Breaking News

ಈಜು ಕಲಿಸಲು ಭಾವಿಗೆ ಹೋದ ವ್ಯಕ್ತಿಯೊಬ್ಬ ಮಗನ ಜೊತೆ ನೀರಿನಲ್ಲಿ ಮುಳುಗಿ ಸಾವು : ರಾಜಾಪೂರ ಗ್ರಾಮದಲ್ಲಿ ಘಟನೆ

Spread the love

ಮಗನಿಗೆ ಈಜು ಕಲಿಸಲು ಭಾಂವಿಗೆ ಹೋದ ವ್ಯಕ್ತಿಯೊಬ್ಬ ಮಗನ ಜೊತೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಹೃದಯವಿದ್ರಾಯಕ ಘಟನೆ ತಾಲೂಕಿನ ರಾಜಾಪೂರ ಗ್ರಾಮದಲ್ಲಿ ಮಂಗಳವಾರದಂದು ಮುಂಜಾನೆ ಜರುಗಿದೆ.
ಸತ್ತೆಪ್ಪ ರಾಮಪ್ಪ ಕಮತೆ (75) ಎಂಬವನು ತನ್ನ ಮಗ ಪರುಶರಾಮನಿಗೆ ಈಜು ಕಲಿಸಲು ಕಮತೆ ತೋಟದ ಭಾಂವಿಗೆ ಹೋಗಿದ್ದನು. ಮಗನ ಬೆನ್ನಿಗೆ ದಂಟಿನ ಸೂಡು ಕಟ್ಟಿ ಭಾಂವಿಯೊಳಗೆ ಇಳಿಸಿದಾಗ ದಂಟಿನ ಸೂಡು ಬಿಚ್ಚಿ ಪರುಶರಾಮ ಮುಳುಗ ತೊಡಗಿದಾಗ ತಂದೆ ಸತ್ತೆಪ್ಪ ತಾನೂ ಭಾಂವಿಗೆ ಹಾರಿದಾಗ ಇಬ್ಬರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಘಟನೆಯ ಸುದ್ದಿ ತಿಳಿದ ಕೂಡಲೇ ಘಟಪ್ರಭಾ ಪಿಎಸ್‍ಐ ಹಾಲಪ್ಪ ಬಾಲದಂಡಿ ಧಾವಿಸಿ ಪರಿಹಾರ ಕಾರ್ಯಗಳನ್ನು ಕೈಗೊಂಡರು.
ಈ ಬಗ್ಗೆ ಘಟಪ್ರಭಾ ಪೋಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ


Spread the love

About Laxminews 24x7

Check Also

ರಾಜ್ಯೋತ್ಸವ ಮೆರವಣಿಗೆ ಯಶಸ್ವಿ: ‍ಪೊಲೀಸರ ಕಾರ್ಯಕ್ಕೆ ಪ್ರಶಂಸೆ

Spread the love ಬೆಳಗಾವಿ: ನಗರದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ವೈಭವದಿಂದ ನಡೆದ ರೂಪಕ ವಾಹನಗಳ ಮೆರವಣಿಗೆ ಶುಕ್ರವಾರ ತಡರಾತ್ರಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ