Breaking News
Home / Uncategorized / ಪಂತ್, ಗಿಲ್ ಕೆಚ್ಚೆದೆಯ ಆಟಕ್ಕೆ , ಭಾರತಕ್ಕೆ ಐತಿಹಾಸಿಕ ಗೆಲುವು

ಪಂತ್, ಗಿಲ್ ಕೆಚ್ಚೆದೆಯ ಆಟಕ್ಕೆ , ಭಾರತಕ್ಕೆ ಐತಿಹಾಸಿಕ ಗೆಲುವು

Spread the love

ಬ್ರಿಸ್ಬೇನ್, ಜ. 19- ಭಾರತ ತಂಡದ ಯುವ ವಿಕೆಟ್ ಕೀಪರ್ ರಿಷಭ್‍ಪಂತ್ ಹಾಗೂ ಶುಭಮನ್ ಗಿಲ್‍ರ ಕೆಚ್ಚೆದೆಯ ಆಟದಿಂದಾಗಿ ರಹಾನೆ ತಂಡವು 2-1 ರಿಂದ ಐತಿಹಾಸಿಕ ಗೆಲುವು ಸಾಧಿಸಿದೆ. ಆಸ್ಟ್ರೇಲಿಯಾ ನೀಡಿದ್ದ 328 ರನ್‍ಗಳ ಗುರಿಯನ್ನು ಬೆನ್ನಟ್ಟಿದ್ದ ಟೀಂ ಇಂಡಿಯಾಗೆ ನಿನ್ನೆ ಮಳೆ ಕಾಡಿತಾದರೂ ಇಂದು ದಿನಪೂರ್ತಿ ಭಾರತದ ಯುವ ಬ್ಯಾಟ್ಸ್‍ಮನ್‍ಗಳು ಆಸೀಸ್‍ನ ಅನುಭವಿ ಬೌಲಿಂಗ್ ಪಡೆಯನ್ನು ದಂಡಿಸುವ ಮೂಲಕ ರಹಾನೆ ತಂಡ ಕಪ್ ಅನ್ನು ತನ್ನಲ್ಲೇ ಉಳಿಸಿಕೊಂಡಿದೆ.

ಇಂದು ಬೆಳಗ್ಗೆ ಇನ್ನಿಂಗ್ಸ್ ಆರಂಭಿಸಿದ ಉಪನಾಯಕ ರೋಹಿತ್ ಶರ್ಮಾ ಹಾಗೂ ಗಿಲ್ ಆಕ್ರಮಣಕಾರಿ ಆಟ ಪ್ರದರ್ಶಿಸಲು ಮುಂದಾದರಾದರೂ ರೋಹಿತ್ 3 ರನ್ ಗಳಿಸಿ ಕುಮ್ಮಿನ್ಸ್ ಬೌಲಿಂಗ್‍ನಲ್ಲಿ ಔಟಾಗುವ ಮೂಲಕ ನಿರಾಸೆ ಮೂಡಿಸಿದರು.

# ಗಿಲ್- ಪೂಜಾರ ಆಸರೆ:
ರೋಹಿತ್ ಶರ್ಮಾ ವಿಕೆಟ್ ಬಿದ್ದರೂ ಕೂಡ 2ನೆ ವಿಕೆಟ್‍ಗೆ ಜೊತೆಗೂಡಿದ ಶುಭಮನ್ ಗಿಲ್ ಹಾಗೂ ಚೇತೇಶ್ವರಪೂಜಾರ ಅವರು ಆಸೀಸ್ ಬೌಲರ್‍ಗಳನ್ನು ದಂಡಿಸಿದರು, ಪೂಜಾರ ತಾಳ್ಮೆಯುತ ಆಟಕ್ಕೆ ಮೊರೆ ಹೋದರೆ ಗಿಲ್ ಆಕ್ರಮಣಕಾರಿ ಆಟಕ್ಕೆ ಮುಂದಾದರು. ಈ ಜೋಡಿಯು 2ನೆ ವಿಕೆಟ್‍ಗೆ 114 ರನ್‍ಗಳ ಜೊತೆಯಾಟ ನೀಡುವ ಮೂಲಕ ಆಸೀಸ್ ನಾಯಕ ಪೇನ್‍ಗೆ ತಲೆನೋವಾಗಿ ಪರಿಣಿಸಿದರು.

ಈ ಜೋಡಿಯನ್ನು ಬೇರ್ಪಡಿಸಲು ಪೇನ್ 48ನೆ ಓವರ್‍ಅನ್ನು ಲಿಯಾನ್‍ಗೆ ನೀಡಿದರು, ಈ ಓವರ್‍ನ ಕೊನೆಯ ಎಸೆತದಲ್ಲಿ ದೊಡ್ಡ ಎಸೆತಕ್ಕೆ ಮುಂದಾದ ಗಿಲ್ (91 ರನ್, 8 ಬೌಂಡರಿ, 2 ಸಿಕ್ಸರ್) ಸ್ಮಿತ್ ಹಿಡಿದ ಕ್ಯಾಚಿಗೆ ಔಟಾಗುವ ಮೂಲಕ ಚೊಚ್ಚಲ ಶತಕ ಗಳಿಸುವ ಅವಕಾಶ ಕೈಚೆಲ್ಲಿದರು.  ಗಿಲ್ ಔಟಾಗುತ್ತಿದ್ದಂತೆ ಕ್ರೀಸ್‍ಗಿಳಿದ ನಾಯಕ ರಹಾನೆ ಕೂಡ 22 ಎಸೆತಗಳಲ್ಲೇ 1 ಬೌಂಡರಿ, 1 ಸಿಕ್ಸರ್ ಸಿಡಿಸುವ ಮೂಲಕ 24 ರನ್ ಗಳಿಸಿ ಕುಮ್ಮಿನ್ಸ್ ಬೌಲಿಂಗ್‍ನಲ್ಲಿ ಪೇನ್‍ಗೆ ಕ್ಯಾಚ್ ನೀಡಿ ಹೊರ ನಡೆದರು.

# ಕಾಡಿದ ಪಂತ್- ಪೂಜಾರ:
ರಹಾನೆ ಔಟಾದ ನಂತರ ಕ್ರೀಸ್‍ಗೆ ಇಳಿದ ರಿಷಭ್‍ಪಂತ್ ಅವರು ಪೂಜಾರರೊಂದಿಗೆ ಕೂಡಿಕೊಂಡು ಆಸೀಸ್À ಬೌಲಿಂಗ್ ಪಡೆಯನ್ನು ದಂಡಿಸಿದರು. ಈ ಜೋಡಿಯು ಟೀ ವಿರಾಮದ ವೇಳೆಗೆ ತಂಡದ ಮೊತ್ತವನ್ನು 183 ರನ್ ಗಡಿ ಮುಡಿಸಿದರು.

ಟೀ ವಿರಾಮದ ನಂತರ ಆಕ್ರಮಣಕಾರಿ ಆಟಕ್ಕೆ ಮುಂದಾದ ಪೂಜಾರ 56 ರನ್ ಗಳಿಸಿ ಕುಮ್ಮಿನ್ಸ್ ಬೌಲಿಂಗ್‍ನಲ್ಲಿ ಎಲ್‍ಬಿಡಬ್ಲ್ಯು ಬಲೆಗೆ ಬಿದ್ದಾಗ ತಂಡದ ಮೊತ್ತ 228 ರನ್ ಗಳಾಗಿತ್ತು. ನಂತರ ಬಂದ ಮಯಾಂಕ್ ಆಗರ್‍ವಾರ್ 9 ರನ್ ಗಳಿಸಿ ನಿರಾಸೆಯಿಂದ ಪೆವಿಲಿಯನ್‍ನತ್ತ ಹೆಜ್ಜೆ ಹಾಕಿದರು.

# ಪಂತ್- ಸುಂದರ್ ಆರ್ಭಟ:
ಡ್ರಾ ಹಾದಿಯಲ್ಲಿ ಸಾಗುತ್ತಿದ್ದ ಪಂದ್ಯದ ಗತಿಯನ್ನು ಬದಲಾಯಿಸಿದ್ದು ಪಂತ್ ಹಾಗೂ ವಾಷಿಂಗ್ಟನ್ ಸುಂದರ್ ಜೋಡಿ. ಈ ಜೋಡಿಯು 12 ಓವರ್‍ಗಳಲ್ಲೇ 53 ರನ್‍ಗಳ ಜೊತೆಯಾಟ ನೀಡುವ ಮೂಲಕ ತಂಡವನ್ನು ಗೆಲುವಿನತ್ತ ಕೊಂಡೊಯ್ದರು.  ಮೊದಲ ಇನ್ನಿಂಗ್ಸ್‍ನಲ್ಲಿ 62 ರನ್ ಗಳಿಸಿದ್ದ ಸುಂದರ್ ಇಂದೂ ಕೂಡ ಆಕ್ರಮಣಕಾರಿ ಆಟವಾಡಿ 2 ಬೌಂಡರಿ, 1 ಸಿಕ್ಸರ್ ನೆರವಿನಿಂದ 29 ಎಸೆತಗಳಲ್ಲಿ 22 ರನ್ ಗಳಿಸಿ ಲಿಯಾನ್‍ಗೆ ವಿಕೆಟ್ ಒಪ್ಪಿಸಿದರು.

ಮೆಲ್ಬರ್ನ್ ಟೆಸ್ಟ್‍ನಲ್ಲಿ ಆಕರ್ಷಕ 90 ರನ್ ಗಳಿಸಿದ್ದ ರಿಷಭ್‍ಪಂತ್ ಇಂದಿನ ಪಂದ್ಯದಲ್ಲೂ ಕೂಡ ಆಕ್ರಮಣಕಾರಿ ಆಟವಾಡಿ 9 ಬೌಂಡರಿ, 1 ಸಿಕ್ಸರ್ ನೆರವಿನಿಂದ 89 ರನ್ ಗಳಿಸಿದರು.
ಹೆಜೇಲ್‍ವುಡ್ ಮಾಡಿದ 22 ಓವರ್‍ನಲ್ಲಿ 4ನೆ ಎಸೆತದಲ್ಲಿ ಶಾರ್ದೂಲ್ ಠಾಕೂರ್ ವಿಕೆಟ್ ಕಳೆದುಕೊಂಡರು ಅಂತಿಮ ಎಸೆತದಲ್ಲಿ ರಿಷಭ್‍ಪಂತ್ ಬೌಂಡರಿ ಸಿಡಿಸುವ ಮೂಲಕ ಜಯದ ಗೆರೆ ಮುಟ್ಟಿದಾಗ ಭಾರತದ ಪಾಳೆಯ ಹಾಗೂ ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿತ್ತು.

ಆಸ್ಟ್ರೇಲಿಯಾ ಪರ ಪ್ಯಾಟ್ ಕುಮ್ಮಿನ್ಸ್ 4 ವಿಕೆಟ್ ಕಬಳಿಸಿದರೆ, ನ್ಯಾಥನ್ ಲಿಯೋನ್ 2, ಜೋಶ್ ಹೇಜಲ್‍ವುಡ್ 1 ವಿಕೆಟ್ ಕೆಡವಿದರು.

# ಸಂಕ್ಷಿಪ್ತ ಸ್ಕೋರ್:
ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್: 369, ದ್ವಿತೀಯ ಇನ್ನಿಂಗ್ಸ್ 294 ರನ್
ಭಾರತ ಮೊದಲ ಇನ್ನಿಂಗ್ಸ್:336,
ದ್ವಿತೀಯ ಇನ್ನಿಂಗ್ಸ್ 329/7


Spread the love

About Laxminews 24x7

Check Also

ಖಾನಾಪುರ: ಲಂಚ ಪಡೆಯುವಾಗ ಸಿಕ್ಕಿಬಿದ್ದ ಎಂಜಿನಿಯರ್

Spread the love ಖಾನಾಪುರ: ಸ್ಥಳೀಯ ಪಂಚಾಯತ್ ರಾಜ್ ಎಂಜಿನಿಯರಿಂಗ್ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಎಇಇ) ದುರದುಂಡೇಶ್ವರ ಮಹಾದೇವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ