Breaking News
Home / 2020 / ಡಿಸೆಂಬರ್ (page 20)

Monthly Archives: ಡಿಸೆಂಬರ್ 2020

ರಾಜ್ಯಾದ್ಯಂತ ಡಿ.24 ರಿಂದ ರಾತ್ರಿ ಕರ್ಫ್ಯೂ ಜಾರಿಯಲ್ಲಿರುವುದರಿಂದ ಕಟೀಲು ಯಕ್ಷಗಾನ ಮೇಳ ಕಾಲಮಿತಿ ಯಕ್ಷಗಾನವನ್ನು ಪ್ರದರ್ಶಿಸಲಿದೆ.

ಮಂಗಳೂರು: ರಾಜ್ಯಾದ್ಯಂತ ಡಿ.24 ರಿಂದ ರಾತ್ರಿ ಕರ್ಫ್ಯೂ ಜಾರಿಯಲ್ಲಿರುವುದರಿಂದ ಕಟೀಲು ಯಕ್ಷಗಾನ ಮೇಳ ಕಾಲಮಿತಿ ಯಕ್ಷಗಾನವನ್ನು ಪ್ರದರ್ಶಿಸಲಿದೆ. ಕಟೀಲು‌ ದೇವಸ್ಥಾನದ ಎಲ್ಲಾ ಆರು ಯಕ್ಷಗಾನ ಮೇಳಗಳು ಡಿಸೆಂಬರ್ ‌24ರ ಗುರುವಾರದಿಂದ ಸಂಜೆ 4 ಗಂಟೆಗೆ ಚೌಕಿ ಪೂಜೆ ನಡೆದು ಬಳಿಕ ಯಕ್ಷಗಾನ ಪ್ರಸಂಗ ಆರಂಭಿಸಲಿದೆ. ರಾತ್ರಿ 9:45 ಕ್ಕೆ ಮಂಗಳ ಹಾಡುವುದರ ಮೂಲಕ ಯಕ್ಷಗಾನ‌ ಕೊನೆಗೊಳ್ಳಲಿದೆ. ಎಲ್ಲ ಕಲಾವಿದರು ಮಧ್ಯಾಹ್ನ 2:30ಕ್ಕೆ ಚೌಕಿಯಲ್ಲಿ ಹಾಜರಿರಲು ಸೂಚಿಸಲಾಗಿದೆ. ನಾಳೆಯಿಂದ ಕರ್ಫ್ಯೂ ಮುಗಿಯುವ …

Read More »

ಕೋಟಿ ಕೋಟಿ ಖರ್ಚು ಮಾಡಿ ಮನೆಗಳನ್ನು ನಿರ್ಮಾಣ ಮಾಡಿದರು ಕೂಡ ಸಾರ್ವಜನಿಕರಿಗೆ ಸರಿಯಾಗಿ ಉಪಯೋಗವಾಗುತ್ತಿಲ್ಲ.

ಕೋಟಿ ಕೋಟಿ ಖರ್ಚು ಮಾಡಿ ಮನೆಗಳನ್ನು ನಿರ್ಮಾಣ ಮಾಡಿದರು ಕೂಡ ಸಾರ್ವಜನಿಕರಿಗೆ ಸರಿಯಾಗಿ ಉಪಯೋಗವಾಗುತ್ತಿಲ್ಲ. ದಾ ಸಾಲಾಪುರ್ ಗ್ರಾಮ ಪಂಚಾಯತಿಯಲ್ಲಿ ವಸತಿ ಯೋಜನೆಯಲ್ಲಿ ಮನೆಗಳನ್ನು ನಿರ್ಮಾಣ ಮಾಡಿದರು ಕೂಡ ಮಾಡದಂತಾಗಿದೆ. ದಾ ಸಾಲಾಪುರ ಗ್ರಾಮ ಪಂಚಾಯಿತಿಯಿಂದ 2006 ರಲ್ಲಿ ನವಗ್ರಾಮ ಯೋಜನೆ ಅಡಿಯಲ್ಲಿ 60 ಮನೆಗಳನ್ನು ನಿರ್ಮಾಣ ಮಾಡಿ ಕೈಬಿಟ್ಟಿದ್ದಾರೆ ಹಾಗೂ ಅಲ್ಲಿಂದ ಇಲ್ಲಿಯವರೆಗೆ ಸಾರ್ವಜನಿಕರಿಗೆ ಸರಿಯಾಗಿ ಕುಡಿಯುವ ನೀರಿನ ವ್ಯವಸ್ಥೆ ರಸ್ತೆಯ ವ್ಯವಸ್ಥೆ ಹಾಗೂ ಮನೆಗಳಿಗೆ ವಿದ್ಯುತ್ ದೀಪ …

Read More »

ಕಣ್ಣುಮುಚ್ಚಿ ಕುಳಿತ ಸಾಲಾಪುರ ಗ್ರಾಮ ಪಂಚಾಯತಿ ಅಧಿಕಾರಿಗಳು.

  ಕಳೆದ ಒಂದು ವರ್ಷದಿಂದ ದಾ ಸಾಲಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ 3 ನೇ ವಾರ್ಡಿನಲ್ಲಿ ರಸ್ತೆಯ ಮೇಲೆ ಚರಂಡಿಯ ನೀರು ಮೊಣಕಾಲು ತನಕ ನಿಂತು ಗಬ್ಬುನಾರುತ್ತಿದೆ. ಇದರಿಂದ ಸೊಳ್ಳೆಗಳು ಹಾಗೂ ಕೀಟನಾಶಕಗಳು ಉತ್ಪತ್ತಿಯಾಗಿ ಸಾರ್ವಜನಿಕರಿಗೆ ಹಲವಾರು ರೋಗಗಳು ಬರುವ ಸಾಧ್ಯತೆ ಇದೆ. ಈ ಹಿಂದೆ ಸಾರ್ವಜನಿಕರು ಗ್ರಾಮ ಪಂಚಾಯತಿಗೆ ರಸ್ತೆಯ ಮೇಲೆ ನಿಂತ ನೀರನ್ನು ಸರಿಯಾಗಿ ಚರಂಡಿ ಮಾಡಿ ಎಂದು ಗ್ರಾಮ ಪಂಚಾಯತಿ ಯವರಿಗೆ ಹೇಳಿದರೂ ಕೂಡ …

Read More »

ರಾಮದುರ್ಗ ತಾಲೂಕು ದಾ ಸಾಲಾಪುರ 3ನೇ ವಾರ್ಡಿನ ಚುನಾವಣೆ ಗ್ರಾಮಸ್ಥರಿಂದ ಬಹಿಷ್ಕಾರ.

ರಾಮದುರ್ಗ ತಾಲೂಕು ದಾ ಸಾಲಾಪುರ 3ನೇ ವಾರ್ಡಿನ ಚುನಾವಣೆ ಗ್ರಾಮಸ್ಥರಿಂದ ಬಹಿಷ್ಕಾರ. ದಾ ಸಾಲಾಪುರ್ ಗ್ರಾಮ ಪಂಚಾಯಿತಿಗೆ ಸಂಬಂಧಪಟ್ಟಂತೆ 3 ನೇ ವಾರ್ಡಿನಲ್ಲಿ ಚರಂಡಿಯ ನೀರು ರಸ್ತೆಯ ಮೇಲೆ ಮೊಣಕಾಲು ತನಕ ನೀರು ನಿಂತಿದೆ. ಒಂದು ವರ್ಷ ಕಳೆದರೂ ಚರಂಡಿ ಮಾಡದ ಗ್ರಾಮ ಪಂಚಾಯತಿ ಸಿಬ್ಬಂದಿಗಳು ಅಲ್ಲಿದ್ದಂತಹ ಗ್ರಾಮಸ್ಥರು ಪಂಚಾಯತಿಗೆ ಚರಂಡಿ ನಿರ್ಮಾಣ ಮಾಡಿ ಎಂದು ಕೇಳಿದರೂ ಕೂಡಾ ಅಲ್ಲಿದ್ದಂತಹ ಸಿಬ್ಬಂದಿಗಳು ಗ್ರಾಮಸ್ಥರಿಗೆ ನೀವೇ ಮಾಡಿಸಿಕೊಳ್ಳಿ ಎಂದು ಉಡಾಪಿ ಮಾತುಗಳನ್ನಾಡುತ್ತಾನೆ. …

Read More »

ದಿ.25ರಂದು ಅಯ್ಯಪ್ಪ ಸ್ವಾಮಿ ಮಹಾಪೂಜೆ

ಗೋಕಾಕ: ಇಲ್ಲಿಯ ಉಪ್ಪಾರ ಗಲ್ಲಿಯಲ್ಲಿರುವ ಶ್ರೀ ರಾಮ ಸನ್ನಿಧಾನ ಉಪ್ಪಾರ ಕಲ್ಯಾಣ ಮಂಟಪದಲ್ಲಿ ದಿ.25ರಂದು ಈ ವರ್ಷವೂ ಕನ್ಯಾ ಸ್ವಾಮಿ ಪೂಜೆ ಹಾಗೂ ಶ್ರೀ ಅಯ್ಯಪ್ಪಸ್ವಾಮಿ ಮಹಾಪೂಜೆ ಸಂಜೆ 7 ಗಂಟೆಗೆ ಜರುಗಲಿದೆ. ಅಯ್ಯಪ್ಪ ಸ್ವಾಮಿ ಭಕ್ತಾಧಿಗಳು ಆಗಮಿಸಿ ಮಹಾಪ್ರಸಾದ ಸ್ವೀಕರಿಸಿ ಅಯ್ಯಪ್ಪನ ಕೃಪೆಗೆ ಪಾತ್ರರಾಗಬೇಕೆಂದು ಗುರುಸ್ವಾಮಿಗಳು ಪ್ರಕಟನೆಯಲ್ಲಿ ತಿಳಸಿದ್ದಾರೆ.

Read More »

ಡಿ.25 ರಿಂದ ಜ.10 ರವರೆಗೆ ರೈತರ ಕೃಷಿ ಜಮೀನುಗಳಿಗೆ 6.80 ಟಿಎಮ್‍ಸಿ ನೀರು ಬಿಡುಗಡೆ- ಶಾಸಕ ಹಾಗೂ ಕಹಾಮ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಜಿಎಲ್‍ಬಿಸಿಗೆ 2400, ಜಿಆರ್‍ಬಿಸಿಗೆ 2000, ಸಿಬಿಸಿ ಕಾಲುವೆಗೆ 550 ಕ್ಯೂಸೆಕ್ಸ್ ನೀರು ಬಿಡುಗಡೆ

ಗೋಕಾಕ : ಹಿಡಕಲ್ ಜಲಾಶಯದಿಂದ ಡಿಸೆಂಬರ್ 25 ರಿಂದ 15 ದಿನಗಳವರೆಗೆ ರೈತರ ಕೃಷಿ ಜಮೀನುಗಳಿಗೆ ನೀರು ಹಾಯಿಸಲು 6.80 ಟಿಎಂಸಿ ನೀರು ಬಿಡುಗಡೆ ಮಾಡಲಾಗುತ್ತಿದೆ ಎಂದು ಕೆಎಂಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದ್ದಾರೆ. ಜಲಸಂಪನ್ಮೂಲ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಈ ಬಗ್ಗೆ ಅಧಿಕಾರಿಗಳಿಗೆ ಆದೇಶ ನೀಡಿದ್ದು, ಶುಕ್ರವಾರ ಬೆಳಿಗ್ಗೆ 6 ಗಂಟೆಯಿಂದ ಹಿಡಕಲ್ ಜಲಾಶಯದಿಂದ ನೀರನ್ನು ಬಿಡುಗಡೆ …

Read More »

ಪದೇ ಪದೇ ತಮ್ಮ ನಿರ್ಧಾರವನ್ನ ಬದಲಿಸುತ್ತಿರುವ B.S.Y..ಇಂದಿನಿಂದ ಅಲ್ಲ, ನಾಳೆಯಿಂದ ಜಾರಿ; ರಾತ್ರಿ 11ರ ಬಳಿಕ ಎಲ್ಲಾ ಸೇವೆ ಬಂದ್

ಬೆಂಗಳೂರು (ಡಿ. 23): ಬ್ರಿಟನ್​ನ ಹೊಸ ರೂಪಾಂತರದ ಕೊರೋನಾ ವೈರಸ್​ ಆತಂಕದ ಹಿನ್ನಲೆ ರಾಜ್ಯದಲ್ಲಿ ಇಂದಿನಿಂದ ನೈಟ್​ ಕರ್ಫ್ಯೂ ಜಾರಿ ಮಾಡಲಾಗಿತ್ತು. ರಾತ್ರಿ 10 ರಿಂದ ಬೆಳಿಗ್ಗೆ 6ರವರೆಗೆ ಕರ್ಫ್ಯೂ ಜಾರಿ ಮಾಡಿ ಸರ್ಕಾರ ಇಂದು ಮಧ್ಯಾಹ್ನ  ಆದೇಶಿಸಿತ್ತು. ಆದರೆ, ವರ್ಷಾಂತ್ಯದಲ್ಲಿ ಈ ರೀತಿ ಕರ್ಫ್ಯೂ ಜಾರಿ ಮಾಡುವುದರಿಂದ ಬಾರ್​ ಅಂಡ್​ ರೆಸ್ಟೋರೆಂಟ್​, ಓಲಾ, ಉಬರ್​ ಸೇರಿದಂತೆ ಅನೇಕ ಉದ್ಯಮಗಳಿಗೆ ನಷ್ಟವಾಗಲಿದೆ ಎಂಬ ವಿರೋಧ ಎಲ್ಲೆಡೆ ವ್ಯಕ್ತವಾಗಿತ್ತು. ಈ ನೈಟ್​ ಕರ್ಫ್ಯೂನಿಂದಾಗಿ …

Read More »

ಜನವರಿ 1ರಿಂದ 10-12ನೇ ತರಗತಿಗಳ ಆರಂಭ ನಿಶ್ಚಿತ

ಬೆಂಗಳೂರು,ಡಿ.23- ಈಗಾಗಲೇ ನಿರ್ಧಾರವಾಗಿರುವಂತೆ ಜ.1ರಿಂದಲೇ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ತರಗತಿಗಳು ರಾಜ್ಯಾದ್ಯಂತ ಆರಂಭವಾಗಲಿವೆ ಎಂದು ಶಿಕ್ಷಣ ಸಚಿವ ಎಸ್.ಸುರೇಶ್‍ಕುಮಾರ್ ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ.  ಶಾಲಾಕಾಲೇಜುಗಳನ್ನು ತೆರೆಯುವ ಬಗ್ಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತಂತೆ ಕ್ಷೇತ್ರ ಶಿಕ್ಷಣಾಧಿಕಾರಿ(ಬಿಇಒ)ಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಆರಂಭಕ್ಕೂ ಮುನ್ನ ಅವರು ಸುದ್ದಿಗಾರರ ಜೊತೆ ಮಾತನಾಡಿದರು. ಕೊರೊನಾ ರೂಪಾಂತರ ವೈರಸ್ ಬಗ್ಗೆ ತಾಂತ್ರಿಕ ಸಲಹಾ ಸಮಿತಿ ಹಾಗೂ ತಜ್ಞರ ಜೊತೆ ಚರ್ಚೆ ಮಾಡಲಾಗಿದೆ. ಹೀಗಾಗಿ ಈಗಾಗಲೇ ನಿಗದಿಯಾಗಿರುವಂತೆ ಜನವರಿ …

Read More »

ಅನ್ನದಾತರಿಗೆ ಸ್ಯಾಂಡಲ್‍ವುಡ್ ಕಲಾವಿದರ ಸಲಾಂ

ಬೆಂಗಳೂರು, ಡಿ. 23- ನೇಗಿಲು ಹಿಡಿದ ಹೊಲದೊಳು ಹಾಡುತ ಉಳುವ ಯೋಗಿಯ ನೋಡಲ್ಲಿ…. ಅನ್ನ ನೀಡುವರೇ ನಮ್ಮೋರು…. ನಮ್ಮಮ್ಮ ನಮ್ಮಮ್ಮ ಭೂಮಿ ತಾಯಮ್ಮ…. ಹೀಗೆ ರೈತನ ಹಾಗೂ ಅವನ ಬೆವರಿನ ಬೆಲೆ ತಿಳಿಸುವ ಅನೇಕ ಗೀತೆಗಳು ಕನ್ನಡ ಚಿತ್ರಗಳಲ್ಲಿವೆ, ಅದೇ ರೀತಿ ನಮ್ಮ ಸ್ಯಾಂಡಲ್‍ವುಡ್‍ನ ಡಾ.ರಾಜ್‍ಕುಮಾರ್, ಡಾ.ವಿಷ್ಣುವರ್ಧನ್, ಡಾ.ಅಂಬರೀಷ್ ಸೇರಿದಂತೆ ಹಲವು ನಟರು ಕೂಡ ರೈತರ ಪಾತ್ರಗಳಲ್ಲಿ ನಟಿಸುವ ಮೂಲಕ ಅನ್ನದಾತನ ಹಿರಿಮೆಯನ್ನು ಸಾರಿದ್ದಾರೆ. ಇಂದು ರಾಷ್ಟ್ರೀಯ ರೈತ ದಿನಾಚರಣೆ, …

Read More »

ಇಂದಿನಿಂದ 9 ದಿನ ಗಳವರೆಗೆ ರಾತ್ರಿ ಹೊತ್ತು ಎನಿರತ್ತೆ ಎನಿರಲ್ಲ….? ರಾತ್ರಿವೇಳೆ ಬಸ್ ಸಂಚಾರ ಇರುವುದಿಲ್ಲ,

ಇಂದಿನಿಂದ ಒಂಬತ್ತು ದಿನಗಳ ವರೆಗೆ ಎಲ್ಲವೂ ಬಂದ್ ರಾತ್ರಿವೇಳೆ ಬಸ್ ಸಂಚಾರ ಇರುವುದಿಲ್ಲ, ತುರ್ತು ಸೇವೆಗಳಿಗೆ ಮಾತ್ರ ಅವಕಾಶ , ಕೋವಿಡ್ 19 ಹೊಸ ರೂಪಾಂತರ ಗೊಂಡ್ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಎಲ್ಲವನ್ನೂ ರಾತ್ರಿ ಹತ್ತು ಗಂಟೆಯಿಂದ ಬಂದ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ, ಬೆಳಿಗ್ಗೆ ಆರು ಗಟೆಯಿಂದ ಯಥಾ ಪ್ರಕಾರವಾಗಿ ಎಲ್ಲ ಕಾರ್ಯ ಚಟುವಟಿಕೆ ಗಳು ಇರುತ್ತವೆ , ಇನ್ನು ಹೊಸ ವರ್ಷ ಹಾಗೂ ಕ್ರಿಸ್ಮಸ್ ಆಚರಣೆಗೂ ಕೂಡ …

Read More »