ಕೊಯ್ನಾ ಜಲಾಶಯಕ್ಕೆ ಹರಿದು ಬಂದ 2 ಟಿಎಂಸಿ ಅಡಿ ನೀರು

Spread the love

ಚಿಕ್ಕೋಡಿ: ನೆರೆಯ ಮಹಾರಾಷ್ಟ್ರ ರಾಜ್ಯದ ಕೃಷ್ಣಾ ಹಾಗೂ ಉಪನದಿಗಳ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆ ಬೀಳುತ್ತಿದ್ದರಿಂದ ಮಹಾರಾಷ್ಟ್ರ ರಾಜ್ಯದ ಸಾತಾರಾ ಜಿಲ್ಲೆಯ ಕೊಯ್ನಾ ಡ್ಯಾಂ ಗೆ 24 ಗಂಟೆಗಳ ಅವಧಿಯಲ್ಲಿ 2 ಟಿಎಂಸಿ ಅಡಿಗಳಷ್ಟು ನೀರು ಹರಿದು ಬಂದಿದ್ದು, 105 ಟಿಎಂಸಿ ಅಡಿ ಸಾಮರ್ಥ್ಯದ ಈ ಡ್ಯಾಂನಲ್ಲಿ ಬುಧವಾರ 23 ಟಿಎಂಸಿ ಅಡಿಗಳಷ್ಟು ನೀರು ಸಂಗ್ರಹವಾಗಿದೆ.

ಕೊಯ್ನಾ ಜಲಾಶಯಕ್ಕೆ ಹರಿದು ಬಂದ 2 ಟಿಎಂಸಿ ಅಡಿ ನೀರು

ಕಳೆದ 24 ಗಂಟೆಗಳಲ್ಲಿ ಕೊಯ್ನಾ ಆಣೆಕಟ್ಟು ಪ್ರದೇಶದಲ್ಲಿ 13.3 ಸೆ.ಮೀ, ಕೃಷ್ಣಾ ನದಿ ಉಗಮ ಸ್ಥಳವಾಗಿರುವ ಮಹಾಬಳೇಶ್ವರದಲ್ಲಿ 10.2 ಸೆ.ಮೀ ಮಳೆಯಾಗಿದೆ. ಹೀಗಾಗಿ ಕೊಯ್ನಾ ಆಣೆಕಟ್ಟೆಗೆ 21 ಸಾವಿರ ಕ್ಯುಸೆಕ್ ನೀರು ಒಳ ಹರಿವು ಇದ್ದು,. ಸಾತಾರಾ ಜಿಲ್ಲೆಯಲ್ಲಿ ಇನ್ನೂ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನಾ ಇಲಾಖೆ ಯಲ್ಲೋ ಅಲರ್ಟ್ ಘೋಷಿಸಿದೆ.

ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದ ವಾರಣಾದಲ್ಲಿ 10.5 ಸೆ.ಮೀ, ಕಾಳಮ್ಮವಾಡಿಯಲ್ಲಿ 12.9 ಸೆ.ಮೀ, ನವಜಾದಲ್ಲಿ 10.2 ಸೆ.ಮೀ, ರಾಧಾನಗರಿಯಲ್ಲಿ 85 ಸೆ.ಮೀ ಮಳೆಯಾಗಿದ್ದು, ಸಾಂಗ್ಲಿಯಲ್ಲಿ 0.9 ಸೆ.ಮೀ ಹಾಗೂ ಕೊಲ್ಹಾಪುರದಲ್ಲಿ 1.5 ಸೆ.ಮೀ ಮಳೆ ಬುಧವಾರ ದಾಖಲಾಗಿದೆ.

ಮಹಾ ಮಳೆಯಿಂದಾಗಿ ಕೊಲ್ಹಾಪುರ ಜಿಲ್ಲೆಯ ಕೃಷ್ಣಾ ನದಿಗೆ ಅಡ್ಡಲಾಗಿರುವ ರಾಜಾಪೂರೆ ಬ್ಯಾರೇಜಿನಲ್ಲಿ 20ಸಾವಿರ ಕ್ಯುಸೆಕ್ ಹೊರ ಹರಿವು ಇದ್ದು, ಕಲ್ಲೋಳ ಬಳಿಯಲ್ಲಿ ಧೂದಗಂಗಾ ನದಿಯಲ್ಲಿ 6,680 ಕ್ಯುಸೆಕ್ ನೀರು ಸೇರಿದಂತೆ ಕೃಷ್ಣಾ ಹಾಗೂ ದೂಧಗಂಗಾ ಸಂಗಮ ಸ್ಥಳವಾಗಿರುವ ಕಲ್ಲೋಳ ಬ್ಯಾರೇಜ್ ಬಳಿಯಲ್ಲಿ 26,680 ಕ್ಯುಸೆಕ್ ನೀರು ಹರಿದು ಬರುತ್ತಿದೆ. ಕೃಷ್ಣಾ ಅಷ್ಟೇ ಅಲ್ಲದೇ ದೂಧಗಂಗಾ ಹಾಗೂ ವೇದಗಂಗಾ ನದಿಗಳ ನೀರು ಹರಿಯುವಿಕೆ ಪ್ರಮಾಣದಲ್ಲಿ ಬುಧವಾರ ಮತ್ತಷ್ಟು ಹೆಚ್ಚಳವಾಗಿದೆ.

6 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಕೃಷ್ಣಾ ನದಿಗೆ ಅಡ್ಡಲಾಗಿರುವ ಹಿಪ್ಪರಗಿ ಬ್ಯಾರೇಜಿನಲ್ಲಿ 3.90 ಟಿಎಂಸಿ ನೀರು ಸಂಗ್ರಹವಾಗಿದ್ದು, ಇಲ್ಲಿ 23,360 ಕ್ಯುಸೆಕ್ ಒಳ ಹರಿವು, 750 ಕ್ಯುಸೆಕ್ ಹೊರ ಹರಿವು ಇದೆ.


Spread the love

About Laxminews 24x7

Check Also

ಬೆಲೆ ಏರಿಕೆ ನಡುವೆ BSNL ಗ್ರಾಹಕರಿಗೆ ಗುಡ್ ನ್ಯೂಸ್

Spread the love ನವದೆಹಲಿ: ಭಾರತದಲ್ಲಿನ ಟೆಲಿಕಾಂ ಸೇವಾ ಪೂರೈಕೆದಾರರು ಇತ್ತೀಚೆಗೆ ತಮ್ಮ ರೀಚಾರ್ಜ್ ಬೆಲೆಗಳನ್ನು ನವೀಕರಿಸಿದ್ದಾರೆ. ರಿಲಯನ್ಸ್ ಜಿಯೋ, ಏರ್‌ಟೆಲ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ