Breaking News

ಭಾರತೀಯ ಸೇನೆಯಲ್ಲಿ ಭಾರೀ ಬದಲಾವಣೆ

Spread the love

ನವದೆಹಲಿ: ಭಾರತೀಯ ಸೇನೆಯ ಉನ್ನತ ಮಟ್ಟದ ಅಧಿಕಾರಿಗಳ ವಲಯದಲ್ಲಿ ಪ್ರಮುಖ ಪುನರ್ರಚನೆಯಾಗಿದೆ. ಹೊಸ ವರ್ಷದ ಆರಂಭ ದಿನವಾದ ನಿನ್ನೆ ನೂತನ ಸೇನಾ ಉಪ ಮುಖ್ಯಸ್ಥ(ಡಿಸಿಒಎಎಸ್)ಅಧಿಕಾರ ವಹಿಸಿಕೊಂಡಿದ್ದಾರೆ. ಕಾರ್ಪ್ಸ್ ಕಮಾಂಡರ್ಸ್, ಆಡಳಿತಾತ್ಮಕ ಮತ್ತು ತರಬೇತಿ ಸಂಸ್ಥೆಗಳಲ್ಲಿ ಪ್ರಮುಖ ಬದಲಾವಣೆಯಾಗಿದೆ.

ಜನವರಿ 1, 2021ರಂದು ನೂತನ ಡಿಸಿಒಎಎಸ್ ಆಗಿ ಲೆಫ್ಟಿನೆಂಟ್ ಜನರಲ್ ಶಂತನು ದಯಾಳ್ ಅಧಿಕಾರ ವಹಿಸಿಕೊಂಡಿದ್ದಾರೆ. ತೇಜ್ ಪುರ್ ಮೂಲದ 4 ಕಾರ್ಪ್ಸ್ ನ ಕಾರ್ಪ್ಸ್ ಕಮಾಂಡರ್ ಆಗಿದ್ದರು ಲೆಫ್ಟಿನೆಂಟ್ ಜನರಲ್ ದಯಾಳ್, ಲೆಫ್ಟಿನೆಂಟ್ ಜನರಲ್ ಎಸ್ ಎಸ್ ಹಸಬ್ನಿಸ್ ಅವರ ಸ್ಥಾನಕ್ಕೆ ಲೆ.ಜನರಲ್ ಶಂತನು ದಯಾಳ್ ಬರಲಿದ್ದಾರೆ.

ಮಿಲಿಟರಿ ವ್ಯವಹಾರಗಳ ವಿಭಾಗ ಎಂದು ಹೊಸದಾಗಿ ರಚಿಸಲಾಗಿರುವ ಕ್ಷೇತ್ರದಲ್ಲಿ ರಕ್ಷಣಾ ಪಡೆ ಮುಖ್ಯಸ್ಥರನ್ನು ಅದರ ಮೊದಲ ಕಾರ್ಯದರ್ಶಿ ಎಂದು ಪರಿಗಣಿಸಲಾಗುತ್ತದೆ. ರಕ್ಷಣಾ ಸಚಿವಾಲಯದ ಅಧೀನದಲ್ಲಿರುವ ಮಿಲಿಟರಿ ವ್ಯವಹಾರಗಳ ಇಲಾಖೆಯಲ್ಲಿ (ಡಿಎಂಎ) ಹೆಚ್ಚುವರಿ ಕಾರ್ಯದರ್ಶಿಯಾಗಿ ಸೇರ್ಪಡೆಗೊಂಡ ಮೊದಲ ಸೇನಾಧಿಕಾರಿ ಲೆಫ್ಟಿನೆಂಟ್ ಜನರಲ್ ತಾರಂಜಿತ್ ಸಿಂಗ್ ಅವರು ಡಿಸೆಂಬರ್ 31 ರ ಗುರುವಾರ ಅಧಿಕಾರ ವಹಿಸಿಕೊಂಡರು.

 


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ