ಕೊಪ್ಪಳ: 5 ಗ್ಯಾರಂಟಿ ಯೋಜನೆಗಳಲ್ಲಿ (Guarantee Scheme) ಮುಂದಿಟ್ಟುಕೊಂಡು ಕಾಂಗ್ರೆಸ್ (Congress) ಪಕ್ಷ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದಿದೆ. ಆದರೆ ಅವುಗಳನ್ನ ಜಾರಿಗೆ ತಂದು ನಿರ್ವಹಣೆ ಮಾಡುವುದು ಚುನಾವಣೆಗೂ ಮುಂಚೆ ಹೇಳಿದಷ್ಟು ಸುಲಭವಾಗಿಲ್ಲ. ಕಾಂಗ್ರೆಸ್ ತಂದಿರುವ ಗ್ಯಾರಂಟಿ ಯೋಜನೆಗಳಿಂದ ಈಗಾಗಲೇ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಕೊಕ್ಕೆ ಬಿದ್ದಿದೆ.
ಇದನ್ನ ಹೀಗಾಗಲೇ ಸ್ವತಃ ಕಾಂಗ್ರೆಸ್ ನಾಯಕರೇ ಒಪ್ಪಿಕೊಂಡಿದ್ದಾರೆ. ಇದೀಗ ಮುಖ್ಯಮಂತ್ರಿ ಆರ್ಥಿಕ ಸಲಹೆಗೆಗಾರರಾಗಿರುವ ಬಸವರಾಜ ರಾಯರೆಡ್ಡಿಯವರೇ (Basavaraj Rayareddy) ಗ್ಯಾರಂಟಿ ಯೋಜನೆಯಿರುವುದರಿಂದ ಅಭಿವೃದ್ಧಿ ಕಾರ್ಯಗಳಿಗೆ ಹಣ ಹೊಂದಿಸುವುದು ಅಸಾಧ್ಯ ಎಂಬುದನ್ನ ಒಪ್ಪಿಕೊಂಡಿದ್ದಾರೆ.
60-65 ಸಾವಿರ ಕೋಟಿ ಬೇಕು
ಐದು ಗ್ಯಾರಂಟಿ ಯೋಜನೆಗಳಿಗೆ ವಾರ್ಷಿಕ 60 ರಿಂದ 65 ಸಾವಿರ ಕೋಟಿ ಹಣ ಬೇಕು. ಇದರಿಂದ ಬೇರೆ ಯೋಜನೆಗಳಿಗೆ ಅನುದಾನ ಸಿಗುತ್ತಿಲ್ಲ. ಯಾವಾಗಲೂ ಸಿಎಂ ಜೊತೆಗೆ ಇರುವ ನನಗೆ ಮಾತ್ರ ಒಳಗಿನ ಸಮಸ್ಯೆ ಗೊತ್ತಿದೆ. ಎಲ್ಲಾ ಶಾಸಕರು ಅಭಿವೃದ್ಧಿಗೆ ಹಣ ಕೇಳುತ್ತಿದ್ದಾರೆ. ಆದರೆ ಯಾರಿಗೂ ಕೊಡಲಾಗುತ್ತಿಲ್ಲ ಎಂದರು.
ನನ್ನ ಕ್ಷೇತ್ರಕ್ಕೆ ಮಾತ್ರ ಹಣ ಬಿಡುಗಡೆ
ಸಿಎಂ ಅವರ ಆರ್ಥಿಕ ಸಲಹೆಗಾರನಾಗಿರುವುದರಿಂದ ಅಲ್ಲಿನ ಸಮಸ್ಯೆಗಳು ನನಗೆ ಮಾತ್ರ ಗೊತ್ತಿದೆ. ಅನುದಾನದ ಕೊರತೆಯಿಂದಾಗಿ ರಾಜ್ಯದ ಯಾವುದೇ ಅಭಿವೃದ್ಧಿ ಕಾಮಗಾರಿ ನಡಯುತ್ತಿಲ್ಲ. ಶಾಸಕರು ಕೆಲಸ ಮಾಡಬೇಕು ಅಂತ ಅಂದುಕೊಂಡ್ರು ಕೂಡಾ ಅನುದಾನ ಸಿಗುತ್ತಿಲ್ಲ. ನನಗೆ ಅನುದಾನ ಸಿಕ್ಕಿದೆಆದರೆ ಕೇವಲ ನನ್ನ ಕ್ಷೇತ್ರಕ್ಕೆ ಮಾತ್ರ ಸಿಎಂ ಅನುದಾನ ಬಿಡುಗಡೆ ಮಾಡಿದ್ದಾರೆ. ತಾನು ಆರ್ಥಿಕ ಸಲಹೆಗಾರನಾಗಿರದಿದ್ದರೆ ಯಲಬುರ್ಗಾಗೂ ಅನುದಾನ ಸಿಗುತ್ತಿರಲಿಲ್ಲ ಎಂದು ಹೇಳಿದ್ದಾರೆ.