Breaking News

Daily Archives: ಫೆಬ್ರವರಿ 26, 2021

ಬಸವಕಲ್ಯಾಣ ಉಪಚುನಾವಣೆ: ಲಕ್ಷ್ಮಣ ಸವದಿ, ವಿಜಯೇಂದ್ರ ಇಬ್ಬರಲ್ಲಿ ಯಾರಾದರೂ ಕಣಕ್ಕೆ!

ಬೆಂಗಳೂರು: ಬಸವಕಲ್ಯಾಣ ಕ್ಷೇತ್ರದ ಉಪ ಚುನಾವಣೆಗಾಗಿ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ಈಗಾಗಲೇ ಕ್ಷೇತ್ರದಲ್ಲಿ ಪ್ರಚಾರ ಕಾರ್ಯ ಆರಂಭಿಸಿದ್ದಾರೆ. 18 ಟಿಕೆಟ್ ಆಕಾಂಕ್ಷಿಗಳ ಜೊತೆ ನಾವು ಸಭೆ ನಡೆಸಿದೆವು, ಎಲ್ಲರೂ ಒಗ್ಗಟ್ಟಾಗಿ ಚುನಾವಣೆಯಲ್ಲಿ ಕೆಲಸ ಮಾಡುವುದಾಗಿ ಅವರು ಭರವಸೆ ನೀಡಿದ್ದಾರೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ. ಶುಕ್ರವಾರದಿಂದ ಪ್ರಚಾರ ಕಾರ್ಯ ಆರಂಭವಾಗಲಿದೆ ಎಂದು ಪ್ರಚಾರ ಕಾರ್ಯದ ಉಸ್ತುವಾರಿಯೂ ಆಗಿರುವ ಲಕ್ಷ್ಮಣ ಸವದಿ ಹೇಳಿದ್ದಾರೆ, ಚುನಾವಣಾ ದಿನಾಂಕ ಪ್ರಕಟಿಸುವ ಮೊದಲೇ ಕ್ಷೇತ್ರದ ಎಲ್ಲಾ …

Read More »

ಸಿದ್ದರಾಮಯ್ಯ ಅವರಿಗೆ ಧಿಕ್ಕಾರ ಕೂಗಿದ ಕಾಂಗ್ರೆಸ್ ಕಾರ್ಯಕರ್ತರು!?

ಮೈಸೂರು : ಮೈಸೂರು ಪಾಲಿಕೆ ಮೇಯರ್, ಉಪ ಮೇಯರ್ ಚುನಾವಣೆ ಅಂತ್ಯವಾದ ನಂತರ ಕಾಂಗ್ರೆಸ್ ನಲ್ಲಿ ಭಿನ್ನಮತ ಶುರುವಾಗಿದೆ. ಜೆಡಿಎಸ್ ಜೊತೆ ಕಾಂಗ್ರೆಸ್ ಮೈತ್ರಿಗೆ ಅಪಸ್ವರ ಕೇಳಿ ಬಂದಿದೆ. ಶಾಸಕ ತನ್ವೀರ್ ಸೇಠ್‌ ಗೆ ಕೆಪಿಸಿಸಿ ವತಿಯಿಂದ ನೊಟೀಸ್ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಅವರ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಈ ಸಂದರ್ಭದಲ್ಲಿ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಲಾಗಿದೆ. ಕೋಮುವಾದಿ ಬಿಜೆಪಿಯನ್ನು ದೂರ ಮಾಡಲು …

Read More »

ಬಸವಕಲ್ಯಾಣ ಉಪಚುನಾವಣೆ : ಬಿಜೆಪಿಯಿಂದ ಸಿಎಂ ಪುತ್ರ ಬಿ.ವೈ. ವಿಜಯೇಂದ್ರ ಕಣಕ್ಕೆ?

ಬೆಂಗಳೂರು : ಬಸವಕಲ್ಯಾಣ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿಯಿಂದ ನಾನು ಅಥವಾ ವಿಜಯೇಂದ್ರ ಇಬ್ಬರಲ್ಲಿ ಯಾರಾದರೂ ಕಣಕ್ಕಿಳಿಯಬಹುದು ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸವಕಲ್ಯಾಣ ಕ್ಷೇತ್ರದ ಉಪಚುನಾವಣೆಗಾಗಿ ಬಿಜೆಪಿಯಲ್ಲಿ 18 ಆಕಾಂಕ್ಷಿಗಳಿದ್ದು, ಅವರ ಜೊತೆಗೆ ಸಭೆ ನಡೆಸಲಾಗಿದ್ದು, ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುವುದಾಗಿ ಭರವಸೆ ನೀಡಿದ್ದಾರೆ. ವಿಜಯೇಂದ್ರ ಅಥವಾ ಲಕ್ಷ್ಮಣ ಸವದಿ ಇಬ್ಬರಲ್ಲಿ ಒಬ್ಬರು ಕಣಕ್ಕಿಳಿಯಬಹುದು ಎಂದು ಹೇಳಿದ್ದಾರೆ. ಚುನಾವಣೆ ದಿನಾಂಕ ಪ್ರಕಟವಾದ ಬಳಿಕ ಪಕ್ಷ …

Read More »

ಕೋವಿಡ್ ಎಂದು ಆಸ್ಪತ್ರೆಗೆ ದಾಖಲಾದ ಒಂದೇ ದಿನಕ್ಕೆ ಕೊನೆಯುಸಿರೆಳೆದ ಮಹಿಳೆ: ಬಿಲ್ ಎಷ್ಟಾಗಿತ್ತು ಗೊತ್ತಾ..?

ಕೋವಿಡ್-19 ಸೋಂಕಿಗೆ ತುತ್ತಾದ 38 ವರ್ಷದ ಮಹಿಳೆಯೊಬ್ಬರು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಮಾರನೇ ದಿನವೇ ಮೃತಪಟ್ಟಿದ್ದಾರೆ. ಆಕೆಯ ಅಗಲಿಕೆಯ ನೋವಿನಲ್ಲಿದ್ದ ಕುಟುಂಬಕ್ಕೆ ಮತ್ತೊಂದು ಬರೆಯ ರೂಪದಲ್ಲಿ ಮೂರು ಲಕ್ಷಗಳ ಆಸ್ಪತ್ರೆ ಬಿಲ್ ಬಂದಿದೆ. ಆರ್‌.ಟಿ. ನಗರದ ಮಹಿಳೆಗೆ ಕೆಮ್ಮು ಹಾಗೂ ಉಸಿರಾಟದ ತೊಂದರೆ ಕಾಣಿಸಿಕೊಂಡ ಬೆನ್ನಿಗೇ, ಸೋಮವಾರದಂದು ಆಕೆಯನ್ನು ಅಸ್ಟೆರ್‌ ಸಿಎಂಐ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚೇತರಿಕೆ ಕಾಣದ ಆಕೆ ಮಂಗಳವಾದ ನಿಧನರಾಗಿದ್ದಾರೆ. ಇಷ್ಟರಲ್ಲಾಗಲೇ ಮೂರು ಲಕ್ಷ ರೂ.ಗಳ ಬಿಲ್‌ …

Read More »

ಹಾಸ್ಯಪ್ರಜ್ಞೆ, ನೈತಿಕತೆ ಉಳಿಸಿಕೊಂಡು ರೋಗಿಗಳಿಗೆ ಸೇವೆ ನೀಡಿ: ಡಾ. ಎಂ.ಜಿ.ಆರ್. ವಿವಿ ಘಟಿಕೋತ್ಸವದಲ್ಲಿ ಪ್ರಧಾನಿ ಮೋದಿ ಕಿವಿ ಮಾತು

ನವದೆಹಲಿ: ಮಹಿಳೆಯರು ವಿಭಿನ್ನ ಕ್ಷೇತ್ರಗಳಲ್ಲಿ ದೇಶವನ್ನು ಮುನ್ನಡೆಸುವುದನ್ನು ನೋಡಲು ನಿಜಕ್ಕೂ ಸಂತೋಷವಾಗುತ್ತದೆ. ಇದು ನಡೆದಾಗ ದೇಶಕ್ಕೆ ಹೆಮ್ಮೆಯ, ಸಂತೋಷದ ಕ್ಷಣ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಅವರು ತಮಿಳು ನಾಡಿನ ಡಾ ಎಂಜಿಆರ್ ವೈದ್ಯಕೀಯ ವಿಶ್ವವಿದ್ಯಾಲಯದ 33ನೇ ಘಟಿಕೋತ್ಸವ ಸಮಾರಂಭವನ್ನುದ್ದೇಶಿಸಿ ವರ್ಚುವಲ್ ಕಾನ್ಫರೆನ್ಸ್ ಮೂಲಕ ಮಾತನಾಡಿದ ಪ್ರಧಾನ ಮಂತ್ರಿ ತಮಿಳು ನಾಡಿನ ಖ್ಯಾತ ಮಾಜಿ ಮುಖ್ಯಮಂತ್ರಿ ಎಂ.ಜಿ.ರಾಮಚಂದ್ರನ್ ಅವರನ್ನು ನೆನಪು ಮಾಡಿಕೊಂಡರು. ಇಂದು ಡಾ ರಾಮಚಂದ್ರನ್ ಅವರು ಇರುತ್ತಿದ್ದರೆ …

Read More »

ತಮಿಳುನಾಡು ಸರ್ಕಾರದ ವಿರುದ್ಧ ವಾಟಾಳ್ ನಾಗರಾಜ್ ಪ್ರತಿಭಟ

ಬೆಂಗಳೂರು, ಫೆ.26- ಕಾವೇರಿ ನದಿ ಜೋಡಣೆ ಸಂಬಂಧ ಏಕಾಏಕಿ 115ಕಿಮೀ ಉದ್ದದ ಕಾಲುವೆ ತೋಡಲು ಹೊರಟಿರುವ ತಮಿಳುನಾಡು ಸರ್ಕಾರದ ಕ್ರಮ ಖಂಡಿಸಿ ಕನ್ನಡ ಒಕ್ಕೂಟ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿತು. ತಮಿಳುನಾಡಿನಲ್ಲಿ ಬಿಜೆಪಿ ಚುನಾವಣೆ ಗೆಲ್ಲಲು ಕೇಂದ್ರ ಸರ್ಕಾರ ರಾಜ್ಯದ ಕಾವೇರಿ ನದಿಯನ್ನು ಬಲಿ ಕೊಡುತ್ತಿದೆ ಎಂದು ಆರೋಪಿಸಿದ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಈ ಕ್ರಮದಿಂದ ಹಿಂದೆ …

Read More »

ಲೋಕಸಭಾ ಕ್ಷೇತ್ರಕ್ಕೆ ಇಂದೇ ಚುನಾವಣಾ ದಿನಾಂಕ ಪ್ರಕಟವಾಗುವ ಸಾಧ್ಯತೆ

ನವದೆಹಲಿ: ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಹಾಗೂ ರಾಜ್ಯದ ಮೂರು ವಿಧಾನಸಭಾ ಮತ್ತು ಒಂದು ಲೋಕಸಭಾ ಕ್ಷೇತ್ರಕ್ಕೆ ಇಂದೇ ಚುನಾವಣಾ ದಿನಾಂಕ ಪ್ರಕಟವಾಗುವ ಸಾಧ್ಯತೆ ಇದೆ. ಕೇಂದ್ರ ಚುನಾವಣಾ ಆಯೋಗ ಇಂದು ಸಂಜೆ ಸುದ್ದಿಗೋಷ್ಠಿ ನಡೆಸಲಿದ್ದು, ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು, ಅಸ್ಸಾಂ ಹಾಗೂ ಪುದುಚೆರಿ ರಾಜ್ಯಗಳ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆ ಮಾಡುವ ಸಾಧ್ಯತೆ ಇದೆ.ಇನ್ನು ರಾಜ್ಯದ 3 ವಿಧಾನಸಭಾ ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರಗಳ ಚುನಾವಣೆಗೂ ಮುಹೂರ್ತ ಫಿಕ್ಸ್ …

Read More »

6 ವರ್ಷದ ಬಾಲಕಿಯ ಮೇಲೆ 60 ವರ್ಷದ ವ್ಯಕ್ತಿಯಿಂದ ಅತ್ಯಾಚಾರ ಯತ್ನ :

ಕೋಲಾರ : ಜಿಲ್ಲೆಯಲ್ಲಿ ಆರು ವರ್ಷದ ಬಾಲಕಿಯ ಮೇಲೆ 60 ವರ್ಷಯ ವೃದ್ಧರೊಬ್ಬರು ಅತ್ಯಾಚಾರಕ್ಕೆ ಯತ್ನಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಇಂತಹ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.   ಕೋಲಾರ ತಾಲೂಕಿನ ಛತ್ರಕೋಡಿಹಳ್ಳಿ ಗ್ರಾಮದಲ್ಲಿ ನಡೆದಲ್ಲಿ 6 ವರ್ಷದ ಬಾಲಕಿಗೆ ಚಾಕಲೇಟ್ ಕೊಡಿಸುವ ನೆಪದಲ್ಲಿ ನಿನ್ನೆ 60 ವರ್ಷದ ತಿಮ್ಮಪ್ಪ ಎಂಬುವರು ಅತ್ಯಾಚಾರ ಎಸಗಲು ಯತ್ನಿಸಿದ್ದಾಗಿ ತಿಳಿದು ಬಂದಿದೆ.   ಆರೋಪಿ ತಿಮ್ಮಪ್ಪ ಅವರ ಪುತ್ರ ಕುಮಾರ್ …

Read More »

ಸೈಬರ್‌ ಲೋಕದಲ್ಲಿ ‘ಬೆತ್ತಲೆ’ ಬ್ಲ್ಯಾಕ್‌ಮೇಲ್

ಬೆಂಗಳೂರು: ಅವರೊಬ್ಬ ಗ್ರಾನೈಟ್ ಉದ್ಯಮಿ. ಯುವತಿ ಹೆಸರಿನಲ್ಲಿ ಬಂದ ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸಿ, ಆಕೆಯ ಗುಂಗಿನಲ್ಲೇ ದಿನ ಕಳೆಯಲಾರಂಭಿಸಿದ್ದವರು. ಅಂದು ರಾತ್ರಿ ಏಕಾಏಕಿ ವಿಡಿಯೊ ಕರೆ ಮಾಡಿ ಸಲುಗೆಯಿಂದ ಮಾತನಾಡಿದ್ದ ಯುವತಿ, ‘ನಿಮ್ಮ ದೇಹ ನೋಡಬೇಕು’ ಎಂದು ಹೇಳಿ ಉದ್ಯಮಿ ಬಟ್ಟೆ ಬಿಚ್ಚಿಸಿ ಬೆತ್ತಲಾಗಿಸಿದ್ದಳು. ಬೆತ್ತಲೆ ದೃಶ್ಯವನ್ನು ಸದ್ದಿಲ್ಲದೇ ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡು, ಮರುದಿನದಿಂದಲೇ ಉದ್ಯಮಿಯನ್ನು ಬ್ಲ್ಯಾಕ್‌ಮೇಲ್ ಮಾಡಲಾರಂಭಿಸಿದಳು. ಇದು ಗ್ರಾನೈಟ್ ಉದ್ಯಮಿಯೊಬ್ಬರ ಕಥೆಯಲ್ಲ. ಕೆಲ ಗಣ್ಯರು, ಕೆಲ ಉದ್ಯಮಿಗಳು, ಕೆಲ …

Read More »

ಭಾನುವಾರದಿಂದಲೇ ಶೋ ಶುರು -ಸ್ಪರ್ಧಿಗಳ್ಯಾರು ಗೊತ್ತಾ..?

ಬೆಂಗಳೂರು: ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ ಸೀಸನ್ 8 ಫೆಬ್ರವರಿ 28 ರಿಂದ ಆರಂಭವಾಗಲಿದೆ. ಅಂದು ಸಂಜೆ 6 ಗಂಟೆಗೆ ಶುರುವಾಗಲಿದ್ದು, ಪ್ರತಿದಿನ ರಾತ್ರಿ 9.30 ಕ್ಕೆ ಪ್ರಸಾರವಾಗಲಿದೆ ಎಂದು ಕಲರ್ಸ್ ಕನ್ನಡ ಕ್ಲಸ್ಟರ್ ಮುಖ್ಯಸ್ಥ ಪರಮೇಶ್ವರ ಗುಂಡ್ಕಲ್ ತಿಳಿಸಿದ್ದಾರೆ. ಈ ಬಾರಿಯೂ ಕಿಚ್ಚ ಸುದೀಪ್ ‘ಬಿಗ್ ಬಾಸ್’ ಹೋಸ್ಟ್ ಮಾಡಲಿದ್ದಾರೆ. ಕೊರೋನಾ ಕಾರಣದಿಂದಾಗಿ ಈ ಬಾರಿ ‘ಬಿಗ್ ಬಾಸ್’ ವಿಳಂಬವಾಗಿ ಆರಂಭವಾಗುತ್ತಿದೆ. 17 ಮಂದಿ ಸ್ಪರ್ಧಿಗಳು ಭಾಗವಹಿಸಲಿದ್ದು, ಸಂಪೂರ್ಣವಾಗಿ …

Read More »