Breaking News
Home / 2021 / ಜನವರಿ (page 87)

Monthly Archives: ಜನವರಿ 2021

ಬೆಳಗಾವಿಯಲ್ಲಿ ನಾಡದ್ರೋಹಿಗಳ ವಿರುದ್ಧ ಕಠಿಣ ಕ್ರಮಕ್ಕೆ ಎಚ್ಡಿಕೆ ಆಗ್ರಹ January 2, 2021 belagavi Kan

ಬೆಂಗಳೂರು, ಜ.2- ಬೆಳಗಾವಿ ಮಹಾನಗರ ಪಾಲಿಕೆ ಮುಂದೆ ಕನ್ನಡ ಧ್ವಜ ಹಾರಿಸಲು ಕಷ್ಟ ಪಡಬೇಕಾದ ಪರಿಸ್ಥಿತಿಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತ ಪಡಿಸಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು, ಸರ್ಕಾರ ಕೂಡಲೇ ಕಠಿಣ ಕ್ರಮ ಕೈಗೊಳ್ಳದಿದ್ದರೆ ಮುಂದೆ ಕೈಲಾಗದವರೆಲ್ಲಾ ಕನ್ನಡಿಗರ ಮೇಲೆ ಸವಾರಿ ಮಾಡಲು ಬರಬಹುದು ಎಂದು ಎಚ್ಚರಿಸಿದ್ದಾರೆ. ಬೆಳಗಾವಿ ಪಾಲಿಕೆ ಎದುರು ಡಿ.28ರಂದು ಕನ್ನಡಪರ ಹೋರಾಟಗಾರರು ನಾಡ ಧ್ವಜ ಹಾರಿಸಿದ ನಂತರದ ಘಟನೆಗಳನ್ನು ಸೂಕ್ಷ್ಮವಾಗಿ ಗಮನಿಸಿದ್ದೇನೆ. ನಮ್ಮ ನೆಲದಲ್ಲಿ …

Read More »

ಎಸ್ಎಸ್ಎಲ್ ಸಿ, ಪಿಯುಸಿ ಪರೀಕ್ಷಾ ಟೆಂಟೆಟಿವ್ ವೇಳಾಪಟ್ಟಿ

ಬೆಂಗಳೂರು – ರಾಜ್ಯದಲ್ಲಿ 2020-2021ನೇ ಸಾಲಿನ ಎಸ್ಎಸ್ಎಲ್ ಸಿ ಮತ್ತು ಪಿಯುಸಿ ಪರೀಕ್ಷೆ ನಡೆಸಲು ರಾಜ್ಯಸರಕಾರ ಸಿದ್ಧತೆ ಮಾಡುತ್ತಿದೆ. ಮಂಗಳವಾರ ಅಥವಾ ಬುಧವಾರ ಈ ಎರಡೂ ಪರಿಕ್ಷೆಗಳ ಟೆಂಟೆಟಿವ್ ವೇಳಾಪಟ್ಟಿ ಪ್ರಕಟಿಸುವುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ ಕುಮಾರ ಮಾಹಿತಿ ನೀಡಿದ್ದಾರೆ.           ಮಕ್ಕಳಿಗೆ ಓದುವುದಕ್ಕೆ ಸಾಕಷ್ಟು ಸಮಯಾವಕಾಶ ಇರುವಂತೆ ವೇಳಾಪಟ್ಟಿ ಪ್ರಕಟಿಸಲಾಗುವುದು. ಈಗ ಪ್ರಕಟಿಸಲಾಗುವ ವೇಳಾಪಟ್ಟಿಯೇ ಅಂತಿಮವೂ ಆಗಬಹುದು ಅಥವಾ ಅಲ್ಪಸ್ವಲ್ಪ …

Read More »

ಕೋತಿಗಳ ಕಾಟಕ್ಕೆ ಹೈರಾಣಾದ ಗದಗದ ಪಾಪನಾಶಿ ಗ್ರಾಮಸ್ಥರು

ಗದಗ (ಜ. 2): ಗದಗ ಜಿಲ್ಲೆಯ ಪಾಪನಾಶಿ ಗ್ರಾಮದ ಜನರಿಗೆ ನೆಮ್ಮದಿಯಿಂದ ಜೀವನ ನಡೆಸಲು ಆಗದಂತಹ ಪರಿಸ್ಥಿತಿ ಎದುರಾಗಿದೆ. ಇಲ್ಲಿನ ಜನರು ಮನೆಯಿಂದ ಹೊರಗಡೆ ಬರಲು ಭಯ ಪಡುತ್ತಿದ್ದಾರೆ. ಅದರಲ್ಲೂ ಮಕ್ಕಳು, ಮಹಿಳೆಯರು ಜೀವವನ್ನು ಅಂಗೈಯಲ್ಲಿ ಹಿಡಿದುಕೊಂಡೆ ಓಡಾಡಬೇಕು. ಅಷ್ಟೊಂದು ಭಯಾನಕ ವಾತಾವರಣ ನಿರ್ಮಾಣವಾಗುವಂತೆ ವಾನರ ಸೈನ್ಯ ಮಾಡಿದೆ. ಹೌದು, ಕೋತಿಗಳ ಕಾಟಕ್ಕೆ ಇಡೀ ಗ್ರಾಮದ ಜನರು ಹೈರಾಣಾಗಿದ್ದಾರೆ. ಮಂಗಗಳ ಚೇಷ್ಟೆ ನೋಡಲು ಚಂದ. ಆದರೆ, ಅವುಗಳ ಉಪಟಳ ಹೆಚ್ಚಾದರೆ …

Read More »

ರಾಜೀನಾಮೆ ಹಿಂದಿನ ಸತ್ಯವನ್ನು ಬಾಯ್ಬಿಟ್ಟ ಮಾಜಿ ಐಪಿಎಸ್​ ಅಧಿಕಾರಿ ಅಣ್ಣಾಮಲೈ..!

ಚಿಕ್ಕಮಗಳೂರು(ಜ.02): 10 ವರ್ಷ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಿದ್ದೇನೆ. ಆಮೇಲೆ ಡಿಐಜಿ, ಐಜಿ ಆಗಿ ಎಸಿ ರೂಮಲ್ಲಿ ಕೂತು ಕೆಲಸ ಮಾಡಲು ಆಸಕ್ತಿ ಇಲ್ಲ ಎಂದಾಗ, ಸಿದ್ಧಾರ್ಥ್ ಅಣ್ಣ(ಕೆಫೆ ಕಾಫಿ ಡೇ ಮಾಲೀಕ) ಮಾತ್ರ ಧೈರ್ಯವಾಗಿ ರಾಜೀನಾಮೆ ಕೊಡಿ, ನಾನಿದ್ದೇನೆ ಎಂದಿದ್ದರು. ನನ್ನ ರಾಜೀನಾಮೆಯನ್ನ ನಾವಿಬ್ಬರೂ ಸೇರಿ ನಿರ್ಧಾರ ಮಾಡಿದ್ದು ಎಂದು ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಹೇಳಿದ್ದಾರೆ. ಅಣ್ಣಾಮಲೈ ಅವರು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕುದುರೆಗುಂಡಿ ಬಳಿ …

Read More »

ರೈತ-ಕಾರ್ಮಿಕ ವಿರೋಧಿ ಹೊಸ ಕಾಯ್ದೆಗಳ ಪ್ರತಿಗಳನ್ನ ದಹಿಸಿ ಹುಬ್ಬಳ್ಳಿಯಲ್ಲಿ ಪ್ರತಿಭಟನೆ

ಹುಬ್ಬಳ್ಳಿ: ಕೇಂದ್ರ ಸರ್ಕಾರ ರೈತ ಮತ್ತು ಕಾರ್ಮಿಕ ವಿರೋಧಿ ಕಾನೂನು ಜಾರಿಗೆ ತಂದಿದೆ‌ ಎಂದು ಆರೋಪಿಸಿ ಹುಬ್ಬಳ್ಳಿಯ ಅಮರಗೋಳ ಎಪಿಎಂಎಸಿಯಲ್ಲಿ ಹಮಾಲಿ ಕಾರ್ಮಿಕರು ಪ್ರತಿಭಟನೆ ಮಾಡಿದರು.‌ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ನೂತನ ಕೃಷಿ, ಎಪಿಎಮ್‌ಸಿ, ವಿದ್ಯುತ್ ಕಾಯ್ದೆಗಳು ರೈತರು ಮತ್ತು ಕಾರ್ಮಿಕರ ಹಿತಾಸಕ್ತಿಗೆ ವಿರೋಧಿಯಾಗಿವೆ. ಸರ್ಕಾರ ಅನ್ನದಾತರ ಹೋರಾಟಕ್ಕೆ ಸ್ಪಂದಿಸಬೇಕು‌. ಅನ್ನದಾತರು ಮತ್ತು ಕೂಲಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದ್ರು. ಎಪಿಎಂಸಿ ಹಮಾಲಿ ಕಾರ್ಮಿಕರ ಒಕ್ಕೂಟದ …

Read More »

ಬೆಳಗಾವಿಯಲ್ಲಿ ಕೊರೊನಾ ಲಸಿಕೆಯ ಡ್ರೈ ರನ್ ಆರಂಭ..ಆಶಾ ಕಾರ್ಯಕರ್ತೆಗೆ ಮೊದಲ ಡೆಮೊ

ದೇಶಾಧ್ಯಂತ ಇಂದು ಕೊರೊನಾ ವ್ಯಾಕ್ಸಿನ್ ಡ್ರೈರನ್ ಆರಂಭಿಸಲಾಗಿದೆ. ಅದೇ ರೀತಿ ಬೆಳಗಾವಿ ಜಿಲ್ಲೆಯ 3 ಸರ್ಕಾರಿ ಆಸ್ಪತ್ರೆಗಳಲ್ಲಿ ಕೊರೊನಾ ಲಸಿಕೆಯ ಡ್ರೈ ರನ್ ಆರಂಭವಾಗಿದೆ. ಮೊದಲು ಹತ್ತು ಜನರ ಮೇಲೆ ಲಸಿಕೆ ಡೆಮೊ ಮಾಡಲು ಸಿಬ್ಬಂದಿ ಸಿದ್ಧತೆ ಮಾಡಿಕೊಂಡಿದ್ದು. ವಂಟಮೂರಿ ನಗರ ಪ್ರಾಥಮಿಕ ಶಾಲೆಯಲ್ಲಿ ಮೊದಲಿಗೆ ಆಶಾ ಕಾರ್ಯರ್ತೆ ಮೇಲೆ ಡೆಮೊ ಮಾಡಲಾಯಿತು. ಹೌದು ಬೆಳಗಾವಿಯ ವಂಟಮುರಿಯಲ್ಲಿರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ಕಿತ್ತೂರು ಸಮುದಾಯ ಆರೋಗ್ಯ ಕೇಂದ್ರ, ಹುಕ್ಕೇರಿ …

Read More »

ಜನೆವರಿ 15ರಿಂದ ರಾಷ್ಟ್ರಾದ್ಯಂತ ಶ್ರೀರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನ

ಬೆಳಗಾವಿ – ಜನೆವರಿ 15ರಿಂದ ರಾಷ್ಟ್ರಾದ್ಯಂತ ಶ್ರೀರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನ ನಡೆಯಲಿದ್ದು, 5 ಲಕ್ಷ ಗ್ರಾಮ ಮತ್ತು 12 ಕೋಟಿ ಜನರನ್ನು ತಲುಪುವ ಉದ್ದೇಶ ಹೊಂದಲಾಗಿದೆ ಎಂದು ವಿಶ್ವ ಹಿಂದು ಪರಿಷತ್ ನ ಕ್ಷೇತ್ರಿಯ ಸಂಘಟನಾ ಕಾರ್ಯದರ್ಶಿ ಕೇಶವ ಹೆಗಡೆ ತಿಳಿಸಿದರು. ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀರಾಮನ ಆದರ್ಶ ಮತ್ತು ಜೀವನ ಮೌಲ್ಯಗಳನ್ನು ಪುನರ್ ಸ್ಥಾಪಿಸುವುದು ಅಭಿಯಾನದ ಮುಖ್ಯ ಉದ್ದೇಶ. ಯಾರಿಂದಲೂ ನಿಧಿಯನ್ನು ಒತ್ತಾಯ ಪೂರ್ವಕ ಸಂಗ್ರಹಿಸುವುದಿಲ್ಲ. …

Read More »

ಬೆಳಗಾವಿ ಗ್ರಾಮೀಣ ಕ್ಷೇತ್ರದ ಗ್ರಾಪಂ ಸದಸ್ಯರಿಂದ ಗೋಕಾಕ ಸಾಹುಕಾರರ ಭೇಟಿ

ಗೋಕಾಕ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಗ್ರಾಮ ಪಂಚಾಯಿತಿಗಳಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಜಯಭೇರಿ ಬಾರಿಸಿರುವ ಬಿಜೆಪಿಯ ವೀರ ಸೇನಾನಿಗಳು ಶನಿವಾರ ಮುಂಜಾನೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರನ್ನು ಭೇಟಿಯಾಗುವ ಮೂಲಕ ಬಿಜೆಪಿಯ ಶಕ್ತಿ ಪದರ್ಶನ ನಡೆಸಿದರು. ಗೋಕಾಕನ ಗೃಹ ಕಚೇರಿಯಲ್ಲಿ ಗ್ರಾಮ ಪಂಚಾಯಿತಿ ನೂತನ ಸದಸ್ಯರು ಬಂದು ಸಚಿವ ರಮೇಶ ಜಾರಕಿಹೊಳಿ ಅವರ ಆಶೀರ್ವಾದ ಪಡೆದರು. ಗ್ರಾಮೀಣ ಭಾಗದಲ್ಲಿ ಬಿಜೆಪಿ ಮತ್ತಷ್ಟು ಬಲಗೊಂಡಿದೆ ಎಂದು ಸಚಿವರಿಗೆ ಮನವರಿಕೆ …

Read More »

ಭಾರತೀಯ ಸೇನೆಯಲ್ಲಿ ಭಾರೀ ಬದಲಾವಣೆ

ನವದೆಹಲಿ: ಭಾರತೀಯ ಸೇನೆಯ ಉನ್ನತ ಮಟ್ಟದ ಅಧಿಕಾರಿಗಳ ವಲಯದಲ್ಲಿ ಪ್ರಮುಖ ಪುನರ್ರಚನೆಯಾಗಿದೆ. ಹೊಸ ವರ್ಷದ ಆರಂಭ ದಿನವಾದ ನಿನ್ನೆ ನೂತನ ಸೇನಾ ಉಪ ಮುಖ್ಯಸ್ಥ(ಡಿಸಿಒಎಎಸ್)ಅಧಿಕಾರ ವಹಿಸಿಕೊಂಡಿದ್ದಾರೆ. ಕಾರ್ಪ್ಸ್ ಕಮಾಂಡರ್ಸ್, ಆಡಳಿತಾತ್ಮಕ ಮತ್ತು ತರಬೇತಿ ಸಂಸ್ಥೆಗಳಲ್ಲಿ ಪ್ರಮುಖ ಬದಲಾವಣೆಯಾಗಿದೆ. ಜನವರಿ 1, 2021ರಂದು ನೂತನ ಡಿಸಿಒಎಎಸ್ ಆಗಿ ಲೆಫ್ಟಿನೆಂಟ್ ಜನರಲ್ ಶಂತನು ದಯಾಳ್ ಅಧಿಕಾರ ವಹಿಸಿಕೊಂಡಿದ್ದಾರೆ. ತೇಜ್ ಪುರ್ ಮೂಲದ 4 ಕಾರ್ಪ್ಸ್ ನ ಕಾರ್ಪ್ಸ್ ಕಮಾಂಡರ್ ಆಗಿದ್ದರು ಲೆಫ್ಟಿನೆಂಟ್ ಜನರಲ್ ದಯಾಳ್, …

Read More »

ಇಂದಿನಿಂದ ದೇಶಾದ್ಯಂತ ಕೊರೋನಾ ವೈರಸ್ ಲಸಿಕೆ ವಿತರಣೆಗೆ ‘ಡ್ರೈ ರನ್

ನವದೆಹಲಿ: ದೇಶದಲ್ಲಿ ಕೊರೋನಾ ವೈರಸ್ ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ಸಿಕ್ಕಿದೆ. ಇದರ ಬೆನ್ನಲ್ಲೇ ಶನಿವಾರ ದೇಶಾದ್ಯಂತ ‘ಡ್ರೈ ರನ್‌’ಗೆ ಭಾರತ ಸಜ್ಜುಗೊಂಡಿದೆ. ಉದ್ದೇಶಿತ ಲಸಿಕೆ ನೀಡುವಿಕೆ ಕಾರ್ಯಕ್ರಮವನ್ನು ಎಲೆಕ್ಷನ್‌ ಪ್ರಕ್ರಿಯೆಯಂತೆಯೇ ನಡೆಸಲು ಕೇಂದ್ರ ಸರ್ಕಾರ ತೀರ್ಮಾನಿಸಿದ್ದು, ‘ಡ್ರೈರನ್‌’ ಇದಕ್ಕೆ ಆರಂಭಿಕ ಹೆಜ್ಜೆಯಾಗಿದೆ ಎಂದು ತಿಳಿಸಿದೆ. ‘ಲಸಿಕೆ ನೀಡುವಿಕೆ ಕಾರ್ಯಕ್ರಮವನ್ನು ಒಂದು ಸೂತ್ರದಲ್ಲಿ ಪರಿಶೀಲಿಸಲು ಡ್ರೈರನ್‌ ಅನುಕೂಲ ಕಲ್ಪಿಸಲಿದೆ. ಚುನಾವಣೆ ಮಾದರಿಯಲ್ಲಿ ಈ ಸಿದ್ಧತೆಗಳನ್ನು ನಡೆಸಿದ್ದೇವೆ. ಅಲ್ಲೂ ಪ್ರತಿ ಸಿಬ್ಬಂದಿಗೆ …

Read More »