ಹಾವೇರಿ: ಲೋಕಸಭೆ ಚುನಾವಣೆ (Lok Sabha Election) ಮುಗೀತು. ಇದೀಗ ವಿಧಾನಸಭೆ ಉಪ ಚುನಾವಣೆ (Assembly By Election) ಕಣ ನಿಧಾನಕ್ಕೆ ರಂಗೇರುತ್ತಿದೆ.
ಒಂದೆಡೆ ಎಚ್‌ಡಿ ಕುಮಾರಸ್ವಾಮಿಯವರಿಂದ (HD Kumaraswamy) ತೆರವಾಗಿರೋ ರಾಮನಗರದ (Ramanagar) ಚನ್ನಪಟ್ಟಣ (Channapatna) ಉಪ ಚುನಾವಣೆಗೆ ಕಾಂಗ್ರೆಸ್ ಹಾಗೂ ಬಿಜೆಪಿ -ಜೆಡಿಎಸ್ ಮೈತ್ರಿ ಪಕ್ಷಗಳು ತಯಾರಿ ನಡೆಸುತ್ತಿವೆ.
ಅತ್ತ ಹಾವೇರಿಯಲ್ಲಿ ಬಸವರಾಜ ಬೊಮ್ಮಾಯಿಯವರಿಂದ ತೆರವಾದ ಸ್ಥಾನಕ್ಕೆ ಉಪ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್‌ನಲ್ಲಿ ಟಿಕೆಟ್ ಆಕಾಂಕ್ಷಿಗಳ ಗದ್ದಲ ಜೋರಾಗಿದೆ.
ಕಾಂಗ್ರೆಸ್ ಚುನಾವಣಾ ಉಸ್ತುವಾರಿಯಾಗಿರೋ ಸಚಿವ ಸತೀಶ್ ಜಾರಕಿಹೊಳಿ ಮುಂದೆ ಕಾಂಗ್ರೆಸ್‌ನಲ್ಲಿ ಪ್ರಬಲ ಟಿಕೆಟ್ ಆಕಾಂಕ್ಷಿಗಳಾಗಿರುವ ಯಾಸೀರ್ ಖಾನ್ ಪಠಾಣ್ ಹಾಗೂ ಅಜ್ಜಂಪೀರ್ ಖಾದ್ರಿ ಬೆಂಬಲಿಗರು ಗಲಾಟೆ ಮಾಡಿದ್ದಾರೆ.
ಈ ವೇಳೆ ಮುಂದಿನ ಸಿಎಂ ಸತೀಶ್ ಜಾರಕಿಹೊಳಿ ಎನ್ನುತ್ತಲೇ ಅವರ ಕಾರಿಗೆ ಮುತ್ತಿಗೆ ಹಾಕಿದ ಪ್ರಸಂಗ ಕೂಡ ನಡೆಯಿತು.
ಮುಂದಿನ ಸಿಎಂ ಸತೀಶ್ ಜಾರಕಿಹೊಳಿ!
ಸತೀಶ್ ಜಾರಕಿಹೊಳಿ ಬರುತ್ತಿದ್ದಂತೆ ನಾ ಮುಂದು ತಾ ಮುಂದು ಎಂಬಂತೆ ಪ್ಲೆಕ್ಸ್ ಹಾಕಿಸಿ ಶಕ್ತಿ ಪ್ರದರ್ಶನಕ್ಕೆ ಮುಂದಾದ್ರು. ಅವರ ಕಾರು ಬರುತ್ತಿದ್ದಂತೆ ಮುತ್ತಿಗೆ ಹಾಕಿದ್ರು. ಶಿಗ್ಗಾವಿ ಪಟ್ಟಣದ ಐಬಿ ಮುಂಭಾಗ ಖಾದ್ರಿ ಬೆಂಬಲಿಗರು ಮುತ್ತಿಗೆ ಹಾಕಿದ್ರು. ಮುಂದಿನ ಸಿಎಂ ಸತೀಶ್ ಜಾರಕಿಹೊಳಿ ಎಂದು ಘೋಷಣೆ ಹಾಕಿ ಕಾರಿಗೆ ಮುತ್ತಿಗೆ ಹಾಕಿದ್ರು.
ಖಾದ್ರಿಗೆ ಟಿಕೆಟ್ ನೀಡುವಂತೆ ಒತ್ತಾಯ
ಕಾರು ಬಿಡದೇ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಖಾದ್ರಿ ಬೆಂಬಲಿಗರು ಘೋಷಣೆ ಕೂಗಿದ್ರು. ಮುಂದಿನ ಸಿಎಂ ಎನ್ನುತ್ತಿದ್ದಂತೆಯೆ ನಸುನಕ್ಕ ಸತೀಶ್ ಜಾರಕಿಹೊಳಿ, ದಾರಿ ಬಿಡುವಂತೆ ಕೇಳಿ ಕೊಂಡ್ರು. ಆದರೆ ಸಚಿವರ ಎದುರೆ ಖಾದ್ರಿ ಖಾದ್ರಿ ಎಂದು ಕೂಗಾಟ ಮಾಡಿ, ಖಾದ್ರಿ ಮೇಲೆತ್ತಿ ಟಿಕೆಟ್ ಕೊಡುವಂತೆ ಒತ್ತಾಯ ಮಾಡಿದ್ರು.