮಠದ ಅಭಿವೃದ್ಧಿ ನಿಟ್ಟಿನಲ್ಲಿ ಸಭೆ ಕರೆಯುವಂತೆ ಸಾಕಷ್ಟು ಬಾರಿ ಹೇಳಿದ್ದೆ. ಆದರೆ ಯಾರೊಬ್ಬರೂ ಗೋಜಿಗೆ ಹೋಗಿಲ್ಲ. ಹೀಗಾಗಿ ಎಲ್ಲಿ ದುಡ್ದಿನ …

Read More »