Monthly Archives: ಜೂನ್ 2024

ಡೆಂಗ್ಯೂ ಜ್ವರಕ್ಕೆ ಓರ್ವ ಯುವಕ ಬಲಿ

ಬೆಳಗಾವಿ : ಬೆಳಗಾವಿಯ ಹಿಂಡಲಗಾ ಗ್ರಾಮದ ಲಕ್ಷ್ಮೀ ನಗರದ ಯುವಕ ಪ್ರಸಾದ ಮುಚ್ಚಂಡಿಕರ (28) ಶನಿವಾರ ಡೆಂಗ್ಯೂ ಜ್ವರದಿಂದ ಮೃತಪಟ್ಟಿದ್ದಾನೆ. ಪ್ರಸಾದ ಕಳೆದ ಕೆಲದಿನಗಳಿಂದ ಡೆಂಗ್ಯು ರೋಗಕ್ಕೆ ತುತ್ತಾಗಿದ್ದರು. ಅವರಿಗೆ ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಮೃತರು ಅಜ್ಜಿ, ತಂದೆ, ಪತ್ನಿ, ಪುತ್ರನನ್ನು ಅಗಲಿದ್ದಾರೆ.

Read More »

ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ವಿರುದ್ಧ ವಾಗ್ದಾಳಿ ನಡೆಸಿದ ಸಚಿವ ಸತೀಶ್ ಜಾರಕಿಹೊಳಿ

ಹಾರೂಗೇರಿ : ಲೋಕಸಭಾ ಚುನಾವಣೆ ಸಂದರ್ಭದಲ್ಲಿ ನಮ್ಮ ವಿರುದ್ಧ ಸ್ವ ಪಕ್ಷದರೇ ಕೆಲಸ ಮಾಡಿದ್ದರು, ನಾನು ಮಾಜಿ ಶಾಸಕ ಶಾಮ್ ಘಾಟಗೆ ಮಾತು ಕೇಳುತ್ತೇನೆ ಎಂದು ಆರೋಪ ಮಾಡುತ್ತಾರೆ ಘಾಟಗೆ ಅಷ್ಟೇ ಅಲ್ಲ ಮನೆಯಲ್ಲಿ ನಾನು ನನ್ನ ಹೆಂಡತಿ, ಮಕ್ಕಳ ಮಾತೂ ಕೇಳಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ವಿರುದ್ಧ ವಾಗ್ದಾಳಿ ನಡೆಸಿದರು. ಹಾರೂಗೇರಿ ಪಟ್ಟಣದಲ್ಲಿ ನೂತನ ಸಂಸದರ ಅಭಿನಂದನಾ ಸಮಾವೇಶದಲ್ಲಿ ಮಾತನಾಡಿದ ಇವರು. …

Read More »

ಜಮಖಂಡಿ ತಾಲ್ಲೂಕಿಗೆ ಹಿಪ್ಪರಗಿ ಮರುಸೇರ್ಪಡೆ

ಜಮಖಂಡಿ: ರಾಜ್ಯದಲ್ಲಿ ಹೊಸ ತಾಲ್ಲೂಕುಗಳ ರಚನೆಯ ಬಳಿಕ ರಬಕವಿ-ಬನಹಟ್ಟಿ ತಾಲ್ಲೂಕಿಗೆ ಸೇರ್ಪಡೆಯಾಗಿದ್ದ ಹಿಪ್ಪರಗಿ ಗ್ರಾಮವನ್ನು ಜಮಖಂಡಿ ತಾಲ್ಲೂಕಿಗೆ ಮರುಸೇರ್ಪಡೆಗೊಳಿಸಿ ಸರ್ಕಾರದ ಅಧೀನ ಕಾರ್ಯದರ್ಶಿ (ಕಂದಾಯ ಇಲಾಖೆ ಭೂಮಾಪನ) ಎಸ್. ಗುರುಮೂರ್ತಿ ಅಧಿಸೂಚನೆ ಹೊರಡಿಸಿದ್ದಾರೆ.   ರಬಕವಿ-ಬನಹಟ್ಟಿ ತಾಲ್ಲೂಕಿನ ಹಿಪ್ಪರಗಿ ಗ್ರಾಮವನ್ನು ಜಮಖಂಡಿ ತಾಲ್ಲೂಕಿಗೆ ಸೇರ್ಪಡೆಗೊಳಿಸಿ ಜೂನ್‌ 14 ರಂದು ಅಂತಿಮ ಅಧಿಸೂಚನೆ ಹೊರಡಿಸಿದ್ದು, ಜೂನ್‌ 24ರಂದು ರಾಜ್ಯ ಪತ್ರದಲ್ಲಿ ಪ್ರಕಟಿಸಲಾಗಿದೆ. ಅಧಿಸೂಚನೆ ಮಾಹಿತಿಯನ್ನು ಅಗತ್ಯ ಕ್ರಮದ ಸಲುವಾಗಿ ಜಿಲ್ಲಾ ಮತ್ತು ತಾಲ್ಲೂಕು …

Read More »

ನ್ಯೂ ಇಂಡಿಯನ್ ಕ್ರಾಫ್ಟ್ ಪ್ರದರ್ಶನ

ಹಾವೇರಿ: ದೇಶದ ವಿವಿಧ ಭಾಗಗಳಲ್ಲಿ ಹೆಸರುವಾಸಿಯಾಗಿರುವ ‘ನ್ಯೂ ಇಂಡಿಯನ್ ಕ್ರಾಫ್ಟ್’ ಪ್ರದರ್ಶನ ಜೂನ್ 19ರಿಂದ ಹಾವೇರಿಯ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಆರಂಭವಾಗಿದ್ದು, ತರಹೇವಾರಿ ವಸ್ತುಗಳು ಖರೀದಿಗೆ ಲಭ್ಯವಿವೆ. ದೇಶದಾದ್ಯಂತ ಪ್ರಸಿದ್ಧಿ ಪಡೆದಿರುವ ವಿವಿಧ ವಸ್ತುಗಳ ಮಾರಾಟಗಾರರ 60ಕ್ಕೂ ಹೆಚ್ಚು ಮಳಿಗೆಗಳು ಪ್ರದರ್ಶನದಲ್ಲಿವೆ. ಕರ್ನಾಟಕ, ಉತ್ತರ ಪ್ರದೇಶ, ಮಧ್ಯಪ್ರದೇಶ, ಒಡಿಶಾ, ಕಾಶ್ಮೀರ, ಶಿಮ್ಲಾ, ಪಂಜಾಬ್, ಅಸ್ಸಾಂ, ಅರುಣಾಚಲ, ಪಶ್ಚಿಮ ಬಂಗಾಳ, ರಾಜಸ್ಥಾನ, ಹರಿಯಾಣ, ಉತ್ತರಾಖಂಡ, ಕೇರಳ, ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಕುಶಲಕರ್ಮಿಗಳ ಕರಕುಶಲ …

Read More »

ತೋಟಗಾರಿಕೆ ಬೆಳೆ ವಿಮೆ: 31 ಕೊನೆ ದಿನ

ಬ್ಯಾಡಗಿ: ತಾಲ್ಲೂಕಿನ ತೋಟಗಾರಿಕೆ ಬೆಳೆಗಳಾದ ಮೆಣಸಿನಕಾಯಿ, ಅಡಿಕೆ, ಶುಂಠಿ, ಹಸಿ ಮೆಣಸಿನಕಾಯಿ ಹಾಗೂ ಮಾವು ಬೆಳೆಗಳಿಗೆ ಸರ್ಕಾರ ವಿಮಾ ಯೋಜನೆಯನ್ನು ಅನುಷ್ಠಾನಗೊಳಿಸಿದೆ. 2024-25ನೇ ಸಾಲಿನ ಮರು ವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ಮುಂಗಾರು ಹಂಗಾಮಿಗೆ ಬೆಳೆ ವಿಮೆ ಕಂತು ತುಂಬಲು ಜುಲೈ 31 ಕೊನೆಯ ದಿನವಾಗಿದೆ.   ಪ್ರತಿ ಹೆಕ್ಟೇರ್‌ ಅಡಿಕೆ ಬೆಳೆಗೆ ₹6,400, ಹಸಿಮೆಣಸಿನಕಾಯಿ ₹3,550, ಶುಂಠಿ ₹6,500, ಮಾವು ₹4,000 ದಂತೆ ವಿಮಾ ಕಂತನ್ನು ನಿಗದಿಪಡಿಸಿದೆ. …

Read More »

ಹೆಚ್ಚುತ್ತಿರುವ ತಾಪಮಾನ ತಗ್ಗಿಸಲು ಗಿಡ ಬೆಳೆಸಿ:ಸವದಿ

ಅಥಣಿ: ‘ಗಿಡಗಳನ್ನು ಹಚ್ಚುವುದು ಕೇವಲ ಪರಿಸರ ದಿನಾಚರಣೆಗೆ ಸೀಮಿತವಾಗಬಾರದು. ಗಿಡಗಳನ್ನು ನೆಟ್ಟು ಪೋಷಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಗಿಡ ಬೆಳೆಸುವುದರಿಂದ ಹೆಚ್ಚುತ್ತಿರುವ ತಾಪಮಾನ ತಗ್ಗಿಸಲು ಸಹಕಾರಿಯಾಗುತ್ತದೆ’ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು. ಇಲ್ಲಿನ ಆರ್.ಎಚ್.ಕುಲಕರ್ಣಿ ಸಭಾಂಗಣದಲ್ಲಿ ಅಥಣಿ ಮತ್ತು ಕಾಗವಾಡ ತಾಲ್ಲೂಕು ಸಹಕಾರಿ ಸಂಘಗಳ ಹಾಗೂ ವಿವಿಧ ಉದ್ದೇಶಗಳ ಗ್ರಾಮೀಣ ಪ್ರಾಥಮಿಕ ಕೃಷಿ ಸಹಕಾರ ಸಂಘಗಳ ಬ್ಯಾಂಕ್‌ಗಳ ಒಕ್ಕೂಟದ ಆಶ್ರಯದಲ್ಲಿ ಗ್ರಾಮ ಗ್ರಾಮಗಳಲ್ಲಿ ಸಹಕಾರ ಸಂಘಗಳ ಮುಖಾಂತರ 5,000 ಸಸಿಗಳ ವಿತರಣೆ …

Read More »

ಅಲ್ಪಾವಧಿಯಲ್ಲಿ ಲಾಭ ತಂದ ಕೊತ್ತಂಬರಿ ಸೊಪ್ಪು

ಮಹಾಲಿಂಗಪುರ: ರೈತ ಸಮುದಾಯವು ಜಾಣತನದಿಂದ ಒಕ್ಕಲುತನ ಮಾಡಿದರೆ ಕಡಿಮೆ ಜಮೀನು, ಅಲ್ಪಾವಧಿಯಲ್ಲಿಯೇ ಲಾಭವನ್ನು ಮಾಡಿಕೊಳ್ಳಬಹುದು ಎಂಬುದನ್ನು ರಬಕವಿ ಬನಹಟ್ಟಿ ತಾಲ್ಲೂಕಿನ ಕೆಸರಗೊಪ್ಪ ಗ್ರಾಮದ ಯುವ ರೈತ ಬಸವರಾಜ ಶ್ರೀಶೈಲ ಸತ್ತಿಗೇರಿ ಸಾಧಿಸಿ ತೋರಿಸಿದ್ದಾರೆ.   ಅಂತರ ಬೆಳೆಯಾಗಿ ಕೊತ್ತಂಬರಿ ಸೊಪ್ಪು : ಒಟ್ಟು 3.18 ಎಕರೆ ಜಮೀನು ಹೊಂದಿರುವ ಸಣ್ಣ ರೈತರಾದ ಬಸವರಾಜ ಸತ್ತಿಗೇರಿ ಅವರು ಪ್ರಸಕ್ತ ವರ್ಷದ ಮುಂಗಾರು ಹಂಗಾಮಿನಲ್ಲಿ 25 ಗುಂಟೆ ಜಮೀನಿನಲ್ಲಿ ಕಳೆದ ಮೇ18 ರಂದು ಅರಿಶಿನ …

Read More »

ಪ್ರಧಾನಿ ‘ಸಂಸ್ಕೃತ ವಾರಾಂತ್ಯ’ ಪ್ರಸ್ತಾಪ; ಪೋಷಕರ ಹರ್ಷ

ಕೊಪ್ಪಳ: ಪ್ರಧಾನಿ ನರೇಂದ್ರ ಮೋದಿ ಭಾನುವಾರದ ಮನದ ಮಾತು ಕಾರ್ಯಕ್ರಮದಲ್ಲಿ ಸಮಷ್ಠಿ ಗುಬ್ಬಿ ಎಂಬ ಕೊಪ್ಪಳದ ಯುವತಿಯ ‘ಸಂಸ್ಕೃತ ವಾರಾಂತ್ಯ’ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಪೋಷಕರು ಹರ್ಷಗೊಂಡಿದ್ದಾರೆ. ಬೆಂಗಳೂರಿನಲ್ಲಿ ನೆಲೆಸಿರುವ ಸಮಷ್ಠಿ ಗುಬ್ಬಿ ಮೂಲತಃ ಕೊಪ್ಪಳ ತಾಲ್ಲೂಕಿನ ಕಿನ್ನಾಳ ಗ್ರಾಮದವರಾದರು ಪ್ರಸ್ತುತ ಕೊಪ್ಪಳದ ಭಾಗ್ಯನಗರದಲ್ಲಿ ನೆಲೆಸಿದ್ದಾರೆ. ಅವರು ಕೃಷಿ ವಿಜ್ಞಾನಿ ಶೇಷಗಿರಿ ಗುಬ್ಬಿ ಹಾಗೂ ಅನುರಾಧ ಗುಬ್ಬಿ ಅವರ ಪುತ್ರಿ. ಸಮಷ್ಟಿ ತಿರುಪತಿಯ ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯದಿಂದ ಸ್ನಾತಕ ಮತ್ತು …

Read More »

ಹಣ ಸಹಾಯ ಮಾಡಿಲ್ಲವೆಂದು ಐಎಂಎ ಅಧ್ಯಕ್ಷರ ಮೇಲೆ ಹಲ್ಲೆ

ನೆಲಮಂಗಲ, ಜೂನ್​​ 30: ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆಯ ನೆಲಮಂಗಲದ (Nelamangala) ಖಾಸಗಿ ಆಸ್ಪತ್ರೆಯಲ್ಲಿ ಐಎಮ್​ಎ (IMA) ಅಧ್ಯಕ್ಷರಿಗೆ ಕಪಾಳಮೋಕ್ಷ ಮಾಡಲಾಗಿದೆ. ಡಾ.ಜಯಪ್ರಸಾದ್ ಹಲ್ಲೆಗೆ ಒಳಗಾದ ಐಎಂಎ ಅಧ್ಯಕ್ಷ. ಡಾ.ಅಬ್ದುಲ್ ಹಲ್ಲೆ ಮಾಡಿದ ಆರೋಪಿ. ಆರೋಪಿ ಡಾ.ಅಬ್ದುಲ್ ರೆಹಮಾನ್ ಶರೀಫ್ ಖಾಸಗಿ ಅಸ್ಪತ್ರೆಯಲ್ಲಿ ಮೈಕ್ರೋ ಬಯಾಲಜಿಸ್ಟ್ ಆಗಿ ಕೆಲಸ ಮಾಡುತ್ತಿದ್ದನು. ಮಗನ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಡಾ. ಅಬ್ದುಲ್ ವೈದ್ಯಕೀಯ ಸಂಘದಿಂದ 25 ಲಕ್ಷ ರೂ. ಸಹಾಯ ಮಾಡಿ ಎಂದು …

Read More »

ಗೋಬಿ, ಕಬಾಬ್, ಪಾನಿಪುರಿಯಂತೆ ಶವರ್ಮಾದಲ್ಲೂ ಅಪಾಯಕಾರಿ ಬಾಕ್ಟೀರಿಯಾ ಪತ್ತೆ, ಬ್ಯಾನ್​ಗೆ ಚಿಂತನೆ

ಬೆಂಗಳೂರು, ಜೂನ್.30: ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ನಡೆಸಿದ ಟೆಸ್ಟ್​ನಲ್ಲಿ ಗೋಬಿ ಮಂಚೂರಿ (Gobi Manchuri), ಕಬಾಬ್​​ (Kabab), ಪಾನಿಪುರಿ (panipuri)ಯಲ್ಲಿ ಕ್ಯಾನ್ಸರ್​ (Cancer) ಕಾರಕ ಅಂಶಗಳು ಪತ್ತೆಯಾಗಿದ್ದವು. ಇದೀಗ ಈ ಪಟ್ಟಿಯಲ್ಲಿ ಶವರ್ಮಾ (Shawarma) ಕೂಡ ಸೇರಿಕೊಂಡಿದೆ. ಗೋಬಿ, ಕಬಾಬ್, ಪಾನಿಪುರಿ ಬಳಿಕ ಶವರ್ಮಾಗೂ ಕಂಟಕ ಎದುರಾಗಿದೆ. ಶವರ್ಮಾ ಬ್ಯಾನ್​ಗೆ ಆಹಾರ & ಗುಣಮಟ್ಟ ಇಲಾಖೆ (FASSAI) ಚಿಂತನೆ ನಡೆಸಿದೆ. ಆರೋಗ್ಯದ ದೃಷ್ಟಿಯಿಂದ ಶವರ್ಮಾ ನಿಷೇಧಿಸಲು ಚಿಂತನೆ ನಡೆದಿದೆ. …

Read More »