Breaking News
Home / ಜಿಲ್ಲೆ / ಬೆಂಗಳೂರು / ಆರ್ಥಿಕ ಮಾನದಂಡದ ಮೇಲೆ ಮೀಸಲಾತಿ ನಿರ್ಧರಿಸಿ : ಹೊರಟ್ಟಿ

ಆರ್ಥಿಕ ಮಾನದಂಡದ ಮೇಲೆ ಮೀಸಲಾತಿ ನಿರ್ಧರಿಸಿ : ಹೊರಟ್ಟಿ

Spread the love

ಬೆಂಗಳೂರು,ಫೆ.23- ಯಾವುದೇ ಸಮುದಾಯಕ್ಕೆ ಮೀಸಲಾತಿ ಸಿಗುವುದಾದರೆ ಅರ್ಥಿಕ ಮಾನದಂಡದ ಮೇಲೆ ನಿರ್ಧಾರವಾಗಬೇಕೆಂದು ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅವರು ಅಭಿಪ್ರಾಯಪಟ್ಟಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ರಾಜ್ಯದಲ್ಲೇ 1.36 ಕೋಟಿ ಬಡತನರೇಖೆಗಿಂತ ಕೆಳಗಿರುವ ಬಡವರು ಬಿಪಿಎಲ್ ಕಾರ್ಡ್ ಹೊಂದಿದ್ದಾರೆ.

ಇದರಲ್ಲಿ ಎಷ್ಟು ಮಂದಿ ಬಡವರಿದ್ದಾರೆ ಎಂಬುದು ಯಾರಿಗೂ ಗೊತ್ತಿಲ್ಲ. ಆರ್ಥಿಕ ವ್ಯವಸ್ಥೆ ನೋಡಿಕೊಂಡು ಮೀಸಲಾತಿ ನೀಡುವುದು ಸೂಕ್ತ ಎಂದು ಸಲಹೆ ಮಾಡಿದರು. ಇತ್ತೀಚೆಗೆ ದೇಶದ ವಿವಿಧ ಭಾಗಗಳಲ್ಲಿ ಮೀಸಲಾತಿಗಾಗಿ ಹೋರಾಟಗಳು ಆರಂಭವಾಗಿವೆ. ಎಲ್ಲ ಸಮುದಾಯಗಳು ತಮಗೆ ಮೀಸಲಾತಿ ಹೆಚ್ಚಳ ಮಾಡಬೇಕೆಂಬ ಬೇಡಿಕೆ ಇಟ್ಟಿದ್ದಾರೆ. ಸರ್ಕಾರಗಳು ಆರ್ಥಿಕ ಸ್ಥಿತಿಗತಿ ನೋಡಿಕೊಂಡು ಮೀಸಲಾತಿ ನೀಡಬೇಕೆಂದು ಹೇಳಿದರು.

ಪ್ರಸ್ತುತ ದೇಶದಲ್ಲಿ ನಡೆಯುತ್ತಿರುವ ಮೀಸಲಾತಿ ಹೋರಾಟ ಗಳನ್ನು ನಾನು ಕೂಡ ಗಮನಿಸು ತ್ತಿದ್ದೇನೆ. ಶ್ರೀಮಂತರು ಮತ್ತು ಬಡವರು ಎಂಬುದರ ನಡುವೆ ಮೀಸಲಾತಿ ಇರಬೇಕು.ಅದರಲ್ಲೂ ಮುಖ್ಯವಾಗಿ ಬಡವರಿಗೆ ಮೀಸಲಾತಿ ಸಿಗಬೇಕು ಎಂದರು. ಜಾತಿ ಜಾತಿಗಳ ನಡುವೆ ಮೀಸಲಾತಿ ಹೋರಾಟಕ್ಕೆ ಈಗಲೂ ನನ್ನ ವಿರೋಧವಿದೆ. ಕೆಲವು ಸ್ವಾಮೀಜಿಗಳು ಈ ಹೋರಾಟದಲ್ಲಿ ಭಾಗಿಯಾಗಿರುವುದು ನನ್ನ ಗಮನಕ್ಕೆ ಬಂದಿದೆ. ಸ್ವಾಮೀಜಿಗಳ ಬಗ್ಗೆ ನಾನು ಏನನ್ನೂ ಮಾತನಾಡುವುದಿಲ್ಲ. ಅನಗತ್ಯವಾಗಿ ದೊಡ್ಡವರ ಬಗ್ಗೆ ಮಾತನಾಡಬಾರದೆಂದು ಹೇಳಿದರು.

ಮೊಬೈಲ್‍ಗಳಿಗೆ ನಿಷೇಧ: ಮಾರ್ಚ್ 4ರಂದು ಆರಂಭವಾಗಲಿರುವ ಬಜೆಟ್ ಅಧಿವೇಶನದಲ್ಲಿ ಈ ಬಾರಿ ಶಾಸಕರು ಸೇರಿದಂತೆ ಮತ್ತಿತರರಿಗೆ ಸದನದಲ್ಲಿ ಮೊಬೈಲ್ ತರುವುದಕ್ಕೆ ಸಂಪೂರ್ಣವಾಗಿ ನಿಷೇಧ ಹೇರಲಾಗುವುದು. ಕಲಾಪ ನಡೆಯುವ ಸಂದರ್ಭದಲ್ಲಿ ಇವುಗಳಿಂದ ಕಿರಿಕಿರಿ ಉಂಟಾಗುತ್ತದೆ ಎಂದರು.

ಕಳೆದ ವಿಧಾನಷರಿಷತ್ ಅಧಿವೇಶನದಲ್ಲಿ ಕಾಂಗ್ರೆಸ್ ಸದಸ್ಯ ಪ್ರಕಾಶ್ ರಾಥೋಡ್ ಅವರ ಮೊಬೈಲ್ ವಿಷಯ ಅರ್ಧದಿನ ಚರ್ಚೆಯಾಗಿ ಕಲಾಪವೇ ಹಾಳಾಗಿ ಹೋಯಿತು. ಮುಂದೆ ಇಂಥ ಘಟನೆಗಳು ಮರುಕಳಿಸಬಾರದೆಂದರೆ ಸದನದಲ್ಲಿ ಮೊಬೈಲ್ ನಿಷೇಧಿಸುವುದೇ ಸೂಕ್ತ ಎಂದು ಅಭಿಪ್ರಾಯಪಟ್ಟರು. ದೇಶದ ಇತರ ಭಾಗಗಳಲ್ಲೂ ಸದನದಲ್ಲಿ ಮೊಬೈಲ್‍ಗಳಿಗೆ ನಿಷೇಧ ಹೇರಲಾಗಿದೆ. ನಮ್ಮಲ್ಲೂ ಕೆಲವು ಮಾಧ್ಯಮಗಳಿಗೆ ವಿನಾಯ್ತಿ ನೀಡಲಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಧ್ಯಮದವರಿಗೆ ತಮ್ಮದೇ ಆದ ಸ್ವಾತಂತ್ರ್ಯವಿದೆ. ಅನಗತ್ಯ ನಾವು ಮಾಧ್ಯಮಗಳನ್ನು ದೂರುವಂತಿಲ್ಲ ಎಂದರು.

ಸದನದಲ್ಲಿ ಪ್ರತಿಯೊಬ್ಬರು ಉತ್ತಮವಾಗಿ ನಡೆದುಕೊಳ್ಳಬೇಕು. ಅನಿರೀಕ್ಷಿತವಾಗಿಯೋ, ಆಕಸ್ಮಿಕವಾಗಿಯೋ ಕೆಲವು ಘಟನೆಗಳು ನಡೆದರೆ ಅದರ ಬಗ್ಗೆ ಚರ್ಚೆ ಮಾಡಿ ಏನು ಮಾಡಬೇಕು ಎನ್ನುವ ವಿಚಾರವೂ ಇದೆ. ನಾವು ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸಿ ಇತರರಿಗೆ ಮಾದರಿಯಾಗಬೇಕು ಎಂದು ಹೊರಟ್ಟಿ ಕಿವಿಮಾತು ಹೇಳಿದರು.

ನಾವು ಯಾವುದೇ ಕಾರಣಕ್ಕೂ ಮಾಧ್ಯಮದವರನ್ನು ದೂರ ಇಡುವ ಪ್ರಶ್ನೆಯೇ ಇಲ್ಲ. ನಾನು ಯಾವಾಗಲೂ ಮಾಧ್ಯಮದವರ ಜೊತೆಯೇ ಬೆಳೆದು ಬಂದಿದ್ದೇನೆ. ಅಧಿವೇಶನ ಆರಂಭದ ಎರಡು ದಿನಗಳ ಮುಂಚೆ ಪತ್ರಿಕಾಗೋಷ್ಠಿ ಕರೆದು ಎಲ್ಲ ಮಾಹಿತಿ ನೀಡುವೆ. ಈ ಬಾರಿ ಸದನದಲ್ಲಿ ಉತ್ತಮ ಚರ್ಚೆಯಾಗಲಿ ಎಂದು ಹೇಳಿದರು.


Spread the love

About Laxminews 24x7

Check Also

ಡ್ರಗ್ಸ್​ ಪ್ರಕರಣ: ಬಿಗ್​ಬಾಸ್​​ ಸ್ಪರ್ಧಿ ಮಸ್ತಾನ್​ ಮನೆ ಮೇಲೆ ದಾಳಿ, ವಶಕ್ಕೆ

Spread the loveಬೆಂಗಳೂರು: ನಗರದ ಅಪಾರ್ಟ್‌ಮೆಂಟ್ ಸಮುಚ್ಚಯವೊಂದರಲ್ಲಿ ಡ್ರಗ್ಸ್ ಪಾರ್ಟಿ‌ ಆಯೋಜಿಸಿ‌ ಉದ್ಯಮಿಗಳಿಬ್ಬರು ಸಿಕ್ಕಿಬಿದ್ದ ಪ್ರಕರಣದಲ್ಲಿ ಭಾಗಿಯಾದ ಆರೋಪದಡಿ‌ ಬಿಗ್‌ಬಾಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ