Breaking News

Daily Archives: ಫೆಬ್ರವರಿ 23, 2021

ಬೆಂಗಳೂರಿಗರೇ ಮತ್ತೊಮ್ಮೆ ಕೊರೋನಾ ಸಂಕಷ್ಟ ಎದುರಿಸಲು ತಯಾರಾಗಿ..!?

ಬೆಂಗಳೂರು, ಜ.23- ನಗರದಲ್ಲಿ ಮತ್ತೆ ಕೊರೊನಾ ಸ್ಫೋಟ ಭೀತಿ ಎದುರಾಗಿದೆ. ಬೆಳ್ಳಂದೂರು ವಾರ್ಡ್‍ನ ಅಪಾರ್ಟ್‍ಮೆಂಟ್‍ನ 500 ಮಂದಿಯ ಕೋವಿಡ್-19 ವರದಿ ಇಂದು ಸಂಜೆ ಬರಲಿದ್ದು, ಹೆಚ್ಚು ಮಂದಿಗೆ ಪಾಸಿಟಿವ್ ಕಂಡುಬಂದರೆ ನಗರದಲ್ಲಿ ಮತ್ತೆ ಕೊರೊನಾ ಅಲರ್ಟ್ ಘೋಷಣೆಯಾಗುವ ಸಾಧ್ಯತೆ ಇದೆ. ಫೆಬ್ರವರಿ 15 ರಿಂದ 22ರ ಅವಧಿಯಲ್ಲಿ ಬೆಳ್ಳಂದೂರು ವಾರ್ಡ್, ಅಂಬಲಿಪುರದ ಎಸ್‍ಜೆಆರ್ ವಾಟರ್‍ಮಾರ್ಕ್ ಅಪಾರ್ಟ್‍ಮೆಂಟ್‍ನಲ್ಲಿ 100 ಮಂದಿಗೆ ಕೊರೊನಾ ಇರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಇಡೀ ಪ್ರದೇಶವನ್ನು ಕಂಟೈನ್ಮೆಂಟ್ ಝೋನ್ …

Read More »

ಮೀಟರ್ ದರ ಏರಿಸುವಂತೆ ಆಟೋ ಚಾಲಕರ ಪ್ರತಿಭಟನೆ

ಬೆಂಗಳೂರು, ಫೆ.23- ಪೆಟ್ರೋಲ್, ಡೀಸೆಲ್, ಗ್ಯಾಸ್ ಸೇರಿದಂತೆ ಎಲ್ಲಾ ಬೆಲೆಗಳು ಹೆಚ್ಚುತ್ತಿವೆ. ಅದಕ್ಕೆ ಅನುಗುಣವಾಗಿ ಆಟೋ ಮೀಟರ್ ದರವನ್ನು ಏರಿಕೆ ಮಾಡುವಂತೆ ಒತ್ತಾಯಿಸಿ ಆಟೋ ಚಾಲಕರು ಇಂದು ನಗರದಲ್ಲಿ ಪ್ರತಿಭಟನೆ ನಡೆಸಿದರು. ಸಿಐಟಿಯು ನೇತೃತ್ವದ ಆಟೋರಿಕ್ಷಾ ಯೂನಿಯನ್ ಇಂದು ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದೆ. ಎಂಟು ವರ್ಷಗಳ ಹಿಂದೆ 2013ರಲ್ಲಿ ಆಟೋ ಮೀಟರ್ ದರ ಪರಿಷ್ಕರಣೆಯಾಗಿದೆ. ಅಲ್ಲಿಂದ ಈವರೆಗೂ ದರ ಇದ್ದಷ್ಟೇ ಇದೆ. ಗ್ಯಾಸ್, ಪೆಟ್ರೋಲ್, ಅಡುಗೆ ಎಣ್ಣೆ, …

Read More »

ಅಪ್ಪನಿಗೆ ಹುಟ್ಟಿದ ಮಗ ನಾನು. ನನಗೆ ಅವಮಾನ ಮಾಡಲು ಬರಬೇಡಿ. ಇದು ರೌಡಿಸಂ ವೇದಿಕೆ ಅಲ್ಲ….:ನಟ ಜಗ್ಗೇಶ್‌

ಬೆಂಗಳೂರು: ಅಪ್ಪನಿಗೆ ಹುಟ್ಟಿದ ಮಗ ನಾನು. ನನಗೆ ಅವಮಾನ ಮಾಡಲು ಬರಬೇಡಿ. ಇದು ರೌಡಿಸಂ ವೇದಿಕೆ ಅಲ್ಲ…. ಇದು ನಟ ಜಗ್ಗೇಶ್‌ ಅವರ ಕಟು ಆಕ್ರೋಶದ ಮಾತು. ಮೈಸೂರು ಸಮೀಪ ತಿ. ನರಸೀಪುರದ ಅತ್ತಳ್ಳಿಯಲ್ಲಿ ದರ್ಶನ್‌ ಅಭಿಮಾನಿಗಳಿಂದ ತರಾಟೆಗೆ ಒಳಗಾಗಿದ್ದ ಜಗ್ಗೇಶ್‌ ಅವರು ಘಟನೆಯ ಸಂದರ್ಭ ಇದ್ದ ಯುವಕರಿಗೆ ಹಾಗೂ ಚಿತ್ರರಂಗದ ಪ್ರಮುಖರಿಗೆ ಕಟು ಮಾತುಗಳಲ್ಲಿ ಎಚ್ಚರಿಕೆಯನ್ನೂ ನೀಡಿದರು. ‘ನನಗೆ ಬುದ್ಧಿಹೇಳಬೇಕಾದವರು ಕನ್ನಡದ ಜನ. ನನ್ನನ್ನು ಹೆತ್ತ ಜನ. ಯಾರೋ …

Read More »

ಜನನಾಯಕರ ಹಿತಾಸಕ್ತಿಗೋಸ್ಕರ ಧರಣಿ ಮುಂದುವರಿಸಲು ತೀರ್ಮಾನಿಸಿದ್ದಕ್ಕೆ ಬೇಸರವಾಗಿ ಹಿಂದೆ ಸರಿದಿದ್ದೇನೆ’

ಬೆಂಗಳೂರು: ‘ಮೀಸಲಾತಿಗೆ ಒತ್ತಾಯಿಸಿ ಬೆಂಗಳೂರಿನಲ್ಲಿ ಭಾನುವಾರ ನಡೆದ ಮಹಾರ‍್ಯಾಲಿ ನಂತರ ಧರಣಿ, ಸತ್ಯಾಗ್ರಹ ಮಾಡಬಾರದು ಎಂದು ನಿರ್ಧಾರವಾಗಿತ್ತು. ಆದರೆ, ಜನನಾಯಕರ ಹಿತಾಸಕ್ತಿಗೋಸ್ಕರ ಧರಣಿ ಮುಂದುವರಿಸಲು ತೀರ್ಮಾನಿಸಿದ್ದಕ್ಕೆ ಬೇಸರವಾಗಿ ಹಿಂದೆ ಸರಿದಿದ್ದೇನೆ’ ಎಂದು ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಹೇಳಿದ್ದಾರೆ. ‘ಸಮಾವೇಶದಲ್ಲಿಯೇ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರೆ ಗಲಾಟೆ ಆಗುತ್ತಿತ್ತು. ಇದರಿಂದ ಸಮುದಾಯದ ಘನತೆಗೆ ಚ್ಯುತಿಯಾಗುತ್ತದೆ ಎಂಬ ಕಾರಣದಿಂದ ಈ ನಿರ್ಧಾರ ತೆಗೆದುಕೊಂಡಿದ್ದೇನೆ. ಆದರೆ, ಸಮುದಾಯಕ್ಕೆ 2ಎ ಮೀಸಲಾತಿ ಬೇಕು …

Read More »

ಜನಾರ್ದನ ರೆಡ್ಡಿ ಪತ್ನಿಗೆ ಹೈಕೋರ್ಟ್​ನಿಂದ ಬಿಗ್​ ರಿಲೀಫ್..!

ಬಳ್ಳಾರಿ: ಮಾಜಿ ಸಚಿವ ಜನಾರ್ದನ ರೆಡ್ಡಿ ಪತ್ನಿ ಅರುಣಾರಿಗೆ ಹೈಕೋರ್ಟ್​ ಬಿಗ್​ ರಿಲೀಫ್​ ನೀಡಿದ್ದು, ಅಕ್ರಮ ಗಣಿಗಾರಿಕೆ ಪ್ರಕರಣದಿಂದ ಅರುಣಾರನ್ನು ಕೈಬಿಡುವಂತೆ ಆದೇಶ ಹೊರಡಿಸಿದೆ. ಈ ಹಿಂದೆ ಸಿಬಿಐ ವಿಶೇಷ ನ್ಯಾಯಾಲಯ ನೀಡಿದ್ದ ಆದೇಶವನ್ನು ಹೈಕೋರ್ಟ್​ ಪುರಸ್ಕರಿಸಿದೆ. ಅಸೋಸಿಯೇಟೆಡ್ ಮೈನಿಂಗ್ ಕಂಪನಿ ಅಕ್ರಮ ಗಣಗಾರಿಕೆ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ ದೋಷಾರೋಪಪಟ್ಟಿ ಸಲ್ಲಿಸಿತ್ತು. ಇದರಲ್ಲಿ ಜನಾರ್ದನ ರೆಡ್ಡಿ ಮೊದಲನೆ ಆರೋಪಿ, ಅವರ ಪತ್ನಿ ಅರುಣಾ ಎರಡನೇ ಆರೋಪಿಯಾಗಿದ್ದರು. ಇದನ್ನು ಪ್ರಶ್ನಿಸಿ …

Read More »

ಪರಿಸರ ಕಾರ್ಯಕರ್ತೆ ದಿಶಾ ರವಿಗೆ ಜಾಮೀನು ಮಂಜೂರು

ದೆಹಲಿ: ‘ಭಾರತಕ್ಕೆ ಅಪಖ್ಯಾತಿ ತರಲು, ರೈತರ ಪ್ರತಿಭಟನೆಯ ನೆರಳಿನಲ್ಲಿ ಶಾಂತಿ ಕದಡುವ ಜಾಗತಿಕ ಸಂಚಿನಲ್ಲಿ ಭಾಗಿಯಾಗಿದ್ದಾರೆ’ ಎಂಬ ಆರೋಪದ ಮೇಲೆ ಬಂಧನಕ್ಕೊಳಗಾದ ಬೆಂಗಳೂರು ಮೂಲದ ಪರಿಸರ ಕಾರ್ಯಕರ್ತೆ ದಿಶಾ ರವಿ ಅವರಿಗೆ ದೆಹಲಿಯ ಪಟಿಯಾಲ ನ್ಯಾಯಾಲಯ ಜಾಮೀನು ನೀಡಿದೆ. ಇನ್ನೋರ್ವ ಆರೋಪಿ ಶಾಂತನು ಮುಲುಕ್ ದೆಹಲಿ ಹೈಕೋರ್ಟ್​ಗೆ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ನಾಳೆ (ಫೆಬ್ರವರಿ 24) ನಡೆಯಲಿದೆ. ಬೆಂಗಳೂರಿನ ಪ್ರತಿಷ್ಠಿತ ಮಹಿಳಾ ಕಾಲೇಜುಗಳಲ್ಲಿ ಒಂದಾಗಿರುವ ಮೌಂಟ್​ ಕಾರ್ಮಲ್​ ಕಾಲೇಜಿನ …

Read More »

ಮುರುಗೇಶ್ ನಿರಾಣಿಗೆ ಅಮಿತ್ ಶಾ ದಿಢೀರ್ ಬುಲಾವ್

ಬೆಂಗಳೂರು: ರಾಜ್ಯ ಗಣಿ ಸಚಿವ ಮುರುಗೇಶ್ ನಿರಾಣಿ ಅವರನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ದಿಲ್ಲಿಗೆ ಕರೆಸಿದ್ದು, ನಿರಾಣಿ ತನ್ನ ಮೈಸೂರು ಪ್ರವಾಸವನ್ನು ಮೊಟಕುಗೊಳಿಸಿ ದಿಲ್ಲಿಗೆ ದೌಡಾಯಿಸಿದ್ದಾರೆ. ಮುರುಗೇಶ್ ನಿರಾಣಿ ಅವರು ಅವರು ಇಂದು ಮೈಸೂರು ಪ್ರವಾಸದ ಯೋಜನೆ ಮಾಡಿಕೊಂಡಿದ್ದರು. ಆದರೆ ಅಮಿತ್ ಶಾ ಕರೆಯ ಬೆನ್ನಲ್ಲೇ ಪ್ರವಾಸ ಮೊಟಕುಗೊಳಿಸಿ ದಿಲ್ಲಿ ವಿಮಾನ ಏರಿದ್ದಾರೆ.   ಮೈಸೂರು ಪ್ರವಾಸ ಮುಗಿಸಿ ಸಂಜೆ ದಿಲ್ಲಿಗೆ ಬರುತ್ತೇನೆ ಎಂದು ನಿರಾಣಿ ಹೇಳಿದರೂ …

Read More »

ಕುಂದಾ ಬೇಡ, ಗೋಕಾಕ್ ಕರದಂಟು ಬೇಕು: ಲಕ್ಷ್ಮೀ ಹೆಬ್ಬಾಳ್ಕರ್​

ಬೆಳಗಾವಿ: ಇದು ಸತ್ಯಕ್ಕೆ ದೂರವಾದ ಸಂಗತಿ. ನಿರಾಣಿ ಅಣ್ಣ ಅಧಿಕಾರದಲ್ಲಿ ಇದ್ದು ಸಿಎಂ ಒತ್ತಡದಿಂದ ಹೇಳಿದ್ದಾರೆ. ಅವರು ಸಹ ಪಂಚಮಸಾಲಿ ಹೋರಾಟದಲ್ಲಿ ಭಾಗವಹಿಸಿದ್ದರು ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​ ಅವರು ಮಂಗಳವಾರ ಹೇಳಿದ್ದಾರೆ. ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​ ಕಾಂಗ್ರೆಸ್ ‘ಬಿ’ ಟೀಮ್ ನಿರಾಣಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಬೆಳಗಾವಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಹೋರಾಟ ಸಮಾಜದ ಕೆಲಸ ಇದು ಪಕ್ಷ ಪರ ವಿರುದ್ಧ ಇರೋ ಹೋರಾಟ …

Read More »

ಪಂಚಮಸಾಲಿ ಸಮುದಾಯವನ್ನು ವೋಟ್ ಬ್ಯಾಂಕ್ ಮಾಡಿಕೊಂಡಿದ್ದೀರಿ: ಮೀಸಲಾತಿ ನೀಡಿ, ಋಣ ಸಂದಾಯ ಮಾಡಿ’

ಬೆಂಗಳೂರು: ರಾಜ್ಯದಲ್ಲಿ 8 ವಿವಿಧ ಸಮುದಾಯಗಳು ವಿವಿಧ ವರ್ಗಗಳ ಅಡಿಯಲ್ಲಿ ಮೀಸಲಾತಿಗಾಗಿ ಒತ್ತಾಯಿಸುತ್ತಿವೆ, ಅದರಲ್ಲೂ ಮುಖ್ಯವಾಗಿ ಪಂಚಮಸಾಲಿ ಲಿಂಗಾಯತರು ನಡೆಸುತ್ತಿರುವ ಪ್ರತಿಭಟನೆ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಇರಿಸುಮುರುಸು ಉಂಟು ಮಾಡುತ್ತಿದೆ. ತಮ್ಮ ಸಮುದಾಯವನ್ನು ಹಿಂದುಳಿದ ವರ್ಗಗಳ ಗುಂಪಿಗೆ ಸೇರಿಸಬೇಕೆಂದು ದಶಕಗಳ ಹಿಂದಿನಿಂದಲೂ ಪಂಚಮಸಾಲಿ ಸಮುದಾಯ ಒತ್ತಾಯ ಮಾಡುತ್ತಲೇ ಇದೆ, ಆದರೆ ಸಮಯ- ಸಂದರ್ಭ, ಅವಕಾಶವಾದಿ ರಾಜಕಾರಣದಿಂದಾಗಿ ಹೋರಾಟ ಇದ್ದಕ್ಕಿದ್ದಂತೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಸಿಎಂ ಯಡಿಯೂರಪ್ಪಅವರನ್ನು ವಿವಾದಾತ್ಮಕ ಲಿಂಗಾಯತ …

Read More »

ಆರ್ಥಿಕ ಮಾನದಂಡದ ಮೇಲೆ ಮೀಸಲಾತಿ ನಿರ್ಧರಿಸಿ : ಹೊರಟ್ಟಿ

ಬೆಂಗಳೂರು,ಫೆ.23- ಯಾವುದೇ ಸಮುದಾಯಕ್ಕೆ ಮೀಸಲಾತಿ ಸಿಗುವುದಾದರೆ ಅರ್ಥಿಕ ಮಾನದಂಡದ ಮೇಲೆ ನಿರ್ಧಾರವಾಗಬೇಕೆಂದು ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅವರು ಅಭಿಪ್ರಾಯಪಟ್ಟಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ರಾಜ್ಯದಲ್ಲೇ 1.36 ಕೋಟಿ ಬಡತನರೇಖೆಗಿಂತ ಕೆಳಗಿರುವ ಬಡವರು ಬಿಪಿಎಲ್ ಕಾರ್ಡ್ ಹೊಂದಿದ್ದಾರೆ. ಇದರಲ್ಲಿ ಎಷ್ಟು ಮಂದಿ ಬಡವರಿದ್ದಾರೆ ಎಂಬುದು ಯಾರಿಗೂ ಗೊತ್ತಿಲ್ಲ. ಆರ್ಥಿಕ ವ್ಯವಸ್ಥೆ ನೋಡಿಕೊಂಡು ಮೀಸಲಾತಿ ನೀಡುವುದು ಸೂಕ್ತ ಎಂದು ಸಲಹೆ ಮಾಡಿದರು. ಇತ್ತೀಚೆಗೆ ದೇಶದ ವಿವಿಧ ಭಾಗಗಳಲ್ಲಿ ಮೀಸಲಾತಿಗಾಗಿ ಹೋರಾಟಗಳು …

Read More »