Breaking News

ನಮಗೆ ಬಹಳ ತ್ರಾಸ ಆಗುತ್ತಿದೆ. ಒಂದೆರಡು ದಿನ ವೈನ್ ಶಾಪ್ ಚಾಲೂ ಮಾಡಿಸಿ:ಸಚಿವ ಜಗದೀಶ್ ಶೆಟ್ಟರಗೆ ಕರೆ ಮಾಡ್ತಿದಾರಂತೆ ಜನ

Spread the love

ಬೆಳಗಾವಿ: ‘ನಮಗೆ ಬಹಳ ತ್ರಾಸ ಆಗುತ್ತಿದೆ. ಒಂದೆರಡು ದಿನ ವೈನ್ ಶಾಪ್ ಚಾಲೂ ಮಾಡಿಸಿ ಎಂದು ಕೆಲವರು ನನಗೆ ಕರೆ ಮಾಡಿದ್ದಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ತಿಳಿಸಿದರು.

ಇಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಕೊರೊನಾ ವೈರಸ್ ಹತ್ತಿಕ್ಕಲು ದೇಶದಾದ್ಯಂತ ಏ.14ರವರೆಗ ಲಾಕ್ ಡೌನ್ ಘೋಷಿಸಿದೆ. ಈ ದಿನಗಳಲ್ಲಿ ಮಧ್ಯ ಕುಡಿಯದೆ ಇದ್ರೆ ಏನು ಆಗುವುದಿಲ್ಲ. ಆದರೆ ನನಗೆ ಕೆಲವರು ವೈನ್ ಶಾಪ್ ಗಳನ್ನು ಎರಡು ದಿನಗಳ ವರೆಗೆ ತೆರೆಯುವಂತೆ ಮಾಡಿ ಎಂದು 2-3 ಕರೆಗಳು ಬಂದಿವೆ ಎಂದರು.

ಸಚಿವರು ಆಡಿದ ಮಾತುಗಳು ಅಲ್ಲಿ ಇದ್ದವರನ್ನು ನಗುವಂತೆ ಮಾಡಿತು. ಜನರು ಸಂಯಮ ಇಟ್ಟುಕೊಳ್ಳಬೇಕು. ನಿಯಮಗಳನ್ನು ಪಾಲಿಸಬೇಕು. ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.


Spread the love

About Laxminews 24x7

Check Also

ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ..!

Spread the loveಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ..! ಮೂಡಲಗಿ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಮಾರ್ಗದರ್ಶಕರಾದ ಸಂತೋಷ ಜಾರಕಿಹೊಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ