Breaking News

ಪತ್ರಿಕೆ ಓದಿ ಜ್ಞಾನ ಹೆಚ್ಚಿಸಿಕೊಳ್ಳಿ: ಮುರಗೇಶ ಶಿವಪೂಜಿ

Spread the love

ಹುಕ್ಕೇರಿ: ಯುವಕರು ಮತ್ತು ಕಾಲೇಜು ವಿದ್ಯಾರ್ಥಿಗಳು ದಿನನಿತ್ಯ ಪತ್ರಿಕೆ ಓದಿ ಜ್ಞಾನ ಬೆಳೆಸಿಕೊಂಡು ಪ್ರಬುದ್ಧ ನಾಗರಿಕರಾಗಬೇಕು. ಜತೆಗೆ ಪತ್ರಿಕೆಗಳಲ್ಲಿ ಬರುವ ಮಹತ್ವದ ಘಟನೆಗಳನ್ನು ಟಿಪ್ಪಣೆ ಮಾಡಿಕೊಂಡು, ವೈಯಕ್ತಿಕ ಬೆಳವಣಿಗೆಗೆ ಸದುಪಯೋಗ ಮಾಡಿಕೊಳ್ಳಿ ಎಂದು ಕರ್ನಾಟಕ ಪತ್ರಕರ್ತರ ಸಂಘದ ರಾಜ್ಯ ಘಟಕ ಅಧ್ಯಕ್ಷ ಮುರಗೇಶ ಶಿವಪೂಜಿ ಹೇಳಿದರು.

 

ತಾಲ್ಲೂಕಿನ ಹಿಡಕಲ್ ಡ್ಯಾಂನಲ್ಲಿ ಪತ್ರಕರ್ತರ ಸಂಘ, ಸಮ್ಮೂರ ಬಾನುಲಿ ಸಮುದಾಯ ರೆಡಿಯೊ ಕೇಂದ್ರ, ಎಲ್ಲಾಪುರ ಹಾಗೂ ಸ್ಥಳೀಯ ಪತ್ರಕರ್ತರ ಬಳಗದ ಸಹಯೋಗದಲ್ಲಿ ಆಯೋಜಿಸಿದ್ದ ‘ಪತ್ರಿಕಾ ದಿನಾಚರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಯಮಕನಮರಡಿ ಲಕ್ಷ್ಮಿ ಅರ್ಬನ್ ಕ್ರೆಡಿಟ್ ಸೊಸೈಟಿ ಸಂಸ್ಥಾಪಕ ಅಧ್ಯಕ್ಷ ರವೀಂದ್ರ ಜಿಂಡ್ರಾಳಿ ಮಾತನಾಡಿ, ಗ್ರಾಮೀಣ ಭಾಗದ ಪತ್ರಕರ್ತರ ಆರ್ಥಿಕ ಸ್ಥಿತಿಗತಿ ಸರಿಯಾಗಿ ಇರುವುದಿಲ್ಲ. ಆದರೂ ಸೇವಾ ಮನೋಭಾವದಿಂದ ವರದಿ ಮಾಡುವರು. ಅವರಿಗೆ ಸರ್ಕಾರ ಹಣಕಾಸಿನ ಸಹಾಯ ಮಾಡಬೇಕು ಎಂದು ತಿಳಿಸಿದರು.

ಸತ್ಕಾರ: ಹಿರಿಯ ಪತ್ರಕರ್ತ, ಕಲಾವಿದ ಗೋಪಾಲ್ ಚಿಪಣಿ ಸೇರಿದಂತೆ ಗ್ರಾಮೀಣ ಪತ್ರಕರ್ತರನ್ನು ಸತ್ಕರಿಸಲಾಯಿತು.

ಹುಕ್ಕೇರಿ ಎಸ್.ಎಸ್.ಎನ್.ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಪಿ.ಜಿ.ಕೊಣ್ಣೂರ್ ಉಪನ್ಯಾಸ ನೀಡಿದರು. ಯರಗಟ್ಟಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರಾಚಾರ್ಯ ಕಿರಣ ಚೌಗಲಾ, ಪತ್ರಕರ್ತರ ಸಂಘದ ತಾಲ್ಲೂಕು ಘಟಕದ ಉಪಾಧ್ಯಕ್ಷ ನಂದಕಿಶೋರ್ ಗೌಡರ್, ಹಿರಿಯ ಸಾಹಿತಿಗಳಾದ ಎಸ್.ಎಂ.ಶಿರೂರ್, ಕಾ.ಹೋ.ಶಿಂಧೆ, ಮಹಿಳಾ ಕಲ್ಯಾಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎಂ.ಎಸ್.ಚೌಗಲಾ, ಮಾರುತಿ ಹನಮವ್ವಗೋಳ, ಡಾ.ಪ್ರಕಾಶ ಹೊಸಮನಿ, ದೀಪಕ ನಾಡಗೌಡ, ಲವ-ಕುಶ ನಾಗನೂರಿ, ರಮೇಶ್ ಬಾಗೇವಾಡಿ, ಎ.ಎಂ.ಕರ್ನಾಚಿ, ನಿಲೇಶ ಜಗಜಂಪಿ, ಫಾರುಕ್ ಮಂಕಾವಿನಾಗರಾಜ ಹನಮವ್ವಗೋಳ, ಮೀರಾ ಕುಂಬಾರ ಇದ್ದರು. ಪ್ರೊ.ಎ.ವೈ.ಸೋನ್ಯಾಗೋಳ ಸ್ವಾಗತಿಸಿದರು. ಚೇತನ್ ಕುಲಕರ್ಣಿ ಮತ್ತು ಎ.ಎಂ.ಕರ್ನಾಚಿ ನಿರೂಪಿಸಿದರು. ಲಕ್ಷ್ಮಣ ಪೂಜಾರ್ ವಂದಿಸಿದರು.


Spread the love

About Laxminews 24x7

Check Also

ಮುನಿರತ್ನಗೆ ಜಾಮೀನು ನೀಡದಿರಲು ಮನವಿ

Spread the love ಮಂಡ್ಯ: ‘ಶಾಸಕ ಮುನಿರತ್ನ ಅವರು ದಲಿತ ನಿಂದನೆ ಮಾಡಿರುವುದು ಸಾಕ್ಷಿ ಸಮೇತ ಸಿಕ್ಕಿರುವುದರಿಂದ ಪರಿಶಿಷ್ಟ ಜಾತಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ