Breaking News
Home / 2020 / ಡಿಸೆಂಬರ್

Monthly Archives: ಡಿಸೆಂಬರ್ 2020

ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ

ಗೋಕಾಕ: ಜಲ ಸಂಪನ್ಮೂಲ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ದಿ. 1 ರಿಂದ 5ರವರೆಗೆ ಬೆಳಗಾವಿ ಜಿಲ್ಲೆ ಹಾಗೂ ಮಹಾರಾಷ್ಟ್ರದಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ದಿ. 1 ರಂದು ಮಧ್ಯಾಹ್ನ 2.30 ಗಂಟೆಗೆ ಗುವಾಹಟಿಯಿಂದ ವಿಶೇಷ ವಿಮಾನದ ಮೂಲಕ ಬೆಳಗಾವಿಗೆ ಆಗಮಿಸಿ ಅಲ್ಲಿಂದ ರಸ್ತೆ ಮೂಲಕ ಗೋಕಾಕ ಆಗಮಿಸಿ ವಾಸ್ತವ್ಯ ಮಾಡುವರು. ದಿ. 2 ರಂದು ಮುಂಜಾನೆ 11.15 ಗಂಟೆಗೆ ತಾಲೂಕಿನ ಕೊಣ್ಣೂರ ಪುರಸಭೆ ವ್ಯಾಪ್ತಿಯಲ್ಲಿ …

Read More »

ನಮ್ಮ ಮನೆಮುಂದೆ ಪಟಾಕಿ ಹಚ್ಚಬೇಡಿ ಎಂದಿದ್ದಕ್ಕೆ ಪರಾಜಿತ ಅಭ್ಯರ್ಥಿ ಹಾಗೂ ಆತನ ಕುಟುಂಬಸ್ಥರ ಮೇಲೆ ಹಲ್ಲೆ.

ವಿಜಯಪುರ ಬ್ರೇಕಿಂಗ್: ಸೋತವರ ಮನೆಮುಂದೆ ಬಂದು ಪಟಾಕಿ ಹಚ್ಚಿದ ಗೆದ್ದ ಅಭ್ಯರ್ಥಿಗಳು. ನಮ್ಮ ಮನೆಮುಂದೆ ಪಟಾಕಿ ಹಚ್ಚಬೇಡಿ ಎಂದಿದ್ದಕ್ಕೆ ಪರಾಜಿತ ಅಭ್ಯರ್ಥಿ ಹಾಗೂ ಆತನ ಕುಟುಂಬಸ್ಥರ ಮೇಲೆ ಹಲ್ಲೆ. ಗೆದ್ದ ಅಭ್ಯರ್ಥಿಗಳ ಬೆಂಬಲಿಗರಿಂದ ಸೋತವರ ಮೇಲೆ ಹಲ್ಲೆ ಆಗಿದೆ ಎಂದು ಹಲ್ಲೆಗೊಳಗಾದವರ ಆರೋಪ. ಚಡಚಣ ತಾಲೂಕಿನ ಧುಮಕನಾಳ ಗ್ರಾಮದಲ್ಲಿ ಘಟನೆ. ಪರಾಜಿತ ಅಭ್ಯರ್ಥಿ ಶಿವಪ್ಪ ಕನಾಳ, ರಾಯಪ್ಪ ಕನಾಳ, ಶ್ರೀಶೈಲ ಕನಾಳ, ಪುತಳಾಬಾಯಿ ಕನಾಳ, ಭೀಮಕ್ಕ ಕನಾಳ ಮೇಲೆ ಹಲ್ಲೆ. …

Read More »

ಊರಿನ ಜನ ತನಗೆ ಮತ ಹಾಕಿಲ್ಲವೆಂದು ಕೋಪಗೊಂಡ ಪರಾಜಿತ ಅರ್ಥಿಯೊಬ್ಬ ರಸ್ತೆ ಬಂದ್ ಮಾಡಿ ದರ್ಪ ಮೆರೆದಿದ್ದಾನೆ

ಕೋಲಾರ: ಗ್ರಾಮ ಪಂಚಾಯಿತಿ ಚುನಾವಣೆಗೆ ಮತದಾನ ನಡೆದು ಫಲಿತಾಂಶ ಪ್ರಕಟವಾದ ಅದರ ಎಫೆಕ್ಟ್​ ಈ ಊರಿನವರಿಗೆ ಸಂಕಷ್ಟ ತಂದಿದೆ. ಊರಿನ ಜನ ತನಗೆ ಮತ ಹಾಕಿಲ್ಲವೆಂದು ಕೋಪಗೊಂಡ ಪರಾಜಿತ ಅರ್ಥಿಯೊಬ್ಬ ರಸ್ತೆ ಬಂದ್ ಮಾಡಿ ದರ್ಪ ಮೆರೆದಿದ್ದಾನೆ. ಇಂತಹ ಘಟನೆ ಮಾಲೂರು ತಾಲೂಕಿನ ಅಗ್ರಹಾರ ಹೊಸಹಳ್ಳಿ ಗ್ರಾಮದಲ್ಲಿ ನಡೆದಿದ್ದು, ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ ಚುನಾವಣೆಗೆ ಸ್ಪರ್ಧಿಸಿದ್ದ ಗಿರಿಗೌಡ ಎಂಬಾತ ಸೋಲು ಕಂಡಿದ್ದಾರೆ. ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೇ ಅಂದರೆ ನಿನ್ನೆ (ಬುಧವಾರ) …

Read More »

ಭಾರತದಲ್ಲಿ ತಯಾರಾದ ಲಸಿಕೆಗಳನ್ನು ಜನರಿಗೆ ನೀಡಲಾಗುವುದು

ಅಹ್ಮದಾಬಾದ್: 2021ನೇ ಹೊಸ ವರ್ಷಕ್ಕೆ ಕಾಲಿಡುತ್ತಿರುವ ಈ ಸಂದರ್ಭದಲ್ಲಿ ಜನರು ಕೊರೋನಾ ವೈರಸ್ ಬಗ್ಗೆ ಮುನ್ನೆಚ್ಚರಿಕೆ, ಕಾಳಜಿಯನ್ನು ಮರೆಯದೆ ಶಿಷ್ಠಾಚಾರವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು, ಕೊರೋನಾ ಲಸಿಕೆ ಬಂದ ನಂತರವೂ ಇದನ್ನು ಮುಂದುವರಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ದೇಶವಾಸಿಗಳಿಗೆ ಕಿವಿಮಾತು ಹೇಳಿದ್ದಾರೆ. ರಾಜ್ ಕೋಟ್ ನಲ್ಲಿ ಏಮ್ಸ್ ಸಂಸ್ಥೆ ನಿರ್ಮಾಣಕ್ಕೆ ವಿಡಿಯೊ ಕಾನ್ಫರೆನ್ಸ್ ಮೂಲಕ ಶಂಕು ಸ್ಥಾಪನೆ ನೆರವೇರಿಸಿದ ಬಳಿಕ ಮಾತನಾಡಿದ ಪ್ರಧಾನಿ ಮೋದಿ, ಹೊಸ ಕೊರೋನಾ ಕೇಸುಗಳು ದೇಶದಲ್ಲಿ …

Read More »

ಜಿಯೋ ಗ್ರಾಹಕರು ಭಾರತದ ಯಾವುದೇ ನೆಟ್ವರ್ಕ್ ಗೆ ವಾಯ್ಸ್ ಕಾಲ್ ಕರೆ ಉಚಿತ

ನವದೆಹಲಿ : ದೇಶೀಯ ಧ್ವನಿ ಕರೆಗಳಿಗೆ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್), ವಿಧಿಸುತ್ತಿದ್ದಂತ ಇಂಟರ್ ಕನೆಕ್ಟ್ ಬಳಕೆ ಶುಲ್ಕ ಜನವರಿ 1, 2021ಕ್ಕೆ ಕೊನೆಗೊಳ್ಳಲಿದೆ. ಇದರಿಂದಾಗಿ ಐಸಿಯು ಶುಲ್ಕ ರದ್ದುಗೊಳ್ಳುವ ಕಾರಣದಿಂದಾಗಿ, ಜನವರಿ 1, 2021ರಿಂದ ಜಿಯೋ ಗ್ರಾಹಕರು ಭಾರತದ ಯಾವುದೇ ನೆಟ್ವರ್ಕ್ ಗೆ ವಾಯ್ಸ್ ಕಾಲ್ ಕರೆ ಉಚಿತವಾಗಿ ನೀಡಲಾಗುತ್ತದೆ ಎಂಬುದಾಗಿ ಟೆಲಿಕಾಂ ಆಪರೇಟರ್ ರಿಲಯನ್ಸ್ ಜಿಯೋ ತಿಳಿಸಿದೆ. ಈ ಕುರಿತಂತೆ ಮಾಹಿತಿ ನೀಡಿರುವ ಜಿಯೋ, ಭಾರತೀಯ …

Read More »

ಮೃತ ಕುಟುಂಬಸ್ಥರಿಗೆ ಧನ ಸಹಾಯ ಮಾಡಿ ಮಾನವಿಯತೆ ಮೆರೆದ ಶಾಸಕ ಸತೀಶ ಜಾರಕಿಹೊಳಿ

    ಎರಡು ತಿಂಗಳ‌ ಹಿಂದೆ ಹುಕ್ಕೇರಿ ತಾಲೂಕಿನ ಪಾಶ್ಚಾಪುರ ಗ್ರಾಮದಲ್ಲಿ ಹೊಲದಲ್ಲಿ ಸೊಯಾಬಿನ್ ರಾಶಿ ಮಾಡುವಾಗ ಮಶಿನಿನಲ್ಲಿ ಸೀರೆ ಸಿಲುಕಿ ಮರಣ ಹೊಂದಿದ್ದ ಪಾಶ್ಚಾಪುರದಲ್ಲಿರುವ ಮೃತ ಯಮನವ್ವ ದುಂಡಪ್ಪ ಉಪ್ಪಾರ ಇವರ ಮನೆಗೆ ಕೆಪಿಸಿಸಿ ಕಾರ್ಯಾದಕ್ಷ ಸತೀಶ ಜಾರಕಿಹೊಳಿಯವರ ಪುತ್ರ ರಾಹುಲ ಹಾಗೂ ಪುತ್ರಿ ಪ್ರಿಯಾಂಕಾ ಜಾರಕಿಹೊಳಿಯವರು ಮೃತ ಕುಟುಂಬದ ಸದಸ್ಯರಿಗೆ ಧನ ಸಹಾಯ ಮಾಡಿದರು. ಸಂದರ್ಭದಲ್ಲಿ ಸ್ಥಳಿಯ ಕಾಂಗ್ರೇಸ್ ಮುಖಂಡರಾದ ಅಬ್ದುಲ್ ಗಣಿ ದರ್ಗಾ ಮಾತನಾಡಿ ಇವತ್ತಿನ …

Read More »

ಕೃಷ್ಣ -ಕಾವೇರಿ ಕಣಿವೆ ,ಭೂಪೇಂದ್ರ ಯಾದವ್ ಜತೆ ಸಚಿವ ರಮೇಶ್ ಜಾರಕಿಹೊಳಿ ಸಮಾಲೋಚನೆ

ಬೆಂಗಳೂರು: ರಾಜ್ಯದ ಕೃಷ್ಣ ಮತ್ತು ಕಾವೇರಿ ಕೊಳ್ಳದ ರೈತರಿಗೆ ಹೆಚ್ಚಿನ ಅನುಕೂಲ ಆಗುವಂತಹ ಯೋಜನೆಗಳನ್ನು ಜಾರಿಗೆ ತರಲು ಉತ್ಸುಕರಾಗಿರುವ ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರು ರಾಜ್ಯಸಭಾ ಸದಸ್ಯ ಭೂಪೇಂದ್ರ ಯಾದವ್ ಅವರೊಂದಿಗೆ ಸಮಾಲೋಚನೆ ನಡೆಸಿದರು. ಮಹತ್ವದ ಬೆಳವಣಿಗೆಯಲ್ಲಿ ಅಸ್ಸಾಂನ ರಾಜಧಾನಿ ಗೌಹಾಟಿಯಲ್ಲಿ ಭೂಪೇಂದ್ರ ಅವರನ್ನು ಭೇಟಿ ಮಾಡಿದ್ದ ಸಚಿವರು, ಬ್ರಹ್ಮಪುತ್ರ ನದಿ ಕಣಿವೆಯ ಇಕ್ಕೆಲಗಳಲ್ಲಿ ವಿಶ್ವದ ಪ್ರತಿಷ್ಠಿತ ಮಲ್‌ಬರಿ ಮತ್ತು ಗೋಲ್ಟನ್ ಮೋಘಾ ಸಿಲ್ಕ್ ರೇಷ್ಮೆ ಬೆಳೆಯುವ ಯೋಜನೆ …

Read More »

ಖಾಸಗಿ ಬಸ್ ಒಂದು ಕಂದಕಕ್ಕೆ ಉರುಳಿ 15 ಜನರಿಗೆ ಗಂಭೀರ ಗಾಯ

ರಾಯಗಢ: ಖಾಸಗಿ ಬಸ್ ಒಂದು ಕಂದಕಕ್ಕೆ ಉರುಳಿದ ಪರಿಣಾಮ ಬಾಲಕನೋರ್ವ ಸಾವನ್ನಪ್ಪಿದ್ದು, 15ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ರಾಯಗಢದಲ್ಲಿ ನಡೆದಿದೆ. ಮುಂಜಾನೆ 4 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಬಸ್ ನಲ್ಲಿ 30 ಜನರು ಪ್ರಯಾಣಿಸುತ್ತಿದ್ದು, ರಾಯಗಢದ ಕಾಶೆಡಿ ಘಾಟ್ ನ ಕಣಿವೆ ಬಸ್ ಉರುಳಿಬಿದ್ದಿದೆ. ಘಟನೆಯಲ್ಲಿ 8 ವರ್ಷದ ಬಾಲಕ ಸಾಯಿ ರಾಣೆ ಮೃತಪಟ್ಟಿದ್ದು, 15 ಜನರು ಗಾಯಗೊಂಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿರುವ ಪೊಲೀಸರು ರಕ್ಷಣಾ ಕಾರ್ಯ …

Read More »

ಕರ್ನಾಟಕದಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ಪ್ರಾಣಿಗಳ ಹಿಂಸೆ ತಡೆ (ಸೊಸೈಟಿ ಫಾರ್ ಪ್ರಿವೆನ್ಷನ್ ಆಫ್ ಅನಿಮಲ್ ಕ್ರ್ಯುಯೆಲ್ಟಿ -ಎಸ್‌ಪಿಸಿಎ) ಸಮಿತಿಗಳನ್ನು ರಚಿಸಲಾಗುತ್ತಿದೆ.

ಬೆಳಗಾವಿ – ಕರ್ನಾಟಕದಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ಪ್ರಾಣಿಗಳ ಹಿಂಸೆ ತಡೆ (ಸೊಸೈಟಿ ಫಾರ್ ಪ್ರಿವೆನ್ಷನ್ ಆಫ್ ಅನಿಮಲ್ ಕ್ರ್ಯುಯೆಲ್ಟಿ -ಎಸ್‌ಪಿಸಿಎ) ಸಮಿತಿಗಳನ್ನು ರಚಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಬುಧವಾರ ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯರಾದ ಡಾ.ಸೋನಾಲಿ ಸರ್ನೋಬತ್ ಮತ್ತು ಶಿವಾನಂದ್ ಡಂಬಳ ಅವರು ಜಿಲ್ಲಾಧಿಕಾರಿ ಡಾ.ಮಹಾಂತೇಶ ಹಿರೇಮಠ ಮತ್ತು ಮಹಾನಗರ ಪಾಲಿಕೆ ಆಯುಕ್ತ ಜಗದೀಶ್ ಕೆ.ಎಚ್. ಅವರನ್ನು ಭೇಟಿ ಮಾಡಿ  ಚರ್ಚಿಸಿದರು. ಪ್ರಾಣಿಗಳ ಜನನ ನಿಯಂತ್ರಣ (ಎಬಿಸಿ), ಪುನರ್ವಸತಿ ಕೇಂದ್ರಗಳು, …

Read More »

ಬಾರ್, ರೆಸಾರ್ಟ್‍ಗಳಿಗೆ ಮಾರ್ಗ ಸೂಚಿ

ಬೆಂಗಳೂರು, ಡಿ.31- ಕೋವಿಡ್-19ರ ಸೋಂಕು ಹರಡುವಿಕೆ ತಡೆಗೆ ಮುಂಜಾಗ್ರತಾ ಕ್ರಮ ಕೈಗೊಳ್ಳುವುದು ಸೇರಿದಂತೆ ಹಲವು ಮಾರ್ಗಸೂಚಿಗಳನ್ನು ಪ್ರವಾಸೋದ್ಯಮ ಇಲಾಖೆ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ಬರುವ ಅನುಮೋದಿತ ಹೊಟೇಲ್ ಮತ್ತು ರೆಸಾರ್ಟ್‍ಗಳಿಗೆ ನೀಡಿದೆ. ಪ್ರವಾಸೋದ್ಯಮ ಇಲಾಖೆ ನಿಗದಿಪಡಿಸಿರುವ ಮಾರ್ಗಸೂಚಿಗಳನ್ನು ಪಾಲಿಸಿರುವ ಬಗ್ಗೆ ಸೂಕ್ತ ದಾಖಲೆಗಳನ್ನು ಬೆಂಗಳೂರು ವಿಭಾಗದ ಉಪ ನಿರ್ದೇಶಕರ ಕಚೇರಿಗೆ ತಲುಪಿಸಬೇಕು. ಒಂದು ವೇಳೆ ಮಾರ್ಗಸೂಚಿ ಪಾಲನೆ ಬಗ್ಗೆ ಅನುಮತಿ ಪಡೆಯದಿದ್ದರೆ ತಮ್ಮ ವ್ಯವಹಾರ ಸ್ಥಗಿತಗೊಳಿಸಬೇಕು ಎಂದು ಸುತ್ತೋಲೆಯಲ್ಲಿ …

Read More »