Breaking News

Daily Archives: ಜುಲೈ 6, 2024

ಬೆಸ್ಕಾಂ ಬೊಕ್ಕಸ ತುಂಬಿಸಿದ ಗೃಹ ಜ್ಯೋತಿ ಯೋಜನೆ; 10 ವರ್ಷಗಳಲ್ಲಿ ಆದಾಯ 3 ಪಟ್ಟು ಏರಿಕೆ

ಬೆಂಗಳೂರು, ಜುಲೈ 6: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಬೆಸ್ಕಾಂ ನಗರಕ್ಕೆ ಮಾತ್ರವಲ್ಲದೆ ದಕ್ಷಿಣದ ಸುಮಾರು 8 ಜಿಲ್ಲೆಗಳಿಗೆ ವಿದ್ಯುತ್ ಪೂರೈಕೆ ಸೇವೆ ನೀಡುತ್ತಿದೆ. ವಿದ್ಯುತ್ ಸಂಗ್ರಹಣೆ ವ್ಯತ್ಯಯ ಆದಾಗಲೂ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಸೇವೆ ನೀಡಲು ಶ್ರಮಿಸಿದೆ. ಕಳೆದ 10 ವರ್ಷದ ಬೆಸ್ಕಾಂ ಆದಾಯದ ಅಂಕಿ ಅಂಶ ಬಿಡುಗಡೆ ಆಗಿದ್ದು, ಆದಾಯ ಗಮನಾರ್ಹ ರೀತಿಯಲ್ಲಿ ಹೆಚ್ಚಾಗಿರುವುದು ದೃಢವಾಗಿದೆ. ಕಾಂಗ್ರೆಸ್ ಸರ್ಕಾರ ಜಾರಿ ಮಾಡಿದ ಗೃಹ ಜ್ಯೋತಿ ಯೋಜನೆಯಿಂದ ಎಸ್ಕಾಂಗಳು ನಷ್ಟಕ್ಕೆ …

Read More »

ಮೈದುಂಬಿ ಹರಿಯುತ್ತಿರುವ ಶರಾವತಿ,

ಶಿವಮೊಗ್ಗ: ಜೋಗದ ಸಿರಿ ಬೆಳಕಿನಲ್ಲಿ ತುಂಗೆಯ ತೆನೆ ಬಳುಕಿನಲ್ಲಿ, ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿ, ನಿತ್ಯ ಹರಿದ್ವರ್ಣವನದ ತೇಗ ಗಂಧ ತರುಗಳಲ್ಲಿ ನಿತ್ಯೋತ್ಸವ, ತಾಯಿ, ನಿತ್ಯೋತ್ಸವ ನಿನಗೆ….. ಜೋಗ ಜಲಪಾತವನ್ನು ನೋಡುವಾಗಲೆಲ್ಲ ಕನ್ನಡದ ಖ್ಯಾತ ಕವಿ ನಿಸಾರ್ ಅಹ್ಮದ್ ಅವರ ನಿತ್ಯೋತ್ಸವ ಕವನದ ಸಾಲುಗಳು ಕನ್ನಡಿಗರಿಗೆ ನೆನಪಾಗುತ್ತವೆ. ಜಿಲ್ಲೆಯ ಸಾಗರ ತಾಲ್ಲೂಕಿನಲ್ಲಿರುವ ಜೊಗ ಜಲಪಾತ ಈಗ ರುದ್ರ ರಮಣೀಯವಾಗಿ ಪ್ರವಾಸಿಗರಿಗೆ ಕಾಣಿಸುತ್ತಿದೆ. ನಿಸರ್ಗದ ಈ ದೃಶ್ಯ ವೈಭವ ನೋಡಲು ಎರಡು ಕಣ್ಣು …

Read More »

ಹುಕ್ಕೇರಿ: ಹೊಸ ನ್ಯಾಯಾಲಯ ನಿರ್ಮಾಣಕ್ಕೆ ಮನವಿ

ಹುಕ್ಕೇರಿ: ಈಗಿರುವ ಸ್ಥಳೀಯ ನ್ಯಾಯಾಲಯ ಕಟ್ಟಡದಲ್ಲಿಯೇ ನೂತನ ನ್ಯಾಯಾಲಯದ ಕಟ್ಟಡವನ್ನು ಕಟ್ಟಬೇಕು ಎಂದು ಹನ್ನೊಂದ್ ಜಮಾತ ಅಧ್ಯಕ್ಷರಾ ಸಲೀಮ್ ನದಾಫ್ ನೇತೃತ್ವದಲ್ಲಿ ತಹಶೀಲ್ದಾರರಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು. ಈಗಿನ ಕಟ್ಟಡ ಪಟ್ಟಣದ ಮಧ್ಯಭಾಗದಲ್ಲಿದ್ದು, ನ್ಯಾಯಾಲಯಕ್ಕೆ ತಹಶೀಲ್ದಾರ್ ಕಚೇರಿ, ನೋಂದಣಿ ಕಚೇರಿ, ತಾಲ್ಲೂಕು ಪಂಚಾಯ್ತಿ, ಮುಖ್ಯ ಅಂಚೆ ಕಚೇರಿ, ದಾಖಲಾತಿ ಕಚೇರಿ, ಕೆನರಾ ಬ್ಯಾಂಕ್, ಪಿಡಬ್ಲೂಡಿ, ಅರಣ್ಯ ಇಲಾಖೆ, ಸಾರ್ವಜನಿಕ ಆಸ್ಪತ್ರೆ, ಪ್ರವಾಸಿ ಮಂದಿರ, ಪೊಲೀಸ್ ಠಾಣೆ, ಬಸ್ ನಿಲ್ದಾಣ ಸೇರಿದಂತೆ ಶಾಲಾ …

Read More »

ಪಡಿತರ ಚೀಟಿದಾರ’ರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ: ಮತ್ತೆ ‘ಆಧಾರ್ ಸಂಖ್ಯೆ’ ಜೋಡಣೆಗೆ ದಿನಾಂಕ ವಿಸ್ತರಣೆ |

ಬೆಂಗಳೂರು: ರೇಷನ್ ಕಾರ್ಡ್ ಗೆ ಆಧಾರ್ ಸಂಖ್ಯೆ ಲಿಂಕ್ ಮಾಡುವುದನ್ನು ರಾಜ್ಯ ಸರ್ಕಾರ ಕಡ್ಡಾಯಗೊಳಿಸಿದೆ. ಆದ್ರೇ ಇನ್ನೂ ಕೆಲವರು ರೇಷನ್ ಕಾರ್ಡ್ ಗೆ ಆಧಾರ್ ಲಿಂಕ್ ಮಾಡಿಲ್ಲ. ಈ ಹಿನ್ನಲೆಯಲ್ಲಿ ಪಡಿತರ ಚೀಟಿದಾರರಿಗೆ ಸಿಹಿಸುದ್ದಿ ಎನ್ನುವಂತೆ ರಾಜ್ಯ ಸರ್ಕಾರವು ಮತ್ತೆ ಡೆಡ್ ಲೈನ್ ವಿಸ್ತರಣೆ ಮಾಡಿರುವುದಾಗಿ ತಿಳಿದು ಬಂದಿದೆ.   ಈ ಬಗ್ಗೆ ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉನ್ನತ ಮೂಲಗಳಿಂದ ಮಾಹಿತಿ ತಿಳಿದು ಬಂದಿದ್ದು, …

Read More »

ಟೆಟ್ರಾಪ್ಯಾಕ್​ನಲ್ಲಿ ಅಗ್ಗದ ಬೆಲೆಗೆ ಮದ್ಯ ಮಾರಾಟ.. ತಮಿಳುನಾಡು ಸರ್ಕಾರ ಚಿಂತನೆ!

ಚೆನ್ನೈ: ನಕಲಿ ತಡೆ, ಬೆಲೆ, ಪರಿಸರ ಮತ್ತು ಶುಚಿತ್ವದ ದೃಷ್ಟಿಯಿಂದ ಟೆಟ್ರಾ ಪ್ಯಾಕ್‌ ಅಥವಾ ಪ್ಲಾಸ್ಟಿಕ್​ ಬಾಟಲಿಗಳಲ್ಲಿ ಮದ್ಯ ಮಾರಾಟ ಮಾಡುವ ಬಗ್ಗೆ ತಮಿಳುನಾಡು ಸರ್ಕಾರ ಚಿಂತನೆ ನಡೆಸಿದೆ. ಕಲ್ಲಕುರಿಚಿಯಲ್ಲಿ ನಕಲಿ ಮದ್ಯದಿಂದ ನಡೆದ ಅನಾಹುತದ ಬಳಿಕ ಎಚ್ಚೆತ್ತುಕೊಂಡಿರುವ ಸ್ಟಾಲಿನ್​ ಸರ್ಕಾರ, ಬಡವರ ಕೈಗೆಟಕುವಂತೆ 50ರೂ.ನಿಂದ 80ರೂ.ಒಳಗೆ 100ಎಂಎಲ್​ನ ಕ್ವಾರ್ಟರ್ ಪ್ಲಾಸ್ಟಿಕ್​ ಬಾಟಲಿಗಳು ಅಥವಾ ಟೆಟ್ರಾಪ್ಯಾಕ್​ಗಳಲ್ಲಿ ಮದ್ಯ ಮಾರಾಟ ಮಾಡಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ. ಕಡಿಮೆ ಬೆಲೆಗೆ ನಕಲಿ ಮಾಡದಂತೆ …

Read More »

ಮಲೆನಾಡಲ್ಲಿ ಮಳೆಯ ಅಬ್ಬರ; ಕೈ ಬೀಸಿ ಕರೆಯುತ್ತಿದೆ ಜೋಗ ಜಲಪಾತ

ಶಿವಮೊಗ್ಗ, ಜುಲೈ 06: ಶಿವಮೊಗ್ಗ ಜಿಲ್ಲೆಯಲ್ಲಿ ನೈಋತ್ಯ ಮುಂಗಾರು ಮಳೆ ಅಬ್ಬರಿಸುತ್ತಿದೆ. ಹಳ್ಳಕೊಳ್ಳಗಳು ಭರ್ತಿಯಾಗಿದ್ದು, ತುಂಗಾ, ಶರಾವತಿ ನದಿಗಳ ನೀರಿನ ಮಟ್ಟದಲ್ಲಿ ಏರಿಕೆ ಕಂಡುಬಂದಿದೆ. ಮಳೆಯಲ್ಲಿ ಮಲೆನಾಡಿನ ಅಂದವನ್ನು ಸವಿಯಲು ನೂರಾರು ಪ್ರವಾಸಿಗರು ಆಗಮಿಸುತ್ತಿದ್ದಾರೆ. ಎರಡು ವಾರಗಳಿಂದ ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಇದರಿಂದಾಗಿ ವಿಶ್ವವಿಖ್ಯಾತ ಜೋಗ ಜಲಪಾತ ಜೀವಕಳೆ ಪಡೆದುಕೊಂಡಿದೆ. ಧುಮ್ಮಿಕ್ಕುತ್ತಿರುವ ಜೋಗ ಜಲಪಾತದ ಸೌಂದರ್ಯ ಇಮ್ಮಡಿಯಾಗಿದೆ. ಜೋಗ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ಮಳೆಗಾಲದಲ್ಲಿ ಶಿವಮೊಗ್ಗಕ್ಕೆ ಭೇಟಿ …

Read More »

ಎರಡು ಕಾರುಗಳ ಮಧ್ಯ ಭೀಕರ ಅಪಘಾತ : ಸ್ಥಳದಲ್ಲೆ 3 ಸಾವು ಮೂವರು ಗಂಭೀರ

ಶಿವಮೊಗ್ಗ : ಇಂದು ಶಿವಮೊಗ್ಗದ ಲಯನ್ ಸಫಾರಿ ಬಳಿ ಭೀಕರ ಅಪಘಾತ ಸಂಭವಿಸಿದ್ದು, ಎರಡು ಕಾರುಗಳ ನಡುವೆ ಭೀಕರ ಅಪಘಾತವಾಗಿದ್ದು, ಎರಡು ಕಾರುಗಳು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೆ ಮೂವರು ಸಾವನ್ನಪ್ಪಿದ್ದರೆ.ಮೂವರ ಸ್ಥಿತಿ ಗಂಭೀರವಾಗಿದೆ. ಅಪಘಾತದಲ್ಲಿ ಮೂವರು ದಾರುಣವಾಗಿ ಸಾವನಪ್ಪಿದ್ದು ಮೂವರ ಸ್ಥಿತಿ ಗಂಭೀರವಾಗಿದೆ. ಗಯಾಳುಗಳನ್ನು ಶಿವಮೊಗ್ಗದ ಮೆಗನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಸ್ಥಳಕ್ಕೆ ಶಿವಮೊಗ್ಗದ ಸಂಚಾರಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ

Read More »

ತರಾತುರಿಯ ಡಿಸಿ ವರ್ಗಾವಣೆಯು ಸಿಎಂ ಭ್ರಷ್ಟಾಚಾರವನ್ನು ಸಾಬೀತುಪಡಿಸಿದೆ: ಪ್ರಹ್ಲಾದಜೋಶಿ

ತರಾತುರಿಯ ಡಿಸಿ ವರ್ಗಾವಣೆಯು ಸಿಎಂ ಭ್ರಷ್ಟಾಚಾರವನ್ನು ಸಾಬೀತುಪಡಿಸಿದೆ: ಪ್ರಹ್ಲಾದಜೋಶಿ   ಹುಬ್ಬಳ್ಳಿ: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (MUDA) ಹಗರಣವನ್ನು ಸಿಬಿಐಗೆ ವಹಿಸಿದರೆ ಮಾತ್ರ ನಿಷ್ಪಕ್ಷಪಾತ ತನಿಖೆ ಸಾಧ್ಯ. ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಪುತ್ರನ ನೇರಕ್ಕೆ ನಡೆದಿರುವ ಹಗರಣವಾಗಿದೆ. ತರಾತುರಿಯಲ್ಲಿ ಜಿಲ್ಲಾಧಿಕಾರಿ ಅವರನ್ನು ವರ್ಗಾವಣೆ ಮಾಡಿರುವುದು ಭ್ರಷ್ಟಾಚಾರದಲ್ಲಿ ತಾವು ಭಾಗಿ ಎಂಬುವುದನ್ನು ಸಾಬೀತುಪಡಿಸಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆರೋಪಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾದಲ್ಲಿ ಬಹುದೊಡ್ಡ …

Read More »

ಒಂದುವರೆ ತಿಂಗಳುಗಳ‌ ಕಾಲ ಶಿಗ್ಗಾವಿಯಲ್ಲಿ ಧನ್ಯವಾದ ಯಾತ್ರೆ

ಹಾವೇರಿ : ನಾನು ರಾಜಕೀಯವಾಗಿ ಬೆಳೆಯಲು ಶಿಗ್ಗಾವಿ ಜನರ ಆಶೀರ್ವಾದ ಕಾರಣ, ಜುಲೈ 12 ರಿಂದ ಒಂದುವರೆ ತಿಂಗಳುಗಳ‌ ಕಾಲ ಕ್ಷೇತ್ರದಲ್ಲಿ ಧನ್ಯವಾದ ಯಾತ್ರೆ ಯಾತ್ರೆ ಆರಂಭ ಮಾಡುತ್ತೇನೆ ಎಂದು ಸಂಸದ, ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಶನಿವಾರ ಹೇಳಿಕೆ ನೀಡಿದ್ದಾರೆ. ಶಿಗ್ಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಂಸದ ಬಸವರಾಜ್ ಬೊಮ್ಮಾಯಿ’ ಶಿಗ್ಗಾವಿ ಉಪಚುನಾವಣೆ ವಿಚಾರ ಅಶೋಕ‌ ಅವರ ನೇತೃತ್ವದಲ್ಲಿ ಸಮಿತಿ ಮಾಡಿದ್ದೇವೆ. ಪಕ್ಷದಿಂದ ಸರ್ವೆ ಮಾಡಿಸುತ್ತಿದ್ದೇವೆ. ಶಿಗ್ಗಾವಿಯಲ್ಲಿ ಪೋಸ್ಟರ್ ಭರಾಟೆ …

Read More »

ಮಹಿಳೆಯರ ರಕ್ಷಣೆ ಮರೆತ ಪಶ್ಚಿಮ ಬಂಗಾಳ: ಸದಾಶಿವ ಶ್ರೀ ಬೇಸರ

ಸೇಡಂ : ಮಾತೆಯರಿಗೆ ಅತ್ಯಂತ ಗೌರವದ ಸ್ಥಾನ ನೀಡುವ ದೇಶದಲ್ಲಿ ಹಾಡ ಹಾಗಲಲ್ಲೇ ಹಲ್ಲೆ ನಡೆಸಿರುವುದನ್ನು ಗಮನಿಸುತ್ತಿದ್ದರೆ ಪಶ್ಚಿಮ ಬಂಗಾಳದ ಸರ್ಕಾರ ಮಹಿಳೆಯರ ರಕ್ಷಣೆ ಮರೆತಂತೆ ಕಾಣುತ್ತಿದೆ ಎಂದು ಶ್ರೀ ಕೊತ್ತಲ ಬಸವೇಶ್ವರ ದೇವಾಲಯದ ಪೂಜ್ಯ ಸದಾಶಿವ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು. ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಜಾಗೃತ ಹಿಂದೂ ಮಹಿಳಾ ಸಂಘಟನೆ ಆಯೋಜಿಸಿದ ಪ್ರತಿಭಟನೆಯಲ್ಲಿ ಭಾಗಿಯಾದ ಅವರು ಮಾತನಾಡಿದರು. ಮಹಿಳೆಯರ ಮೇಲೆ ನಿರಂತರವಾಗಿ ದೌರ್ಜನ್ಯಗಳು ನಡೆಯುತ್ತಲೆ ಇವೆ. ಅವರ ರಕ್ಷಣೆ ಮಾಡುವುದು …

Read More »