Breaking News
Home / ರಾಜ್ಯ / ಇಂದಿನಿಂದ ದೇಶಾದ್ಯಂತ ಕೊರೋನಾ ವೈರಸ್ ಲಸಿಕೆ ವಿತರಣೆಗೆ ‘ಡ್ರೈ ರನ್

ಇಂದಿನಿಂದ ದೇಶಾದ್ಯಂತ ಕೊರೋನಾ ವೈರಸ್ ಲಸಿಕೆ ವಿತರಣೆಗೆ ‘ಡ್ರೈ ರನ್

Spread the love

ನವದೆಹಲಿ: ದೇಶದಲ್ಲಿ ಕೊರೋನಾ ವೈರಸ್ ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ಸಿಕ್ಕಿದೆ. ಇದರ ಬೆನ್ನಲ್ಲೇ ಶನಿವಾರ ದೇಶಾದ್ಯಂತ ‘ಡ್ರೈ ರನ್‌’ಗೆ ಭಾರತ ಸಜ್ಜುಗೊಂಡಿದೆ.

ಉದ್ದೇಶಿತ ಲಸಿಕೆ ನೀಡುವಿಕೆ ಕಾರ್ಯಕ್ರಮವನ್ನು ಎಲೆಕ್ಷನ್‌ ಪ್ರಕ್ರಿಯೆಯಂತೆಯೇ ನಡೆಸಲು ಕೇಂದ್ರ ಸರ್ಕಾರ ತೀರ್ಮಾನಿಸಿದ್ದು, ‘ಡ್ರೈರನ್‌’ ಇದಕ್ಕೆ ಆರಂಭಿಕ ಹೆಜ್ಜೆಯಾಗಿದೆ ಎಂದು ತಿಳಿಸಿದೆ.

‘ಲಸಿಕೆ ನೀಡುವಿಕೆ ಕಾರ್ಯಕ್ರಮವನ್ನು ಒಂದು ಸೂತ್ರದಲ್ಲಿ ಪರಿಶೀಲಿಸಲು ಡ್ರೈರನ್‌ ಅನುಕೂಲ ಕಲ್ಪಿಸಲಿದೆ. ಚುನಾವಣೆ ಮಾದರಿಯಲ್ಲಿ ಈ ಸಿದ್ಧತೆಗಳನ್ನು ನಡೆಸಿದ್ದೇವೆ. ಅಲ್ಲೂ ಪ್ರತಿ ಸಿಬ್ಬಂದಿಗೆ ತರಬೇತಿ ನೀಡಿದಂತೆ ಇಲ್ಲಿಯೂ ಎಲ್ಲ ವೈದ್ಯಕೀಯ ತಂಡಗಳನ್ನು ತರಬೇತಿಗೊಳಿಸಿ, ಹೊಣೆ ವಹಿಸಲಾಗುತ್ತದೆ’ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್‌ ಶುಕ್ರವಾರ ವಿವರಿಸಿದ್ದಾರೆ.

‘ದೇಶಾದ್ಯಂತ ಸುಮಾರು 2 ಸಾವಿರಕ್ಕೂ ಅಧಿಕ ಮಾಸ್ಟರ್‌ ಟ್ರೈನರ್‌ಗಳಿಗೆ ತರಬೇತಿ ಪೂರ್ಣಗೊಂಡಿದೆ. ರಾಜ್ಯ, 700 ಜಿಲ್ಲೆಗಳಲ್ಲಿ ಆರೋಗ್ಯ ಸಿಬ್ಬಂದಿಗೆ ತರಬೇತಿ ಪ್ರಗತಿಯಲ್ಲಿದೆ. ಬೂತ್‌ ಮಟ್ಟದಿಂದ ಹೇಗೆ ಎಲೆಕ್ಷನ್‌ ತಯಾರಿ ನಡೆಯುತ್ತದೋ, ಅದೇ ರೀತಿ ಇಲ್ಲೂ ಸಿದ್ಧತೆ ಕೈಗೊಳ್ಳಲಾಗಿದೆ’ ಎಂದು ತಿಳಿಸಿದರು.

ಸೀರಮ್‌ ಸಂಸ್ಥೆಯ ಪ್ರಕಾರ, ಈಗಾಗಲೇ 7.5 ಕೋಟಿ ಲಸಿಕೆಗಳನ್ನು ಸಿದ್ಧಪಡಿಸಿ ಸಂಗ್ರಹಾರದಲ್ಲಿ ಇರಿಸಿಕೊಳ್ಳಲಾಗಿದೆ. ಜನವರಿ ಮೊದಲ ವಾರದ ಅಂತ್ಯದ ವೇಳೆಗೆ 10 ಕೋಟಿ ಡೋಸ್‌ ಲಸಿಕೆಗಳು ಸಿದ್ಧವಾಗಲಿವೆ ಎಂದು ಸಂಸ್ಥೆ ಹೇಳಿಕೊಂಡಿದೆ.


Spread the love

About Laxminews 24x7

Check Also

ವನ್ಯಜೀವಿಗಳ ದಾಹ ತೀರಿಸುವ ಕೃತಕ ನೀರಿನ ತೊಟ್ಟಿಗಳು

Spread the loveಹಾನಗಲ್: ಕಡು ಬೇಸಿಗೆ ನಾಡಿನೆಲ್ಲೆಡೆ ಕುಡಿಯುವ ನೀರಿಗೆ ಅಭಾವ ಸೃಷ್ಟಿಸಿದೆ. ಕಾಡಿನಲ್ಲಿ ವನ್ಯ ಜೀವಿಗಳು ಅನುಭವಿಸುತ್ತಿರುವ ಸಂಕಷ್ಟ ಅರಿತ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ