Breaking News
Home / 2020 / ಡಿಸೆಂಬರ್ (page 10)

Monthly Archives: ಡಿಸೆಂಬರ್ 2020

ಈ ಬಾರಿ ಹೊಸ ವರ್ಷಾಚರಣೆಗೆ ಸಂಪೂರ್ಣ ನಿರ್ಬಂಧ: ಬಸವರಾಜ್ ಬೊಮ್ಮಾಯಿ

ಬೆಂಗಳೂರು,ಡಿ.27- ರಾಜ್ಯದಲ್ಲಿ ಬ್ರಿಟನ್ ಮಾದರಿಯ ರೂಪಾಂತರಗೊಂಡ ಕೊರೊನಾ ಸೋಂಕು ಒಬ್ಬರಿಂದ ಒಬ್ಬರಿಗೆ ಹರಡುವುದನ್ನು ತಡೆಗಟ್ಟುವ ಉದ್ದೇಶದಿಂದ ಈ ಬಾರಿ ಹೊಸ ವರ್ಷಾಚರಣೆಗೆ ಸಂಪೂರ್ಣ ನಿರ್ಬಂಧ ಹಾಕಿದೆ. ಕೋವಿಡ್ ರೂಪಾಂತರ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಗಮನದಲ್ಲಿಟ್ಟುಕೊಂಡು ಹೊಸ ವರ್ಷಾಚರಣೆ ಸಂಬಂಧ ಸರ್ಕಾರದ ವತಿಯಿಂದ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಿದ್ದೇವೆ. ಸಾರ್ವಜನಿಕರು ತಮ್ಮ ಆರೋಗ್ಯದ ಹಿತದೃಷ್ಟಿಯಿಂದ ಸರ್ಕಾರಕ್ಕೆ ಸಹಕಾರ ನೀಡಬೇಕೆಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಮನವಿ ಮಾಡಿದರು. ವಿಧಾನಸೌಧದ ಪೂರ್ವ ದ್ವಾರದ …

Read More »

ರಾತ್ರಿಗಿಂತ ಹಗಲಲ್ಲಿ ಹೆಚ್ಚು ಜನರು ಕಾಂಡೋಮ್ ಖರೀದಿಸುತ್ತಿರುವುದು ಅಚ್ಚರಿಗೆ ಕಾರಣ

ನವದೆಹಲಿ: ಕೊರೊನಾ ಮಾಹಾಮಾರಿ ಸಂದರ್ಭದಲ್ಲಿಯೇ ದೇಶದಲ್ಲಿ ಕಾಂಡೋಮ್, ಗರ್ಭ ನಿರೋಧಕ ಮಾತ್ರೆ, ಚಿಕನ್ ಬಿರಿಯಾನಿ ಬೇಡಿಕೆ ಹೆಚ್ಚಳವಾಗಿದೆ. ಅದರಲ್ಲೂ ರಾತ್ರಿಗಿಂತ ಹಗಲಲ್ಲಿ ಹೆಚ್ಚು ಜನರು ಕಾಂಡೋಮ್ ಖರೀದಿಸುತ್ತಿರುವುದು ಅಚ್ಚರಿಗೆ ಕಾರಣವಾಗಿದೆ. ಬೆಂಗಳೂರಿನಲ್ಲಿ ಗರ್ಭ ನಿರೋಧಕ ಮಾತ್ರೆ, ಚಿಕನ್ ಬಿರಿಯಾನಿ, ಮುಂಬೈನಲ್ಲಿ ದಾಲ್ ಖಿಚ್ಡಿ, ಚೆನ್ನೈನಲ್ಲಿ ಇಡ್ಲಿ, ದೆಹಲಿಯಲ್ಲಿ ಕಾಫಿ, ಪುಣೆಯಲ್ಲಿ ಮ್ಯಾಗಿ, ಗುರುಗ್ರಾಮದಲ್ಲಿ ಆಲೂ ಟಿಕ್ಕಿ ಬರ್ಗರ್ ಹೆಚ್ಚು ಖರೀದಿಯಾಗುತ್ತಿದೆ. ದೇಶದೆಲ್ಲೆಡೆ ಕಾಂಡೋಮ್ ಖರೀದಿಸುವವರ ಪ್ರಮಾಣ ಮೂರುಪಟ್ಟು ಹೆಚ್ಚಾಗಿದೆ. ಹೈದರಾಬಾದ್ …

Read More »

ಐದು ಕಾರುಗಳ ನಡುವೆ ಸರಣಿ ಅಪಘಾತ,. ಎರಡು ಕಾರು ಪಲ್ಟಿ

ಬೆಂಗಳೂರು: ಏರ್​ಪೋರ್ಟ್ ರಸ್ತೆಯ ಬ್ಯಾಟರಾಯನಪುರ ಫ್ಲೈಓವರ್ ಬಳಿ ಐದು ಕಾರುಗಳ ನಡುವೆ ಸರಣಿ ಅಪಘಾತವಾಗಿದೆ. ಎರಡು ಕಾರು ಪಲ್ಟಿಯಾಗಿದ್ದು. ಆರು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬೈಕ್ ಸವಾರರ ಜಾಲಿ ರೈಡ್ ನಿಂದಾಗಿ ಈ ಸರಣಿ ಅಪಘಾತ ಸಂಭವಿಸಿದೆ. ನಂದಿಬೆಟ್ಟಕ್ಕೆ ಜಾಲಿ ರೈಡ್ ಹೋಗುತ್ತಿದ್ದ ಬೈಕ್ ಸವಾರರ ಟೀಂ ವೇಗವಾಗಿ ಬಂದು ಕಾರ್ ಓವರ್ ಟೆಕ್ ಮಾಡಿದ್ದಾರೆ. ಗಾಬರಿಯಾದ ಕಾರ್ ಚಾಲಕ ಎದುರು ರಸ್ತೆಗೆ ನುಗ್ಗಿದ ಪರಿಣಾಮ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. …

Read More »

ಕೊರೋನಾ ಮತ್ತೆ ಕಂಗೆಡಿಸಿದೆ. ಕಳೆದ 24 ಗಂಟೆಯಲ್ಲಿ 60 ಜನರು ಕೊರೋನಾದಿಂದ ಸಾವಿಗೀಡಾಗಿದ್ದಾರೆ

ಮುಂಬೈ – ಭಾರಿ ಅಬ್ಬರದ ನಂತರ ತಣ್ಣಗಾಗಿದ್ದ ಕೊರೋನಾ ಮತ್ತೆ ಮಹಾರಾಷ್ಟ್ರವನ್ನು ಕಂಗೆಡಿಸಿದೆ. ಕಳೆದ 24 ಗಂಟೆಯಲ್ಲಿ 60 ಜನರು ಕೊರೋನಾದಿಂದ ಸಾವಿಗೀಡಾಗಿದ್ದಾರೆ. 2854 ಜನರಿಗೆ ಒಂದೇ ದಿನ ಸೋಂಕು ದೃಢಪಟ್ಟಿದೆ. ಕೊರೋನಾ ಮತ್ತು ಪ್ರವಾಹದಿಂದಾಗಿ ಮುಂಬೈ ಮಹಾನಗರ ಸೇರಿದಂತೆ ಬಹುತೇಕ ಮಹಾರಾಷ್ಟ್ರ ರಾಜ್ಯ ಕಂಗೆಟ್ಟುಹೋಗಿತ್ತು. ಅದರಿಂದ ಇನ್ನೇನು ಚೆತರಿಕೆ ಕಾಣುತ್ತಿದೆ ಎನ್ನುವ ಹೊತ್ತಿಗೆ ಮತ್ತೆ ಕೋರೋನಾ ಅಬ್ಬರಿಸತೊಡಗಿದೆ. ಬ್ರಿಟನ್ ನಿಂದ ಆಗಮಿಸಿರುವ 16 ಜನರು ಸೇರಿದಂತೆ 2854 ಜನರಿಗೆ …

Read More »

ವಿಷ್ಣುವರ್ಧನ್ ಪ್ರತಿಮೆ ಧ್ವಂಸಕರಿಗೆ ಸುದೀಪ್ ಎಚ್ಚರಿಕೆ

ಬೆಂಗಳೂರು: ಸಾಹಸಸಿಂಹ ವಿಷ್ಣುವರ್ಧನ ಪ್ರತಿಮೆ ಧ್ವಂಸಕರಿಗೆ ಅಭಿನಯ ಚಕ್ರವರ್ತಿ ರನ್ನ ಸುದೀಪ್ ಖಡಕ್ ಎಚ್ಚರಿಕೆ ನೀಡಿದ್ದು, ನಿಮ್ಮ ಹೆಸರು ತಿಳಿಯುವ ಮೊದಲು ದೇಶ ಬಿಟ್ಟು ಹೋಗಿ ಎಂದು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಈ ಕುರಿತು ಟ್ವಿಟ್ಟರ್ ನಲ್ಲಿ ಎಚ್ಚರಿಕೆ ನೀಡಿರುವ ವೀಡಿಯೋ ಶೇರ್ ಮಾಡಿಕೊಂಡಿದ್ದಾರೆ. ವಿಷ್ಣು ಸರ್ ಪ್ರತಿಮೆ ಧ್ವಂಸಗೊಳಿಸಿರುವ ವಿಷಯ ನನಗೆ ತಡವಾಗಿ ತಿಳಿಯಿತು. ವಿಷ್ಣು ಸರ್ ಅಭಿಮಾನಿಯಾಗಿ ಮೂರ್ತಿಯನ್ನ ಒಡೆದು ಹಾಕಿರೋರಿಗೆ ಕೆಲ ವಿಷಯಗಳನ್ನ ಹೇಳಲು ಇಷ್ಟಪಡುತ್ತೇನೆ. …

Read More »

ಹೊಸ ವರ್ಷಕ್ಕೆ ಪ್ರತ್ಯೇಕವಾಗಿ ಮಾರ್ಗಸೂಚಿ 30 ಮತ್ತು 31 ರಂದು ಟಫ್ ರೂಲ್ಸ್ ಇರಲಿದೆ

ಬೆಂಗಳೂರು: ಹೊಸ ವರ್ಷಕ್ಕೆ ಬೆಂಗಳೂರಿನಲ್ಲಿ ಪ್ರತ್ಯೇಕವಾಗಿ ಮಾರ್ಗಸೂಚಿ ಬರುವುದು ಫಿಕ್ಸ್ ಆಗಿದೆ. ಡಿಸೆಂಬರ್ 30 ಮತ್ತು 31ಕ್ಕೆ ಕಟ್ಟು ನಿಟ್ಟಿನ ಕ್ರಮ ಇರುತ್ತೆ ಅಂತ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಹೇಳಿದ್ದಾರೆ. ಬ್ರಿಟನ್‍ನಿಂದ ಬೆಂಗಳೂರಿಗೆ ಬಂದವರ ಪೈಕಿ 150 ಜನ ನಾಪತ್ತೆಯಾಗಿರೋದು ಒಂದುಕಡೆ ಆತಂಕ ಹೆಚ್ಚಿಸಿದೆ. ಇದರ ಮಧ್ಯೆಯೇ ಹೊಸ ವರ್ಷಕ್ಕೆ ಬೆಂಗಳೂರು ಸಜ್ಜಾಗ್ತಿದೆ. ಈಗ ಬ್ರಿಟನ್ ಕೊರೊನಾ ಹರಡುವುದನ್ನು ನಿಯಂತ್ರಣ ಮಾಡುವ ಸಲುವಾಗಿ ಬೆಂಗಳೂರಿನಲ್ಲಿ 2 …

Read More »

ಸಪ್ತಗಿರಿ ಆಸ್ಪತ್ರೆ,ರುದ್ರ ವೆಲ್ಫೇರ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಉಚಿತ ಚಿಕಿತ್ಸೆ

ಬಳ್ಳಾರಿ: ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಒಂದಾದ ಸಪ್ತಗಿರಿ ಆಸ್ಪತ್ರೆ ಮತ್ತು ಬಳ್ಳಾರಿಯ ರುದ್ರ ವೆಲ್ಫೇರ್ ಮತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಇದೇ ಡಿ.28 ರಂದು ಕಂಪ್ಲಿ ಬಳಿಯ ಎಮ್ಮಿಗನೂರಿನ ಶ್ರೀ ಆಂಜನೇಯ ದೇವಸ್ಥಾನದಲ್ಲಿ, ಮತ್ತು 29 ರಂದು ಬಳ್ಳಾರಿಯ ಪಾರ್ವತಿನಗರದಲ್ಲಿರುವ ಪಾರ್ವತಿ ಕಲ್ಯಾಣ ಮಂಟಪದಲ್ಲಿ ಹೃದಯ, ನರರೋಗ, ಮೂತ್ರಪಿಂಡ, ಕ್ಯಾನ್ಸರ್ ಮತ್ತು ಸಾಮಾನ್ಯ ರೋಗಗಳಿಗೆ ಚಿಕಿತ್ಸೆ ನೀಡಲು ಶಿಬಿರ ಏರ್ಪಡಿಸಲಾಗಿದೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ರುದ್ರ ವೆಲ್ಫೇರ್ ಮತ್ತು …

Read More »

ಅಧಿಕಾರಿಗಳ ನಿರ್ಲಕ್ಷಕ್ಕೆ ಕೈಗನ್ನಡಿಯಾಗಿದೆ. ಶಿಕ್ಷಕರ ಕೈಚಳಕ

ಕಾರವಾರ: ಒಬ್ಬ ಶಿಕ್ಷಕ ಮನಸ್ಸು ಮಾಡಿದರೆ ವಿದ್ಯಾರ್ಥಿಯ ಬದುಕೇ ಬದಲಾಗುತ್ತದೆ. ಶಿಕ್ಷಕನ ಪಾತ್ರ ಅಂತಹ ಮಹತ್ವದ್ದಾಗಿದೆ. ಆದರೆ ಶಿಕ್ಷಣಾಧಿಕಾರಿ  ಕಚೇರಿಗಳು ಮಾತ್ರ ಹಾಳು ಕೊಂಪೆಯಂತೆ ಇರುವುದು ನಮ್ಮ ಅಧಿಕಾರಿಗಳ ನಿರ್ಲಕ್ಷಕ್ಕೆ ಕೈಗನ್ನಡಿಯಾಗಿದೆ. ಇದೀಗ ಶಿಕ್ಷಕರ ಕೈಚಳಕದಿಂದಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಚಿತ್ರಣವೇ ಬದಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಶಿಕ್ಷಕರು ತಮ್ಮ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಹೋಗಲು ಹೆದರುವಂತಿತ್ತು. ಬಣ್ಣವಿಲ್ಲದ ಗೋಡೆಗಳು, ಜೋತು ಬಿದ್ದ ಕಿಟಕಿಗಳು, ಕಚೇರಿಯಲ್ಲಿ ಎಲ್ಲಿ ಬೇಕೆಂದರಲ್ಲಿ …

Read More »

ಬಸ್- ಕ್ರೂಸರ್ ನಡುವೆ ಭೀಕರ ಅಪಘಾತ: ಸ್ಥಳದಲ್ಲೇ ಐವರು ಸಾವು !

ಮೊಳಕಾಲ್ಮುರು: ಬಸ್ ಹಾಗೂ ಕ್ರೂಸರ್ ಮಧ್ಯೆ ಮೊಳಕಾಲ್ಮುರು ತಾಲ್ಲೂಕಿನ ಬಿಜಿ ಕೆರೆ ಬಳಿ ಭಾನುವಾರ ಬೆಳಿಗ್ಗೆ ಭೀಕರ ಅಪಘಾತ ಸಂಭವಿಸಿದ್ದು, ಐದು ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತಿಮ್ಮಣ್ಣ(40) ಪತ್ನಿ ರತ್ನಮ್ಮ(38) ಸೋಮನಮರಡಿ ಗ್ರಾಮದ ದುರುಗಪ್ಪ(16), ಗಜಲಿ ಗ್ರಾಮದ ಮಹೇಶ (19) ಹಾಗು 55 ವರ್ಷದ ಓರ್ವ ವ್ಯಕ್ತಿ ಎಂದು ತಿಳಿದು ಬಂದಿದೆ. ಮೃತರು ರಾಯಚೂರು ಜಿಲ್ಲೆ ದೆವದುರ್ಗ ತಾಲೂಕಿನ ಹುಣಸೂರು ಗ್ರಾಮದವರಾಗಿದ್ದಾರೆ ಎನ್ನಲಾಗುತ್ತಿದೆ. ಗಾಯಾಳುಗಳನ್ನು ಬಳ್ಳಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಬಸ್ …

Read More »

ಗ್ರಾಪಂ.ಚುನಾವಣೆಗೆ ಸ್ಪರ್ಧಿಸಿದ್ದ ಅಂಬೋಜಿ ನಿಧನ

ಖಾನಾಪುರ : ತಾಲ್ಲೂಕಿನ ನ್ಯಾಯವಾದಿ, ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿದ್ದ ಸಿ.ಬಿ.ಅಂಬೋಜಿ (64) ಭಾನುವಾರ ಬೆಳಿಗಿನ ಜಾವ ನಿಧನರಾದರು. ಬಿಷ್ಟಾದೇವಿ ಜೀರ್ಣೊದ್ದಾರ ಟ್ರಸ್ಟ್ ಅಧ್ಯಕ್ಷರಾಗಿದ್ದರು. ಕಕ್ಕೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಕಕ್ಕೇರಿ ಗ್ರಾಪಂ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಮಂಗಳವಾರ ನಡೆದ ಗ್ರಾಪಂ ಚುಣಾವಣೆಗೆ ಕಕ್ಕೇರಿ ಗ್ರಾಮದ ವಾರ್ಡ್ ನಂ.2ಕ್ಕೆ ಸ್ಪರ್ಧೆ ಮಾಡಿದ್ದರು.

Read More »