Breaking News
Home / 2021 / ಜನವರಿ / 19 (page 2)

Daily Archives: ಜನವರಿ 19, 2021

ಪಂತ್, ಗಿಲ್ ಕೆಚ್ಚೆದೆಯ ಆಟಕ್ಕೆ , ಭಾರತಕ್ಕೆ ಐತಿಹಾಸಿಕ ಗೆಲುವು

ಬ್ರಿಸ್ಬೇನ್, ಜ. 19- ಭಾರತ ತಂಡದ ಯುವ ವಿಕೆಟ್ ಕೀಪರ್ ರಿಷಭ್‍ಪಂತ್ ಹಾಗೂ ಶುಭಮನ್ ಗಿಲ್‍ರ ಕೆಚ್ಚೆದೆಯ ಆಟದಿಂದಾಗಿ ರಹಾನೆ ತಂಡವು 2-1 ರಿಂದ ಐತಿಹಾಸಿಕ ಗೆಲುವು ಸಾಧಿಸಿದೆ. ಆಸ್ಟ್ರೇಲಿಯಾ ನೀಡಿದ್ದ 328 ರನ್‍ಗಳ ಗುರಿಯನ್ನು ಬೆನ್ನಟ್ಟಿದ್ದ ಟೀಂ ಇಂಡಿಯಾಗೆ ನಿನ್ನೆ ಮಳೆ ಕಾಡಿತಾದರೂ ಇಂದು ದಿನಪೂರ್ತಿ ಭಾರತದ ಯುವ ಬ್ಯಾಟ್ಸ್‍ಮನ್‍ಗಳು ಆಸೀಸ್‍ನ ಅನುಭವಿ ಬೌಲಿಂಗ್ ಪಡೆಯನ್ನು ದಂಡಿಸುವ ಮೂಲಕ ರಹಾನೆ ತಂಡ ಕಪ್ ಅನ್ನು ತನ್ನಲ್ಲೇ ಉಳಿಸಿಕೊಂಡಿದೆ. ಇಂದು …

Read More »

ದೆಹಲಿಯತ್ತ ಹೊರಟ ಅಸಮಾಧಾನಿತ B.J.P.ಶಾಸಕರು,

ಬೆಂಗಳೂರು,ಜ.19- ಆಡಳಿತಾರೂಢ ಬಿಜೆಪಿಯಲ್ಲಿ ಎಲ್ಲ ಬಿಕ್ಕಟ್ಟು ನಿವಾರಣೆಯಾಗಿದೆ ಎನ್ನುವಷ್ಟರಲ್ಲೇ ಸಂಪುಟದಲ್ಲಿ ಸ್ಥಾನಮಾನ ಸಿಗದ ಅಸಮಾಧಾನಿತ ಶಾಸಕರು ದೆಹಲಿ ತೆರಳಿರುವುದು ಕಮಲ ಪಾಳೆಯದಲ್ಲಿ ಸಂಚಲನ ಸೃಷ್ಟಿಸಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪರಮಾಪ್ತ ಹಾಗೂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಮತ್ತು ಶಾಸಕ ಅರವಿಂದ್ ಬೆಲ್ಲದ್ ದಿಢೀರನೆ ರಾಷ್ಟ್ರೀಯ ನಾಯಕರ ಭೇಟಿಗೆ ತೆರಳಿರುವುದು ಕಮಲ ಪಾಳೆಯದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ಸಾಬೀತು ಮಾಡಿದೆ. ರಾಷ್ಟ್ರೀಯ ನಾಯಕರ ಸೂಚನೆ ಮೇರೆಗೆ ಇಂದು ಮುಂಜಾನೆ ದಿಢೀರನೆ …

Read More »

ಇತ್ತೀಚೆಗೆ ರೈತರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ ವಿವಾದಕ್ಕೀಡಾಗಿದ್ದ ಕೃಷಿ ಸಚಿವ ಬಿ.ಸಿ.ಪಾಟೀಲ್, ಇದೀಗ ಮತ್ತೊಂದು ವಿವಾದ ಸೃಷ್ಟಿ!

ಮೈಸೂರು: ಇತ್ತೀಚೆಗೆ ರೈತರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ ವಿವಾದಕ್ಕೀಡಾಗಿದ್ದ ಕೃಷಿ ಸಚಿವ ಬಿ.ಸಿ.ಪಾಟೀಲ್, ಇದೀಗ ಮತ್ತೊಂದು ವಿವಾದ ಸೃಷ್ಟಿಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಸಚಿವ ಬಿ.ಸಿ.ಪಾಟೀಲ್, ರೈತರು ವೀಕ್ ಮೈಂಡ್ ಆದಾಗ ಆತ್ಮಹತ್ಯೆಯಂತಹ ನಿರ್ಧಾರ ಕೈಗೊಳ್ಳುತ್ತಾರೆ. ರೈತರ ಆತ್ಮಹತ್ಯೆಗೆ ಅವರ ವೀಕ್ ಮೈಂಡ್ ಕಾರಣ ಎಂದು ಹೇಳುವ ಮೂಲಕ ಹೊಸ ವಿವಾದಕ್ಕೆ ಕಾರಣರಾಗಿದ್ದಾರೆ. ರೈತರ ಆತ್ಮಹತ್ಯೆಗೆ ಸರ್ಕಾರದ ನೀತಿಗಳು ಕಾರಣ ಎಂಬುದು ಸುಳ್ಳು. ಅವರ ದುರ್ಬಲ ಮನಸ್ಸೇ ರೈತರ ಆತ್ಮಹತ್ಯೆಗೆ …

Read More »

ವಿನೂತನ ಪ್ರಯೋಗದಿಂದ ಗಮನ ಸೆಳೆದ ನವ ದಂಪತಿಗಳು

ಮಧುರೈ: ಇತ್ತೀಚಿನ ದಿನಗಳಲ್ಲಿ ವಿವಾಹ ಸಮಾರಂಭಗಳು ಹಲವು ವಿಶೇಷತೆಗಳಿಗೆ ಸಾಕ್ಷಿಯಾಗುತ್ತಿವೆ. ಅದರಲ್ಲೂ ಕೊರೊನಾ ಕಾರಣದಿಂದಾಗಿ ವಿವಾಹಗಳಲ್ಲಿ ಹಲವು ಬದಲಾವಣೆಗಳಾಗಿರುವುದಂತು ಸುಳ್ಳಲ್ಲ. ಇಲ್ಲೊಂದು ಮದುವೆ ಸಮಾರಂಭದಲ್ಲಿ ಆಮಂತ್ರಣ ಪತ್ರಿಕೆಯಲ್ಲಿ ಗೂಗಲ್ ಪೇ ಹಾಗೂ ಫೋನ್ ಪೇ ಕ್ಯೂ ಆರ್ ಕೋಡ್ ಹಾಕಿಸಿರುವ ಪ್ರಸಂಗ ಬೆಳಕಿಗೆ ಬಂದಿದೆ. ಈ ಮೂಲಕ ವಧು-ವರರಿಗೆ ಉಡುಗೊರೆ ನೀಡ ಬಯಸುವವರು ಹಣದ ರೂಪದಲ್ಲಿ ಖಾತೆಗೆ ವರ್ಗಾಯಿಸುವಂತೆ ಮಾಡಲಾಗಿದೆ. ಇಂತದ್ದೊಂದು ವಿನೂತನ ಪ್ರಯೋಗಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿವಾಹ …

Read More »

ಬ್ರೇಕ್ ಫೇಲ್ ಆದ ಸರಕು ತುಂಬಿದ ಟ್ರಕ್ ನ್ನು 3 ಕಿ.ಮೀ ರಿವರ್ಸ್ ಓಡಿಸಿದ ಚಾಲಕ

ಮಹಾರಾಷ್ಟ್ರ: ಬ್ರೇಕ್ ಫೇಲ್ ಆದ ಟ್ರಕ್ ಒಂದನ್ನು ಚಾಲಕ 3 ಕಿಲೋಮೀಟರ್ ದೂರದವರೆಗೆ ರಿವರ್ಸ್ ನಲ್ಲಿ ಓಡಿಸಿದ್ದು, ಆಕ್ಸಿಡೆಂಟ್ ಅಪಾಯದಿಂದ ತಪ್ಪಿಸಿ ಸಮರ್ಪಕವಾಗಿ ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸರಕು ತುಂಬಿದ ಟ್ರಕ್ ಇದಕ್ಕಿದ್ದಂತೆ ಬ್ರೇಕ್ ಫೇಲ್ ಆಗಿದೆ. ಆ ವಾಹನ ರಿವರ್ಸ್ ಗೇರ್‌ನಲ್ಲಿದ್ದ ಕರಣ ನಿಲ್ಲಿಸುವುದು ಇನ್ನು ಕಷ್ಟವಾಗಿ ಪರಿವರ್ತನೆಯಾಗಿತ್ತು. ಅದು ಕೂಡ ಕಿರಿದಾದ ರಸ್ತೆ, ಜೊತೆಗೆ ವಾಹನ ಸಂಚಾರ ಇರುವ ರಸ್ತೆಯಲ್ಲಿ ವಾಹನಗಳು ಎಂದಿನಂತೆ ಓಡಾಡುತ್ತಲೇ ಇದೆ. ಇಂತಹ ರಸ್ತೆಯಲ್ಲಿ …

Read More »

ಪರಪ್ಪನ ಅಗ್ರಹಾರ ಕಾರಾಗೃಹ ಸೇರಿದ ಮಾಜಿ ಸಚಿವರ ಪುತ್ರ; ಡ್ರಗ್ ಪೂರೈಕೆ ಪ್ರಕರಣದಲ್ಲಿ ಮತ್ತೋರ್ವನ ಬಂಧನ

ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ ಪ್ರಕರಣದ ತನಿಖೆಯನ್ನು ಸಿಸಿಬಿ ಚುರುಕುಗೊಳಿಸಿದೆ. ಈ ನಡುವೆ ಪ್ರಮುಖ ಆರೋಪಿಗಳಿಗೆ ಡಗ್ಸ್ ಪೂರೈಕೆ ಮಾಡ್ತಿದ್ದ ಫೆಡ್ಲರ್ ಗಳಿಗೂ ಬಿಸಿ ಮುಟ್ಟಿಸಲಾಗುತ್ತಿದೆ. ಲೂಮ್ ಪೆಪ್ಪರ್, ಬೆನಾಲ್ಡ್ ಅಲ್ಲದೇ ಮತ್ತೊಬ್ಬ ಪೆಡ್ಲರ್​ ಈಗ ಅಂದರ್ ಆಗಿದ್ದಾನೆ. ಈ ನಡುವೆ ವಿರೇನ್ ಖನ್ನಾ ಶಿಷ್ಯನನ್ನು ಮತ್ತೆ ಬಾಡಿವಾರೆಂಟ್ ಪಡೆಯಲಾಗಿದೆ. ಹೌದು ಆದಿತ್ಯಾ ಆಳ್ವ ಬಂಧನ ಬೆನ್ನಲ್ಲೇ ಫೆಡ್ಲರ್ ಗಳಿಗೆ ಬಿಸಿ ಮುಟ್ಟಿಸಲು ಸಿಸಿಬಿ ಮುಂದಾಗಿದೆ. ಈ ನಡುವೆ ಹಲವು …

Read More »

ಕೃಷಿ ಕಾನೂನುಗಳನ್ನು ವಿರೋಧಿಸಿ ಕಾಂಗ್ರೆಸ್‌ನಿಂದ ನಾಳೆ ‘ರಾಜಭವನ ಚಲೋ’ ರ‍್ಯಾಲಿ

ಬೆಂಗಳೂರು, ಜ.19- ಕೇಂದ್ರ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಬೆಂಬಲ ನೀಡಲು ಮತ್ತು ರಾಜ್ಯ, ಕೇಂದ್ರ ಸರ್ಕಾರಗಳ ವಿರೋಧಿ ನೀತಿಗಳ ವಿರುದ್ಧ ಕಾಂಗ್ರೆಸ್ ನಾಳೆ ರಾಜಭವನ ಚಲೋ ಹಮ್ಮಿಕೊಂಡಿದೆ. ಬೆಳಗ್ಗೆ 11 ಗಂಟೆಗೆ ರೈಲ್ವೆ ನಿಲ್ದಾಣದಿಂದ ಫ್ರೀಡಂಪಾರ್ಕ್‍ವರೆಗೂ ಪ್ರತಿಭಟನಾ ರ‍್ಯಾಲಿ ನಡೆಯಲಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರತಿಪಕ್ಷದ ನಾಯಕರಾದ ಸಿದ್ದರಾಮಯ್ಯ, ಎಸ್.ಆರ್.ಪಾಟೀಲ್ ಹಾಗೂ ಇತರ ನಾಯಕರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ. ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ, ಎಪಿಎಂಸಿ …

Read More »

“ಸಿದ್ದರಾಮಯ್ಯಗೆ ಕೆಲಸ ಇಲ್ಲದೆ ಜ್ಯೋತಿಷ್ಯ ಕಲಿಯುತ್ತಿರಬೇಕು”

ಮೈಸೂರು,ಜ.19- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾವಾಗ ಜ್ಯೋತಿಷ್ಯ ಹೇಳುತ್ತಿದ್ದರೋ ಗೊತ್ತಿಲ್ಲ. ಈಗ ವಿರೋಧ ಪಕ್ಷದ ನಾಯಕರಾಗಿದ್ದರೂ ಕೆಲಸ ಇಲ್ಲದೆ ಜ್ಯೋತಿಷ್ಯ ಕಲಿಯುತ್ತಿರಬೇಕು. ಅದಕ್ಕೆ ಮುಖ್ಯಮಂತ್ರಿಗಳ ಬದಲಾವಣೆ ಬಗ್ಗೆ ಮಾತನಾಡುತ್ತಿರಬೇಕು ಎಂದು ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದರು. ಸಿದ್ದರಾಮಯ್ಯ ಅವರಿಗೆ ಈಗ ಪುರುಸೊತ್ತು ಇರಬೇಕು. ವಿರೋಧ ಪಕ್ಷದ ನಾಯಕರಾಗಿ ಮಾಡಬೇಕಾದ ಕೆಲಸವನ್ನು ಮಾಡುವುದು ಬಿಟ್ಟು ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ಮೊದಲಿಗೆ ಅವರ ಪಕ್ಷದಲ್ಲಾಗುತ್ತಿರುವುದನ್ನು …

Read More »

ಜನವರಿ 16ರಿಂದ ಕೊರೊನಾ ಲಸಿಕೆ ನೀಡಿಕೆ ಆರಂಭವಾಗಿದ್ದು, ಮೂರು ದಿನಗಳಲ್ಲಿ 580 ಜನರಿಗೆ ಸೈಡ್ ಎಫೆಕ್ಟ್ !

ನವದೆಹಲಿ: ದೇಶಾದ್ಯಂತ ಜನವರಿ 16ರಿಂದ ಕೊರೊನಾ ಲಸಿಕೆ ನೀಡಿಕೆ ಆರಂಭವಾಗಿದ್ದು, ಮೂರು ದಿನಗಳಲ್ಲಿ 580 ಜನರಿಗೆ ಸೈಡ್ ಎಫೆಕ್ಟ್ ಆರಂಭವಾಗಿದೆ. ಸೋಮವಾರ ದೇಶಾದ್ಯಂತ 1,48,266 ಲಕ್ಷ ಆರೋಗ್ಯ ಕಾರ್ಯಕರ್ತರು ಲಸಿಕೆ ಪಡೆದಿದ್ದು, 133 ಜನರಿಗೆ ಅಡ್ಡಪರಿಣಾಮವುಂಟಾಗಿದೆ. 7 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂರು ದಿನಗಳಲ್ಲಿ 3,81,305 ಆರೋಗ್ಯ ಕಾರ‍್ಯಕರ್ತರಿಗೆ ಲಸಿಕೆ ನೀಡಲಾಗಿದ್ದು, ಈ ಪೈಕಿ 580 ಜನರಲ್ಲಿ ಅಡ್ದ ಪರಿಣಾಮ ಉಂಟಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಉತ್ತರ …

Read More »

ಮಹಾರಾಷ್ಟ್ರ ಉದ್ಭವವಾಗಿದ್ದೆ ಕನ್ನಡ ನೆಲದಿಂದ’

ಬೆಳಗಾವಿ: ‘ಬೆಳಗಾವಿಯೂ ಐತಿಹಾಸಿಕ ಕಾಲದಿಂದಲೂ, ವರ್ತಮಾನದಲ್ಲೂ ಹಾಗೂ ಭವಿಷ್ಯದಲ್ಲೂ ಕನ್ನಡಿಗರದೆ. ಇದರಲ್ಲಿ ಯಾವುದೇ ಸಂಶಯ ಬೇಡ. ಹಾಗೆ ನೋಡಿದರೆ ಇಂದಿನ ಮಹಾರಾಷ್ಟ್ರವು ಹಿಂದೊಮ್ಮೆ ಕನ್ನಡ ನೆಲವಾಗಿತ್ತು’ ಎಂದು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷೆ ಮಂಗಲಾ ಮೆಟಗುಡ್ಡ ಹೇಳಿದ್ದಾರೆ. ‘ಕರ್ನಾಟಕ ಆಕ್ರಮಿತ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳುತ್ತೇವೆ’ ಎಂಬ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿಕೆ ಖಂಡಿಸಿ ‍ಪ್ರಕಟಣೆ ನೀಡಿರುವ ಅವರು, ‘ಮಹಾರಾಷ್ಟ್ರ ಹಾಗೂ ಮರಾಠಿ ಭಾಷೆ ಉದ್ಭವವಾಗಿದ್ದೆ ಕನ್ನಡ …

Read More »